Ramachari: ವಿಷ ಕುಡಿಯಲು ನಿರ್ಧಾರ ಮಾಡಿದ ಚಾರು: ರಾಮಾಚಾರಿಗೋಸ್ಕರ ತ್ಯಾಗ
ರಾಮಾಚಾರಿಗಾಗಿ ಚಾರು ದೊಡ್ಡದೊಂದು ತ್ಯಾಗಕ್ಕೆ ಸಿದ್ದಳಾಗಿ ನಿಂತಿದ್ದಾಳೆ. ರಾಮಾಚಾರಿ ತನ್ನ ಕುಟುಂಬಕ್ಕೋಸ್ಕರ ಚಾರು ತಾಳಿಯನ್ನು ತೆಗೆಯಲು ಹೋದ ಕಾರಣದಿಂದ ಅವನಿಂದ ಸಂಪೂರ್ಣವಾಗಿ ದೂರ ಹೋಗುವ ಯೋಚನೆಯನ್ನು ಮಾಡಿದ್ದಾಳೆ . ರಾಮಾಚಾರಿಯನ್ನ ಇಷ್ಟಪಟ್ಟು ಚಾರು ಮದುವೆಯಾಗಿದ್ದಳು. ಕಣ್ಣು ಬಂದಿದ್ದರು ಸಹ ನಾಟಕವಾಡಿ ತಾಳಿಯನ್ನ ಕಟ್ಟಿಸಿ ಕೊಂಡಿದ್ದಳು. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದಳು.
ರಾಮಾಚಾರಿ ಸಹ ಸಮಯ ತೆಗೆದುಕೊಂಡಿದ್ದನು. ಆದರೆ ತಂದೆಯ ಮಾತಿಗೆ ಕಟ್ಟುಬಿದ್ದು ಚಾರುವನ್ನು ದೂರ ಮಾಡಿಕೊಳ್ಳಲು ಪ್ರಯತ್ನಿಸಿದ್ದಾನೆ. ಚಾರುಗೆ ಮಾತ್ರ ರಾಮಾಚಾರಿಯನ್ನು ದೂರ ಮಾಡಿಕೊಳ್ಳಲು ಸಾಧ್ಯವಿಲ್ಲ. ಅವನು ಯಾವಾಗ ತಾಳಿ ಕಟ್ಟಿದನೋ ಅಂದಿನಿಂದಲೇ ತನ್ನ ಗಂಡ ಎಂದುಕೊಂಡು ಪ್ರೀತಿ ಮಾಡುತ್ತಿದ್ದಾಳೆ. ರಾಮಾಚಾರಿ ಕೊಟ್ಟ ಸಮಯಕ್ಕಾಗಿ ಕಾಯುತ್ತಾ ಇದ್ದಳು. ಆದರೆ ರಾಮಾಚಾರಿ ಆ ಭರವಸೆ ಇಲ್ಲದಂತೆ ಮಾಡಿದ್ದಾನೆ.

ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ
ರಾಮಾಚಾರಿ ಸಿಗದ ಕಾರಣಕ್ಕೆ ಚಾರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾಳೆ. ವಿಷದ ಬಾಟಲನ್ನು ಹಿಡಿದುಕೊಂಡಿರುವ ಚಾರು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಿದ್ದಾಳೆ. ನನಗೆ ತಾಳಿಯನ್ನ ತೆಗೆಯಲು ಸಾಧ್ಯವಿಲ್ಲ. ಇದಕ್ಕಾಗಿ ನಾನೇ ಈ ಪ್ರಪಂಚವನ್ನು ಬಿಟ್ಟು ಹೋಗುವ ನಿರ್ಧಾರ ಮಾಡಿದ್ದೇನೆ. ನೀನು ನಿನ್ನ ಕುಟುಂಬದ ಜೊತೆಗೆ ಚೆನ್ನಾಗಿ ಇರು ಎಂದು ಹೇಳಿದ್ದಾಳೆ.
ಮುಂದಿನ ಜನ್ಮದಲ್ಲಾದರೂ ಸರಿ ನಿನ್ನ ಹೆಂಡತಿಯಾಗಿ ನಿನ್ನ ಕುಟುಂಬದವರಿಗೆ ಸೊಸೆಯಾಗಿ ಸೇವೆಯನ್ನು ಮಾಡುವ ಭಾಗ್ಯವನ್ನು ಆ ದೇವರು ನನಗೆ ಕರುಣಿಸಲಿ ಎಂದು ಚಾರು ವಿಡಿಯೋದಲ್ಲಿ ಹೇಳುತ್ತಿದ್ದಾಳೆ. ರಾಮಾಚಾರಿಯನ್ನ ಬಿಟ್ಟುಕೊಡಲು ಚಾರುಗೆ ಸ್ವಲ್ಪವೂ ಇಷ್ಟ ಇಲ್ಲ, ಆದರೆ ರಾಮಾಚಾರಿ ಹೇಳಿದ ಮಾತುಗಳಿಂದ ಮನನೊಂದ ಚಾರು ಆತ್ಮಹತ್ಯೆಯ ದಾರಿ ಹಿಡಿದಿದ್ದಾಳೆ.
ಏನೇ ಹೇಳಿದರೂ ಕೇಳಿದ ವೈಶಾಖ
ಕ್ಷಮೆ ಕೇಳಿದರು ಕೊಂಕು ನುಡಿ
ವೈಶಾಖ ಏನೇ ಹೇಳಿದರೂ ಸಹ ಅದರಲ್ಲಿ ಒಂದು ತಪ್ಪನ್ನು ಹುಡುಕಿ ಕೊಂಕನ್ನು ನುಡಿಯುತ್ತಿದ್ದಾಳೆ. ವೈಶಾಖ ಮಲಗಿರುವ ರೂಮಿಗೆ ರಾಮಾಚಾರಿ, ಜಾನಕಿ, ಶೃತಿ ಹಾಗೂ ಅಜ್ಜಿ ಬಂದಿದ್ದಾರೆ. ಈ ವೇಳೆ ಜಾನಕಿ ವೈಶಾಖಳನ್ನ ಎಬ್ಬಿಸಿದ್ದಾರೆ. ಇದರಿಂದ ಸಿಟ್ಟಾದ ವೈಶಾಖ ನೆಮ್ಮದಿಯಾಗಿ ಮಲಗಲು ಈ ಮನೆಯಲ್ಲಿ ಬಿಡುವುದಿಲ್ಲ, ಬರೀ ಕೊಂಕು ಮಾತು ಆಡುವುದೇ ಆಯಿತು ಎಂದಿದ್ದಾಳೆ.

ಈ ವೇಳೆ ರಾಮಾಚಾರಿ ನಾವು ಏನೇ ಮಾತನಾಡಿದರು ಸಹ ಅದು ನಿಮಗೆ ತಪ್ಪಾಗಿ ಅರ್ಥವಾಗುತ್ತಿದೆ. ಇದರಿಂದಾಗಿ ಮನೆಯಲ್ಲಿ ಜಗಳವಾಗುತ್ತಿದೆ ಎಂದಿದ್ದಾನೆ. ಇದಕ್ಕೆ ವೈಶಾಖ ಹೌದು ನೀವೇ ಸರಿ ನಾನೇ ಕೆಟ್ಟವಳು, ಎಂದು ಹೇಳಿದ್ದಾಳೆ. ನಿಮಗೆ ನಾನು ಏನೇ ಹೇಳಿದರೂ ಸಹ ಕೊಂಕಾಗಿ ಕೇಳುತ್ತದೆ ಎಂದು ಹೇಳಿದ್ದಾಳೆ. ಈಗ ಕ್ಷಮೆ ಕೇಳುತ್ತಿರುವುದು ಸಹ ನಿಮಗೆ ಇಷ್ಟವಿಲ್ಲ ಇಲ್ಲಿಯೂ ಸಹ ನಿಮ್ಮ ದುರಹಂಕಾರ
ಅಡ್ಡ ಬಂದಿದೆ ಎಂದಿದ್ದಾಳೆ. ವೈಶಾಖಳ ಮಾತನ್ನು ಕೇಳುತ್ತಿರುವ ಮನೆಯಲ್ಲಿರುವ ಎಲ್ಲರಿಗೂ ಸಹ ಬೇಸರವಾಗಿದೆ.
ವಿಷ ಕುಡಿದ ಚಾರು
ಚಾರು ವಿಷ ಕುಡಿಯುತ್ತೇನೆ ಎಂದು ಕಳಿಸಿದ ವಿಡಿಯೋವನ್ನು ರಾಮಾಚಾರಿ ನೋಡಿದ್ದಾನೆ. ಇವರು ಏನೋ ಒಂದು ಅನಾಹುತ ಮಾಡಲು ಹೊರಟಿದ್ದಾರೆ ಎಂದು ಅಂದುಕೊಂಡಿದ್ದಾನೆ. ಎಷ್ಟೋ ಬಾರಿ ಕರೆ ಮಾಡಿದರು ಸಹ ಅವಳು ಕರೆಯನ್ನ ಸ್ವೀಕರಿಸಲಿಲ್ಲ, ಇದರಿಂದ ಭಯ ಭೀತನಾದ ರಾಮಾಚಾರಿ ಮುರಾರಿಗೆ ಕಾಲ್ ಮಾಡಿ ತಕ್ಷಣವೇ ಗಾಡಿಯನ್ನು ತರುವಂತೆ ಹೇಳಿದ್ದಾನೆ.
ಈ ಕಡೆ ಚಾರು ಬಾಗಿಲು ಹಾಕಿಕೊಂಡು ವಿಷವನ್ನು ಕುಡಿದು ಮಲಗಿದ್ದಾಳೆ. ಸರ್ವೇಶ ಕಾಫಿ ತೆಗೆದುಕೊಂಡು ಬಂದರು ಸಹ ಬಾಗಿಲು ತೆಗೆದಿಲ್ಲ. ಇದನ್ನು ಮಾನ್ಯತಾ ಬಳಿ ಹೋಗಿ ಹೇಳಿದ್ದಾನೆ. ಮೇಡಂ ನಿದ್ದೆ ಮಾಡುತ್ತಿರಬೇಕು ನಾನು ಕಾಫಿ ಕೊಟ್ಟಿಲ್ಲ ಎಂದು ಹೇಳಿದ್ದಾನೆ. ಮಾನ್ಯತಾಗೆ ಮಗಳ ಬಗ್ಗೆ ಯಾವುದೇ ಯೋಚನೆ ಇಲ್ಲ.


Click it and Unblock the Notifications











