Ramachari: ಚಾರು ಕೇಳುವ ಎಲ್ಲಾ ಪ್ರಶ್ನೆಗಳಿಗೂ ರಾಮಾಚಾರಿ ಬಳಿ ಉತ್ತರ ಸಿದ್ಧ

ಬೆಳಿಗ್ಗೆ ಬಂದಿರುವ ಚಾರು, ರಾಮಾಚಾರಿಯನ್ನು ಒಂದರ ಮೇಲೊಂದು ಪ್ರಶ್ನೆ ಮಾಡಿದ್ದಾಳೆ. ಚಾರು ಮಾಡುತ್ತಿರುವ ಎಲ್ಲಾ ಪ್ರಶ್ನೆಗಳಿಗೂ ಸಹ ರಾಮಾಚಾರಿಯ ಬಳಿ ಉತ್ತರವಿದೆ. ಆಫೀಸಿಗೆ ಬಂದಿರುವ ಚಾರು, ರಾಮಾಚಾರಿಯ ಬಳಿ ಮಾತನಾಡುತ್ತಿದ್ದಾಳೆ, ಆದರೆ ಇದು ರಾಮಾಚಾರಿಗೆ ಇದು ಸ್ವಲ್ಪವೂ ಇಷ್ಟವಿಲ್ಲ. ನೀನು ಕಟ್ಟಿರುವ ತಾಳಿಗೆ ಮಹತ್ವವಿದೆ ಎಂದಾಗ ಏನು ನಡೆದೇ ಇಲ್ಲ ಅಂತಹದರಲ್ಲಿ ಏನು ಮಹತ್ವವಿದೆ ಎಂದು ರಾಮಾಚಾರಿ, ಚಾರುಗೆ ಹೇಳಿದ್ದಾನೆ.

ನೀನು ಯಾಕೆ ಆರು ಎಳೆಯ ಜನಿವಾರ ಹಾಕಿಕೊಂಡೆ ಎಂದು ಕೇಳಿದ್ದಾಳೆ. ಅದಕ್ಕೆ ಎಲ್ಲವನ್ನು ಬಿಟ್ಟು ನಾನು ಈಗ ಮೂರು ಎಳೆ ಜನಿವಾರವನ್ನು ಹಾಕಿಕೊಂಡು ಇದ್ದೇನೆ ಎಂದು ರಾಮಾಚಾರಿ, ಚಾರುಗೆ ತೋರಿಸಿದ್ದಾನೆ. ನನಗೆ ಎಲ್ಲಕ್ಕಿಂತ ನನ್ನ ಮನೆಯವರೇ ಮುಖ್ಯ ಎಂದಿದ್ದಾನೆ.

Colors Kannada Ramachari serial Written Update on April 19th episode

ನನ್ನ ತಂದೆಗೆ ನಾನು ಕೊಟ್ಟಿರುವ ಮಾತನ್ನು ನಾನು ಉಳಿಸಿಕೊಳ್ಳಲೇಬೇಕು ಅದಕ್ಕಾಗಿ ನಾನು ಇಂತಹ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಚಾರು ಬಳಿ ರಾಮಾಚಾರಿ ಹೇಳಿದ್ದಾನೆ. ಯಾವುದೋ ಸಂದರ್ಭಕ್ಕೆ ಸಿಲುಕಿ ನಿಮ್ಮ ಜೀವವನ್ನು ಕಾಪಾಡುವ ಉದ್ದೇಶದಿಂದ ನಾನು ಮದುವೆಯಾದೆ ಈ ಮದುವೆಗೆ ಯಾವುದೇ ಅರ್ಥವಿಲ್ಲ ಎಂದು ಮುಖಕ್ಕೆ ಹೊಡೆದ ರೀತಿ ಮಾತನಾಡಿ ಆಫೀಸ್‌ನಿಂದ ಹೊರಗೆ ಎದ್ದು ಹೋಗಿದ್ದಾನೆ.

ವೈಶಾಖ ಮಾತು ಕೇಳಿ ಎಲ್ಲರೂ ಶಾಕ್

ಗಂಡ ಬರುವುದನ್ನೇ ನೋಡಿ ವೈಶಾಖ ಡ್ರಾಮಾ ಶುರು ಮಾಡಿದ್ದಾಳೆ. ಇದರಿಂದ ಕೋದಂಡ ಮನೆಯವರೆಲ್ಲರ ಮೇಲೆ ಕೋಪ ಪ್ರದರ್ಶಿಸಿದ್ದಾನೆ. ಈ ಮನೆಯ ಸೊಸೆ ಎಲ್ಲಾ ಕೆಲಸವನ್ನು ನಾನೇ ಮಾಡಬೇಕು ಎಂದು ಕೋದಂಡನನ್ನು ವೈಶಾಖ ಸಮಾಧಾನ ಮಾಡಿದ್ದಾಳೆ. ಇದಕ್ಕೆ ಕೋದಂಡ ನಾನು ಈ ಮನೆಗೆ ತಕ್ಕ ಸೊಸೆಯನ್ನೇ ಮದುವೆ ಮಾಡಿಕೊಂಡು ಬಂದಿದ್ದೇನೆ ಅಂದಿದ್ದಾನೆ. ಅಜ್ಜಿ ಮತ್ತು ಜಾನಕಿ ಶೃತಿಗೆ ಬಟ್ಟೆ ಒಗೆಯುತ್ತಿದ್ದದ್ದು ನಾನು ಎಂದು ಹೇಳು ಎಂದಿದ್ದಾರೆ.

ಮಾತು ಮರೆಸಲು ಮುಂದಾದ ವೈಶಾಖ

ಜಾನಕಿ ಮಾತ್ರ ಸುಮ್ಮನೆ ಇರುವಂತೆ ಹೇಳಿದ್ದಾರೆ. ಇದೇ ವೇಳೆ ಅಜ್ಜಿ ಏನನ್ನು ಹೇಳಲು ಹೊರಟಾಗ ಅಜ್ಜಿಯ ಬಾಯನ್ನ ಮುಚ್ಚಿಸಲು ವೈಶಾಖ ಬನ್ನಿ ಕಾಫಿ ಮಾಡಿಕೊಂಡು ಬರೋಣ ಎಂದಿದ್ದಾಳೆ. ಆಗ ಕೋದಂಡನೇ ತಡೆದಿದ್ದಾನೆ. ಅಜ್ಜಿ ಏನನ್ನು ಹೇಳಲು ಹೊರಟಿದ್ದಾರೆ ಹೇಳಲಿ ಬಿಡಿ ಅಮ್ಮ ಎಂದು ಕೇಳಿದ್ದಾನೆ. ಈ ವೇಳೆ ಶ್ರುತಿ, ಅಪರ್ಣ ಫೋಟೋ ಬಗ್ಗೆ ಹೇಳಿದ್ದಾಳೆ.

Colors Kannada Ramachari serial Written Update on April 19th episode

ಫೋಟೋ ಇಲ್ಲದ್ದು ಕಂಡು ಕೋಪ

ಅಪರ್ಣ ಫೋಟೋ ಇಲ್ಲದ್ದನ್ನು ಕಂಡ ಕೋದಂಡನಿಗೆ ಕೆಂಡದಂತಹ ಕೋಪ ಬಂದಿದೆ. ವೈಶಾಖಳನ್ನು ಜೋರಾದ ದನಿಯಲ್ಲಿ ಕೋದಂಡ ಕೂಗಿದ್ದಾನೆ. ಅಲ್ಲಿಗೆ ಬಂದ ವೈಶಾಖ ಅಳುವ ತರ ನಾಟಕವನ್ನು ಮಾಡಿ ನಿಮಗೆ ಅಪರ್ಣ ಅಕ್ಕನ ನೆನಪು ಕಾಡಬಾರದು ಎಂದು ಈ ರೀತಿ ಮಾಡಿದೆ. ನಾನು ಮತ್ತು ನೀವು ಚೆನ್ನಾಗಿ ಇದ್ದರೆ ಅಪರ್ಣ ಅಕ್ಕ ಈ ಮನೆಯ ಮಗಳಾಗಿ ಇವರಿಗೆ ಮೊಮ್ಮಗಳಾಗಿ ನಮ್ಮ ಮನೆಯಲ್ಲಿ ಜನಿಸುತ್ತಾರೆ. ಅವರಿಗೆ ದಿನ ಪೂಜೆ ಮಾಡಿದರೆ ಅವರ ಆತ್ಮ ಇಲ್ಲೇ ಸುತ್ತುತ್ತದೆ ಎಂದು ಹೇಳಿದ್ದಾಳೆ. ಈ ಮಾತನ್ನು ಕೇಳಿದ ಕೋದಂಡ ನೋಡು ಅಪರ್ಣ ನಿನಗೆ ಎಂತಹ ತಂಗಿ ಸಿಕ್ಕಿದ್ದಾಳೆ ಎಂದು ಹೇಳಿದ್ದಾನೆ.

ಮನಸಿನಲ್ಲಿ ಜಾಗ ಕೊಡದ ಚಾರಿ

ರಾಮಾಚಾರಿ ಸ್ಪಷ್ಟವಾಗಿ ಚಾರುಗೆ ನನ್ನ ಮನಸ್ಸಿನಲ್ಲಿ ನಿಮಗೆ ಜಾಗವಿಲ್ಲ ಎಂದು ಹೇಳಿದ್ದಾನೆ. ಆದರೆ ಚಾರು ಮಾತ್ರ ನೀನೇ ನನ್ನ ಗಂಡ ಎಂದಿದ್ದಾಳೆ. ಯಾವುದೇ ಕಾರಣಕ್ಕೂ ನಿನ್ನನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಹಠ ತೋರಿದ್ದಾಳೆ. ಬಬ್ಲು ಸರ್ ಬಳಿ ಹೋದ ರಾಮಾಚಾರಿ ಆಫೀಸ್‌ನಲ್ಲಿ ಕೆಲಸ ಮಾಡಲು ಒಳ್ಳೆಯ ವಾತಾವರಣವನ್ನು ಸೃಷ್ಟಿಸಿ. ಈ ರೀತಿ ದುರಹಂಕಾರ ತೋರುವವರನ್ನು ಕೆಲಸದಿಂದ ತೆಗೆದು ಮನೆಗೆ ಕಳುಹಿಸಿ ಎಂದು ಚಾರು ವಿರುದ್ಧ ಮಾತನಾಡಿದ್ದಾನೆ.

More from Filmibeat

English summary
Colors Kannada Ramachari serial Written Update on April 19th episode. Here is Details About Vyshaka act infront of kodanda, Charulatha asking so many questions to Ramachari. know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X