Ramachari: ಚಾರು ಮಾಡಿದ ಅಡುಗೆ ಹಾಳು ಮಾಡಿದ ವೈಶಾಖ! ಮುಂದೇನು ಚಾರು ಗತಿ?
ಚಾರುವನ್ನು ವೈಶಾಖ ಮನೆಯಿಂದ ಓಡಿಸಲು ಅಡುಗೆ ಮಾಡುವ ಟಾಸ್ಕ್ ಅನ್ನು ನೀಡಿದ್ದಳು. ಹೇಗೋ ವೈಶಾಖ ಕೊಟ್ಟ ಟಾಸ್ಕ್‌ನಲ್ಲಿ ರಾಮಾಚಾರಿಯ ಬುದ್ಧಿವಂತಿಕೆಯಿಂದ ಚಾರು ಅಡುಗೆಯನ್ನೆಲ್ಲ ಮಾಡಿ ಮುಗಿಸಿದ್ದಾಳೆ. ಇನ್ನೇನಿದ್ದರೂ ಮನೆಯವರಿಗೆಲ್ಲರಿಗೂ ಸಹ ಚಾರು ಮಾಡಿರುವ ಅಡುಗೆಯನ್ನು ಬಡಿಸುವುದಾಗಿದೆ. ಅಡುಗೆ ಮನೆಯಿಂದ ಹಾಲ್‌ಗೆ ಬಂದ ಚಾರು ಎಲ್ಲರನ್ನೂ ಕೈಕಾಲು ತೊಳೆದುಕೊಂಡು ಬರುವಂತೆ ಹೇಳಿದ್ದಾಳೆ.
ಇದೇ ವೇಳೆ ಜಾನಕಿಯ ಬಳಿ ಅತ್ತೆ ಅಡುಗೆ ಗಮ್ ಎನ್ನುತ್ತಿದೆ ತಾನೇ. ಆಗಿದ್ದರೆ ಅಡಿಗೆ ಚೆನ್ನಾಗಿ ಆಗಿದೆ ಎಂದು ಅರ್ಥ ಅಲ್ವಾ ಎಂದು ಕೇಳಿದ್ದಾಳೆ ಹೌದಮ್ಮ ಎಂದು ಜಾನಕಿ ಹೇಳಿದ್ದಾರೆ. ಇದೆಲ್ಲವನ್ನು ನೋಡುತ್ತಿರುವ ವೈಶಾಖಗೆ ಹೊಟ್ಟೆ ಒಳಗೆ ಬೆಂಕಿ ಬಿದ್ದಂತೆ ಆಗಿದೆ. ನಾನು ಮಾಡಿರುವ ಪ್ಲಾನ್ ನನಗೆ ಉಲ್ಟಾ ಹೊಡೆಯುವ ರೀತಿ ಕಾಣಿಸುತ್ತಿದೆ. ಆದರೆ ನಾನು ಇದಕ್ಕೆ ಬೇರೆಯದ್ದೇ ಪ್ಲಾನ್ ಮಾಡಬೇಕಿದೆ ಎಂದು ವೈಶಾಖ ಅಂದುಕೊಂಡಿದ್ದಾಳೆ.

ಮನೆಯವರೆಲ್ಲರೂ ಹಿತ್ತಿಲ ಕಡೆ ಕೈ ಕಾಲು ತೊಳೆಯಲು ಹೋದರೆ, ಈ ಕಡೆ ಚಾರು ರಾಮಾಚಾರಿ ಯನ್ನು ಊಟಕ್ಕೆ ಕರೆದುಕೊಂಡು ಬರಲು ಹೋಗಿದ್ದಾಳೆ. ಇದೇ ನನಗೆ ಸರಿಯಾದ ಸಮಯ ಎಂದುಕೊಂಡ ವೈಶಾಖ ಕಳ್ಳ ಬೆಕ್ಕಿನಂತೆ ಅಡುಗೆ ಮನೆಯೊಳಗೆ ಎಂಟ್ರಿಯನ್ನು ಕೊಟ್ಟಿದ್ದಾಳೆ. ಚಾರು ಮಾಡಿರುವ ಅಡುಗೆಯನ್ನು ನೋಡಿ ಕೋಪ ಬಂದಿದೆ ಇವಳು ಗೆಲ್ಲಲು ನಾನು ಬಿಡೋದಿಲ್ಲ ಎಂದು ವೈಶಾಖ ಬುಸುಗುಟ್ಟಿದ್ದಾಳೆ.
ಚಾರು ಮಾಡಿರುವ ಅಡುಗೆಗೆ ಅತಿಯಾಗಿ ಉಪ್ಪು ಖಾರ ಎಲ್ಲವನ್ನ ಸುರಿದು ವೈಶಾಖ ಅಡುಗೆಯನ್ನೆಲ್ಲ ಹಾಳು ಮಾಡಿದ್ದಾಳೆ. ಚಾರುಗೆ ಮಾತ್ರ ತಾನು ಅಡುಗೆ ಮಾಡಿ ಗೆದ್ದಿದ್ದೇನೆ ಎಂಬ ಸಂಭ್ರಮ ಮನೆ ಮಾಡಿದೆ. ಎಲ್ಲರೂ ಊಟಕ್ಕೆ ಕುಳಿತಾಗ ಬೈಯುತ್ತಾರೆ ಎಂಬ ಪರಿಜ್ಞಾನ ಇಲ್ಲ ಯಾಕೆಂದರೆ ವೈಶಾಖ ಅಡುಗೆ ಮನೆಗೆ ಹೋದವಳೇ ಎಲ್ಲದಕ್ಕೂ ಸಹ ಉಪ್ಪುಕಾರ ಎಲ್ಲವನ್ನ ಹಾಕಿ ಅಡುಗೆಯ ರುಚಿಯನ್ನು ಕೆಡಿಸಿದ್ದಾಳೆ.
ವೈಶಾಖ ಏನು ಗೊತ್ತಿಲ್ಲದವಳಂತೆ ಮನೆಯ ಒಳಗೆ ಬಂದು ಎಲ್ಲರ ಜೊತೆಗೆ ಊಟಕ್ಕೆ ಕುಳಿತಿದ್ದಾಳೆ. ಇದೆ ವೇಳೆ ಚಾರು ಅತ್ತೆಯ ಬಳಿ ಮಾತನಾಡುವಾಗ ಅಜ್ಜಿ ನೋಡೆ ಇವರಿಬ್ಬರ ಸಂಭ್ರಮವನ್ನು ಎಂದು ಹೇಳಿದ್ದಾರೆ. ಎಲ್ಲರೂ ಊಟಕ್ಕೆ ಕುಳಿತಿದ್ದಾಗ ನಾರಾಯಣ ಆಚಾರ್ಯರು ಸಹ ಮನೆಯ ಒಳಗೆ ಬಂದಿದ್ದಾರೆ. ನಾರಾಯಣ ಆಚಾರ್ಯರು ಬರುವುದನ್ನು ನೋಡಿದ ಜಾನಕಿ ನಿಮ್ಮ ಮಾವನವರ ಬಳಿ ಏನನ್ನು ಮಾತನಾಡದೆ ಸುಮ್ಮನೆ ಊಟ ಬಡಿಸು ಎಂದು ಹೇಳಿದ್ದಾರೆ.
ಚಾರು ಅಡುಗೆ ಮಾಡಿದ್ದು ಎಲ್ಲರಿಗೂ ಎಲೆಯನ್ನ ಹಾಕಿದ್ದಾಳೆ. ಇದೆ ವೇಳೆ ಜಾನಕಿಯ ಬಳಿ ನೀವು ಮಾವನವರಿಗೆ ಮಾತ್ರ ಬಡಿಸಿ ನಾನು ಮನೆಯವರಿಗೆ ಬಡಿಸುತ್ತೇನೆ ಎಂದು ಹೇಳಿದ್ದಾಳೆ. ಇದಕ್ಕೆ ಜಾನಕಿ ಒಪ್ಪಿಗೆಯನ್ನ ಸೂಸಿ ನಾರಾಯಣ ಆಚಾರ್ಯರಿಗೆ ಮೊದಲು ಊಟವನ್ನು ಬಡಿಸಿದ್ದಾರೆ.
ಇದೇ ವೇಳೆ ಚಾರು ಎಲ್ಲರ ಮನಸ್ಸನ್ನು ಗೆಲ್ಲುವ ಸಂಭ್ರಮದಲ್ಲಿ ಇದ್ದರೆ. ವೈಶಾಖ ಮಾತ್ರ ನಾರಾಯಣ ಆಚಾರ್ಯರು ಊಟವನ್ನು ಮಾಡಿದ ತಕ್ಷಣವೇ ಚಾರುಗೆ ಉಗಿಯಬೇಕು ಎಂದು ದೇವರ ಬಳಿ ಪ್ರಾರ್ಥನೆ ಮಾಡುತ್ತಿದ್ದಾಳೆ. ನಾರಾಯಣ ಆಚಾರ್ಯರು ಚಾರು ಮಾಡಿದ ಊಟವನ್ನೆಲ್ಲ ಎಲೆಗೆ ಬಡಿಸಿಕೊಂಡಿದ್ದು ಒಂದು ತುತ್ತು ಬಾಯಿಗೆ ಇಟ್ಟಿದ್ದಾರೆ. ವೈಶಾಖ ಚಿತ್ತವೆಲ್ಲ ನಾರಾಯಣ ಆಚಾರ್ಯರ ಮೇಲೆ ನೆಟ್ಟಿದೆ.
ರಾಮಾಚಾರಿ ಮನೆಯಿಂದ ಎಷ್ಟು ಬೇಗ ನನ್ನ ಮಗಳನ್ನು ಹೊರ ಹಾಕುತ್ತಾರೋ ಎಂದು ಮಾನ್ಯತಾ ಕಾಯ್ದು ಕುಳಿತಿದ್ದಾಳೆ. ಇವತ್ತು ರಾತ್ರಿ ತನಕ ಮಾತ್ರ ಅವಳು ಆ ಮನೆಯಲ್ಲಿ ಇರುತ್ತಾಳೆ. ನಾಳೆ ನನ್ನ ಮನೆಯಲ್ಲಿ ನನ್ನ ಮಗಳು ಇರುತ್ತಾಳೆ ಎಂದು ಮಾನ್ಯತಾ ಖುಷಿಯನ್ನು ಪಟ್ಟಿದ್ದಾಳೆ. ವೈಶಾಖ ನಿಜಕ್ಕೂ ಚಾರುವನ್ನು ಮನೆ ಬಿಟ್ಟು ಓಡಿಸ್ತಾಳ ಅಥವಾ ಚಾರುಗೆ ಜಯ ಸಿಗುತ್ತಾ ಇದೆ ಕುತೂಹಲವನ್ನು ಕೆರಳಿಸಿದೆ.


Click it and Unblock the Notifications











