Ramachari: ಸಿಕ್ಕಿ ಹಾಕಿಕೊಳ್ತಾರಾ ರಾಮಾಚಾರಿ-ಚಾರು?!

By ಶೃತಿ ಹರೀಶ್ ಗೌಡ

ಚಾರು ರಾಮಾಚಾರಿಯನ್ನು ಪಾರ್ಕ್‌‌ಗೆ ಕರೆದುಕೊಂಡು ಬಂದು ಬೆಟ್ಟದ ನಂಜಪ್ಪನ ದೇವಸ್ಥಾನಕ್ಕೆ ಕರೆದುಕೊಂಡು ಹೋಗು ಎಂದು ಕೇಳುತ್ತಿದ್ದಾಳೆ. ಇದಕ್ಕೆ ರಾಮಾಚಾರಿ ಆಗೋದಿಲ್ಲ ಎಂದು ಹೇಳುತ್ತಿದ್ದಾನೆ. ಆದರೆ ಚಾರು ಮಾತ್ರ ರಾಮಾಚಾರಿಗೆ ನೀನು ಕರೆದುಕೊಂಡು ಹೋಗಲೇ ಬೇಕು ಎಂದು ಹಠವನ್ನು ಹಿಡಿದಿದ್ದಾಳೆ.

ನಮ್ಮಿಬ್ಬರ ಸಂಬಂಧ ಮತ್ತಷ್ಟು ಗಟ್ಟಿಯಾಗಬೇಕು ಎಂದರೆ ನೀನು ನನ್ನನ್ನು ಹೊತ್ತುಕೊಂಡು ಬೆಟ್ಟದ ಮಂಜಪ್ಪನ ಗುಡಿಗೆ ಹೋಗಬೇಕು ಎಂದು ಚಾರು ರಾಮಾಚಾರಿಗೆ ಹೇಳುತ್ತಿದ್ದಾಳೆ. ಮದುವೆಯಾದ ನಂತರ ನಾನು ನಿನ್ನನ್ನು ಎಲ್ಲಿಗಾದರೂ ಕರೆದುಕೊಂಡು ಹೋಗು ಎಂದು ಕೇಳಿದ್ದೀನಾ ಹೆಂಡತಿ ಕೇಳುವ ಆಸೆಯನ್ನು ಈಡೇರಿಸಲು ನಿನ್ನ ಕೈಲಿ ಆಗಲ್ವ ಎಂದು ಕೇಳಿದ್ದಾಳೆ.

Colors Kannada Ramachari serial Written Update on April 6th episode

ರಾಮಾಚಾರಿ ಮಾತ್ರ ಆಗುವುದಿಲ್ಲ ಎಂದು ಹೇಳಿದ್ದಾನೆ ಯಾಕೆ ನಮ್ಮಿಬ್ಬರ ಮದುವೆಯಾಗಿರುವ ವಿಚಾರ ಎಲ್ಲರಿಗೂ ಗೊತ್ತಾಗಿ ಮನೆ ರಣರಂಗವಾಗಬೇಕಾ ಎಂದು ರಾಮಾಚಾರಿ ಹೇಳಿದ್ದಾನೆ ಆದರೆ ಚಾರು ಮಾತ್ರ ಯಾವುದನ್ನು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ.ನಾವು ದೇವಸ್ಥಾನಕ್ಕೆ ಹೋಗೋಣ ಎಂದು ಹೇಳುತ್ತಿದ್ದಾಳೆ.

ವಿಕಾಸ್ ಚಾರು ಮೇಲೆ ಅನುಮಾನ ವ್ಯಕ್ತಪಡಿಸಿದ್ದಾನೆ ಚಾರು ನನ್ನ ಅವೈಡ್ ಮಾಡುತ್ತಾಳೆ ಎಂದು ಅಪ್ಪನ ಬಳಿ ಹೇಳಿದ್ದಾನೆ. ಆದರೆ ಮಗನಿಗೆ ಪ್ರಕಾಶ್ ಬಾನೇರಿ ಬುದ್ದಿಯನ್ನು ಹೇಳಿದ್ದಾನೆ. ನೀನು ತಪ್ಪಾಗಿ ತಿಳಿದುಕೊಂಡಿದ್ದೀಯಾ ಅವಳು ಸುಮ್ಮನೆ ಅಂತರ ಕಾಯ್ದುಕೊಂಡಿದ್ದಾಳೆ. ಬಬ್ಲು ಬಳಿ ನನ್ನ ಗಂಡನ ಜೊತೆಗೆ ದೇವಸ್ಥಾನಕ್ಕೆ ಹೋಗುತ್ತಿದ್ದಾನೆ ಎಂದು ಹೇಳಿದ್ದಾಳೆ ಎಂದು ಮನಸು ಬದಲಿಸಿದ್ದಾನೆ.

ಚಾರುಲತಾ ಗೆ ಫೋನ್ ಮಾಡಿದ ವಿಕಾಸ್ ಬಾನೇರಿ ನೀನು ನೀಡುತ್ತಿರುವ ಸರ್ಪ್ರೈಸ್ ನನಗೆ ಗೊತ್ತಿದೆ ಅದರ ಬಗ್ಗೆ ನನಗೆ ಫೋನ್ ಮಾಡಿ ಹೇಳಿದ್ದಾರೆ ಎಂದು ಚಾರು ಬಳಿ‌ ಹೇಳಿದ್ದಾನೆ.‌ಇದಕ್ಕೆ ಗೂಬೆ ಎಂದು ಚಾರು ಬೈದಿದ್ದಾಳೆ ನಾನು ದೇವಸ್ಥಾನ ಎಂದು ಸುಳ್ಳು ಹೇಳಿ ರಜೆ ತಗೆದುಕೊಂಡು ನನ್ನ ಫ್ರೆಂಡ್ಸ್ ಜೊತೆಗೆ ಪಾರ್ಟಿ ಮಾಡಲು ಹೋಗುತ್ತಿದ್ದಾನೆ ಎಂದು ಚಾರು ಸುಳ್ಳು ಹೇಳಿದ್ದಾಳೆ.

Colors Kannada Ramachari serial Written Update on April 6th episode

ಚಾರುಗೆ ಚೆಲ್ಲಾಟವಾದರೆ, ರಾಮಾಚಾರಿಗೆ ಪ್ರಾಣಸಂಕಟವಾಗಿದೆ. ಮನೆಯ ಬಳಿ‌ ಬಂದಿರುವ ಚಾರು ರಾಮಾಚಾರಿಗೆ ದೇವಸ್ಥಾನಕ್ಕೆ ಹೋಗೋಣ ಬಾ ಹಿಂಸೆಯನ್ನು ಮಾಡುತ್ತಿದ್ದಾಳೆ. ರಾಮಾಚಾರಿ ಮನೆಯಲ್ಲಿ ಎಲ್ಲರೂ ಸಹ ಅದೇ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ ನಾನೇ ದೇವರನ್ನು ಹೊರಬೇಕು ಎಂದು ಹೇಳುತ್ತಿದ್ದರು ಸಹ ಚಾರು ಮಾತ್ರ ಕೇಳುತ್ತಿಲ್ಲ.

ಮದುವೆಯಾಗಿರುವ ವಿಷಯವನ್ನು ಮನೆಯವರಿಗೆ ತಿಳಿಸುತ್ತೇನೆ ಎಂದು ಹೇಳುತ್ತಿದ್ದಾಳೆ ಇದಕ್ಕೆ ರಾಮಾಚಾರಿ ಬ್ಲಾಕ್ಮೆಲ್ ಮಾಡುತ್ತಿದ್ದೀಯಾ ಎಂದು ಹೇಳಿದ್ದಾನೆ.ಇದಕ್ಕೆ ಚಾರು ನಾನು ಹೇಳಿದಂತೆ ಕೇಳು ಎಂದಿದ್ದಾಳೆ ಚಾರು ಆಗೋದಿಲ್ಲ ನಾವು ಮಂಜಪ್ಪನ ದೇವಸ್ಥಾನಕ್ಕೆ ಹೋಗಲೇಬೇಕು ಎಂದಿದ್ದಾಳೆ. ಚಾರುಗೆ ಚೆಲ್ಲಾಟವಾದರೆ ರಾಮಾಚಾರಿಗೆ ಪ್ರಾಣ ಸಂಕಟವಾಗಿದೆ.

ನಾನು ಹೇಳುವ ಲೋಕೇಷನ್‌ಗೆ ನಾಳೆ ಬಂದು ಬಿಡು ನಿನಗಾಗಿ‌ ಕಾಯುತ್ತಿರುತ್ತೇನೆ ಎಂದು ಚಾರು ಹೇಳಿ‌ದ್ದಾಳೆ. ಈ ಕಡೆ ವಿಕಾಸ್ ತಂದೆ ಬಳಿ ಅವಳು ಪಾರ್ಟಿ ಮಾಡಲು ಹೋಗುತ್ತಾಳೆ ಎಂದು ಹೇಳಿದ್ದಕ್ಕೆ ಅಯ್ಯೋ‌ ಅದು ನಿನಗೆ ಸಪ್ರೈಸ್ ಕೊಡಲು ಆ ರೀತಿ ಹೇಳಿರೋದು ನೀನು ಅವಳು ಹೋಗುವ ಮೊದಲೇ ನೀನು ಹೋಗಿ ಅವಳಿಗೆ ಸಪ್ರೈಸ್ ಕೊಡು ಎಂದು ಹೇಳಿದ್ದಾನೆ.

More from Filmibeat

English summary
Colors Kannada serial Ramachari here details about charulatha and ramachari decided to go to temple
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X