Ramachari: ಮದುವೆ ಮುರಿಯಲು ಮಾನ್ಯತಾ ಪ್ಲಾನ್: ಅಳಿಯ ರಾಮಾಚಾರಿಗೆ ಕೈಮುಗಿದ ಜೈ ಶಂಕರ್!
ರಾಮಾಚಾರಿ ಚಾರುಗೆ ನಿಮ್ಮ ಅಪ್ಪ ಸಿಕ್ಕಿದರು ಎಂದು ಹೇಳಿದ ಕೂಡಲೇ ಚಾರುಗೆ ಮನೆಯವರ ನೆನಪಾಗಿ ತವರು ಮನೆಗೆ ಹೋಗಬೇಕು ಎಂದೆನಿಸಿದೆ. ರಾಮಾಚಾರಿಯನ್ನ ಕರೆದುಕೊಂಡು ತವರುಮನೆಗೆ ಬಂದಿದ್ದಾಳೆ. ತವರಿನಲ್ಲಿ ಎಲ್ಲರನ್ನ ನೋಡಿದ ಕೂಡಲೇ ಕಣ್ತುಂಬಿ ಬಂದಿದೆ. ಚಿಂಟು ಮಾತ್ರ ಅಕ್ಕ ಬಂದ ಕೂಡಲೇ ಓಡಿ ಹೋಗಿ ತಬ್ಬಿಕೊಂಡಿದ್ದಾನೆ. ಜೈ ಶಂಕರ್ ಅವರಿಗೆ ಮಗಳನ್ನು ನೋಡಿದ ಕೂಡಲೇ ತುಂಬಾನೇ ಖುಷಿಯಾಗಿ ಓಡೋಡಿ ಬಂದು ತಬ್ಬಿಕೊಂಡಿದ್ದಾರೆ.
ಜಾನಕಿ ಅತ್ತೆಯ ಬಳಿ ಬಂದು ಮಗ ಮತ್ತು ಅಪ್ಪ ಯಾವ ರೀತಿ ಇದ್ದರೂ ಈಗ ಈ ರೀತಿ ಆಗಿದ್ದಾರೆ ಎಂದು ಹೇಳುತ್ತಿದ್ದಾಳೆ. ದುರಹಂಕಾರದಿಂದ ಇದ್ದ ಚಾರು ಎಲ್ಲವನ್ನ ಬಿಟ್ಟು ಈಗ ಒಳ್ಳೆಯವಳಾಗಿದ್ದಾಳೆ. ನಮ್ಮೆಲ್ಲರಲ್ಲೂ ಒಂದಾಗಿ ಬಾಳಬೇಕು ಎಂದು ಆಸೆಯನ್ನ ಇಟ್ಟುಕೊಂಡಿದ್ದಾಳೆ ಎಂದು ಹೇಳಿದ್ದಾರೆ. ಆದರೆ ಅಜ್ಜಿಗೆ ಚಾರುವನ್ನ ಕಂಡರೆ ಮೊದಲಿಂದಲೂ ಅಷ್ಟಕ್ಕೆ ಅಷ್ಟೇಯಾಗಿದ್ದು ಅವಳೊಬ್ಬಳು ವಿಷ ಕನ್ಯೆ ನೀನು ಮುಗ್ದೆ ಅದೆಲ್ಲವೂ ತಿಳಿಯುವುದಿಲ್ಲ ಎಂದು ಜಾನಕಿಗೆ ಹೇಳಿದ್ದಾರೆ.

ತವರು ಮನೆಗೆ ಬಂದಿರುವ ಚಾರು ಜೈ ಶಂಕರ್ ಬಳಿಯಲ್ಲಿ ಮಾವನ ಮನೆಯವರನ್ನೆಲ್ಲಾ ಹೊಗಳುತ್ತಾ ಇದ್ದಾಳೆ. ಬೆಳಿಗ್ಗೆ ಎದ್ದರೇ ನಮ್ಮ ಮನೆಯಲ್ಲಿ ಸುಪ್ರಭಾತ ನಮ್ಮ ಮಾವನವರೇ ದೇವರು ನಮ್ಮ ಅತ್ತೆ ಸದ್ಗುಣ ಸಂಪನ್ನೇ ಎಂದು ಹೊಗಳುತ್ತಾ ಇದ್ದಾಳೆ. ಇದೆಲ್ಲವನ್ನು ಕೇಳುತ್ತಿರುವ ಜೈ ಶಂಕರ್ ಗೆ ತುಂಬಾನೇ ಖುಷಿಯಾಗಿದೆ. ಮಗಳು ಯಾವ ರೀತಿ ಬದಲಾಗಿದ್ದಾಳೆ ಎಂದು ಮಗಳನ್ನೇ ನೋಡುತ್ತಾ ಖುಷಿ ಪಡುತ್ತಿದ್ದಾರೆ.
ರಾಮಾಚಾರಿಯನ್ನು ಚಾರು ಬಿಟ್ಟು ಬರುವುದಿಲ್ಲ ಎಂದು ಗೊತ್ತಿರುವ ಮಾನ್ಯತಾ ಅವಳನ್ನ ದೂರದ ಅಮೆರಿಕಕ್ಕೆ ಒಂದೆರಡು ತಿಂಗಳು ಕರೆದುಕೊಂಡು ಹೋಗಿ ಮನಸ್ಸನ್ನು ಬದಲಾವಣೆ ಮಾಡಬೇಕು ಎಂದು ಪ್ಲಾನ್ ಹಾಕಿದ್ದಾಳೆ. ಅಷ್ಟೇ ಅಲ್ಲದೆ ಇದಕ್ಕಾಗಿ ತನ್ನ ಗೆಳತಿಯ ಬಳಿ ಮತ್ತೊಂದು ಐಡಿಯಾ ಕೊಡುವಂತೆ ಕೇಳಿದ್ದಾಳೆ ಯಾವುದು ಬೇಡ ನೀನು ಅವಳನ್ನ ಅಮೆರಿಕಕ್ಕೆ ಕರೆದುಕೊಂಡು ಹೋಗಿ ಅಲ್ಲೇ ಒಂದೆರಡು ತಿಂಗಳು ಅಷ್ಟರಲ್ಲೇ ಮನಸ್ಸು ಬದಲಾವಣೆಯಾಗುತ್ತದೆ ಎಂದು ಅವಳ ಗೆಳತಿ ಹೇಳಿದ್ದಾಳೆ.
ಚಾರುವಿನಲ್ಲಿ ಇಂತಹ ಬದಲಾವಣೆಯನ್ನು ತರುವಲ್ಲಿ ರಾಮಾಚಾರಿ ಅಂತಹ ಬಂಗಾರದ ಮನುಷ್ಯನಿದ್ದನು ಎಂದು ಜೈ ಶಂಕರ್ ರವರು ರಾಮಾಚಾರಿಗೆ ಕೈಮುಗಿದಿದ್ದಾರೆ. ನನ್ನ ಮಗಳನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದೀರಾ ಬಹಳ ಸಂತೋಷವಾಗುತ್ತಿದೆ. ನಾನು ಕೋಟಿ ರೂಪಾಯಿ ಕೊಟ್ಟರು ಇಂತಹ ಗಂಡನ್ನ ಹುಡುಕಲು ಸಾಧ್ಯವಾಗುತ್ತಿರಲಿಲ್. ನನ್ನ ಮಗಳ ಸೆಲೆಕ್ಷನ್ ತುಂಬಾ ಚೆನ್ನಾಗಿದೆ ಎಂದು ಹೇಳುತ್ತಾ ಇದ್ದಾರೆ. ನನ್ನ ಮಗಳನ್ನು ಮದುವೆಯಾಗಿದ್ದಕ್ಕೆ ಥ್ಯಾಂಕ್ಯೂ ಎಂದು ರಾಮಾಚಾರಿಯ ಬಳಿಯಲ್ಲಿ ಹೇಳುತ್ತಿದ್ದಾರೆ.
ಬರಿ ಗಂಡನನ್ನೇ ಹೊಗಳುತ್ತಿರುವುದಕ್ಕೆ ಚಾರುಗೆ ಕೋಪ ಬಂದಿದ್ದು ಏನು ಅಳಿಯನನ್ನು ಮಾತ್ರ ಹೊಗಳುತ್ತಿದ್ದೀರಾ ನನ್ನನ್ನು ಸ್ವಲ್ಪ ಹೊಗಳಿ ಡ್ಯಾಡ್ ಎಂದು ಜೈ ಶಂಕರ್ ಕಾಲನ್ನು ಎಳೆದಿದ್ದಾಳೆ. ಇದೇ ವೇಳೆ ಜೈ ಶಂಕರ್ ಮಗಳನ್ನು ನೀನು ಅಪ್ಪಟ ಬಂಗಾರ ಮನಸ್ಸಿನಲ್ಲಿ ನಿಷ್ಕಲ್ಮಷ ಇರದವಳು ಎಂದು ಹೊಗಳಿದ್ದಾರೆ. ಅಪ್ಪನ ಹೊಗಳಿಕೆಯನ್ನ ಕಂಡು ಚಾರು ಪುಳಕಿತಳಾಗಿದ್ದಾಳೆ. ಇನ್ನೂ ಜಯಶಂಕರ್ ಮೀಟಿಂಗ್ ಕ್ಯಾನ್ಸಲ್ ಮಾಡುವಂತೆ ಆಫೀಸ್ ನವರಿಗೆ ಹೇಳಿದ್ದಾರೆ.
ಜೈ ಶಂಕರ್ ಫೋನಿನಲ್ಲಿ ಎಲ್ಲಾ ಮೀಟಿಂಗ್ ಕ್ಯಾನ್ಸಲ್ ಮಾಡಿ ನಮ್ಮ ಮನೆಗೆ ಅಳಿಯ ಮಗಳು ಬಂದಿದ್ದಾರೆ ಎಂದು ಹೇಳಿದ್ದಾರೆ. ರಾಮಾಚಾರಿಗೆ ಯಾಕೋ ಇದು ಸರಿ ಕಾಣಲಿಲ್ಲ ಸರ್ ನಿಮಗೋಸ್ಕರ ಅಲ್ಲಿ ತುಂಬಾ ಜನ ಕಾಯುತ್ತಾ ಇರುತ್ತಾರೆ ದಯವಿಟ್ಟು ಹೋಗಿ ನೀವು ಮೀಟಿಂಗ್ ಅಟೆಂಡ್ ಮಾಡಿ ಎಂದು ಮಾವನನ್ನ ಮೀಟಿಂಗ್ ಗೆ ಅಳಿಯ ಕಳುಹಿಸಿ ಕೊಟ್ಟಿದ್ದಾನೆ. ಮಾನ್ಯತಾ ಮಾತ್ರ ಚಾರು ಹಾಗೂ ರಾಮಾಚಾರಿಯನ್ನು ಹೇಗೆ ದೂರ ಮಾಡಬೇಕು ಎಂಬುದರ ಬಗ್ಗೆ ಯೋಚನೆ ಮಾಡುತ್ತಾ ಇದ್ದಾಳೆ.


Click it and Unblock the Notifications











