Ramachari: ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿರುವ ಚಾರು: ಅಡುಗೆ ಮಾಡಿ ಚಾಲೆಂಜ್‌ನಲ್ಲಿ ಗೆಲ್ತಾಳಾ?
ಚಾರು ಹಾಗೂ ವೈಶಾಖ ನಡುವೆ ಒಂದು ಪಂದ್ಯ ಏರ್ಪಟ್ಟಿದೆ. ಬೇಡ ಬೇಡವೆಂದರು ಸಹ ಚಾರು ವೈಶಾಖಳನ್ನ ಕೆಣಕಿ ಇಬ್ಬರು ಸಹ ಚಾಲೆಂಜ್ ಮಾಡಿಕೊಳ್ಳುವ ಹಂತಕ್ಕೆ ಹೋಗಿ ನಿಂತಿದ್ದರೂ. ಇದೇ ಸಮಯ ಎಂದುಕೊಂಡ ವೈಶಾಖ ನೀನು ಈ ಮನೆಗೆ ತಕ್ಕನಾದ ಸೊಸೆ ಎನಿಸಿಕೊಳ್ಳಬೇಕು ಎಂದರೆ. ಈ ಮನೆಯಲ್ಲಿ ಇರುವ ಎಲ್ಲರಿಗೂ ಸಹ ಅಡುಗೆಯನ್ನು ಮಾಡಿಸಬೇಕು ಎಂಬ ಚಾಲೆಂಜ್ ನನ್ನ ವೈಶಾಖ ಚಾರುಗೆ ಹಾಕಿದ್ದಳು. ಇದೇನು ಮಹಾ ನಾನು ಅಡುಗೆಯನ್ನು ಮಾಡಿ ಎಲ್ಲರಿಗೂ ಬಡಿಸುತ್ತೇನೆ ಎಂದು ಚಾಲೆಂಜಿಂಗ್ ಅನ್ನ ಚಾರು ಸ್ವೀಕಾರ ಮಾಡಿದ್ದಾಳೆ.
ಚಾರು ಯಾರ ಸಹಾಯವನ್ನ ತೆಗೆದುಕೊಳ್ಳದೆ ಅಡುಗೆಯನ್ನು ಮಾಡಬೇಕಾಗಿದೆ. ಇದಕ್ಕಾಗಿ ಮಾರ್ಕೆಟ್ ಗೆ ಹೋಗಿ ಮಾರ್ಕೆಟ್ ನಲ್ಲಿರುವ ಎಲ್ಲಾ ರೀತಿಯ ತರಕಾರಿ ಸೊಪ್ಪು ಎಲ್ಲವನ್ನು ಮನೆಗೆ ತಂದಿದ್ದಾಳೆ. ಅದು ಸಹ ಯಾರ ಸಹಾಯವು ಇಲ್ಲದೆ ಹೋಗಿ ಬಕ್ರ ಹಾಗೆ ಎಲ್ಲವನ್ನ ಮನೆಗೆ ಹೊತ್ತುಕೊಂಡು ಬಂದಿದ್ದಾಳೆ. ಇನ್ನು ಜಾನಕಿಗೆ ಸೊಸೆ ಪಡುತ್ತಿರುವ ಕಷ್ಟವನ್ನು ನೋಡಲು ಆಗುತ್ತಿಲ್ಲ ಯಾಕೆಂದರೆ ಚಾರುಗೆ ಏನು ಕೆಲಸ ಮಾಡಲು ಬರುವುದಿಲ್ಲ ಅದು ನಾರಾಯಣ ಆಚಾರ್ಯರ ಮನೆಗೆ ಬಂದಾಗ ಅಲ್ಪಸ್ವಲ್ಪ ಕೆಲಸ ಕಲಿತಿದ್ದ ಚಾರು ಅದನ್ನು ಸಹ ಸಂಪೂರ್ಣವಾಗಿ ಮರೆತು ಹೋಗಿದ್ದಾಳೆ.

ರಾಮಾಚಾರಿಯ ಹೆಲ್ತ್ ತೆಗೆದುಕೊಳ್ಳಬೇಕು ಎಂದುಕೊಂಡ ಚಾರುಗೆ ರಾಮಾಚಾರಿ ಸಹ ಬೈದಿದ್ದಾನೆ. ಹೋಗಿ ಹೋಗಿ ಚಾಲೆಂಜ್ ಮಾಡಿ ಬಂದಿದ್ದೀರಲ್ಲಾ ನಿಮಗೆ ಅಡುಗೆ ಮಾಡಲು ಬರುವುದಿಲ್ಲ. ಈಗ ನಿಮಗೆ ಮನೆಯವರ ಮನಸ್ಸನ್ನು ಗೆಲ್ಲಲು ಇದು ಒಳ್ಳೆಯ ಅವಕಾಶ ಆ ದೇವರು ನಿಮಗಾಗಿ ಸೃಷ್ಟಿಸಿದ್ದಾನೆ. ಹೇಗಾದರೂ ಮಾಡಿ ನೀವು ಈ ಟಾಸ್ಕ್ ನಲ್ಲಿ ಗೆಲ್ಲಲೇ ಬೇಕು ಎಂದು ಹೇಳಿದ್ದಾನೆ. ಅದು ಅಲ್ಲದೆ ವೈಶಾಖ ಮಾಡಿರುವ ಪ್ಲ್ಯಾನ್ ರಾಮಾಚಾರಿಗೆ ಗೊತ್ತಾಗಿ ಹೋಗಿದೆ ಅದನ್ನು ಸಹ ಚಾರು ಬಳಿ ಹೇಳಬೇಕು ಎಂದುಕೊಂಡಿದ್ದಾನೆ.
ಇದುವರೆಗೂ ಅಡುಗೆ ಮನೆಯಲ್ಲಿ ಯಾವ ವಸ್ತು ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳದ ಚಾರು ವೈಶಾಖ ಬಳಿ ಚಾಲೆಂಜ್ ಮಾಡಿ ಅಡುಗೆ ಮನೆಯಲ್ಲಿ ಪರದಾಡುತ್ತಿದ್ದಾಳೆ ಇದೆಲ್ಲವನ್ನ ನೋಡಿದ ರಾಮಾಚಾರಿಗೆ ಸಂಕಟವಾಗುತ್ತಿದೆ. ಕಿಟಕಿಯ ಬಳಿ ಬಂದ ರಾಮಾಚಾರಿ ಚಾರುವನ್ನ ಕರೆದಿದ್ದಾನೆ. ರಾಮಾಚಾರಿಯನ್ನು ಚಾರು ಅಡುಗೆ ಮನೆಯೊಳಗೆ ಬಂದು ಸ್ವಲ್ಪ ಸಹಾಯ ಮಾಡಬಾರದ ಯಾರಾದರೂ ಬಂದರೆ ಸೆಲ್ಫ್ ಕೆಳಗಡೆ ಅವಿತುಕೊಳ್ಳಬಹುದು. ಕಣ್ಣ ಮುಚ್ಚಾಲೆ ಆಟದ ತರ ಇರುತ್ತದೆ ಎಂದು ತಮಾಷೆಯನ್ನ ಮಾಡಿದ್ದಾಳೆ.
ಹೆಂಡತಿಯ ಮಾತನ್ನು ಕೇಳಿದ ರಾಮಾಚಾರಿ ಬೈದಿದ್ದಾನೆ ನೀವು ಯಾರ ಸಹಾಯವನ್ನು ತೆಗೆದುಕೊಳ್ಳದೆ ಅಡುಗೆ ಮಾಡಬೇಕಾಗಿದೆ. ಈಗ ಈ ಟಾಸ್ಕ್ ನಲ್ಲಿ ನೀವು ಗೆಲ್ಲುವುದು ಮುಖ್ಯವಾಗಿದೆ ಇಲ್ಲದಿದ್ದರೆ ವೈಶಾಖ ಅತ್ತಿಗೆ ಕೊಡುವ ಶಿಕ್ಷೆಯನ್ನ ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾನೆ. ಅಕ್ಕ ಅಂತ ಶಿಕ್ಷೆಯನ್ನೇನೂ ಕೊಡುವುದಿಲ್ಲ. ಮನೆ ಕೆಲಸ ಮಾಡು ನನ್ನ ಕಾಲು ಒತ್ತು ಎಂದು ಕೇಳಬಹುದು ಇದು ಸ್ವಲ್ಪ ಅವಮಾನವಾಗುತ್ತದೆ ಅದನ್ನು ಬಿಟ್ಟು ಬೇರೆ ಏನು ಮಾಡುವುದಿಲ್ಲ ಎಂದು ವೈಶಾಖ ಮೇಲೆ ಒಳ್ಳೆಯ ರೀತಿಯಲ್ಲಿ ಚಾರು ಹೇಳಿದ್ದಾಳೆ.
ಇನ್ನು ವೈಶಾಖ ತಮಾಷೆಯಾಗಿ ಮಾತನಾಡುವ ವೇಳೆ ಅತ್ತಿಗೆ ಮಾಡಿರುವ ಯೋಚನೆಯೇ ಬೇರೆಯಾಗಿದೆ. ನೀವು ಏನಾದರೂ ಅಡುಗೆ ಮಾಡುವ ಟಾಸ್ಕ್‌ನಲ್ಲಿ ಸೋತು ಹೋದರೆ ವೈಶಾಖ ಅತ್ತಿಗೆ ನಿಮ್ಮನ್ನ ಈ ಮನೆಯನ್ನು ಬಿಟ್ಟು ಕಳುಹಿಸಬೇಕು ಎಂದು ಅಂದುಕೊಂಡಿದ್ದಾರೆ. ಈ ರೀತಿಯ ಪ್ಲ್ಯಾನ್ ಮಾಡಿದ್ದಾರೆ ಎಂದು ರಾಮಾಚಾರಿ ವೈಶಾಖಳ ಪ್ಲಾನ್ ಬಗ್ಗೆ ಚಾರು ಬಳಿ ಹೇಳಿದ್ದಾನೆ. ರಾಮಾಚಾರಿ ಹೇಳಿದ ಮಾತನ್ನ ಕೇಳಿ ಚಾರುಗೆ ತುಂಬಾ ಶಾಕ್ ಆಗಿ ಅಳುವೆ ಬಂದಿದೆ. ಅವರು ಒಂದು ಅವಕಾಶಕ್ಕಾಗಿ ಕಾಯುತ್ತಾ ಇದ್ದರೂ ಆ ಅವಕಾಶವನ್ನು ನೀವೇ ಮಾಡಿ ಕೊಟ್ಟಿದ್ದೀರಾ ಈಗ ಅನುಭವಿಸಿ
.ನಿಮ್ಮ ಮುಂದೆ ಇರುವುದು ಮನೆಯವರಿಗೆ ಅಡುಗೆ ಮಾಡಿ ಬಡಿಸಿ ಅವರ ಮನಸ್ಸನ್ನ ಗೆಲ್ಲುವುದು. ಇಲ್ಲದಿದ್ದರೆ ಈ ಮನೆಯನ್ನ ಬಿಟ್ಟು ಹೋಗುವುದು ಎಂದಾಗ ಚಾರು ನಾನು ಪ್ರಾಣವನ್ನ ಬೇಕಾದರೂ ಬಿಡುತ್ತೇನೆ. ಈ ಮನೆಯನ್ನು ಬಿಟ್ಟು ನಿನ್ನನ್ನು ಬಿಟ್ಟು ಹೋಗೋದಿಲ್ಲ ಎಂದು ಕಣ್ಣೀರು ಹಾಕಿದ್ದಾಳೆ. ಸಾಯುವ ಮಾತನ್ನು ಏಕೆ ಆಡುತ್ತೀರಾ ಅಡುಗೆ ಮಾಡಿ ಎಲ್ಲರ ಮನಸ್ಸನ್ನು ಗೆಲ್ಲಿ ಎಂದು ರಾಮಾಚಾರಿ ಹೇಳಿದ್ದಾನೆ. ಈಗ ಚಾರು ಅಡುಗೆ ಮಾಡಿ ಬಡಿಸಿ ವೈಶಾಖಳ ಮುಂದೆ ಗೆದ್ದು ತೋರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಎಲ್ಲರ ಕುತೂಹಲ ಈಗ ಚಾರು ಅಡುಗೆ ಮಾಡುವುದರ ಮೇಲೆ ನಿಂತಿದೆ.


Click it and Unblock the Notifications











