Ramachari: ದೇವಸ್ಥಾನಕ್ಕೆ ಒಟ್ಟಿಗೆ ಬಂದ ಚಾರು-ಚಾರಿ ಸಿಕ್ಕಿ ಹಾಕಿಕೊಳ್ತಾರಾ?
ರಾಮಾಚಾರಿ ಚಾರು ಜೊತೆಗೆ ಹೋಗಲು ಆಫೀಸ್‌ನಲ್ಲಿ ರಜೆ ಕೊಡಲಿಲ್ಲ ಎಂದು ಸುಳ್ಳು ಹೇಳಿದ್ದಾನೆ. ಅಜ್ಜಿ ಇದಕ್ಕೆ ನೀನು ರಜೆ ಕೇಳಿದೆ ತಾನೇ ತಗೆದುಕೊಳ್ಳಿ ಎಂದು ಯಾಕೆ ಮತ್ತೆ ಕ್ಯಾನ್ಸಲ್ ಮಾಡಿದ್ರು ಇದು ಯಾವ ತರಹದ್ದ ಆಫೀಸ್ ಎಂದು ರಾಮಾಚಾರಿಗೆ ಬೈದಿದ್ದಾರೆ.ಇದಕ್ಕೆ ನಾರಾಯಣ ಆಚಾರ್ಯರು ಅನ್ನ ಮತ್ತು ಪ್ರಸಾದ ಕೊಡುವ ಸ್ಥಳವನ್ನ ಈ ರೀತಿಯಾಗಿ ಅನ್ನಬಾರದು ಎಂದು ತಾಯಿಗೆ ಹೇಳಿದ್ದಾರೆ.
ಇನ್ನೂ ರಾಮಾಚಾರಿ ತನ್ನ ತಂದೆಯ ಕಾಲಿಗೆ ಬಿದ್ದು ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅಂತಾರೆ ನಾನು ಮದುವೆಯಾಗಿ ಅದನ್ನು ಮುಚ್ಚಿಡಲು ಸುಳ್ಳು ಹೇಳುತ್ತಿದ್ದೇನೆ ಎಂದು ಮನಸಿನಲ್ಲೇ ಕ್ಷಮೆಯನ್ನು ಕೇಳಿದ್ದಾನೆ. ಇದಕ್ಕೆ ನಾರಾಯಣ ಆಚಾರ್ಯರು ಬೇಸರ ಮಾಡಿಕೊಳ್ಳಬೇಡ ಎಂದಿದ್ದಾರೆ.

ಈ ವೇಳೆ ಅಜ್ಜಿ ದೀಪಾಳನ್ನು ಹೊತ್ತು ಕೊಂಡು ಬೆಟ್ಟವನ್ನು ಹತ್ತುವಿಯಂತೆ ಬಿಡು ಎಂದಿದ್ದಾರೆ. ಆದರೆ ರಾಮಾಚಾರಿ ಮುಖದಲ್ಲಿ ಮನೆಯವರಿಗೆ ಸುಳ್ಳು ಹೇಳಿದ ಬೇಸರವೇ ಕಾಡುತ್ತಿದೆ. ಮದುವೆ ವಿಷಯ ತಿಳಿದರೆ ಹೇಗೆ ನಾನು ಮನೆಯವರ ನಂಬಿಕೆಯನ್ನು ಕಳೆದುಕೊಳ್ಳುತ್ತೇನೆ ಎಂಬ ಆತಂಕ ಮನೆ ಮಾಡಿದೆ.
ಬೆಟ್ಟದ ಮಂಜಪ್ಪನ ದೇವಸ್ಥಾನಕ್ಕೆ ಚಾರು ಹಾಗೂ ರಾಮಾಚಾರಿ ಹೊರಟಿದ್ದಾರೆ. ಆದರೆ ಸಾನ್ವಿ ರಾಮಾಚಾರಿಗೆ ನೀನು ಕಂಟಕವನ್ನು ತರಲು ಹೊರಟಿದ್ದೀಯಾ ಎಂದು ಚಾರುಗೆ ಬೈದಿದ್ದಾಳೆ. ಈಗಲೇ ಸುಳ್ಳು ಹೇಳಿ ಮದುವೆ ಆಗಿದ್ದೀಯಾ ಈಗ ಬ್ಲಾಕ್ ಮೇಲ್ ಮಾಡಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಿದ್ದೀಯಾ ಇದೆಲ್ಲಾ ಸರಿಯಿಲ್ಲ ಎಂದು ಸಾನ್ವಿ ಚಾರುಗೆ ಬುದ್ದಿಯನ್ನು ಹೇಳಿದ್ದಾಳೆ.
ಚಾರುಲತಾ ರಾಮಾಚಾರಿ ಕುಟುಂಬದವರು ಸಹ ಪ್ರಾಕಾರ ಸೇವೆಗೆ ಬೆಟ್ಟದ ಮಂಜಪ್ಪನ ದೇವಸ್ಥಾನಕ್ಕೆ ಬಂದಿದ್ದಾರೆ. ಚಾರು ಫೋನ್‌ನಲ್ಲಿ ಸಾನ್ವಿ ಬಳಿ ನಮ್ಮನ್ನು ಯಾರು ಕೂಡ ನೋಡಲ್ಲ ಇಲ್ಲಿ ನಾವು ಇಬ್ಬರೇ ನಮ್ಮದೇ ದಿನ, ನಮ್ಮ ಸೇವೆಗೆ ಯಾರು ಅಡ್ಡಿ ಮಾಡೋರು ಇಲ್ಲ ಅಂದುಕೊಂಡಿದ್ದಾಳೆ ಇದನ್ನೇ ಸಾನ್ವಿಗೆ ಹೇಳಿದ್ದಾಳೆ.

ಈ ಕಡೆ ಚಾರು ಮಾತನಾಡುತ್ತಾ ಇದ್ದರೆ ನಾರಾಯಣ ಆಚಾರ್ಯರ ಕುಟುಂಬ ದೇವಸ್ಥಾನಕ್ಕೆ ಬಂದು ನಮಸ್ಕಾರ ಹಾಕಿದ್ದಾರೆ. ಶೃತಿ ಕರ್ಪೂರ ತರಲು ಅಂಗಡಿಗೆ ಹೋಗಿದ್ದಾಳೆ. ಈ ಕಡೆ ಜಾನಕಿ ಮೆಟ್ಟಿಲು ಹತ್ತಿ ಹೋಗಿದ್ದಾಳೆ. ಶೃತಿ ಅಥವಾ ಕೋದಂಡನ ಕೈಗೆ ರಾಮಾಚಾರಿ ಹಾಗೂ ಚಾರು ಸಿಕ್ಕಿ ಬೀಳುವ ಚಾನ್ಸ್ ಇದೆ.
ಚಾರುಗೋಸ್ಕರ ವಿಕಾಸ್ ಸಹ ಬಂದಿದ್ದಾನೆ ಅದು ಚಾರುಲತಾಗೆ ಗೊತ್ತಿಲ್ಲ. ಚಾರು ಬರುವ ತನಕ ನಾನು ಕಾಯುತ್ತೇನೆಂದು ವಿಕಾಸ್ ಕಾಯುತ್ತಾ ಕುಳಿತಿದ್ದಾನೆ. ಮನೆಯಲ್ಲಿ ಮಗನಿಗೆ ಬುದ್ದಿ ಹೇಳಿ ಎಂದು ಪ್ರಕಾಶ್ ಹೆಂಡತಿ ಹೇಳುತ್ತಿದ್ದಾಳೆ. ಭಜನಾ ಮಂಡಳಿಯಲ್ಲೂ ವಿಕಾಸ್ ಹುಡುಗಿಯರ ಜೊತೆ ತಿರುಗಾಡುವುದೇ ಸುದ್ದಿ ಇದೇ ರೀತಿ ಆದರೆ ಆ ಹುಡುಗಿ ಗತಿಯೇನು ಎಂದು ಹೇಳಿದ್ದಕ್ಕೆ ಹೇಳುತ್ತೇನೆ ಎಂದು ಮೊದಲ ಬಾರಿಗೆ ಹೆಂಡತಿಯ ಮಾತನ್ನು ಪ್ರಕಾಶ್ ಕೇಳಿದ್ದಾನೆ.
ಚಾರು ರಾಮಾಚಾರಿ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಾಳೆ. ನಂತರ ರಾಮಾಚಾರಿ ದೇವರಿಗೆ ಕೈ ಮುಗಿದು ಮನೆಯವರಿಗೆ ಮದುವೆಯಾಗಿರುವ ವಿಚಾರವನ್ನು ಹೇಳದೆ ತಪ್ಪು ಮಾಡಿದ್ದೇನೆ ನೀನೇ ನನ್ನ ಹಾಗೂ ಎರಡು ಮನೆಯವರನ್ನು ಕಾಪಾಡಬೇಕು ತಂದೆ ಎಂದು ಬೇಡಿಕೊಂಡು ಚಾರು ಎತ್ತಿಕೊಂಡು ಹೆಜ್ಜೆ ಹಾಕಿದ್ದಾನೆ.


Click it and Unblock the Notifications











