Ramachari: ರಾಮಾಚಾರಿಗೆ ತಾನೇ ಕಟ್ಟಿದ ತಾಳಿಯನ್ನು ತೆಗೆಯುವ ಟಾಸ್ಕ್ ನೀಡಿದ ಚಾರು

ರಾಮಾಚಾರಿ ಬಹಳಷ್ಟು ಯೋಚನೆ ಮಾಡುತ್ತಿದ್ದಾನೆ. ನಾನು ಚಾರುವನ್ನು ಮದುವೆ ಮಾಡಿಕೊಂಡು ತಪ್ಪು ಮಾಡಿದೆ ಎಂಬ ಪಾಪ ಪ್ರಜ್ಞೆಯಲ್ಲಿ ಕಾಡುತ್ತಿದೆ. ಇದೆಲ್ಲವನ್ನು ಮುರಾರಿ ಬಳಿ ಮಾತನಾಡುತ್ತಿದ್ದಾನೆ. ನಾನು ಯಾವುದೋ ಪರಿಸ್ಥಿತಿಗೆ ಸಿಲುಕಿ ಚಾರು ಮೇಡಂಗೆ ತಾಳಿ ಕಟ್ಟಬೇಕಾಗಿತು, ಈಗ ಅವರು ನಿರ್ಧಾರವನ್ನು ತೆಗೆದುಕೊಳ್ಳುವುದು ಅವರ ಕಣ್ಣು ಇದೆ ಎಂದು ಹೇಳಿದ್ದಾನೆ.

ಮದುವೆಯಾದ ಮೇಲೆ ರಾಮಾಚಾರಿ ಸುಳ್ಳನ್ನು ಹೇಳುವುದನ್ನು ಕಲಿತ, ಇದಕ್ಕೆ ಮುಂಚೆ ರಾಮಾಚಾರಿ ಸುಳ್ಳನ್ನೇ ಹೇಳುತ್ತಿರಲಿಲ್ಲ. ನನಗೆ ನನ್ನ ಮೇಲೆ ಅಸಹ್ಯವಾಗುತ್ತಿದೆ ಎಂದು ರಾಮಾಚಾರಿ, ಮುರಾರಿಗೆ ಹೇಳಿದ್ದಾನೆ. ನನ್ನ ಕಣ್ಮುಂದೆ ಇರುವುದು ನನ್ನ ಕುಟುಂಬ ಎಂದು ರಾಮಾಚಾರಿ ಹೇಳುತ್ತಿದ್ದಾನೆ. ಕುಟುಂಬಕೋಸ್ಕರ ನಾನು ಚಾರು ಮೇಡಂನ ದೂರ ಮಾಡಿಕೊಳ್ಳಲೇಬೇಕು ನನಗೆ ಈ ಮದುವೆಯ ಬಂಧ ಬೇಡ ಎಂದು ಕಡ ಖಂಡಿತವಾಗಿ ಮುರಾರಿ ಬಳಿ ರಾಮಾಚಾರಿ ಹೇಳಿದ್ದಾನೆ.

Colors Kannada Ramachari serial Written Update on April 21st episode

ಮುರಾರಿ ಮಾತ್ರ ನೀನು ಯಾವುದೇ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದರೂ ಸಹ ತಾಳಿಯನ್ನು ಕಟ್ಟಿದ್ದೀಯಾ, ಈಗಲೂ ಸಹ ನೀನು ಚಾರು ಮೇಡಂನನ್ನು ದೂರ ಮಾಡಿಕೊಳ್ಳುತ್ತಿದ್ದೇನೆ ಎಂಬ ನೋವಿನಲ್ಲಿ ಮಾತನಾಡುತ್ತಿದ್ದೀಯ, ಎಂದು ತನ್ನ ಗೆಳೆಯನಿಗೆ ಮುರಾರಿ ಹೇಳಿದ್ದಾನೆ. ರಾಮಾಚಾರಿ ಮಾತ್ರ ನಾನು ಯಾವಾಗಲೋ ಈ ಬಂಧವನ್ನು ಬಿಡಿಸಿಕೊಳ್ಳಲು ನಿರ್ಧಾರ ಮಾಡಿದ್ದೇನೆ ಎಂದು ಹೇಳಿದ್ದಾನೆ.

ಹೈಡ್ರಾಮಾ ಮಾಡಿದ ವೈಶಾಖ

ಕೋದಂಡನ ಹೆಂಡತಿ ವೈಶಾಖ ಮಾತ್ರ ದಿನದಿಂದ ದಿನಕ್ಕೆ ಬದಲಾಗುತ್ತಾ ಹೋಗುತ್ತಿದ್ದಾಳೆ. ರಾಮಾಚಾರಿ ಮನೆಗೆ ಬಂದ ಮೇಲೆ ಅಜ್ಜಿ ಹಾಗೂ ಶ್ರುತಿ ನಡೆದ ಎಲ್ಲಾ ವಿಚಾರವನ್ನು ರಾಮಾಚಾರಿಯ ಮುಂದೆ ಹೇಳುತ್ತಿದ್ದಾರೆ. ಅಪರ್ಣ ಅತ್ತಿಗೆಯ ಫೋಟೋವನ್ನು ವೈಶಾಖ ಅತ್ತಿಗೆ ಹೊಡೆದು ಹಾಕಿದರು ಎಂದು ಶ್ರುತಿ ಹೇಳಿದ್ದಕ್ಕೆ ನನ್ನ ಸೊಸೆ ಪುಣ್ಯಕೋಟಿ ತರಹ ಅವಳ ಮೇಲೆ ಚಾಡಿಯನ್ನ ಹೇಳಿದಳು, ಇದಕ್ಕೆ ಕೋದಂಡ ಸಹ ನನ್ನ ಹೆಂಡತಿಯ ಮೇಲೆ ಚಾಡಿ ಹೇಳಬೇಡಿ ಎಂದು ಅಜ್ಜಿ ಹೇಳಿದ್ದಾರೆ.

ರೇಗಾಡಿದ ವೈಶಾಖ

ರಾಮಾಚಾರಿ ಜಾನಕಿ ಅಜ್ಜಿ ಹಾಗೂ ಶೃತಿ ಮಾತನಾಡುತ್ತಿದ್ದ ಕಡೆಗೆ ಬಂದ ಕೋದಂಡ ಹಾಗೂ ವೈಶಾಖ ಏನು ಗುಂಪು ಕಟ್ಟಿಕೊಂಡು ಮಾತನಾಡುತ್ತಿದ್ದೀರಿ ಎಂದು ರೇಗಾಡಿದ್ದಾಳೆ. ನನ್ನ ಮೇಲೆ ಮಗನ ಹತ್ತಿರ ಚಾಡಿ ಹೇಳುತ್ತಿದ್ದಾರೆ ಎಂದು ವೈಶಾಖ ಗಂಡನಿಗೆ ಹೇಳಿದ್ದಾಳೆ. ಇದರಿಂದಾಗಿ ಕೋದಂಡನಿಗೂ ಸಹ ಬೇಸರವಾಗಿದೆ. ಇದನ್ನು ಮಾವನ ಬಳಿಯೂ ಹೇಳಿ ಮತ್ತಷ್ಟು ಶತ್ರುತ್ವವನ್ನು ನಮ್ಮ ಮೇಲೆ ತುಂಬುತ್ತಾರೆ ಎಂದು ಅಣ್ಣ ತಮ್ಮನ ನಡುವೆ ತಂದು ಹಾಕಿದ್ದಾಳೆ.

Colors Kannada Ramachari serial Written Update on April 21st episode

ತಾಳಿ ತೆಗೆಯುವ ಸವಾಲು

ಚಾರು, ರಾಮಾಚಾರಿಯನ್ನು ಮಾತನಾಡಬೇಕು ಬಾ ಎಂದು ಕರೆದಿದ್ದಾಳೆ . ಈ ವೇಳೆ ರಾಮಾಚಾರಿಗೆ ತನ್ನ ತಾಳಿಯನ್ನು ಬಿಚ್ಚುವ ಟಾಸ್ಕ್‌ನ್ನು ನೀಡಿದ್ದಾಳೆ. ರಾಮಾಚಾರಿ ತಾಳಿ ಬಿಚ್ಚಲು ತನ್ನ ಕೈಗಳನ್ನು ತೆಗೆದುಕೊಂಡು ಹೋದಾಗ ನಿಮ್ಮ ಜೊತೆಗೆ ನಾನು ಇರುತ್ತೇನೆ ಯಾವಾಗಲೂ ನಿಮಗೆ ನೆರಳಾಗಿ ಇರುತ್ತೇನೆ ಎಂದು ಬೆಟ್ಟದ ಮೇಲೆ ಅರಿಶಿಣದ ಕೊಂಬನ್ನು ಕಟ್ಟುವ ವೇಳೆ ಮಾಡಿದ ಪ್ರಾಮಿಸ್ ನೆನಪಿಗೆ ಬರುತ್ತಿದೆ.

ತಾಳಿ ತೆಗೆಯಲಾಗದೇ ಸುಮ್ಮನಾದ ರಾಮಾಚಾರಿ

ಒಮ್ಮೆ ಕೈಯನ್ನು ಹಿಂದಕ್ಕೆ ಸರಿಸಿಕೊಂಡು ದೂರ ಹೋಗಿ ರಾಮಾಚಾರಿ ನಿಂತಿದ್ದಾನೆ. ಇದನ್ನೆಲ್ಲಾ ನೋಡುತ್ತಿರುವ ಚಾರು ತಾಳಿ ಬಂಧ ಎಂದರೆ ಇದೇನೆ. ಜನ್ಮ ಜನ್ಮದ ಅನುಬಂಧ ಅಷ್ಟು ಬೇಗ ತಾಳಿ ಅನುಬಂಧವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ ಎಂದು ರಾಮಾಚಾರಿಯ ಬಳಿ ಹೇಳಿದ್ದಾಳೆ. ನೋಡು ನೀನೇ ಕಟ್ಟಿರುವ ತಾಳಿಯನ್ನು ನಿನ್ನ ಕೈಯಲ್ಲಿ ತೆಗೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾಳೆ.

ನೆನಪಿಗೆ ಬಂದ ಅಪ್ಪ

ರಾಮಾಚಾರಿಗೆ ನಾರಾಯಣ ಆಚಾರ್ಯರು ಆಡಿದ ಪ್ರತಿಯೊಂದು ಮಾತುಗಳು ಸಹ ನೆನಪಾಗುತ್ತಿವೆ. ಇವನೊಬ್ಬನೇ ನನ್ನ ಹೆಸರನ್ನು ಉಳಿಸುವುದು, ನೀನು ಸಹ ನಿನ್ನ ಅಣ್ಣನ ರೀತಿ ಮಾಡಿದರೆ ನಾನು ಸತ್ತು ಹೋಗುತ್ತೇನೆ ಎಂದ ಮಾತು ರಾಮಾಚಾರಿಗೆ ನೆನಪಾಗುತ್ತಿದೆ. ಇದೆಲ್ಲವನ್ನು ನೆನಪಿಸಿಕೊಂಡ ರಾಮಾಚಾರಿ, ಚಾರು ಕುತ್ತಿಗೆಯಲ್ಲಿ ಇರುವ ತಾಳಿಯನ್ನು ತೆಗೆಯಲು ನಿರ್ಧರಿಸಿದ್ದಾನೆ. ತಾಳಿ ತೆಗೆಯಲು ರಾಮಾಚಾರಿ ಬಂದಾಗ ಚಾರು ಎರಡು ಕೈಗಳನ್ನು ದೂರ ತಳ್ಳಿದ್ದಾಳೆ.

More from Filmibeat

English summary
Colors Kannada Ramachari serial Written Update on April 21st episode. here details about Ramachari decided to end his marriage. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X