Ramachari: ಚಾರು ಮೇಲೆ ರಾಮಾಚಾರಿಗೆ ಯಾವುದೇ ಭಾವನೆ ಇಲ್ಲ: ಟೆನ್ಷನ್‌ನಲ್ಲಿ ಚಾರು
ಮದುವೆಯಾಗಿದ್ದೇನೆ ಎಂದುಕೊಂಡು ಹೇಗೋ ಚಾರು ಮೇಲೆ ಅಲ್ಪ ಸ್ವಲ್ಪ ಭಾವನೆಯನ್ನು ರಾಮಾಚಾರಿ ಇಟ್ಟುಕೊಂಡಿದ್ದನು. ಯಾವಾಗ ಕೋದಂಡ ವೈಶಾಖಳನ್ನು ಮದುವೆ ಮಾಡಿಕೊಂಡು ಮನೆಗೆ ಕರೆದುಕೊಂಡು ಬಂದನೋ, ಅಂದು ನಾರಾಯಣ ಆಚಾರ್ಯರು ಆಡಿದ ಮಾತಿನಿಂದಾಗಿ ಸಂಪೂರ್ಣವಾಗಿ ಚಾರುಯಿಂದ ದೂರವಾಗುವ ಯೋಚನೆಯಲ್ಲಿ ಇದ್ದಾನೆ. ದಿನದಿಂದ ದಿನಕ್ಕೆ ಚಾರುಗೆ ತುಂಬಾ ನೋವನ್ನ ಕೊಡುತ್ತಿದ್ದಾನೆ. ಕಠೋರವಾಗಿ ಮಾತನಾಡುತ್ತಿದ್ದಾನೆ.
ನಿನ್ನ ಮೇಲೆ ನನಗೆ ಯಾವುದೇ ಭಾವನೆ ಇಲ್ಲ ಎಂದು ಹೇಳುತ್ತಿದ್ದಾನೆ. ಆದರೆ ಚಾರು ಮಾತ್ರ ಪರಿ ಪರಿಯಾಗಿ ಆತನನ್ನು ಬೇಡಿಕೊಳ್ಳುತ್ತಿದ್ದಾಳೆ. ಕೊನೆಗೆ ಚಾರು ನಾನು ನಿನ್ನಲ್ಲಿ ಪ್ರೀತಿ ತೋರಿಸುತ್ತಿದ್ದರೆ ನೀನು ಮಾತ್ರ ನನ್ನಿಂದ ದೂರ ಹೋಗುತ್ತಿದ್ದೀಯಾ ಎಂದಿದ್ದಾಳೆ.

ರಾಮಾಚಾರಿ ತಾಳಿಯ ಸಂಬಂಧವನ್ನು ಕಳೆದುಕೊಂಡ ಮೇಲೆ ಅದಕ್ಕೂ ನನಗೂ ಸಂಬಂಧವಿಲ್ಲ, ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಚಾರುಗೆ ಹೇಳಿದ್ದಾನೆ. ಸಾನ್ವಿ ಸಹ ಮದುವೆಯಾಗಿದ್ದೀಯ ಈ ಮದುವೆಗೆ ಅರ್ಥವಿಲ್ಲ ಎಂದು ಹೇಳಿದ್ದಾಳೆ. ರಾಮಾಚಾರಿ ಮೇಲಿನ ಪ್ರೀತಿಗಾಗಿ ನಾನು ಒಂದು ಸುಳ್ಳನ್ನು ಹೇಳಿದೆ ಎಂದು ಸಾನ್ವಿಗೆ ಚಾರು ಸಮಜಾಯಿಷಿಯನ್ನು ನೀಡುತ್ತಿದ್ದಾಳೆ.
ಮಾತಿನಲ್ಲೇ ಕೊಲ್ಲುತ್ತಿರುವ ರಾಮಚಾರಿ
ರಾಮಾಚಾರಿ ಚಾರುವನ್ನು ಮಾತಿನಿಂದಲೇ ಕೊಲ್ಲುತ್ತಿದ್ದಾನೆ. ಬಬ್ಲು ಸರ್ ಬಳಿ ಹೋಗಿ ಇಂಥವರನ್ನು ಯಾಕೆ ಕೆಲಸಕ್ಕೆ ಇಟ್ಟುಕೊಂಡಿದ್ದೀರಿ ಎಂದೆಲ್ಲಾ ರೇಗಾಡುತ್ತಿದ್ದಾನೆ. ಎಲ್ಲರ ಮುಂದೆಯೂ ಚಾರುಗೆ ರಾಮಾಚಾರಿ ಅವಮಾನವಾಗುವಂತೆ ಮಾತನಾಡುತ್ತಿದ್ದಾನೆ. ಇದೆಲ್ಲವನ್ನು ಮೌನವಾಗಿ ಚಾರು ಸಹಿಸಿಕೊಳ್ಳುತ್ತಿದ್ದಾಳೆ. ಮತ್ತೆ ರಾಮಾಚಾರಿ ಕ್ಯಾಬಿನ್‌ಗೆ ಹೋಗಿ ನನ್ನನ್ನು ಒಪ್ಪಿಕೋ ಎಂದು ಪರಿಯಾಗಿ ಬೇಡಿಕೊಳ್ಳುತ್ತಿದ್ದಾಳೆ.
ರಾಮಾಚಾರಿಯನ್ನು ತಬ್ಬಿಕೊಂಡ ಚಾರು
ರಾಮಾಚಾರಿ ಕಡ್ಡಿ ತುಂಡು ಮಾಡಿದಂತೆ ಮಾತನಾಡಿ ನನಗೂ ನಿಮಗೂ ಸಂಬಂಧವಿಲ್ಲ ಎಂದು ಹೇಳಿದ್ದಾನೆ. ನನ್ನ ಮುಂದೆ ಇರುವುದು ನನ್ನ ಕುಟುಂಬವಷ್ಟೇ, ಅವರಿಗಾಗಿ ನಾನು ಈ ಜೀವನವನ್ನೇ ಮೀಸಲಾಗಿ ಇಟ್ಟಿದ್ದೇನೆ. ನೀನು ಬೇಡ ಎನ್ನುತ್ತಿರುವುದಕ್ಕೆ ನಾನು ಯಾವ ರೀತಿ ಕಷ್ಟವನ್ನು ಅನುಭವಿಸಿದ್ದೇನೆ ಎಂದು ಒಮ್ಮೆ ಯೋಚನೆ ಮಾಡಿ ಇದು ನಮ್ಮಿಬ್ಬರಿಗೂ ಸರಿ ಬರುವುದಿಲ್ಲ ಎಂದು ರಾಮಾಚಾರಿ ಹೇಳಿದ್ದಾನೆ. ಆದರೂ ಸಹ ಚಾರು, ರಾಮಾಚಾರಿಯನ್ನು ತಬ್ಬಿಕೊಂಡು ದಯವಿಟ್ಟು ನನ್ನನ್ನು ಕೈಬಿಡಬೇಡ ಎಂದು ಹೇಳಿದ್ದಾಳೆ.

ವೈಶಾಖಗೆ ಬುದ್ಧಿ ಕಲಿಸಬೇಕು ಎಂದ ಅಜ್ಜಿ
ಕೋದಂಡನ ಎರಡನೇ ಹೆಂಡತಿಯಾಗಿ ಬಂದಿರುವ ವೈಶಾಖ ಮನೆಯವರ ಜೊತೆ ಒಂದು ರೀತಿ ಗಂಡನ ಜೊತೆ ಇನ್ನೊಂದು ರೀತಿಯಾಗಿ ನಡೆದುಕೊಳ್ಳುತ್ತಾ ಇದ್ದಾಳೆ. ಇದರಿಂದಾಗಿ ಅಜ್ಜಿ ಹಾಗೂ ಶೃತಿಗೆ ತುಂಬಾ ಕೋಪ ಬಂದಿದೆ. ನೋಡು ನಮ್ಮಿಬ್ಬರನ್ನೇ ಯಾವ ರೀತಿ ನಿನ್ನ ಮಗ ಬೈದು ಹೋದ ಎಂದು ಅಜ್ಜಿ ಕೋಪದಿಂದ ಹೇಳಿದ್ದಾರೆ. ರಾಮಾಚಾರಿ ಹೇಳಿದ್ದು ಸಹ ಬೇರೆ ರೀತಿಯಲ್ಲಿಯೇ ಅದನ್ನು ನಾವು ಸರಿಯಾದ ಅರ್ಥ ಮಾಡಿಕೊಳ್ಳಲಿಲ್ಲ ಎಂದು ಶ್ರುತಿಗೆ ಅಜ್ಜಿ ಹೇಳಿದ್ದಾರೆ.
ವೈಶಾಖಗೆ ಬುದ್ಧಿ ಕಲಿಸಬೇಕು
ಅಜ್ಜಿ ಹಾಗೂ ಶ್ರುತಿಗೆ ಹೇಗಾದರೂ ಮಾಡಿ ವೈಶಾಖಗೆ ಬುದ್ಧಿ ಕಲಿಸಬೇಕು ಎಂದು ಅಂದುಕೊಂಡಿದ್ದಾರೆ. ಇದಕ್ಕೆ ಜಾನಕಿ ಇದ್ಯಾವುದೂ ಬೇಡ ನಾವೇ ಅವಳಿಗೆ ಅಡ್ಜಸ್ಟ್ ಆಗಿ ಹೋಗೋಣ ಎಂದು ಹೇಳಿದ್ದಾರೆ. ರಾಮಾಚಾರಿ ಸಹ ಇದನ್ನೇ ಹೇಳಿದ್ದು ಅಡ್ಜಸ್ಟ್ ಮಾಡಿಕೊಂಡು ಹೋಗೋಣ ಎಂದು ಎಂದು ಜಾನಕಿ ಹೇಳಿದ್ದಾರೆ. ಇದು ಅಜ್ಜಿ ಮತ್ತು ಶ್ರುತಿಗೆ ಸಮ್ಮತವಿಲ್ಲ. ಜಾನಕಿ ಮಾತ್ರ ಮನೆಯನ್ನ ಉಳಿಸಿಕೊಳ್ಳಲು ಹರ ಸಾಹಸ ಪಡುತ್ತಿದ್ದಾರೆ.
ಅಸಹಾಯಕ ಸ್ಥಿತಿಯಲ್ಲಿ ಚಾರು
ನಾನು ಮತ್ತು ರಾಮಾಚಾರಿ ಇಬ್ಬರು ಮದುವೆಯಾಗಿದ್ದೇವೆ ಎಂದು ಹೇಳಿದ್ದಾಳೆ. ಚಾರು ಹೇಳಿದ ಮಾತಿಗೆ ಬಬ್ಲು ಸರ್ ನಕ್ಕು, ಹೊರಗೆ ಹೋಗುತ್ತೇನೆ. ನಿನ್ನ ಮಾತನ್ನು ಕೇಳುತ್ತಿದ್ದರೆ ನಂಬುವಂತಹದ್ದಲ್ಲ ಎಂದು ಹೇಳಿದ್ದಾರೆ. ನಾನು ಸಾಯುವ ನಿರ್ಧಾರ ಮಾಡಿದ್ದೆ. ಇದಕ್ಕೆ ರಾಮಾಚಾರಿ ನನ್ನ ಕತ್ತಿಗೆ ಅರಿಶಿನ ಕೊಂಬನ್ನು ಕಟ್ಟಿದ ಎಂದು ಬಬ್ಲು ಸರ್ ಬಳಿ ಚಾರು ಹೇಳಿದ್ದಾಳೆ. ಆದರೆ ಇದ್ಯಾವುದನ್ನೂ ನಂಬದ ಬಬ್ಲು ಸರ್ ಕ್ಯಾಬಿನ್‌ನಿಂದ ಹೊರಗೆ ಹೋಗಿದ್ದಾರೆ. ಅಸಹಾಯಕ ಪರಿಸ್ಥಿತಿಯಲ್ಲಿ ಚಾರು ನಿಂತಿದ್ದಾಳೆ.


Click it and Unblock the Notifications











