Ramachari: ಮನೆಯಿಂದ ಹೊರಗೆ ಹೋಗ್ತಾಳಾ ಚಾರು? ವೈಶಾಖಗೆ ಗೊತ್ತಾಗಿ ಹೋಯ್ತಾ ಅಡುಗೆ ಗುಟ್ಟು?

By ಶೃತಿ ಹರೀಶ್ ಗೌಡ

ಚಾರು ನಾನು ನನ್ನ ಗಂಡನ ಮನೆಯಲ್ಲಿ ಉಳಿದುಕೊಳ್ಳಬೇಕು ಎಂದು ಶ್ರದ್ಧಾ ಭಕ್ತಿಯಿಂದ ಅಡುಗೆಯನ್ನ ಮಾಡುತ್ತಾ ಇದ್ದಾಳೆ. ಇದರ ಜೊತೆ ಜೊತೆಗೆ ಗಂಡನ ಜೊತೆ ತುಂಟಾಟವನ್ನು ಮಾತನಾಡುತ್ತಾ ಅಡುಗೆ ಮಾಡುತ್ತಿದ್ದಾಳೆ. ರಾಮಾಚಾರಿ ಅಡುಗೆಯ ಜೊತೆಗೆ ಚಾರುಗೆ ಸಂಸ್ಕಾರವನ್ನು ಹೇಳಿಕೊಡುತ್ತಿದ್ದಾನೆ. ಮನೆಯಲ್ಲಿ ಎಲ್ಲರೂ ಚಾರು ಯಾವ ರೀತಿ ಅಡುಗೆಯನ್ನು ಮಾಡಿ ಬಡಿಸುತ್ತಾಳೆ ಎಂದು ಅಂದುಕೊಂಡಿದ್ದಾರೆ.

ಜಾನಕಿಗಂತೂ ಚಾರು ಶ್ರೀಮಂತರ ಮನೆಯ ಹುಡುಗಿ ಅವಳಿಗೆ ಅಡುಗೆ ಏನೆಲ್ಲಾ ಮಾಡಿ ಅಭ್ಯಾಸ ವಿರುವುದಿಲ್ಲ. ಸುಮ್ಮನೆ ಯಾಕೆ ನೀನು ಈ ರೀತಿಯಾಗಿ ಟಾಸ್ಕ್ ಕೊಟ್ಟೆ ಎಂದು ವೈಶಾಖ ಬಳಿ ಕೇಳಿದ್ದಾರೆ. ಇದಕ್ಕೆ ಅವಳೇ ಚಾಲೆಂಜ್ ಅನ್ನು ಸ್ವೀಕರಿಸಿದ್ದಾಳೆ ನಾನು ಕೊಟ್ಟ ಶಿಕ್ಷೆಯನ್ನ ಅನುಭವಿಸಲೇಬೇಕು. ಈ ಮನೆಯಲ್ಲಿ ಎಲ್ಲರಿಗೂ ಒಂದೇ ನ್ಯಾಯ ಎಂದು ಕಡ್ಡಿ ತುಂಡು ಮಾಡಿದಂತೆ ಮಾತನಾಡಿದ್ದಾಳೆ.

Colors Kannada Ramachari serial Written Update on August 4th episode

ವೈಶಾಖಗೆ ಮಾತ್ರ ಅನುಮಾನ ಬಂದಿದೆ ಬಂದು ಕಾಫಿ ಮಾಡಲು ಬಾರದ ಚಾರು ಈಗ ಹೇಗೆ ಅಡುಗೆ ಮಾಡುತ್ತಿದ್ದಾಳೆ. ಇದರ ಹಿಂದೆ ಯಾರ ಕೈವಾಡವಿದೆ ಎಂದು ಕಂಡುಹಿಡಿಯಬೇಕು ಎಂದು ಕೋದಂಡನ ಬಳಿ ಹೇಳಿದ್ದಾಳೆ. ಇದಕ್ಕೆ ಕೋದಂಡ ನೀನು ಮಾಡಿದ ಪ್ಲಾನ್ ನಿನಗೆ ಉಲ್ಟಾ ಹೊಡೆಯುವ ರೀತಿ ಕಾಣಿಸುತ್ತಿದೆ ನೀನು ಅಂದುಕೊಂಡಿದ್ದು ಯಾವುದು ಸಕ್ಸಸ್ ಆಗೋದಿಲ್ಲ ಎಲ್ಲವೂ ಚಾರುಗೆ ಒಳ್ಳೆಯದನ್ನು ಮಾಡುತ್ತಿದೆ ಎಂದು ಹೇಳಿದ್ದಾನೆ

ಚಾರು ಒಂದು ದಿನವೂ ತಾಯಿಯ ಮನೆಯಲ್ಲಿ ಅಡುಗೆಯನ್ನ ಮಾಡಿರಲಿಲ್ಲ. ಅವಳಿಗೆ ಯಾವ ವಸ್ತು ಎಲ್ಲಿ ಇರುತ್ತದೆ ಎಂಬುದೇ ತಿಳಿದಿರಲಿಲ್ಲ. ಮನೆಯಲ್ಲಿ ಸರ್ವೇಶ ಎಲ್ಲದಕ್ಕೂ ಇದ್ದನು ಅವನೇ ಅಡುಗೆ ಮಾಡಿ ತಂದು ಬಡಿಸುತ್ತಿದ್ದನು. ಮನೆಯವರೆಲ್ಲರೂ ಸಹ ಸರ್ವೇಶನ ಊಟದ ಮೇಲೆ ಡಿಪೆಂಡ್ ಆಗಿದ್ದರು. ಗಂಡನ ಮನೆಗೆ ಬಂದಾಗ ಜಾನಕಿ ಅಡುಗೆ ಮಾಡುತ್ತಿದ್ದರು. ವೈಶಾಖ ಹಾಗೂ ಚಾರು ಇಬ್ಬರು ಒಬ್ಬರಿಗೊಬ್ಬರು ಚಾಲೆಂಜ್ ಮಾಡಿಕೊಂಡಿದ್ದು ಈಗ ಚಾರು ಅಡುಗೆ ಮಾಡುವ ಪರಿಸ್ಥಿತಿ ಬಂದಿದೆ.

ಹೆಂಡತಿಯನ್ನು ಮನೆಯಲ್ಲಿ ಉಳಿಸಿಕೊಂಡು ಅತ್ತಿಗೆ ಕೊಟ್ಟಿರುವ ಸವಾಲಿನಲ್ಲಿ ಗೆಲ್ಲಲೇ ಬೇಕು ಎಂದುಕೊಂಡು ರಾಮಾಚಾರಿ ಚಾರುಗೆ ಅಡುಗೆ ಮಾಡುವುದನ್ನು ಕಲಿಸುತ್ತಿದ್ದಾನೆ. ಮೊಬೈಲ್ ನಲ್ಲಿ ಬ್ಲೂಟೂತ್ ಕನೆಕ್ಟ್ ಮಾಡಿ ಚಾರು ಕೈಯಲ್ಲಿ ಅನ್ನ, ಸಾಂಬಾರ್, ಕೋಸಂಬರಿ ಹಾಗೂ ತರಕಾರಿ ಕೂಟನ್ನು ಮಾಡಿಸಿದ್ದಾನೆ. ಚಾರು ಗಂಡನ ಜೊತೆಗೆ ತುಂಟಾಟದ ಮಾತುಗಳನ್ನ ಆಡುತ್ತಾ ಅಡುಗೆಯನ್ನ ಮಾಡುತ್ತಾ ಇದ್ದಾಳೆ. ಅವಾಗ ಅವಾಗ ವೈಶಾಖ ಎಂಟ್ರಿಯನ್ನು ಕೊಟ್ಟು ಚಾರು ಯಾವ ರೀತಿ ಅಡುಗೆ ಮಾಡುತ್ತಿದ್ದಾಳೆ ಎಂಬುದನ್ನು ನೋಡಿಕೊಂಡು ಹೋಗುತ್ತಿದ್ದಾಳೆ.

ವೈಶಾಖಗೆ ಅನುಮಾನ ದೃಢವಾಗಿದೆ ಯಾಕೆಂದರೆ ಚಾರುಗೆ ಕಾಫಿ ಮಾಡಲು ಬರುತ್ತಿರಲಿಲ್ಲ. ಅದು ಹೇಗೆ ಅಡುಗೆಯನ್ನೆಲ್ಲ ಮಾಡುತ್ತಿದ್ದಾಳೆ ಎಂದುಕೊಂಡು ಪದೇಪದೇ ಅಡುಗೆ ಮನೆಗೆ ಬರುತ್ತಿದ್ದಳು. ಇದೇ ವೇಳೆ ಅಡುಗೆ ಮನೆಗೆ ಬಾರದೆ ಹಿಂದೆ ನಿಂತುಕೊಂಡು ರಾಮಾಚಾರಿ ಆಯ್ತು ಎಂಬ ಪದವನ್ನು ಚಾರು ಬಾಯಿನಿಂದ ಕೇಳಿದೆ ತಡ ಓಡಿ ರಾಮಾಚಾರಿ ರೂಮ್‌ಗೆ ಹೋಗಿದ್ದಾಳೆ. ಇದೇ ವೇಳೆ ರಾಮಾಚಾರಿ ಫೋನ್ ನಲ್ಲಿ ಮಾತನಾಡುತ್ತಿದ್ದು, ರಾಮಾಚಾರಿ ಕೈನಿಂದ ಫೋನ್ ಕಿತ್ತುಕೊಂಡು ಓಡಿ ಬಂದಿದ್ದಾಳೆ.

ಮನೆಯ ಎಲ್ಲರನ್ನ ಒಂದೆಡೆ ಸೇರಿಸಿ ಗಂಡ ಹೆಂಡತಿ ಇಬ್ಬರೂ ನಮಗೆ ಮೋಸವನ್ನು ಮಾಡುತ್ತಿದ್ದಾರೆ. ಮೋಸದಿಂದ ಸವಾಲನ್ನ ಗೆಲ್ಲಲು ಹೊರಟಿದ್ದಾರೆ ಎಂದು ಎಲ್ಲರ ಮುಂದೆ ಹೇಳಿದ್ದಾಳೆ. ರಾಮಾಚಾರಿ ಫೋನ್ ಮೂಲಕ ಚಾರುಗೆ ಹೀಗೆ ಅಡುಗೆ ಮಾಡಬೇಕು ಹಾಗೆ ಅಡುಗೆ ಮಾಡಬೇಕು ಎಂದು ಹೇಳಿಕೊಡುತ್ತಿದ್ದಾನೆ. ಎಲ್ಲರ ಮುಂದೆ ರಾಮಾಚಾರಿ ಹೇಳಿಕೊಡುತ್ತಿದ್ದಾನೆ ಎಂದು ವೈಶಾಖ ಹೇಳಿದಾಗ ಎಲ್ಲರಿಗೂ ಶಾಕ್ ಆಗಿದೆ. ಅಜ್ಜಿ ವೈಶಾಖಗ ಕೈನಿಂದ ತಮ್ಮ ಕೈಗೆ ಫೋನನ್ನು ತೆಗೆದುಕೊಂಡಿದ್ದಾರೆ. ಕೊಡು ನಾನು ಮಾತನಾಡುತ್ತೇನೆ ಎಂದು ಅಜ್ಜಿ ಹೇಳಿದಾಗ ಭಯ ಬೀಳುವ ಸರದಿ ಚಾರುವಿನದ್ದು ಆಗಿದೆ. ಎಲ್ಲರ ಕಣ್ಣು ಚಾರು ಮೇಲೆ ನೆಟ್ಟಿದೆ ಚಾರು ಮನೆಯಿಂದ ಹೊರಗೆ ಹೋಗ್ತಾಳಾ? ವೈಶಾಖ ಪ್ಲಾನ್ಸ್ ಸಕ್ಸಸ್ ಆಗುತ್ತಾ ಎಂಬುದೇ ಕುತೂಹಲಕಾರಿಯಾಗಿದೆ.

More from Filmibeat

English summary
Colors Kannada serial Ramachari here details about charu and Ramachari plan ulta, vaishaka know the truth, Ramachari and charu in trouble
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X