Ramachari: ಚಾರು ಲಗೇಜ್ ಎಸೆಯಲು ಹೋದ ವೈಶಾಖಗೆ ಚಾರು ಮಾಡಿದ್ದಾದರೂ ಏನು?

By ಶೃತಿ ಹರೀಶ್ ಗೌಡ

ರಾಮಾಚಾರಿ ಹಾಗೂ ಚಾರು ಇಬ್ಬರು ಸಹ ಚಾರು ಮನೆಗೆ ಹೋಗಿದ್ದರು. ಇದೇ ವೇಳೆ ಜಯ ಶಂಕರ್ ಅವರು ಮಾವನ ಸ್ಥಾನದಲ್ಲಿ ನಿಂತುಕೊಂಡು ಅಳಿಯನಿಗೆ ಆದರದ ಸತ್ಕಾರವನ್ನೇ ನೀಡಿದರು. ಆದರೆ ಮಾನ್ಯತಾ ಮಾತ್ರ ರಾಮಾಚಾರಿಗೆ ಅವಮಾನವನ್ನ ಮಾಡಿದಳು. ಇದನ್ನೆಲ್ಲಾ ನೋಡಿದ ಚಾರು ಮಾತ್ರ ಸುಮ್ಮನೆ ಇರದೇ ಮಾನ್ಯತಾಗೆ ಬಾಯಿಗೆ ಬಂದಂತೆ ಬೈದು. ತವರು ಮನೆಯ ಸಂಬಂಧವನ್ನೇ ಪಡೆದುಕೊಂಡು ಬಂದಳು ಇದು ರಾಮಾಚಾರಿ ಸಹ ನೋವನ್ನ ತಂದಿತು.

ರಾಮಾಚಾರಿಯ ಕೈಯನ್ನ ಹಿಡಿದುಕೊಂಡ ಚಾರು ನಡಿ ನಾವು ನಮ್ಮ ಮನೆಗೆ ಹೋಗೋಣ ಎಂದು ಗಾಡಿಯನ್ನು ಹತ್ತಿ ಹೊರಟೆ ಬಿಟ್ಟಳು. ಆದರೆ ಚಾರು ಮಾಡಿದ ಕೆಲಸಕ್ಕೆ ಅವರ ಅಜ್ಜಿ- ತಾತ ಚಿಂಟು ನೊಂದುಕೊಂಡರು. ಮಾನ್ಯತಾ ಸಹ ಈ ರೀತಿಯಲ್ಲ ಮಾಡಬಾರದಿತ್ತು ಎಂದುಕೊಂಡರು ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಚಾರು ಕಣ್ಣೀರು ಹಾಕುತ್ತಾ ನಾರಾಯಣ ಆಚಾರ್ಯರ ಮನೆ ಕಡೆ ಹೊರಟಳು ರಾಮಾಚಾರಿಯ ಬಳಿ ಯಾವುದೇ ಮಾತನ್ನು ಸಹ ಆಡಲಿಲ್ಲ.

colors-kannada-ramachari-serial

ವೈಶಾಖ ಹೇಗಿದ್ದರೂ ಚಾರು ಬರುವುದಿಲ್ಲ ಎಂದು ತುಂಬಾ ಖುಷಿಯಲ್ಲಿ ಇದ್ದಳು. ಮಾನ್ಯತಾ ಹೇಗಾದರೂ ಮಾಡಿ ಚಾರುವನ್ನ ಅವಳ ಮನೆಯಲ್ಲಿ ಇಟ್ಟುಕೊಳ್ಳುತ್ತಾಳೆ ಎಂದು ಹ್ಯಾಪಿ ಆಗಿ ಇದ್ದಳು. ನಂತರ ಅದನ್ನು ಅಜ್ಜಿ ಬಳಿಯೂ ಬಂದು ಹೇಳುತ್ತಾ ಇದ್ದಳು. ಇನ್ಮೇಲೆ ಚಾರು ಈ ಮನೆಗೆ ಬರೋದಿಲ್ಲ ಎಂದು ಹೇಳಿದಳು ಇದಕ್ಕೆ ಅಜ್ಜಿಯು ಸಹ ಖುಷಿ ಪಟ್ಟರು. ಆದರೆ ಇಲ್ಲಿ ಆಗಿದ್ದೆ ಬೇರೆ ವಿಚಾರ.

ಅದೇನೋ ವೈಶಾಖ ಮಾಡಿದ ಎಲ್ಲಾ ಪ್ಲಾನ್ ಗಳು ಸಹ ವೈಶಾಖಗೆ ಉಲ್ಟಾ ಹೊಡೆಯುತ್ತಿವೆ. ಈ ಬಾರಿ ಚಾರು ತನ್ನ ತವರು ಮನೆಗೆ ಹೋದವಳು ವಾಪಸ್ ಬರುವುದಿಲ್ಲ ಎಂದು ವೈಶಾಖ ಅಂದುಕೊಂಡಿದ್ದಳು. ಆದರೆ ಅದು ಸಹ ಸುಳ್ಳಾಗಿದೆ ಇನ್ನೇನು ಚಾರು ಸೂಟ್ಕೇಸ್ ಅನ್ನು ಬೀದಿಗೆ ಎಸೆಯಬೇಕು ಎಂಬುವಷ್ಟರಲ್ಲಿ ಚಾರು ಮನೆಯ ಒಳಗೆ ಪಾದಾರ್ಪಣೆಯನ್ನ ಮಾಡಿದ್ದಾಳೆ. ಚಾರುವನ್ನು ನೋಡಿದ ವೈಶಾಖ ಶಾಕ್ ಆಗಿದ್ದಾಳೆ.

ಇದೇನಪ್ಪ ಮನೆ ಬಿಟ್ಟು ಹೋಗುತ್ತಾ ಇದ್ದೀಯ ಯಾಕೆ ಗಂಡನ ಜೊತೆ ಜಗಳವಾಡಿ ಕೊಂಡಿಯ ಎಂದೆಲ್ಲಾ ವೈಶಾಖಳನ್ನ ಚಾರು ಚೇಡಿಸುತ್ತಿದ್ದಾಳೆ. ಅರೆ ಇದೇನು ಇಷ್ಟು ದೊಡ್ಡ ಸೂಟ್ಕೇಸ್ ನನ್ನ ಸೂಟ್ಕೇಸ್ ತೆಗೆದುಕೊಂಡು ಇದ್ದೀಯ ಯಾಕೆ ಎಂದೆಲ್ಲಾ ಕೇಳಿದ್ದಾಳೆ ಚಾರು. ವೈಶಾಖ ಮಾತ್ರ ಏನು ಮಾತನಾಡದೆ ನಿಂತಿದ್ದಾಳೆ. ನಾನು ಪರ್ಮನೆಂಟಾಗಿ ಬರೋದಿಲ್ಲ ಎಂದುಕೊಂಡಿದ್ದೀಯಾ ಅದಕ್ಕೆ ಈ ರೀತಿ ಮಾಡಿದ್ಯಾ ಎಂದು ವೈಶಾಖ ಬಳಿ ಕೇಳಿದ್ದಾಳೆ. ನಿನ್ನನ್ನ ಬಿಟ್ಟು ನಾನು ಎಲ್ಲಿಗೆ ಹೋಗಲಿ ಎಂದು ವೈಶಾಖಾಗೆ ಉರಿ ಬರುವ ರೀತಿ ಚಾರು ಮಾಡಿದ್ದಾಳೆ.

ಈ ಕಡೆ ಚಾರು ವೈಶಾಖಗೆ ಚೆನ್ನಾಗಿ ಉರಿ ಬರುವಂತೆ ಮಾತನಾಡಿ ಅಕ್ಕ ನಾನು ಜರ್ನಿ ಮಾಡಿ ಸುಸ್ತಾಗಿದ್ದೇನೆ. ಹೇಗೋ ಕಾಫಿ ಸಮಯ ಆಗಿದೆ ಎಲ್ಲರಿಗೂ ಕಾಫಿ ಮಾಡುವಾಗ ನಮಗೂ ಒಂದು ಲೋಟ ಮಾಡಿಬಿಡು ಎಂದು ಹೇಳಿ ತನ್ನ ರೂಮ್ ಗೆ ಹೋಗಿದ್ದಾಳೆ. ಈ ಮನೆ ಬಿಟ್ಟು ಹೋಗೋದಿಲ್ಲ ನಿನ್ನ ಕೈಯಲ್ಲಿ ಏನು ಮಾಡಬೇಕು ಹಾಗಲ್ಲ ಎಂದು ಅಜ್ಜಿ ವೈಶಾಖಗೆ ಬೈದಿದ್ದಾರೆ. ಇದೆಲ್ಲವನ್ನು ಕೇಳಿಸಿಕೊಂಡ ವೈಶಾಖ ಕೋಪದಿಂದ ಅಲ್ಲಿಂದ ಹೋಗಿದ್ದಾಳೆ.

ಚಾರು ಮನೆಗೆ ಬಂದ ಮೇಲೆ ಜಾನಕಿ ಚಾರುವನ್ನ ಮಾತನಾಡಿಸಿದ್ದಾರೆ. ಯಾಕಮ್ಮ ಈ ರೀತಿ ಇದ್ದೀಯಾ ಎಂದು ಕೇಳಿದ್ದಾರೆ. ಚಾರು ತನ್ನ ತವರು ಮನೆ ಸಂಬಂಧವನ್ನು ಕಡೆದುಕೊಂಡ ಬಗ್ಗೆ ಜಾನಕಿಯ ಬಳಿ ಹೇಳಿದ್ದಾಳೆ ಇದೆ ವೇಳೆ ಜೋರಾಗಿ ಅಳುತ್ತಾ ಜಾನಕಿಯನ್ನು ತಬ್ಬಿಕೊಂಡಿದ್ದಾಳೆ. ಜಾನಕಿ ಚಾರುವನ್ನು ಸಮಾಧಾನ ಮಾಡುತ್ತಾ ಇದ್ದಾರೆ. ಚಾರು ಮಾತ್ರ ರಾಮಾಚಾರಿಗೆ ಅವಮಾನ ಮಾಡಿದ್ದನ್ನ ನೆನಪಿಸಿಕೊಂಡು ನಾನು ತವರು ಮನೆಯನ್ನೇ ಕಳೆದುಕೊಂಡುಬಿಟ್ಟೆ ಎಂದು ಜೋರಾಗಿ ಅಳುತ್ತಿದ್ದಾಳೆ.

More from Filmibeat

English summary
Colors Kannada serial Ramachari here details about charu comes to narayana achar home, vaishaka disappointed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X