Ramachari: ಆತ್ಮಹತ್ಯೆಯ ನಾಟಕವಾಡಿದ ಚಾರು: ರಾಮಾಚಾರಿ ಮಂಗಳಾರತಿ

ಚಾರು ಕಾರಣಕ್ಕೆ ರಾಮಾಚಾರಿ ಅವಮಾನಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಗಿದೆ. ಚಾರು ದಿಢೀರನೇ ಎದ್ದು ಕುಳಿತು ನಾನೇಕೆ ವಿಷ ಕುಡಿಯಲಿ ಎಂದು ಮಾನ್ಯತಾ ಬಳಿ ಹೇಳಿದ್ದಾಳೆ. ರಾಮಾಚಾರಿಗೆ ಏನು ಮಾತನಾಡಬೇಕು ಎಂಬುದೇ ತಿಳಿಯುತ್ತಿಲ್ಲ. ಬನ್ನಿ ಮೇಡಂ ಆಸ್ಪತ್ರೆಗೆ ಹೋಗೋಣ ವಿಷ ಹೊಟ್ಟೆಗೆ ಇಳಿದರೆ ತುಂಬಾ ಕಷ್ಟವಾಗುತ್ತದೆ ಎಂದು ಹೇಳುತ್ತಿದ್ದಾನೆ. ಚಾರು ನಾನು ಎಲ್ಲಿಗೂ ಬರೋದಿಲ್ಲ ನಾನು ಚೆನ್ನಾಗಿದ್ದೇನೆ ಎಂದಿದ್ದಾಳೆ.

ಮಾನ್ಯತಾ, ರಾಮಾಚಾರಿ ಮಾತಿಗೆ ಕೋಪಗೊಂಡು ನನ್ನ ಮಗಳಿಗೆ ಹತ್ತಿರವಾಗಲು ಈ ರೀತಿ ನಾಟಕವಾಡುತ್ತಿದ್ದೀಯಾ? ಇಲ್ಲಿ ಏನಾದರೂ ನನ್ನ ಗಂಡ ಇದ್ದಿದ್ದರೆ ನಿನ್ನ ಮಾತನ್ನೇ ನಿಜ ಎಂದು ನಂಬುತ್ತಿದ್ದನು. ಕೊನೆಗೂ ನಿನ್ನ ಬುದ್ಧಿಯನ್ನು ನೀನು ತೋರಿಸುತ್ತಿದ್ದೀಯಾ ಎಂದು ರಾಮಾಚಾರಿಗೆ ಮಾನ್ಯತಾ ಅವಮಾನ ಮಾಡುತ್ತಿದ್ದಾಳೆ.

Colors Kannada Ramachari serial Written Update on April 27th episode

ನಿನಗೆ ನನ್ನ ಮಗಳು ಮೆಸೇಜ್ ಮಾಡಿಲ್ಲ ಅಥವಾ ವಿಡಿಯೋ ಮಾಡಿ ನಾನು ವಿಷ ಕುಡಿಯುತ್ತಿದ್ದೇನೆ ನನ್ನ ಬದುಕಿಸು ಎಂದು ಕೇಳಿಕೊಂಡ್ಲಾ? ಎಂದು ಮಾನ್ಯತಾ ರಾಮಾಚಾರಿಗೆ ಪ್ರಶ್ನೆ ಮಾಡಿದ್ದಾಳೆ. ಮಾನ್ಯತಾ ಕೇಳುತ್ತಿರುವ ಪ್ರಶ್ನೆಗಳಿಗೆ ರಾಮಾಚಾರಿ ಬಳಿ ಉತ್ತರವಿದ್ದರೂ ಸಹ ಅವನು ಯಾವುದೇ ವಿಡಿಯೋವನ್ನು ತೋರಿಸುತ್ತಿಲ್ಲ. ಬಾಯಿಗೆ ಬಂದಂತೆ ಮಾನ್ಯತಾ ಮಾತನಾಡುತ್ತಿದ್ದರು. ಸುಮ್ಮನೆ ಕೇಳಿಸಿಕೊಂಡು ಮನೆಯಿಂದ ಹೊರಗೆ ಬಂದಿದ್ದಾನೆ.

ಮಗಳನ್ನು ಪ್ರಶ್ನೆ ಮಾಡಿದ ಮಾನ್ಯತಾ

ವಿಷ ಕುಡಿಯುವ ಪರಿಸ್ಥಿತಿ ಏನಾಗಿತ್ತು. ಯಾಕೆ ಈ ರೀತಿ ಅವನು ಮಾತನಾಡಿದ ಎಂದು ಮಾನ್ಯತಾ ಚಾರುಗೆ ಕೇಳಿದ್ದಾಳೆ. ಈ ವಿಷಯ ವಿಕಾಸ್ ಬಾನೇರಿ ಕುಟುಂಬದವರಿಗೆ ತಿಳಿಸಿದರೆ ಏನು ಗತಿ? ಅವರು ಏನು ಅಂದುಕೊಳ್ಳುತ್ತಾರೆ ಎಂದು ಚಾರುಗೆ ಪ್ರಶ್ನೆ ಮಾಡಿದ್ದಾಳೆ. ನೀನು ಬಯಸಿದ್ದು ನಿನ್ನ ಕಾಲು ಕೆಳಗೆ ಬರುತ್ತಿದೆ. ನಿನ್ನನ್ನು ಶ್ರೀಮಂತರ ಕುಟುಂಬಕ್ಕೆ ಮದುವೆ ಮಾಡಿ ಕಳಿಸುತ್ತಿದ್ದೇನೆ ಮುಂದೆ ಒಂದು ದಿನ ಕಂಪನಿಯ ಸಿಇಒ ಆಗುತ್ತೀಯಾ ಎಂದಿಲ್ಲ ಮಾನ್ಯತಾ ಹೇಳಿದ್ದಾಳೆ.

ಇದೇ ವೇಳೆ ಮಾನ್ಯತಾ, ರಾಮಾಚಾರಿಗೆ ಬೈಯುತ್ತಿದ್ದರೆ ಇದನ್ನು ಚಾರು ಸಹಿಸುತ್ತಿಲ್ಲ. ರಾಮಾಚಾರಿ ಹೋದ ಮೇಲೂ ಯಾಕೆ ನೀನು ಅವನನ್ನು ಬೈಯುತ್ತಿದ್ದೀಯ ಎಂದು ಕೇಳಿದ್ದಾಳೆ. ಇಲ್ಲಿಗೆ ಇದನ್ನೆಲ್ಲ ಬಿಡು ಮಾಮ್ ನನಗೆ ರಿಲ್ಯಾಕ್ಸೇಷನ್ ಬೇಕು ನಾನು ಸ್ವಲ್ಪ ಹೊರಗಡೆ ಹೋಗಿ ಬರುತ್ತೇನೆ ಎಂದು ಅಲ್ಲಿಗೆ ಮಾನ್ಯತಾ ಬೈಯುವುದನ್ನು ತಡೆದಿದ್ದಾಳೆ.

Colors Kannada Ramachari serial Written Update on April 27th episode

ರಾಮಾಚಾರಿಗೆ ಪಾಠ ಮಾಡಿದ ಚಾರು

ರಾಮಾಚಾರಿ, ಚಾರು ಬಳಿ ವಿಷ ಕುಡಿದ ನಾಟಕವನ್ನು ಏಕೆ ಆಡಿದ್ದೀರಿ ಎಂದು ಕೇಳಿದ್ದಾನೆ. ಇದಕ್ಕೆಲ್ಲ ನೀನೇ ಕಾರಣ ನೀನು ನನ್ನನ್ನು ಬೇಡ ಎಂದು ಹೇಳಿದೆ ನನಗೆ ದಿಕ್ಕು ತೋಚಲಿಲ್ಲ. ಇದಕ್ಕಾಗಿ ಈ ರೀತಿ ಮಾಡಿದೆ ಎಂದು ಹೇಳಿದ್ದಾಳೆ. ನಂತರ ಮುಂದುವರಿದು ಮಾತಾಡಿದ ಚಾರು ಸಂಸಾರ ಎಂದರೆ ಇದೇನೇ ನನಗೆ ಏನೋ ಆಯಿತು ಎಂಬ ಪ್ರೀತಿ ಹಾಗೂ ಕಾಳಜಿಯಲ್ಲಿ ನೀನು ನನ್ನ ಮನೆಗೆ ಓಡೋಡಿ ಬಂದೆ. ಇದನ್ನೇ ಸಂಸಾರ ಎನ್ನುವುದು ನಿನ್ನ ಮನಸ್ಸಿನಲ್ಲಿ ಬೆಟ್ಟದಷ್ಟು ಕೋಪವಿದ್ದರೂ ನೀನು ತೋರುವ ಪ್ರೀತಿ ಕಾಳಜಿ ಇದೆಯಲ್ಲ, ಇದೇ ಸಂಸಾರ ಎಂದು ಚಾರು ರಾಮಾಚಾರಿಗೆ ಪಾಠ ಮಾಡಿದ್ದಾಳೆ.

ರಾಮಾಚಾರಿ ಚಾರುಗೆ ನನ್ನ ಭಾವನೆಗಳ ಜೊತೆ ನೀನು ಆಟವಾಡಿದ್ದೀಯಾ ಎಂದು ಕೇಳಿದ್ದಾನೆ. ಇದಕ್ಕೆ ನೀನೇ ಅದಕ್ಕೆಲ್ಲ ಕಾರಣ ಎಂದು ರಾಮಾಚಾರಿಗೆ ಚಾರು ಹೇಳಿದ್ದಾಳೆ. ನನ್ನನ್ನು ಹೋಗು ಎಂದು ಹೇಳಿದೆ, ಇದನ್ನು ಯಾವ ಹೆಂಡತಿ ತಾನೇ ಸಹಿಸುತ್ತಾಳೆ. ಅದಕ್ಕಾಗಿ ನಾನು ಈ ರೀತಿಯಲ್ಲ ಮಾತನಾಡಿದೆ ಎಂದು ಹೇಳುತ್ತಾಳೆ. ನಿನಗೆ ಗೊತ್ತು ತಾನೇ ನನಗೆ ಬೇಕು ಎಂದಿದ್ದನ್ನು ನಾನು ಎಷ್ಟು ಬೇಕಾದರೂ ಕಾಯುತ್ತೇನೆ. ನೀನು ನನಗೆ ಬೇಕು ನಾನು ನಿನಗೋಸ್ಕರ ಕಾಯುತ್ತಲೇ ಇರುತ್ತೇನೆ ಎಂದು ಚಾರು, ರಾಮಾಚಾರಿ ಬಳಿ ಹೇಳಿದ್ದಾಳೆ.

More from Filmibeat

English summary
Colors Kannada Ramachari serial Written Update on April 27th episode. here details about when Ramachari wants to take charu to the hospital she sits up and acts as if nothing has happened. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X