Ramachari: ತಂದೆ ಬಳಿ ಕಣ್ಣೀರು ಹಾಕಿದ ರಾಮಾಚಾರಿ; ನಿನ್ನನ್ನು ನಾನು ಬಿಡೋದಿಲ್ಲ ಎಂದ ಚಾರು

By ಶೃತಿ ಹರೀಶ್ ಗೌಡ

ರಾಮಾಚಾರಿಗೆ ಈಗ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಚಾರು ಎಷ್ಟೇ ಹೇಳಿದರು ಸಹ ರಾಮಾಚಾರಿಯನ್ನು ಬಿಡೋದಿಲ್ಲ ಎಂದು ಶಪಥ ಮಾಡಿದ್ದಾಳೆ. ಇದಕ್ಕಾಗಿ ಸಾಯುವ ನಾಟಕವನ್ನು ಆಡಿದ್ದಾಳೆ. ರಾಮಾಚಾರಿ ನನಗೆ ನನ್ನ ಕುಟುಂಬವೇ ಮುಖ್ಯ ಎಂದರು ಸಹ ನಾನು ನಿನ್ನ ಕುಟುಂಬದ ಭಾಗ ಎಂದು ಹೇಳುವ ಮೂಲಕ ರಾಮಾಚಾರಿಯನ್ನು ಇಕ್ಕಟ್ಟಿನ ಪರಿಸ್ಥಿತಿಗೆ ತಂದು ನಿಲ್ಲಿಸುತ್ತಿದ್ದಾಳೆ.

ಆತನ ಬಳಿ ಬಂದ ಚಾರು ನಿನಗಾಗಿ ನಾನು ಏನು ಮಾಡಲು ಸಿದ್ದ, ದಯವಿಟ್ಟು ನೀನು ನನ್ನನ್ನು‌ ದೂರ ಮಾಡಬೇಡ ಎಂದು ಹೇಳಿದ್ದಾಳೆ. ನೀನು ಕಾಯಿ ಎನ್ನುವವರೆಗೆ ನಾನು ಕಾಯುತ್ತೇನೆ ನನಗೆ ನೀನು ಬೇಕು ಅಷ್ಟೇ ಎಂದು ಹೇಳುತ್ತಿದ್ದಾಳೆ. ನನ್ನ ಬಗ್ಗೆ ನಿನಗೆ ಗೊತ್ತಿದೆ ತಾನೇ ನಾಳೆ ಬೇಕು ಎನ್ನುವುದನ್ನು ಇಂದೇ ಪಡೆಯುವ ಜಾಯಮಾನ ನನ್ನದು.‌ ಆದರೂ ಸಹ ನಾನು ನಿನಗೊಸ್ಕರ ಕಾಯುತ್ತಿದ್ದೇನೆ ಎಂದು ಹೇಳಿದ್ದಾನೆ.

Colors Kannada Ramachari serial Written Update on April 28 episode

ಚಾರುಗೆ ನಿಮ್ಮ ಮೇಲೆ ನನಗೆ ಪ್ರೀತಿ ಇಲ್ಲ. ಇರುವುದು ಕಾಳಜಿ ಮಾತ್ರ. ಯಾವುದೋ ಸಂದರ್ಭದಲ್ಲಿ ನಾನು ನಿನಗೆ ತಾಳಿ ಕಟ್ಟಿದೆ. ಈಗ ಅದಕ್ಕೆ ಯಾವುದೇ ಅರ್ಥವಿಲ್ಲ,‌ ನನಗೆ ನನ್ನ ಕುಟುಂಬ ಮುಖ್ಯ ಎಂದರು ಸಹ ಚಾರು ಕೇಳುತ್ತಿಲ್ಲ. ನಾನು ಸಹ ನಿನ್ನ ಕುಟುಂಬದ ಒಂದು ಭಾಗ ಎಂದು ಹೇಳುತ್ತಿದ್ದಾಳೆ. ನೀನು ಆರು ತಿಂಗಳು ಅಲ್ಲ ಇನ್ನೂ ಕಾಯಿ ಎಂದು ಹೇಳಿದರು, ಸಹ ನಾನು ನಿನಗೋಸ್ಕರ ಕಾಯುತ್ತೇನೆ ಎಂದು ರಾಮಾಚಾರಿ ಬಳಿ ಹೇಳಿದ್ದಾಳೆ.

ಕೋದಂಡನ ಬಳಿ ಹುಳಿ ಹಿಂಡಿದ ವೈಶಾಖ

ರಸ್ತೆಯಲ್ಲಿ ಸಿಕ್ಕ ವ್ಯಕ್ತಿಯೊಬ್ಬರು ವೈಶಾಖಗೆ ಒಳ್ಳೆಯ ಕುಟುಂಬವನ್ನೇ ಬುಟ್ಟಿಗೆ ಹಾಕಿಕೊಂಡೆ ಎಂದು ಹೇಳಿದ್ದಕ್ಕೆ ವೈಶಾಖ ಕೋಪ ಮಾಡಿಕೊಂಡಿದ್ದಾಳೆ. ನಂತರ ಕೋದಂಡ ಬಳಿ ಬಂದಾಗ ಕಣ್ಣೀರು ಹಾಕುವ ನಾಟಕವಾಡಿದ್ದಾಳೆ. ಈ ವೇಳೆ ವೈಶಾಖಳನ್ನು ಕೋದಂಡ ಸಮಾಧಾನ ಮಾಡಿದ್ದರು ಸಹ ನಾಟಕವಾಡುತ್ತಿದ್ದಾಳೆ. ನನ್ನ ಬಗ್ಗೆ ಏನಾದ್ರು ಅಂದರೆ ಸಹಿಸಿಕೊಳ್ಳುತ್ತೇನೆ ನಿಮಗೆ ಏನಾದ್ರು ಅಂದರೆ ಸಹಿಸಿಕೊಳ್ಳೊದಿಲ್ಲ ಎಂದಿದ್ದಾಳೆ.

ನಿಮ್ಮ ತಂದೆ ಎಲ್ಲರ ಬಳಿ ಮಗ ಮದುವೆಯಾದ ಎಂದು ಪ್ರಚಾರ ಮಾಡಿಕೊಂಡು ಬಂದಿದ್ದಾರೆ. ‌ಈ ವಿಷಯವಾಗಿ ನೀವು ಮನೆಯಲ್ಲಿ ಜಗಳವಾಡಬೇಡಿ ಎಂದು ತಂದೆಯ ಮೇಲೆ ಮಗನನ್ನೇ ಎತ್ತಿ ಕಟ್ಟಿದ್ದಾಳೆ. ‌ನನ್ನ ತಂದೆ ಈ ರೀತಿ ಸಂಸಾರದ ಗುಟ್ಟನ್ನು ರಟ್ಟು ಮಾಡುತ್ತಿರಲಿಲ್ಲ ಎಂದು ಹೇಳಿದ್ದಾನೆ. ಇದಕ್ಕೆ ವೈಶಾಖ ಇವಾಗ ಮಾಡಿದ್ದಾರೆ ಎಂದು ಹೇಳಿ ಕೋದಂಡನಿಗೆ ಕೋಪವನ್ನು ತರಿಸಿದ್ದಾಳೆ.

Colors Kannada Ramachari serial Written Update on April 28 episode

ತಂದೆ ಮುಂದೆ ರಾಮಾಚಾರಿ ಕಣ್ಣೀರು

ವೈಶಾಖ ಹಾಗೂ ಕೋದಂಡನಿಗೆ ನಾರಾಯಣ ಆಚಾರ್ಯರು ಕಾಯುತ್ತಿದ್ದಾರೆ. ಅಷ್ಟರಲ್ಲಿ ಹೊರಗಡೆಯಿಂದ ರಾಮಾಚಾರಿ ಬಂದಿದ್ದಾನೆ. ನೀನು ಒಳ್ಳೆಯ ಸಮಯಕ್ಕೆ ಬಂದೆ ಎಂದು ಆಚಾರ್ಯರು ಹೇಳಿದ್ದಾರೆ. ಯಾಕೆ ಅಪ್ಪ ಎಂದು ಕೇಳಿದ್ದಕ್ಕೆ ವೈಶಾಖ ಹಾಗೂ ಕೋದಂಡನ ಮದುವೆಯನ್ನು ನಾನು ಒಪ್ಪಿಕೊಂಡು‌ ಮನೆಯವರಿಗೂ ಸಂತೋಷ ಕೊಡುವ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.

ಇದೇ ವೇಳೆ ರಾಮಾಚಾರಿಗೆ ನೀನು ನನ್ನ ಹೆಸರನ್ನು ಉಳಿಸುತ್ತೀಯ. ಅದಕ್ಕಾಗಿ ದೇವರು ನನಗೆ ನಿನ್ನನ್ನು ಕರುಣಿಸಿದ ಎಂದು ಹೇಳಿದ್ದಾರೆ. ‌ನೀನು ನಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಿ ಮನೆಯ‌ ಮಗನಾಗುತ್ತೀಯಾ ಎಂದು ಹೇಳುತ್ತಿದ್ದರೆ ರಾಮಾಚಾರಿ ಕಣ್ಣೀರು ಹಾಕುತ್ತಿದ್ದಾನೆ. ನಾನು ಅಣ್ಣನಿಗಿಂತ ಮುಂಚೆಯೇ ಯಾವುದೋ ಒತ್ತಡಕ್ಕೆ ಸಿಲುಕಿ ನಾನೇ ತಪ್ಪು ಮಾಡಿದ್ದೇನೆ ಎಂದು ಕಣ್ಣೀರು ಹಾಕಿದ್ದಾನೆ. ಮನೆಯವರು ತಂದೆ ಹೊಗಳಿಕೆಗೆ ಈ ಕಣ್ಣೀರು ಬರುತ್ತಿದೆ ಎಂದು ಹೇಳುತ್ತಿದ್ದರೆ ರಾಮಾಚಾರಿ ಮಾತ್ರ ಪಶ್ಚಾತ್ತಾಪ ಪಡುತ್ತಿದ್ದಾನೆ.

More from Filmibeat

ರಾಮಾಚಾರಿಯನ್ನು ಚಾರು ಬಿಟ್ಟು ಬಿಡುವ ಯಾವ ಲಕ್ಷಣಗಳು ಸಹ ಕಾಣುತ್ತಿಲ್ಲ. ನೀನೇ ನನಗೆ ಬೇಕು ಎಂದು ರಾಮಾಚಾರಿ ಬಳಿಯೇ ಪಟ್ಟು ಹಿಡಿದಿದ್ದಾಳೆ. ನೀನು ಎಷ್ಟೇ ದೂರ ಮಾಡಿದರು ನಾನು ನಿನಗೆ ಹತ್ತಿರವಾಗುತ್ತೇನೆ ಎಂದು ಹೇಳಿದ್ದಾಳೆ.

English summary
Colors Kannada Ramachari serial Written Update on April 28 episode. here is details about Narayana achar decides to accept kodanda and vaishakha coming home, and praises ramachari for not causing any insult. Ramachari is sorry for his error. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X