Ramachari: ರಾಮಾಚಾರಿ ಮದುವೆಯಾಗಿದೆ ಎಂದು ಮತ್ತೆ ಶುರುವಾಯಿತು ಅನುಮಾನ!

By ಶೃತಿ ಹರೀಶ್ ಗೌಡ

ರಾಮಾಚಾರಿ ಮದುವೆ ವಿಷಯಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಮತ್ತೆ ಅನುಮಾನ ಭುಗಿಲೆದ್ದಿದೆ. ಶೃತಿ ನಿನ್ನ ಮದುವೆಯಾಗಿದ್ಯಾ ಎಂದು ಕೇಳಿದ್ದಾಳೆ. ಇದಕ್ಕೆ ಮುರಾರಿ ಅಯ್ಯೋ ನಾನೇ ನನ್ನ ಕೈಯಾರೆ ರಾಮಾಚಾರಿಯನ್ನು ಸಿಕ್ಕಿಹಾಕಿಸಿದೆ ಎಂದು ಬೇಸರ ಮಾಡಿಕೊಂಡಿದ್ದಾನೆ.

ಕೊನೆಗೆ ಮುರಾರಿಯೇ ನಾನು ದೀಪ ಬಗ್ಗೆ ಹೇಳಿದ್ದು ಎಂದು ಮಾತನಾಡುತ್ತಿರುವೆ, ನೀವೇ ಸುಮ್ಮನೇ ಅನುಮಾನ ಪಡುತ್ತಿದ್ದೀರಿ ಎಂದು ಅಂದಿದ್ದಾನೆ. ಇದಕ್ಕೆ ಮನೆಯವರೆಲ್ಲರೂ ಸುಮ್ಮನೆ ಆಗಿದ್ದಾರೆ.

Colors Kannada Ramachari serial Written Update on April 5th episode

ರಾಮಾಚಾರಿ ಸಹ ಏನನ್ನು ಮಾತನಾಡದೆ ಸುಮ್ಮನೆ ನಿಂತುಕೊಂಡಿದ್ದನು, ಇದನ್ನು ಗಮನಿಸಿದ ಮುರಾರಿ ನಾನು ಹೀಗೆ ದೀಪಾಳ ಹೆಸರನ್ನು ತೆಗೆದು ರೇಗಿಸುತ್ತೇನೆ ಎಂದು ಹೇಳಿ ನಿಮ್ಮ ಮನೆಯ ಮಗನ ಮೇಲೆ ನಿಮಗೆ ನಂಬಿಕೆ ಇಲ್ವಾ ಎಂದು ಹೇಳಿದ್ದಾನೆ. ಇದಕ್ಕೆ ಜಾನಕಿ ನನ್ನ ಮಗ ಕೊಟ್ಟ ಮಾತನ್ನು ತಪ್ಪೋದಿಲ್ಲ ತಂದೆಗೆ ತಕ್ಕ ಮಗ ಎಂದು ಮಗನನ್ನ ಹೊಗಳಿದ್ದಾರೆ.

ರಾಮಾಚಾರಿಗೆ ಪೂಜೆ ಮುಗಿದ ತಕ್ಷಣ ಹರಿಶಿಣ ಕುಂಕುಮವನ್ನು ತೆಗೆದುಕೊಂಡು ಬರುವಂತೆ ಚಾರು ಹೇಳಿದ್ದಾಳೆ. ಚಾರು ಹೇಳಿದಂತೆ ರಾಮಾಚಾರಿ ಅರಿಶಿಣ ಕುಂಕುಮವನ್ನು ತಂದು ಕೊಟ್ಟಿದ್ದಾನೆ ಅದನ್ನು ತಾಳಿಗೆ ಹಚ್ಚಿಕೊಂಡು ನಮಸ್ಕಾರ ಮಾಡಿದ್ದಾಳೆ. ಇದೇ ವೇಳೆ ನಿನ್ನನ್ನು ಏನೆಂದು ಕರೆಯಲಿ ಎಂದು ಕೇಳಿದ್ದಾಳೆ ರಾಮಾಚಾರಿ ಎಂದೇ ಕರೆ ಎಂದು ಹೇಳಿದ್ದಾನೆ.‌

ಗಂಡನ ಹೆಸರನ್ನ ಹಿಡಿದು ಕರೆದರೆ ಆಯಸ್ಸು ಕಮ್ಮಿಯಾಗುತ್ತದೆ ಎಂದು ಅಜ್ಜಿ ಹೇಳಿದ್ದಾರೆ ಅದಕ್ಕೆ ನಾನು ಗಂಡ ಎಂದು ಕರೆಯುತ್ತೇನೆ ಎಂದು ಹೇಳಿದ್ದಾಳೆ. ಗಂಡ ತಿಂಡಿಗೆ ಹೋಗೋಣ ಎಂದು ಕೇಳಿದ್ದಾಳೆ ಇದಕ್ಕೆ ರಾಮಾಚಾರಿ ನನಗೆ ಹೋಟೆಲ್ ಊಟ ಒಗ್ಗಿ ಬರೋದಿಲ್ಲ ನಾನು ಮನೆಗೆ ಹೋಗಿ ಆಫೀಸ್ಗೆ ಬರುತ್ತೇನೆ ಎಂದು ಅಲ್ಲಿಂದ ಅವಳನ್ನು ಕರೆದುಕೊಂಡು ತೆರಳಿದ್ದಾನೆ.

Colors Kannada Ramachari serial Written Update on April 5th episode

ಚಾರುಲತಾರಾ ಜಿ ಒಂದು ದೇವಸ್ಥಾನದ ಬಗ್ಗೆ ಹೇಳಿದ್ದಾರೆ ಹುಣ್ಣಿಮೆಯ ದಿನ ಗಂಡ ಹೆಂಡತಿಯನ್ನು ಹೊತ್ತುಕೊಂಡು ಹೋದರೆ ಅವರು ಏಳೇಳು ಜನ್ಮಕ್ಕೂ ಗಂಡ ಹೆಂಡತಿಯಾಗಿ ಇರುತ್ತಾರೆ ಎಂದು ಹೇಳಿದ್ದಾರೆ ಇದಕ್ಕೆ ರಾಮಾಚಾರಿಯನ್ನು ಅಲ್ಲಿಗೆ ಕರೆದುಕೊಂಡು ಹೋಗುವ ಬಯಕೆ ಚಾರುಗೆ ಬಂದಿದೆ.

ಕರೆದುಕೊಂಡು ಹೋಗಲು ಪ್ಲಾನ್ ಮಾಡಿರುವ ದೇವಸ್ಥಾನಕ್ಕೆ ಈ ಬಾರಿ ನಾರಾಯಣ ಆಚಾರ್ಯರ ಕುಟುಂಬ ಸಹ ಹೋಗಲು ನಿರ್ಧಾರವನ್ನು ಮಾಡಿದೆ. ಅಲ್ಲಿ ಏನಾದರೂ ರಾಮಾಚಾರಿ ಮತ್ತು ಚಾರುವನ್ನು ನೋಡಿದರೆ ಇಬ್ಬರೂ ಸಹ ಸಿಕ್ಕಿ ಬೀಳಲಿದ್ದಾರೆ. ಇಬ್ಬರು ಸಿಕ್ಕಿ ಬಿಟ್ಟರೆ ರಾಮಾಚಾರಿ ಮದುವೆ ಯಾಗಿರುವುದನ್ನು ರಿವಿಲ್ ಮಾಡಬೇಕಾಗಿದೆ.

ಆಫೀಸಿಗೆ ಬಂದ ಚಾರು ಬಬ್ಲು ಸರ್ ಬಳಿ ನಾಳೆ ನನಗೆ ರಜಾ ಸ್ಯಾಂಕ್ಷನ್ ಮಾಡಿದ್ದಕ್ಕೆ ಥ್ಯಾಂಕ್ಯೂ ಎಂದು ಕೇಳಿದ್ದಾಳೆ. ಇದೇ ವೇಳೆ ನಾನು ಯಾವಾಗ ರಜೆ ಕೊಟ್ಟೆ ಎಂದು ಕೇಳಿದ್ದಕ್ಕೆ ಕೆಫೆಟೇರಿಯಾದಲ್ಲಿ ಎಂದು ಮಾತನ್ನು ಬದಲಾಯಿಸಿದ್ದಾಳೆ. ನಿಮಗೆ ಅಲೋಶಿಯೇಷನ್ ಜಾಸ್ತಿಯಾಗಿದೆ ಎಂದು ಹೇಳಿದ್ದಾಳೆ ಈ ವೇಳೆ ನೀನು ರಜೆ ತಗೆದಿಕೋ ಎಂದು ಹೇಳಿದ್ದಾರೆ ಬಬ್ಲು ಸಾರ್.

ಇದೇ ವೇಳೆ ವಿಕಾಸ್ ಬಾನೇರಿಗೆ ಫೋನ್ ಮಾಡಿ ಚಾರು ನಿಮ್ಮನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ರಜೆಯನ್ನು ತೆಗೆದುಕೊಂಡಿದ್ದಾಳೆ ಎಂದು ಕೇಳಿದ್ದಾನೆ ಇದಕ್ಕೆ ನೆನ್ನೆ ನಡೆದ ಘಟನೆಯನ್ನು ಮರೆಯಲು ಆಗುತ್ತಿಲ್ಲ ಆಗಲೇ ದೇವಸ್ಥಾನಕ್ಕ ಎಂದು ವಿಕಾಸ್ ಕೇಳಿದ್ದಾನೆ. ಇಲ್ಲಿ ಎನೋ ನಡೆಯುತ್ತಿದೆ ಎಂಬ ಗೊಂದಲದಲ್ಲಿ ವಿಕಾಸ್ ಇದ್ದಾನೆ.

More from Filmibeat

English summary
Colors Kannada serial Ramachari here details about charulatha calling ramachari "ganda"
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X