Ramachari: ರಾಮಾಚಾರಿ ಹಠಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಚಾರುಲತಾ
ರಾಮಾಚಾರಿ ಒಂದು ಕ್ಷಣ ತಂದೆಯ ಮಾತನ್ನೆಲ್ಲ ನೆನಪಿಸಿಕೊಂಡು ಚಾರು ಕುತ್ತಿಗೆಯಲ್ಲಿ ಇದ್ದ ತಾಳಿಯನ್ನು ತೆಗೆಯಲು ಹೋಗಿದ್ದಾನೆ. ಇದೇ ವೇಳೆ ಚಾರು ರಾಮಾಚಾರಿಯನ್ನು ಹಿಂದಕ್ಕೆ ತಳ್ಳಿದ್ದಾಳೆ. ರಾಮಾಚಾರಿಗೆ ಚಾರು ಬೈಯ್ಯುತ್ತಿದ್ದಾಳೆ. ನಿನ್ನ ಮನಸ್ಸು ಯಾಕೆ ಈ ರೀತಿ ಗುಂಡು ಕಲ್ಲಾಯಿತು, ನೀನು ಯಾವಾಗ ಕಲ್ಲಿನ ಮನಸ್ಸಿನವನಾದೆ ಎಂದು ಚಾರು ಭಾವುಕಳಾಗಿ ಕೇಳುತ್ತಿದ್ದಾಳೆ.
ರಾಮಾಚಾರಿ ಎಂದರೆ ಸಂಪ್ರದಾಯಸ್ಥ, ಹೆಣ್ಣಿಗೆ ಗೌರವ ಕೊಡುವವನು ಎಂದು ಎಲ್ಲರೂ ಹೇಳುತ್ತಾರೆ ಆದರೆ ನೀನೊಬ್ಬ ನಂಬಿಕೆ ದ್ರೋಹಿ ಎಂದು ಚಾರು ರಾಮಾಚಾರಿಗೆ ಹೇಳಿದ್ದಾಳೆ.ಬೆಟ್ಟದ ಮೇಲೆ ತಾಳಿ ಕಟ್ಟುವ ವೇಳೆ ಈ ಪ್ರಕೃತಿ ಸಾಕ್ಷಿಯಾಗಿ ನಾನು ನಿನ್ನ ಮದುವೆಯಾಗಿದ್ದೇನೆ, ಕೊನೆಯ ತನಕ ಜೊತೆಗೆ ಇರುತ್ತೇನೆಂದು ಈಗ ಮಾಡುತ್ತಿರುವುದು ಏನು ಎಂದು ಕೇಳಿದ್ದಾಳೆ.

ಇದಕ್ಕೆ ರಾಮಾಚಾರಿಯ ಬಳಿ ಯಾವುದೇ ಉತ್ತರವಿಲ್ಲ. ರಾಮಾಚಾರಿಗೆ ಬೈದು ಚಾರು ಅಲ್ಲಿಂದ ಹೊರಟಿದ್ದಾಳೆ. ಈ ಕಡೆ ರಾಮಾಚಾರಿ ಸಹ ಮನೆಗೆ ಹೋಗಿದ್ದಾನೆ. ಚಾರುಗೆ ರಾಮಾಚಾರಿ ಹೇಳಿರುವ ಮಾತುಗಳಿಂದ ಬೇಸರವಾಗಿದೆ ತಾಳಿಯನ್ನು ತೆಗೆಯಲು ಇನ್ನೂ ಸಹ ಬೇಸರ ತರಿಸಿದೆ.
ಮನೆಯವರ ಮುಂದೆ ಅತ್ತ ಚಾರು
ರಾಮಾಚಾರಿ ಬಳಿ ಮಾತನಾಡಿಕೊಂಡು ಬಂದ ಚಾರು ತನ್ನ ಮನೆಯವರ ಮುಂದೆ ಅಳಲು ಶುರು ಮಾಡಿದ್ದಾಳೆ. ಇದಕ್ಕೆ ಅಜ್ಜ ಇದು ಆನಂದ ಭಾಷ್ಪ ಎಂದು ಹೇಳಿದ್ದಾರೆ. ಆದರೆ ಚಾರು ಇದು ಆನಂದ ಭಾಷ್ಪವಲ್ಲ ಕಣ್ಣೀರು. ನಾನೇ ಅಳುತ್ತಿರುವುದು ಎಂದು ಹೇಳಿದ್ದಾಳೆ. ಮದುವೆ ಫಂಕ್ಷನ್ ಯಾವುದು ಬೇಡ ಎಂದು ಚಾರು ಎಂದಿದ್ದಾಳೆ.
ಹಠ ಹಿಡಿದ ಚಾರು
ಇದಕ್ಕೆ ಅಲ್ಲೇ ಇದ್ದ ಅಜ್ಜ ಅಜ್ಜಿ ಒಂದು ಹೆಣ್ಣು ಮದುವೆಯಾಗಿ ಗಂಡನ ಮನೆಗೆ ಹೋಗಲೇಬೇಕು ಎಂದಿದ್ದಾರೆ. ಇದಕ್ಕೆ ಮಾನ್ಯತಾ ನಾವೇನು ದೂರದಲ್ಲಿ ಇದ್ದೀವಾ ನಿನಗೆ ಬೇಕು ಅಂದಾಗ ಇಲ್ಲಿಗೆ ಬರಬಹುದು. ನಾವು ಸಹ ಅಲ್ಲಿಗೆ ಬರುತ್ತೇವೆ ಎಂದು ಸಮಾಧಾನ ಮಾಡಿದ್ದಾಳೆ. ಆದರೆ ಚಾರು ಮಾತ್ರ ತನ್ನ ತಂದೆಯ ಎದೆಗೆ ಒರಗಿ ನನಗೆ ರಾಮಾಚಾರಿ ಬೇಕು ತಂದು ಕೊಡಿ ಎಂದು ಸಣ್ಣ ಮಕ್ಕಳ ಹಾಗೆ ಹಠ ಮಾಡಿದ್ದಾಳೆ.

ತಾಳಿ ಸಹವಾಸ ಬೇಡ ಎಂದ ಚಾರಿ
ತನ್ನ ಸಂಬಂಧವನ್ನು ಕಡಿದುಕೊಂಡು ರಾಮಾಚಾರಿ ಮನೆಗೆ ಬಂದಿದ್ದಾನೆ ಈ ಕಡೆ ಚಾರು ಮಾತ್ರ ರಾಮಾಚಾರಿಯ ನೆನಪಿನಲ್ಲೇ ಇದ್ದಾಳೆ. ಅಲ್ಲೇ ತಾಳಿಯನ್ನು ಪೋಣಿಸುತ್ತಿದ್ದ ಜಾನಕಿ ಬಾ ರಾಮಾಚಾರಿ ಸ್ವಲ್ಪ ತಾಳಿ ಪೋಣಿಸಿ ಕೊಡು ಎಂದಿದ್ದಾರೆ. ಇದಕ್ಕೆ ರಾಮಾಚಾರಿ ನನಗೆ ತಾಳಿಯ ಸಹವಾಸವೇ ಬೇಡ ಎಂದು ಹೇಳಿದ್ದಾನೆ.
ನೀವೇ ಪೋಣಿಸಿ ನನ್ನನ್ನು ಇಂತಹ ಕೆಲಸಕ್ಕೆ ಕರೆಯಬೇಡಿ ಎಂದು ಜಾನಕಿಯ ಬಳಿ ರಾಮಾಚಾರಿ ಹೇಳಿದ್ದಾನೆ. ಇದೆಲ್ಲವನ್ನು ಸಹ ವೈಶಾಖ ಕೇಳಿಸಿಕೊಳ್ಳುತ್ತಿದ್ದಾಳೆ. ಮನೆಯಲ್ಲಿ ವೈಶಾಖ ರಂಪ ಮಾಡಿದ್ದಾಳೆ ನಮ್ಮ ಮನೆಯವರ ಬಗ್ಗೆ ಕೇಳಿದರು ಹಾಗೆ ಹೀಗೆ ಎಂದು ಕೋದಂಡನ ಎದುರು ದೊಡ್ಡ ಡ್ರಾಮಾ ಮಾಡಿದ್ದಾಳೆ. ಇದೆಲ್ಲವನ್ನು ಸಹ ರಾಮಾಚಾರಿ ತಡೆದಿದ್ದಾನೆ.
ಸಾಯಲು ನಿರ್ಧಾರ ಮಾಡಿದ ಚಾರು
ರಾಮಾಚಾರಿಗೆ ವಿಡಿಯೋ ಮೂಲಕ ಎಲ್ಲಾ ಮಾಹಿತಿಯನ್ನು ನೀಡಿ ನಾನು ಸಾಯುತ್ತಿದ್ದೇನೆ ಎಂಬ ಸ್ಪಷ್ಟವಾದ ಸಂದೇಶವನ್ನು ಚಾರು, ರಾಮಾಚಾರಿಗೆ ಕೊಡಲು ಸಿದ್ದಳಾಗಿದ್ದಾಳೆ. ವಿಡಿಯೋ ಮಾಡುತ್ತಿರುವ ಚಾರು, ರಾಮಾಚಾರಿ ಬಗೆಗಿನ ಅದಮ್ಯವಾದ ಪ್ರೀತಿಯನ್ನು ವಿಡಿಯೋ ಮೂಲಕ ವ್ಯಕ್ತಪಡಿಸಿದ್ದಾಳೆ. ನಾನು ನಿನಗೆ ಬೇಡವಾದೆನಾ? ಎಷ್ಟು ಪ್ರೀತಿಯಿಂದ ನಿನ್ನನ್ನು ನೋಡಿಕೊಳ್ಳುತ್ತಿದ್ದೆ ಎಂದೆಲ್ಲಾ ಚಾರು ಹೇಳಿದ್ದಾಳೆ.
ನಾನು ಈಗ ಗಂಡನ ಮನೆಯ ಸ್ವತ್ತು ನಿನ್ನ ಕುಟುಂಬಕ್ಕಾಗಿ ನನ್ನನ್ನೇ ದೂರ ಮಾಡುತ್ತಿದ್ದೀಯ. ನನ್ನ ಚಿತೆಗೆ ನೀನೆ ಬೆಂಕಿಯನ್ನು ಇಡಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದಾಳೆ. ನಿಂಗಣ್ಣ ನಾನು ಬಹಳ ಪ್ರೀತಿಯಿಂದ ಕಾಣುತ್ತಿದ್ದೆ ಆದರೆ ನಿನ್ನ ಮನಸ್ಸು ಕಲ್ಲಾಗಿ ನನ್ನನ್ನೇ ದೂರ ಮಾಡಿದೆ. ಆದರೆ ನಿನ್ನ ಬಿಟ್ಟು ಬಾಳುವ ಶಕ್ತಿ ನನಗೆ ಇಲ್ಲ ಎಂದು ವಿಡಿಯೋದಲ್ಲಿ ಚಾರು ಹೇಳಿದ್ದಾಳೆ.


Click it and Unblock the Notifications











