Ramachari: ಹೆಂಡತಿಯನ್ನು ಉಳಿಸಿಕೊಳ್ಳಲು ರಾಮಾಚಾರಿ ಸರ್ಕಸ್; ವೈಶಾಖಗೆ ಬಂತು ಅನುಮಾನ!
ವೈಶಾಖ ಹಾಕಿರುವ ಟಾಸ್ಕ್‌ನಲ್ಲಿ ಚಾರು ಗೆಲ್ಲಲೇ ಬೇಕಾಗಿದೆ ಇಲ್ಲದಿದ್ದರೆ ಮನೆಯಿಂದ ಚಾರುಗೆ ಗೇಟ್ ಪಾಸ್ ಸಿಗಲಿದೆ. ಇದೇ ರೀತಿ ಪ್ಲಾನ್ ಮಾಡಿಕೊಂಡು ವೈಶಾಖ ಚಾರುವನ್ನು ಕಟ್ಟಿ ಹಾಕಿದ್ದಾಳೆ. ಕೊನೆಗೆ ರಾಮಾಚಾರಿಗೆ ಹೇಗೋ ವೈಶಾಖ ಪ್ಲಾನ್ ತಿಳಿದಿದೆ. ಅದು ಸಹ ತನ್ನ ಅಣ್ಣನಿಂದಲೇ ರಾಮಾಚಾರಿಗೆ ತಿಳಿದಿದೆ. ಕೋದಂಡ ಅಜ್ಜಿ ಆ ಬಳಿ ಬಂದು ಅಜ್ಜಿ ವೈಶಾಖ ಹಾಕಿರುವ ಚಾಲೆಂಜಿನಲ್ಲಿ ಚಾರು ಗೆಲ್ಲದೆ ಇದ್ದರೆ. ಅವಳಿಗೆ ಗೇಟ್ ಪಾಸ್ ಸಿಗುತ್ತದೆ ಎಂದು ಹೇಳಿದ್ದಾನೆ ಈ ಮಾತು ರಾಮಾಚಾರಿಯ ಕಿವಿಗೆ ಬಿದ್ದಿದ್ದು ಚಾರುಗೂ ಸಹ ಹೇಳಿದ್ದಾನೆ.
ಚಾರು ರಾಮಾಚಾರಿಯ ಬಳಿ ನಾನು ಈ ಮನೆ ಬಿಟ್ಟು ಹೋಗೋದಿಲ್ಲ ಅದರ ಬದಲು, ಅಕ್ಕನ ಕಾಲಿಗೆ ಬಿದ್ದು ದಯವಿಟ್ಟು ಕ್ಷಮಿಸಿ ನಾನು ಪಂದ್ಯದಲ್ಲಿ ಸೋತಿದ್ದೇನೆ ಎಂದು ಹೇಳುತ್ತೇನೆ ಎಂದಿದ್ದಾಳೆ. ಇದಕ್ಕೆ ರಾಮಾಚಾರಿ ಆ ರೀತಿ ಮಾಡಿದರೆ ಮತ್ತೆ ನಿಮ್ಮನ್ನ ಮನೆ ಬಿಟ್ಟು ಓಡಿಸುತ್ತಾರೆ. ಅದನ್ನು ಬಿಟ್ಟು ನೀವು ಹೇಗಾದರೂ ಮಾಡಿ ಅಡುಗೆಯನ್ನು ಮಾಡಲೇಬೇಕಾಗಿದೆ ಎಂದುಎಂದಿದ್ದಾನೆ. ನನಗೆ ಅಡುಗೆ ಮಾಡಲು ಬರುವುದಿಲ್ಲ ಏನು ಮಾಡಲಿ ಎಂದಾಗ ರಾಮಾಚಾರಿ ಕೊಟ್ಟಿದ್ದಾನೆ.

ಈ ಕಡೆ ಮಾನ್ಯತಾ ಬಾಲ ಸುಟ್ಟ ಬೆಕ್ಕಿನ ರೀತಿ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಒದ್ದಾಡುತ್ತಾ ಇದ್ದಾಳೆ. ಆ ವೈಶಾಖ ಬೇರೆ ಕಾಲ್ ಮಾಡಿಲ್ಲ ನನ್ನ ಮಗಳು ಆದರೆ ರಾಮಾಚಾರಿಯ ಮನೆಯಿಂದ ಹೊರ ಬಂದರೆ ಸಾಕು ಎಂದು ತನ್ನೊಳಗೆ ಅಂದುಕೊಳ್ಳುತ್ತಿದ್ದಾಳೆ. ಅಷ್ಟರಲ್ಲಿ ಜೈ ಶಂಕರ್ ಕರೆದು ಏನು ಮಾಡುತ್ತಿರುವೆ ಎಂದಾಗ ಏನು ಇಲ್ಲ ಎಂದು ಹೇಳಿದ್ದಾಳೆ. ಆದರೆ ನೀನು ಸೈಲೆಂಟಾಗಿ ಇರುವುದನ್ನು ನೋಡಿದರೆ ಒಳಗೊಳಗೆ ಏನೋ ಮಾಡುತ್ತಿದ್ದೀಯಾ, ಎಂಬ ಅನುಮಾನ ನನಗೆ ಬಂದಿದೆ ಎಂದು ಜಯಶಂಕರ್ ಮಾನ್ಯತಾಗೆ ತಿಳಿಸಿದ್ದಾನೆ.
ಚಾರು ಒಂದು ಕಿವಿಗೆ ಬ್ಲೂಟೂತ್ ಅನ್ನ ಹಾಕಿಕೊಂಡಿದ್ದಾಳೆ. ರೂಮಿಗೆ ಹೋದಂತಹ ರಾಮಾಚಾರಿ ಮೊದಲು ಯಾವ ಯಾವ ತರಕಾರಿ ತಂದಿದ್ದೀರಾ ಎಂದು ಚಾರು ಬಳಿ ಕೇಳಿದ್ದಾನೆ. ಇದೇ ವೇಳೆ ನನಗೆ ತರಕಾರಿ ಹೆಸರು ಗೊತ್ತಿಲ್ಲ ಎಂದು ಹೇಳಿ ಫೋಟೋವನ್ನು ಚಾರು ಕಳುಹಿಸಿದ್ದಾಳೆ. ಚಾರು ಗೆ ರಾಮಾಚಾರಿ ತರಕಾರಿಯ ಹೆಸರುಗಳನ್ನ ಹೇಳಿ ಎಲ್ಲವನ್ನ ತೊಳೆದು ಹಿಡಿ ಎಂದು ಹೇಳಿದ್ದಾನೆ. ತೊಳೆದ ನಂತರ ಅದೆಲ್ಲವನ್ನು ಕಟ್ ಮಾಡಿ ಸೌತೆಕಾಯಿಯಿಂದ ಕೋಸಂಬರಿ ಮಾಡಿ ಎಂದೆಲ್ಲ ಹೇಳಿ ಕೊಡುತ್ತಿದ್ದಾನೆ.
ಈ ಮೊದಲೇ ಚಾರು ನೀನು ಹೇಳಿಕೊಟ್ಟಿದ್ದನ್ನ ನಾನು ಶ್ರದ್ಧೆಯಿಂದ ಮಾಡುತ್ತೇನೆ ಎಂದು ಹೇಳಿದ್ದಳು. ಅದರಂತೆ ನಡುವೆ ಹಾಸ್ಯ ಮಾಡುತ್ತಾ ಅಡುಗೆಯನ್ನು ಮಾಡುತ್ತಿದ್ದಾಳೆ. ತರಕಾರಿಯನ್ನು ರಾಮಾಚಾರಿ ಹೇಳಿದಂತೆ ಕಟ್ ಮಾಡಿ ಕೂಟ್ ಮಾಡಿದ್ದಾಳೆ. ಇನ್ನೂ ತರಕಾರಿ ಕಟ್ ಮಾಡಿ ಬೇಳೆಯನ್ನ ಹಾಕಿ ಸಾಂಬಾರ್ ಮಾಡುತ್ತಿದ್ದಾಳೆ. ರಾಮಾಚಾರಿ ಹೇಳಿದಂತೆ ಚಾರು ಅಡುಗೆಯನ್ನು ಮಾಡುತ್ತಾ ಇದ್ದಾಳೆ.
ಇನ್ನು ಯಾವ ರೀತಿ ಚಾರು ಅಡುಗೆಯನ್ನು ಮಾಡುತ್ತಿದ್ದಾಳೆ ಎಂಬುದನ್ನು ನೋಡಲು ವೈಶಾಖ ಅಡುಗೆ ಮನೆಗೆ ಬಂದಿದ್ದಾಳೆ. ಇವಳಿಗೆ ಕಾಫಿ ಮಾಡಲೇ ಬರುತ್ತಿರಲಿಲ್ಲ ಈಗ ಯಾವ ರೀತಿ ಅಡುಗೆಯನ್ನು ಮಾಡುತ್ತಿದ್ದಾಳೆ ಎಂದು ತಲೆಕೆಡಿಸಿಕೊಂಡಿದ್ದಾಳೆ. ಈ ಕಡೆ ಚಾರು ಬ್ಲೂಟೂತ್ ಹಾಕಿಕೊಂಡು ರಾಮಾಚಾರಿ ಹೇಳಿದಂತೆ ಬೆಳೆಯನ್ನ ಹಾಕುವ ಸಮಯಕ್ಕೆ ವೈಶಾಖ ಎಂಟ್ರಿ ಕೊಟ್ಟಿದ್ದಾಳೆ. ರಾಮಾಚಾರಿ ಜೊತೆ ಮಾತನಾಡುವುದು ತಿಳಿದು ಹೋಗುತ್ತದೆ ಎಂದು ಚಾರು ಮಾತು ಬದಲಿಸಿದ್ದಾಳೆ.
ಇನ್ನೇನು ಸಾಂಬಾರ್ ಆಗಿ ಹೋಗುತ್ತದೆ ಬೇಳೆ ಹಾಕಿದ್ದೇನೆ ತರಕಾರಿ ಹಾಕಬೇಕು ಎಂದು ವೈಶಾಖಗೆ ಚಳ್ಳೆಹಣ್ಣು ತಿನ್ನಿಸಿದ್ದಾಳೆ. ಆದರೂ ಸಹ ವೈಶಾಖಾಗೆ ಒಂದು ಕಡೆ ಅನುಮಾನ ದಟ್ಟವಾಗುತ್ತಾ ಹೋಗಿದೆ ಇದರ ಹಿಂದೆ ಯಾರದ್ದೋ ಕೈವಾಡವಿದೆ ಅದನ್ನ ನಾನು ಕಂಡು ಹಿಡಿಯಲೇಬೇಕು ಎಂದುಕೊಂಡು ಅಡುಗೆ ಮನೆಯಿಂದ ಹೊರಗೆ ಹೋಗಿದ್ದಾಳೆ. ರಾಮಾಚಾರಿ ಹಾಗೂ ಚಾರು ಇಬ್ಬರು ವೈಶಾಖ ಕೈಗೆ ಸಿಕ್ಕಿ ಬಿದ್ದರೆ ಗತಿ ಅಧೋಗತಿಯಾಗಲಿದೆ.


Click it and Unblock the Notifications











