Ramachari: ವಿಕಾಸ್ ಮಾಡಿದ ಮಾಸ್ಟರ್ ಪ್ಲ್ಯಾನ್ ಫ್ಲಾಪ್!

By ಶೃತಿ ಹರೀಶ್ ಗೌಡ

ಚಾರು ತುಂಬಾ ಖುಷಿಯಾಗಿ ಇದ್ದಾಳೆ ಆದರೆ ಮಾನ್ಯತಾಗೆ ರಾಮಾಚಾರಿಯನ್ನು ದೇವಸ್ಥಾನಕ್ಕೆ ಇವರು ಕರೆದುಕೊಂಡು ಹೋಗುತ್ತಿರುವುದು ಒಂಚೂರು ಇಷ್ಟ ಇಲ್ಲ. ಡೈರೆಕ್ಟಾಗಿ ಚಾರುಗೆ ರಾಮಾಚಾರಿ ಯನ್ನು ಕರೆದುಕೊಂಡು ಹೋಗಬೇಡಿ ನಿಮ್ಮಿಬ್ಬರ ಮಧ್ಯೆ ಅವನು ಯಾಕೆ ಎಂದು ಪ್ರಶ್ನೆಯನ್ನು ಮಾನ್ಯತಾ ಮಾಡಿದ್ದಾಳೆ.

ಇದಕ್ಕೆ ಜೈ ಶಂಕರ್ ರಾಮಾಚಾರಿ ಎಲ್ಲವನ್ನು ಮುಂದೆ ನಿಂತು ಅಚ್ಚುಕಟ್ಟಾಗಿ ಮಾಡಿಕೊಟ್ಟಿದ್ದಾನೆ ಇದರಿಂದಾಗಿ ವಿಕಾಸ್ ಬಾನೇರಿ ಖುಷಿಯಾಗಿದ್ದು ಅವರನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದಾನೆ ನಿನ್ನದು ದ್ವೇಷದ ಬುದ್ದಿ ಅದನ್ನು ಮೊದಲು ಬಿಡು ಎಂದು ಬುದ್ಧಿ ಮಾತನ್ನ ಹೇಳಿದ್ದಾರೆ ಇದರಿಂದ ಚಾರುಗೆ ತುಂಬಾ ಖುಷಿಯಾಗಿದೆ.‌

 Colors Kannada Ramachari serial Written Update on April 3rd episode

ರಾಮಾಚಾರಿ ಚಾರು ಇಬ್ಬರು ವಿಕಾಸ್ ಬಾನೇರಿಗಾಗಿ ಕಾಯುತ್ತಿದ್ದಾರೆ.‌ಈ ವೇಳೆ ಚಾರು ತುಂಬಾ ಖುಷಿಯಿಂದ ನಾನು ಆಫೀಸ್‌ಗೆ ಬಂದಾಗ ಮಾತ್ರ ನಿನ್ನ ಮುಖ ನೋಡಬೇಕಿ ಅಂದುಕೊಂಡಿದ್ದೆ ನಿನ್ನ ಇವಾಗ ನೋಡೋ ಮಜಾನೇ ಬೇರೆ ಇದೆ ಎಂದು ರಾಮಾಚಾರಿ ಬಳಿ ತನ್ನ ಸಂತೋಷವನ್ನು ಹಂಚಿಕೊಂಡಿದ್ದಾಳೆ.

ಮಗುಗೆ ಸ್ನಾನ ಮಾಡಿಸಲು ಹೋಗಿ ಹೊಡೆತ ತಿದ್ದ ಪ್ರಸಂಗವನ್ನು ತ್ಯಾಪೆ ಮಾಡಲು ಈಗ ವಿಕಾಸ್ ಬಾನೇರಿ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾನೆ. ರೌಡಿಗಳ ಸಹಾಯವನ್ನು ತಗೆದುಕೊಂಡು ಹೇಗಾದರೂ ಮಾಡಿ ಚಾರುವನ್ನು ತನ್ನ‌ಕಡೆ ಒಲಿಸಿಕೊಳ್ಳಬೇಕು ಎಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾನೆ.

ಪ್ಲ್ಯಾನ್ ಅನ್ನು ರೌಡಿ ಬಳಿ ಹೇಳುತ್ತಿದ್ದಾನೆ ಆ ರೌಡಿ ನೀವು ಹೀರೋ ಆಗುವ ರೀತಿ ಮಾಡುತ್ತೇನೆ ನಮ್ಮ ಹುಡುಗರು ನಿಮಗೆ ಸಹಾಯವನ್ನು ಮಾಡುತ್ತಾರೆ ಎಂದು ಹೇಳುತ್ತಿದ್ದಾನೆ.‌ ನಿಮ್ಮ ಮತ್ತು ಚಾರುವನ್ನು ಕಟ್ಟಿಹಾಕುತ್ತೇನೆ ರಾಮಾಚಾರಿಗೆ ನಾಲ್ಕು ಹೊಡೆತ ಕೊಟ್ಟಾಗ ನೀವು ಬಿಡಿಸಿಕೊಂಡು ಬಂದು ರಾಮಾಚಾರಿಯನ್ನು ಕಾಪಾಡಿ ಎಂದು ಐಡಿಯಾ ಕೊಟ್ಟಿದ್ದಾನೆ.

ಕಾರಿನಲ್ಲಿ ಮುಂದೆ ಕುಳಿತಿರುವ ಚಾರು ರಾಮಾಚಾರಿಯನ್ನು ನೋಡಿ ತುಂಬಾ ಖುಷಿ ಪಡುತ್ತಾ ಇದ್ದಾಳೆ. ರಾಮಾಚಾರಿ ಮಾತ್ರ ಕೈ ಮುಗಿದು ಸುಮ್ಮನೆ ಇರುವಂತೆ ಕೈಸನ್ನೆಯನ್ನು ಮಾಡಿದ್ದಾನೆ. ಆದರೆ ರಾಮಾಚಾರಿಯನ್ನು ತುಂಬಾ ಖುಷಿಯಿಂದ ಕಣ್ಣೊಡೆದುಕೊಂಡು ಚಾರು ಪ್ರೀತಿ ಮಾಡುತ್ತಾ ಇದ್ದಾಳೆ.

ಚಾರುಗೆ ರಾಮಾಚಾರಿ ಜೊತೆಗೆ ಹೋಗುತ್ತಿರುವುದೇ ಒಂದು ದೊಡ್ಡ ಸಂಭ್ರಮವಾಗಿದೆ. ರಾಮಾಚಾರಿಯ ಪ್ರೀತಿಯಲ್ಲಿ ಕಳೆದು ಹೋಗಿದ್ದಾಳೆ. ಇದೆಲ್ಲವನ್ನೂ ವಿಕಾಸ್ ಗಮನಿಸಿ ಚಾರು ಎಲ್ಲಿ ನೋಡುತ್ತಿದ್ದೀಯಾ ನನ್ನ ನೋಡು ಎಂದು ಹೇಳಿದ್ದಕ್ಕೆ ಚಾರು ಕೋಪ ಮಾಡಿಕೊಂಡಿದ್ದಾಳೆ.

ಹೀರೋ ಆಗಲು ಹೋದ ವಿಕಾಸ್ ಬಾನೇರಿ ಮತ್ತೆ ಝೀರೋ ಆಗಿದ್ದಾನೆ. ರಾಮಾಚಾರಿ ಮತ್ತು ಚಾರುವನ್ನು ರೌಡಿಗಳು ಹಗ್ಗದಿಂದ ಕಟ್ಟಿಹಾಕಿ ಚನ್ನಾಗಿ ವಿಕಾಸ್ ಬಾನೇರಿಗೆ ಹೊಡೆತವನ್ನು ಕೊಡುತ್ತಿದ್ದಾರೆ. ಇದೆಲ್ಲವನ್ನೂ ರಾಮಾಚಾರಿ ಹಾಗೂ ಚಾರುಲತಾ ನೋಡುತ್ತಾ ಅವರನ್ನು ಬಿಟ್ಟು ಬಿಡಿ ಎಂದು ಜೋರಾಗಿ ಕೂಗಿಕೊಳ್ಳುತ್ತಿದ್ದಾರೆ. ತಾನೇ ಎಣೆದ ಬಲೆಯೊಳಗೆ ವಿಕಾಸ್ ಬಿದ್ದಿದ್ದಾನೆ.

ರಾಮಾಚಾರಿ ಮತ್ತು ಚಾರು ಇಬ್ಬರು ಸಹ ಒಂದೇ ದಿನ ಆಫೀಸ್‌ಗೆ ರಜೆ ಹಾಕಿರುವುದಕ್ಕೆ ಬಬ್ಲು ಸಾರ್‌ಗೆ ಟೆನ್ಷನ್‌ ಶುರುವಾಗಿದೆ. ಇಬ್ಬರಲ್ಲಿ ಒಬ್ಬರನ್ನು ಮೊದಲು ಆಫೀಸ್‌ನಿಂದ ಹೊರಗೆ ಕಳಿಸಬೇಕು ಎಂದು ತಲೆಯನ್ನು ಚಚ್ಚಿಕೊಳ್ಳುತ್ತಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಸಾನ್ವಿ ಇಬ್ಬರು‌ ಗಂಡ -ಹೆಂಡತಿಯಾಗಿದ್ದಾರೆ ಅದಕ್ಕೆ ಒಟ್ಟಿಗೆ ರಜೆಯನ್ನು ಹಾಕಿದ್ದಾರೆ ಎಂದು ಹೇಳಿದ್ದಾಳೆ.‌ಈ ವೇಳೆ ಎನು ಅಂದೆ ಎಂದು ಬಬ್ಲು ಸಾರ್ ಕೇಳಿದಾಗ ಎನು ಅಂದಿಲ್ಲ ಎಂದು ಹೇಳಿದಾಗ ನನಗೆ ಅಲೋಷಿಯಸ್ ಮೂರನೇ ಹಂತ ತಲುಪಿದೆ ಎಂದು ಹೇಳಿದ್ದಾರೆ.

More from Filmibeat

English summary
Colors Kannada serial Ramachari here details about vikash baneri master plan failure
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X