Ramachari: ತವರು ಮನೆಯವರನ್ನು ನೋಡಿ ಚಾರು ಭಾವುಕ: ರಾಮಾಚಾರಿಗೆ ಅವಮಾನ ಮಾಡಿದ ಮಾನ್ಯತಾ.!

By ಶೃತಿ ಹರೀಶ್ ಗೌಡ

ರಾಮಾಚಾರಿ ಚಾರುವನ್ನು ತವರು ಮನೆಗೆ ಕರೆದುಕೊಂಡು ಹೋಗಿ ಬರಲು ನಾರಾಯಣ ಆಚಾರ್ಯರ ಬಳಿ ಪರ್ಮಿಷನ್ ಕೇಳಲು ಹೋಗಿ ಚೆನ್ನಾಗಿ ಬೈಸಿಕೊಂಡಿದ್ದಾನೆ. ಕಾಟಾಚಾರಕ್ಕೆ ನನ್ನ ಬಳಿ ಬಂದು ಪರ್ಮಿಷನ್ ಕೇಳುವುದು ಬೇಡ ಮದುವೆಯಾದಾಗ ಇವನೇನು ನನ್ನ ಪರ್ಮಿಷನ್ ತೆಗೆದುಕೊಂಡಿದ್ದ ಎಂದೆಲ್ಲಾ ನಾರಾಯಣ ಆಚಾರ್ಯರು ಬೈದಿದ್ದಾರೆ. ಇಂತಹ ನಾಟಕಗಳು ಇದ್ಯಾವುದೂ ಬೇಡ ಅವರ ಪಾಡಿಗೆ ಅವರು ಇರಲಿ ಎಂದು ನಾರಾಯಣ ಆಚಾರ್ಯರು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ.

ಈ ಕಡೆ ವೈಶಾಖ ಮಾನ್ಯತಾಗೆ ಫೋನ್ ಮಾಡಿ ನಿನ್ನ ಮಗಳು ನಿನ್ನ ಮನೆಗೆ ಬರುತ್ತಿದ್ದಾಳೆ ಬೇಟೆಯೇ ಬೋನ್‌ಗೆ ಬಂದು ಬೀಳುತ್ತಿದೆ ಎಂದು ಹೇಳಿದ್ದಾಳೆ. ಇದೇ ಸರಿಯಾದ ಸಮಯ ನಿನ್ನ ಮಗಳನ್ನು ನೀನು ಬಂಧಿಸಿಟ್ಟುಕೊ. ಅವಳನ್ನ ಈ ಮನೆಗೆ ವಾಪಸ್ ಕಳುಹಿಸಬೇಡ ಎಂದು ಹೇಳಿದ್ದಾಳೆ. ಒಮ್ಮೆ ನನ್ನ ಮನೆಗೆ ಬರಲಿ ನಾನು ಇನ್ಯಾವತ್ತೂ ಆ ದರಿದ್ರ ಮನೆಗೆ ಕಳುಹಿಸುವುದಿಲ್ಲ ಎಂದು ಮಾನ್ಯತಾ ಹೇಳಿದ್ದಾಳೆ. ಅಷ್ಟು ಮಾಡಿ ಪುಣ್ಯ ಕಟ್ಟಿಕೊ ಎಂದು ವೈಶಾಖ ಹೇಳಿದ್ದಾಳೆ.

Colors Kannada, Ramachari serial Written Update on Aug 9th episode

ತವರು ಮನೆಗೆ ಕರೆದುಕೊಂಡು ಬಂದ ರಾಮಾಚಾರಿ, ನಾನು ಮನೆಯ ಒಳಗೆ ಬರುವುದಿಲ್ಲ ನೀವು ಹೋಗಿ ಬನ್ನಿ ಎಂದು ಹೇಳಿದ್ದಾನೆ‌. ಇದೇ ವೇಳೆ ರಾಮಾಚಾರಿಯ ಕೈ ಹಿಡಿದುಕೊಂಡ ಚಾರು ಇದೇ ಜಾಗದಲ್ಲಿ ನಾವಿಬ್ಬರು ಎಷ್ಟು ಬಾರಿ ಜಗಳ ಮಾಡಿದ್ದೇವು. ನನ್ನ ಅಹಂಕಾರ ಎಷ್ಟು ಇತ್ತು, ನೀನು ನನಗೆ ಬುದ್ಧಿಯನ್ನು ಹೇಳುತ್ತಿದ್ದೆ ಎಂದು ಹಳೆಯ ವಿಷಯಗಳನ್ನು ನೆನಪಿಸಿಕೊಂಡಿದ್ದಾಳೆ. ರಾಮಾಚಾರಿ ಸಹ ಇದಕ್ಕೆ ಮುಗುಳ್ನಕ್ಕು ನೀವು ಒಳಗೆ ಹೋಗಿ ಬನ್ನಿ ನಾನು ಹೊರಗಡೆ ಕಾಯುತ್ತಾ ಇರುತ್ತೇನೆ ಎಂದು ಚಾರುಗೆ ಹೇಳಿದ್ದಾನೆ.

ತವರಿಗೆ ಬಂದ ಚಾರು ಮನೆಯವರನ್ನು ನೋಡಿ ಭಾವುಕ!

ರಾಮಾಚಾರಿ ತಾನು ಮನೆಯ ಒಳಗೆ ಬರುವುದಿಲ್ಲ ಎಂದರೂ ಚಾರು ನಮಗೂ ಸ್ವಲ್ಪ ಸಂಸ್ಕಾರವಿದೆ. ಮನೆಗೆ ಬಂದ ಅಳಿಯನನ್ನು ಯಾವ ರೀತಿ ಸತ್ಕರಿಸಬೇಕು ಎಂದು ನನ್ನ ತಂದೆಗೆ ತಿಳಿದಿದೆ. ಸುಮ್ಮನೆ ಬಾ ಎಂದು ರಾಮಾಚಾರಿಯ ಕೈಹಿಡಿದುಕೊಂಡು ಮನೆಯ ಒಳಗೆ ಕರೆದುಕೊಂಡು ಹೋಗಿದ್ದಾಳೆ. ಇದೇ ವೇಳೆ ಜೈ ಶಂಕರ್ ಆಫೀಸಿಗೆ ಹೊರಟಿದ್ದವರು, ಮಗಳು ಬಂದಿದ್ದನ್ನ ನೋಡಿ ಖುಷಿ ಪಟ್ಟಿದ್ದಾರೆ. ಮನೆಯವರನ್ನೆಲ್ಲಾ ನೋಡಿದ ಚಾರು ಸಹ ಅಷ್ಟೇ ಭಾವುಕಳಾಗಿದ್ದಾಳೆ. ತವರು ಮನೆ ಎಂದರೆ ಎಂತಹ ಪ್ರೀತಿ ಎಂದೆಲ್ಲಾ ಅಂದಿದ್ದಾಳೆ.

ಅಕ್ಕನನ್ನು ನೋಡಿದ ಚಿಂಟು ಸರ್ವೇಶ ಅಜ್ಜಿ ತಾತ ಸಹ ಖುಷಿಯಾಗಿದ್ದಾರೆ. ಚಾರು ಕಂಡ ಚಿಂಟು ಓಡಿ ಬಂದು ಅಕ್ಕನನ್ನ ತಬ್ಬಿಕೊಂಡಿದ್ದಾನೆ. ಇನ್ನು ರಾಮಾಚಾರಿ ಸಹ ಇವರೆಲ್ಲರ ಪ್ರೀತಿಯನ್ನ ಕಂಡು ಸುಮ್ಮನೆ ನಿಂತುಕೊಂಡಿದ್ದಾನೆ. ಅಳಿಯನನ್ನು ನೋಡಿದ ಜೈ ಶಂಕರ್ ರಾಮಾಚಾರಿಯ ಯೋಗಕ್ಷೇಮವನ್ನ ವಿಚಾರಿಸಿದ್ದಾರೆ. ಇದೆ ವೇಳೆ ಮೀಟಿಂಗ್‌ಗೆ ಟೈಮ್ ಆಗಿದೆ ನಾನು ಬರುತ್ತೇನೆ ಎಂದು ರಾಮಾಚಾರಿ ಹಾಗೂ ಚಾರುಗೆ ಹೇಳಿ ಮನೆಯಿಂದ ಆಫೀಸ್‌ಗೆ ಹೊರಟಿದ್ದಾರೆ.

Colors Kannada, Ramachari serial Written Update on Aug 9th episode

ಮಗಳಿಗೆ ಸತ್ಕಾರ! ರಾಮಾಚಾರಿಗೆ ಅವಮಾನ!

ಅಜ್ಜಿ, ತಾತ, ಸರ್ವೇಶ ಹಾಗೂ ಚಿಂಟು ಎಲ್ಲರೂ ಸಹ ರಾಮಾಚಾರಿಯನ್ನ ಮಾತನಾಡಿಸಿ, ರಾಮಾಚಾರಿಗೆ ಊಟಕ್ಕೆ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಬಾವನಿಗೆ ಚಿಂಟು ಗೌರವವನ್ನು ನೀಡುತ್ತಿದ್ದಾನೆ. ಚಾರು ಸಹ ರಾಮಾಚಾರಿ ಮನೆಯಲ್ಲಿ ಊಟ ಮಾಡಲು ಕುಳಿತಿರುವುದಕ್ಕೆ ತುಂಬಾ ಖುಷಿಯನ್ನು ಪಟ್ಟಿದ್ದಾಳೆ. ಇನ್ನು ಇದೇ ವೇಳೆ ಮಾನ್ಯತಾ ಹೊರಗಡೆಯಿಂದ ಮನೆಯೊಳಗೆ ಬಂದ್ದು, ಮಗಳು ಬಂದಿದ್ದನ್ನ ನೋಡಿ ತುಂಬಾನೇ ಖುಷಿ ಪಟ್ಟಿದ್ದಾಳೆ.

ಬೇಬಿ ಹೇಗಿದ್ದೀಯಾ ಎಂದು ಮಗಳಿಗೆ ಮುದ್ದು ಮಾಡುತ್ತಿದ್ದಾಳೆ. ಚಾರು ನಾನೇನು ಒಬ್ಬಳೇ ಬಂದಿಲ್ಲ ನನ್ನನ್ನು ರಾಮಾಚಾರಿ ಕರೆದುಕೊಂಡು ಬಂದ ಎಂದು ಹೇಳಿದ್ದಾಳೆ. ರಾಮಾಚಾರಿ ಇರುವ ಜಾಗಕ್ಕೆ ಬಂದ ಮಾನ್ಯತಾ ಎದ್ದೇಳು ಮೇಲೆ ಎಂದು ಊಟ ಮಾಡುತ್ತಿರುವ ರಾಮಾಚಾರಿಯನ್ನ ಗದರಿಸಿದ್ದಾಳೆ. ಊಟಕ್ಕೆ ಕುಳಿತ ರಾಮಾಚಾರಿ ಒಂದು ತುತ್ತು ಅನ್ನ ಬಾಯಿಗೆ ಹಾಕುವ ಮೊದಲೇ ಮಾನ್ಯತಾ ಅವಮಾನ ಮಾಡಿದ್ದಾಳೆ. ಈಗ ಚಾರು ತನ್ನ ಅಮ್ಮನ ಪರ ನಿಲ್ಲುವಳೋ, ರಾಮಾಚಾರಿ ಪರ ನಿಲ್ಲುವಳೋ ಕಾದುನೋಡಬೇಕಿದೆ.

More from Filmibeat

English summary
Colors Kannada serial Ramachari here details about charulatha in manyatha home jaishankar happy to see his daughter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X