Ramachari: ಚಾರು ಬಳಿ ಕಠೋರವಾಗಿ ನಡೆದುಕೊಳ್ಳುತ್ತಿರುವ ರಾಮಾಚಾರಿ

By ಶೃತಿ ಹರೀಶ್ ಗೌಡ

ಚಾರು ಮಾನ್ಯತಾ ಬಳಿ ಆಫೀಸ್‌ಗೆ ಹೋಗಿ ಬರುತ್ತೇನೆ ಎಂದು ಹೇಳಿ‌ ಹೋಗುವಾಗ‌ ಮಾನ್ಯತಾ ಏನಾಯ್ತು ಎಂದು ನೂರೆಂಟು ಪ್ರಶ್ನೆಗಳನ್ನು ಕೇಳಿದ್ದಾಳೆ. ಇದಕ್ಕೆ ಚಾರು ನನ್ನ ಪ್ರಾಬ್ಲಮ್ ಅನ್ನು ನಾನೇ ಸಾಲ್ವ್ ಮಾಡಿಕೊಳ್ಳುತ್ತೇನೆ ಯಾರ ಸಹಾಯವು ಬೇಡ ಎಂದು ಮಾನ್ಯತಾಗೆ ಹೇಳಿದ್ದಾಳೆ.

ಚಾರು ಹೋದ ರೀತಿಯನ್ನು ನೋಡಿದ ಮಾನ್ಯತಾಗೆ ತುಂಬಾ ಶಾಕ್ ಆಗಿದೆ ಯಾಕೆ ಈ ರೀತಿ ಆಡುತ್ತಿದ್ದಾಳೆ ಎಂದು ತಿಳಿದುಕೊಂಡಿದ್ದಾಳೆ. ಚಾರು ಆಫೀಸ್ ಗೆ ಹೋಗುತ್ತಿದ್ದಾಳೆ ರಸ್ತೆ ಮಧ್ಯದಲ್ಲಿ ರಾಮಾಚಾರಿ ಸಿಕ್ಕಿ ಅವಮಾನವನ್ನು ಮಾಡಿದ್ದಾನೆ ಇದನ್ನು ನೋಡಿದಂತಹ ಮುರಾರಿಗೆ ತುಂಬಾ ಶಾಕ್ ಆಗಿದೆ.

Colors Kannada Ramachari serial Written Update on April 18th episode

ಗಂಡ ಹೆಂಡತಿ ಎಂದುಕೊಂಡಿದ್ದರೆ ಇವರ ಯಾಕೆ ಹೀಗೆ ಆಡುತ್ತಿದ್ದಾರೆ ಎಂದು ಮುರಾರಿಗೆ ತುಂಬಾ ಶಾಕ್ ಆಗಿದೆ ನಾನು ಈ ಸಂಬಂಧವನ್ನು ಬಿಡಿಸಿ ಕೊಂಡಿದ್ದೇನೆ ಎಂದು ಮುರಾರಿಯ ಬಳಿ ರಾಮಾಚಾರಿ ಹೇಳಿದ್ದಾನೆ. ರಾಮಾಚಾರಿ ಆಡುತ್ತಿರುವ ಮಾತುಗಳನ್ನು ಕೇಳಿದ ಚಾರುಗೆ ತುಂಬಾ ಕೋಪ ಬರುತ್ತಿದೆ ಆದರೂ ಸಹ ಏನನ್ನು ಮಾತನಾಡದೆ ಆಫೀಸ್ ಕಡೆ ಹೊರಟಿದ್ದಾಳೆ.

ಜಾನಕಿ ಅಪರ್ಣ ಫೋಟೋಗೆ ದೀಪವನ್ನು ಹಚ್ಚಿ ಗಂಧದಕಡ್ಡಿಯಿಂದ ಬೆಳಗುತ್ತಿರುವಾಗ ಅಲ್ಲಿಗೆ ಬಂದ ವೈಶಾಖಳನ್ನು ಕುರಿತು ಇನ್ನು ಮುಂದೆ ನೀನೇ ದೀಪವನ್ನು ಹಚ್ಚಿ,‌ಧೂಪವನ್ನು ಹಾಕಬೇಕು ಎಂದು ಜಾನಕಿ ಹೇಳಿದ್ದಾಳೆ. ಇದೇ ವೇಳೆ ಅಜ್ಜಿ ನಮ್ಮ ಅಪರ್ಣ ನಾವು ಹೇಳಿದ ಕೆಲಸವನ್ನು ಚಾಚು ತಪ್ಪದೇ ಮಾಡುತ್ತಿದ್ದಳು ಮನೆಯಲ್ಲಿ ಯಾವುದೇ ಜಗಳಕ್ಕೆ ಆಸ್ಪದವಿರಲಿಲ್ಲ ನಾವು ಕಾಲಿನಿಂದ ತೋರಿಸಿದರೆ ತಲೆ ಮೇಲೆ ಹೊತ್ತುಕೊಂಡು ಮಾಡುತ್ತಿದ್ದಳು ಎಂದಿದ್ದಾರೆ.

ಇದಕ್ಕೆ ವೈಶಾಖ ಅವಳೇನು ಮನೆಯ ಅಳಾಗಿದ್ದಾಳ. ಬದುಕಿರುವ ಸಂಬಂಧಕ್ಕೆ ಬೆಲೆ ಇಲ್ಲ. ನೀವು ಯಾವಾಗ ನನ್ನನ್ನು ಹೊರಗಡೆ ನಿಲ್ಲಿಸಿ ಮಾತನಾಡಿದ್ರೋ ಆವಾಗಲೇ ನೀವೆಲ್ಲರೂ ನನ್ನ ಪಾಲಿಗೆ ಸತ್ತು ಹೋದಿರಿ ಎಂದು ಹೇಳಿದ್ದಾರೆ. ಈಗ ಸತ್ತಿರುವ ಫೋಟೋ ಇಟ್ಟು ನನಗೆ ಹೇಳುತ್ತೀರಾ ಎಂದು ಬೈದು ನಾನು ಮತ್ತೆ ಬರುವ ವೇಳೆ ಇಲ್ಲಿ ಫೋಟೋ ಇರಬಾರದು ಎಂದು ಹೇಳಿ‌ ಹೋಗಿದ್ದಾಳೆ.

Colors Kannada Ramachari serial Written Update on April 18th episode

ನಾನು ಮತ್ತು ನನ್ನ ಗಂಡ ಚೆನ್ನಾಗಿ ಇರುವುದು ನಿಮಗೆ ಇಷ್ಟವಿಲ್ಲ ಅದಕ್ಕಾಗಿ ಅಪರ್ಣ ಫೋಟೋವನ್ನು ಇಟ್ಟು ಹಳೆಯ ನೆನಪು ತರಲು ನೀವು ಈ ರೀತಿ ಮಾಡುತ್ತಿದ್ದೀರಿ . ನಾನು ಕೋದಂಡನ ಹೆಂಡತಿ ಈ ಮನೆಯ ಸೊಸೆ ನಾನು ಇರುವಾಗ ಪೋಟೋ ಇರಕೂಡದು ಎಂದು ಹೇಳಿ ಈ ಫೋಟೋವನ್ನು ಎತ್ತುಕೊಂಡು ಬಂದ ವೈಶಾಖ ಮನೆಯ ಹೊರಗಡೆ ಬಿಸಾಕಿದ್ದಾಳೆ. ಬಿಸಾಕಿದ ರಭಸಕ್ಕೆ ಫೋಟೋ ಹೊಡೆದು ಚೂರು-ಚೂರಾಗಿದೆ. ಈ ಫೋಟೋ ಹೊಡೆದಿದ್ದರಿಂದ ಮನೆಯಲ್ಲಿ ದೊಡ್ಡ ಜಗಳವೇ ಆಗಲಿದೆ ಎಂದು ಜಾನಕಿ ತಲೆ ಮೇಲೆ ಕೈ ಹೊತ್ತುಕೊಂಡಿದ್ದಾರೆ.

ಚಾರು ಬಳಿ ರಾಮಾಚಾರಿ ಕೋಪವನ್ನ ತೋರಿದ್ದಾನೆ ಇದಕ್ಕೂ ಮುಂಚೆ ರಾಮಾಚಾರಿ ಬಂದ ತಕ್ಷಣವೇ ಸಾನ್ವಿ ರಾಮಾಚಾರಿ ಕುಳಿತುಕೊಳ್ಳುವ ಜಾಗಕ್ಕೆ ಬಂದು ಚಾರು ಬಗ್ಗೆ ಎನು ಯೋಚನೆ ಮಾಡಿದೆ ಎಂದು‌ ಕೇಳಿದ್ದಾಳೆ ಇದ್ದಕ್ಕೆ ರಾಮಾಚಾರಿ ಇದು ಆಫೀಸ್ ಬೇಡದ ವಿಷಯಗಳನ್ನು ಇಲ್ಲಿ ಮಾತನಾಡಬಾರದು ನಾವು ಇಲ್ಲಿಗೆ ಬರುವುದು ಕೆಲಸ ಮಾಡಲು ಟೈಮ್ ಪಾಸ್ ಮಾಡಲು‌ ಅಲ್ಲ ಎಂದು ಬೈದು‌ ಕಳಿಸಿದ್ದಾನೆ.

ಅಲ್ಲಿಗೆ ಬಂದ ಚಾರು ರಾಮಾಚಾರಿ ಬಳಿ‌ ಬಂದು ಜೀವನಕ್ಕೆ ಸಂಬಂಧಿಸಿದ ಬಗ್ಗೆ ಮಾತನಾಡಬೇಕು ಎಂದು ಹೇಳಿದ್ದಾಳೆ. ಇದಕ್ಕೆ ರಾಮಾಚಾರಿ ಇದು ನಮ್ಮ ಅಪ್ಪನ ಆಫೀಸ್ ಅಲ್ಲ, ನಿಮ್ಮ ಅಪ್ಪನ ಆಫೀಸ್‌ ಸಹ ‌ಅಲ್ಲ ಎಂದು ಚಾರು ಮೇಲಎ ಕೂಗಾಡಿದ್ದಾನೆ.‌ಚಾರು ದೊಡ್ಡದೊಂದು ದೊಣ್ಣೆಯನ್ನು ತಂದು ರಾಮಾಚಾರಿ ಬಳಿ‌ ನಿಂತಿದ್ದಾಳೆ. ಚಾರುವನ್ನು ‌ಕ್ಯಾಬಿನ್‌ನಲ್ಲೇ ಬಿಟ್ಟು ಹೊರಗೆ ರಾಮಾಚಾರಿ ಹೋಗಿದ್ದಾನೆ. ಅವನ ಹಿಂದೆ ಚಾರುಲತಾ ಸಹ ಹೊರಟಿದ್ದಾಳೆ.

More from Filmibeat

English summary
Colors Kannada serial Ramachari here details about vhyshaka hates aparna photo, through the photo out side
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X