Ramachari: ಚಾರುಲತಾಳನ್ನು ಬದುಕಿಸಿಕೊಳ್ಳಲು ರಾಮಾಚಾರಿ ಹರಸಾಹಸ
ರಾಮಾಚಾರಿ, ಚಾರು ಮನೆಗೆ ಮುರಾರಿ ಜೊತೆಗೆ ಬಂದಿದ್ದಾನೆ. ಓಡೋಡಿ ಬಂದ ರಾಮಾಚಾರಿ ಮನೆಯೊಳಗೆ ಹೋಗಲು ಮುಂದಾಗಿದ್ದಾನೆ. ಈ ವೇಳೆ ಮಾನ್ಯತಾ, ರಾಮಾಚಾರಿ ಜೊತೆಗೆ ಜಗಳಕ್ಕೆ ನಿಂತಿದ್ದಾಳೆ. ರಾಮಾಚಾರಿ, ಚಾರು ಕರೆಯಿರಿ ಎಂದಾಗ ಕಾಲ್ ಚಾರು ಮೇಡಂ ಅವಳಿಗೆ ಒಂದು ಗೌರವವಿದೆ ಎಂದಿದ್ದಾಳೆ. ಇದಕ್ಕೆ ರಾಮಾಚಾರಿ ನಿಮ್ಮ ದೊಡ್ಡಸ್ತಿಕೆ ನಿಮ್ಮ ಹತ್ರನೇ ಇಟ್ಟುಕೊಳ್ಳಿ ಎಂದಿದ್ದಾನೆ.
ಜೋರಾಗಿ ಚಾರು ಮೇಡಂ ಚಾರು ಮೇಡಂ ಎಂದು ರಾಮಾಚಾರಿ ಜೋರಾಗಿ ಕರೆದಾಗ ಅವಳು ಮಲಗಿದ್ದಾಳೆ ಎಂದಿದ್ದಾರೆ. ಚಾರು ಮೇಡಂಗೆ ತೊಂದರೆಯಾಗಿದೆ, ದಯವಿಟ್ಟು ಕರೆಯಿರಿ ಎಂದಾಗ ನನ್ನ ಮಗಳಿಗೆ ಏನು ತೊಂದರೆ ಇಲ್ಲ, ಅವಳಿಗೇನಾಗಿದೆ ಅವಳನ್ನು ಯಾಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದು ಮಾನ್ಯತಾ ಕೇಳಿದ್ದಾಳೆ.

ಇದಕ್ಕೆ ರಾಮಾಚಾರಿ ನಿಮ್ಮ ಮಗಳು ವಿಷ ತಗೆದುಕೊಂಡಿದ್ದಾರೆ ಎಂದಿದ್ದಾನೆ. ರಾಮಾಚಾರಿ ಮಾತನ್ನು ಕೇಳಿದ ಮಾನ್ಯತಾಗೆ ತುಂಬಾ ಶಾಕ್ ಆಗಿದೆ. ಅಜ್ಜಿ, ತಾತ, ಚಿಂಟುಗೂ ಸಹ ಶಾಕ್ ನೀಡಿದೆ. ಮಾನ್ಯತಾ ಮಾತನಾಡುತ್ತಿದ್ದರೆ ರಾಮಾಚಾರಿ ಏನನ್ನು ಕೇಳಿಸಿಕೊಳ್ಳದೇ ಚಾರು ರೂಮ್ ಬಳಿ ಬಂದಿದ್ದಾನೆ.
ಚಾರು ನೋಡಿ ಮಾನ್ಯತಾ ಶಾಕ್
ರಾಮಾಚಾರಿ ಬಾಗಿಲು ತೆಗೆಯಲು ಹೋದಾಗ ಮಾನ್ಯತಾ ಅಡ್ಡಿ ಪಡಿಸಿದ್ದಾಳೆ. ಮಾನ್ಯತಾಳ ಅತ್ತೆ ಮಾವ , ಸಹ ಕೇಳದೇ ಸರ್ವೇಶನಿಗೆ ಮೊಬೈಲ್ ತೆಗೆದುಕೊಂಡು ಬಾ, ನಾನು ಪೊಲೀಸರಿಗೆ ಫೋನ್ ಮಾಡುತ್ತೇನೆ ಎಂದು ಮಾನ್ಯತಾ ಪದೇ ಪದೇ ಹೇಳುತ್ತಿದ್ದಾಳೆ. ಆದರೂ ಸಹ ಮಾನ್ಯತಾ ಮಾತಿಗೆ ಸೊಪ್ಪು ಹಾಕಿದ ರಾಮಾಚಾರಿ ಬಾಗಿಲನ್ನು ಬಡಿದು ತೆಗೆದಿದ್ದಾನೆ.
ಚಾರು ಹಾಸಿಗೆ ಮೇಲೆ ಬಿದ್ದಿರುವುದನ್ನು ನೋಡಿದ ಮಾನ್ಯತಾಗೆ ತುಂಬಾ ಶಾಕ್ ಆಗಿದೆ. ರಾಮಾಚಾರಿ ಚಾರು ಮಲಗಿರುವ ಸ್ಥಿತಿಯನ್ನು ನೋಡಿ ತುಂಬಾ ಬೇಸರ ಮಾಡಿಕೊಂಡಿದ್ದಾನೆ. ನನ್ನಿಂದಲೇ ಚಾರು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಾಮಾಚಾರಿಗೆ ಗಿಲ್ಟ್ ಕಾಡುತ್ತಿದೆ. ಮಾನ್ಯತಾಗೆ ಮಗಳು ಯಾಕೆ ಈ ರೀತಿ ಮಾಡಿಕೊಂಡಳು ಎಂದು ಯೋಚನೆ ಆಗಿದೆ.

ಮನೆಯವರಿಗೆ ಬೈದ ಕೋದಂಡ
ಇತ್ತ ಹೆಂಡತಿಯ ಮಾತನ್ನು ಕೇಳಿದ ಕೋದಂಡ ಮನೆಯವಗೆ ಸಹ ಬೈದಿದ್ದಾನೆ. ಇದೇ ವೇಳೆ ಇವಳ ಜೊತೆ ಹೊಂದಿಕೊಂಡು ಹೋಗಲು ಸಾಧ್ಯವಾಗದಿದ್ದರೆ ಅಪ್ಪ ಬಂದ ಮೇಲೆ ಮಾತನಾಡುತ್ತೇನೆ ಎಂದು ಹೇಳಿದ್ದಾನೆ. ಇದೆಲ್ಲವನ್ನು ಕೇಳಿಸಿಕೊಳ್ಳುತ್ತಿರುವ ಜಾನಕಿಗೆ ತುಂಬಾ ಬೇಸರವಾಗಿದೆ ಕಣ್ಣೀರನ್ನು ಹಾಕಿದ್ದಾಳೆ.
ವೈಶಾಖ ಮಾತ್ರ ಏನು ಅರಿಯದವಳಂತೆ ನಾಟಕವನ್ನು ಆಡುತ್ತಿದ್ದಾಳೆ. ಅಪ್ಪ ಬಂದ ಮೇಲೆ ಮನೆಗೆ ಬರುತ್ತೇವೆ ಎಂದು ಹೇಳಿದ ಕೋದಂಡ ಎಷ್ಟೇ ಹೇಳಿದರು ಕೇಳದೆ ವೈಶಾಖಳನ್ನು ಕರೆದುಕೊಂಡು ಮನೆಯಿಂದ ಹೊರಗೆ ಹೋಗಿದ್ದಾನೆ. ತನ್ನ ಗಂಡ ತನ್ನನ್ನು ಸಪೋರ್ಟ್ ಮಾಡುತ್ತಿರುವುದಕ್ಕೆ ವೈಶಾಖಗೆ ತುಂಬಾ ಖುಷಿಯಾಗಿದೆ.
ಮಗನ ಮದುವೆಗೆ ಒಪ್ಪಿದ ಆಚಾರ್ಯರು
ನಾರಾಯಣ ಆಚಾರ್ಯರು ದೇವಸ್ಥಾನದಿಂದ ಮನೆಗೆ ಬಂದು ಜಾನಕಿಯ ಬಳಿ ಮಾತನಾಡುತ್ತಿದ್ದಾರೆ. ನನ್ನ ಅಹಂಕಾರವೆಲ್ಲ ದೇವರ ಮುಂದೆ ನಿಂತಾಗ ನನ್ನಿಂದ ದೂರವಾಯಿತು. ನಾನು ಎಲ್ಲರನ್ನೂ ಹಿಡಿತದಲ್ಲಿ ಇಟ್ಟುಕೊಂಡಿದ್ದೇನೆ ಎಂಬ ಭ್ರಮೆಯು ಸಹ ಕರಗಿದೆ. ಕೋದಂಡ ಹಾಗೂ ವೈಶಾಖಳನ್ನು ನಾವು ಒಪ್ಪಿಕೊಳ್ಳೋಣ, ಅವರು ಈ ಮನೆಯಲ್ಲಿ ಬಾಳಲು ಬಂದಿದ್ದಾರೆ ಎಂದು ಹೇಳಿದ್ದಾರೆ.
ಹೆಣ್ಣು ಮಕ್ಕಳಿಗೆ ಗೌರವ ಕೊಡುವ ಕುಟುಂಬ ನಮ್ಮದು ನಾವೆಲ್ಲರೂ ಸೇರಿ ಹೊಟ್ಟಾಗಿ ಬಾಳೋಣ ಸಂತೋಷದಿಂದ ಇರೋಣ ಎಂದು ನಾರಾಯಣ ಆಚಾರ್ಯರು ಹೇಳಿದ್ದಾರೆ. ಜಾನಕಿ ಸಹ ಸಮ್ಮತಿ ಸೂಚಿಸಿದ್ದಾಳೆ. ನಂತರ ಕೋದಂಡ ಹಾಗೂ ವೈಶಾಖಳನ್ನು ಕರೆಯಲು ಹೇಳಿದ್ದಾರೆ. ಇದಕ್ಕೆ ಜಾನಕಿ ಅವರಿಬ್ಬರು ಮನೆಯಿಂದ ಹೊರಗೆ ಹೋಗಿದ್ದಾರೆ ಎಂದು ಹೇಳಿದ್ದಾಳೆ.


Click it and Unblock the Notifications











