Ramachari: ಚಾಲೆಂಜ್‌ನಲ್ಲಿ ಗೆದ್ದ ಚಾರು ಸೋತ ವೈಶಾಖ! ಇನ್ಮುಂದೆ ಹುಲಿ - ಕುರಿ ಆಟ ಶುರ!

By ಶೃತಿ ಹರೀಶ್ ಗೌಡ

ಚಾರು ಹಾಗೂ ವೈಶಾಖ ಮಾಡಿಕೊಂಡಿದ್ದ ಚಾಲೆಂಜ್ ನಲ್ಲಿ ಚಾರು ಗೆದ್ದಿದ್ದಾಳೆ. ವೈಶಾಖ ಸೋಲನ್ನ ಕಂಡಿದ್ದು ಇದು ವೈಶಾಖಗೆ ಅರಗಿಸಿಕೊಳ್ಳಲು ಆಗದ ತುತ್ತಾಗಿ ಪರಿಣಮಿಸಿದೆ. ಮನೆಯ ಹೊಸ್ತಿಲಿನ ಬಳಿ ಬಂದಂತಹ ಚಾರು ವೈಶಾಖಳನ್ನು ನೋಡಿ 24 ಗಂಟೆಗೆ ಇನ್ನೂ ಮೂರು ಗಂಟೆ ಬಾಕಿ ಇದೆ ನಾನು ಚಾಲೆಂಜಿನಲ್ಲಿ ಗೆದ್ದಿದ್ದೇನೆ ಎಂದಿದ್ದಾಳೆ. ಇದಕ್ಕೆ ವೈಶಾಖಗೆ ತುಂಬಾ ಬೇಸರವಾಗಿದೆ ಹಾಳಾದವಳು ಊರಿನವರನೆಲ್ಲ ಕಟ್ಟಿಕೊಂಡು ಬಂದು ನನ್ನನ್ನೇ ಸೋಲಿಸಿಬಿಟ್ಟಳು ಎಂದುಕೊಂಡಿದ್ದಾಳೆ.

ಇನ್ನು ಊರಿನ ಮುಖಂಡರು, ಧರ್ಮದರ್ಶಿಗಳು ಎಲ್ಲರೂ ವೈಶಾಖಗೆ ಆರತಿಯನ್ನು ತೆಗೆದುಕೊಂಡು ಬಂದು ಮನೆಗೆ ತುಂಬಿಸಿಕೊಳ್ಳಿ ಎಂದು ಅಂದಿದ್ದಾರೆ. ಇದಕ್ಕೆ ಚಾರು ಸ್ವಲ್ಪ ತಡೆಯಿರಿ ಎಂದು ಹೇಳಿದ್ದಾಳೆ ಈಗ ಏನಾಯಿತು ಎಂದು ಊರಿನವರು ಕೇಳಿದ್ದಕ್ಕೆ ನನ್ನ ಗಂಡನ ಹೆಸರನ್ನೇ ಕೇಳಲಿಲ್ಲವಲ್ಲ ಎಂದು ಹೇಳಿದ್ದಾಳೆ. ಈ ವೇಳೆ ತನ್ನ ಗಂಡನ ಹೆಸರು ಏನು ಎಂದು ಹೇಳುವಂತೆ ಕೇಳಿದ್ದಾರೆ. ಇದಕ್ಕೆ ಚಾರು ಸಾಹಸಸಿಂಹ ವಿಷ್ಣುವರ್ಧನ್ ಅವರು ನಟನೆ ಮಾಡಿರುವ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಇಬ್ಬರು ನಟಿಸಿರುವ ಸಿನಿಮಾ ಎನ್ನೆಲ್ಲಾ ಹೇಳಿದಾಗ ಎಲ್ಲರೂ ಚಪ್ಪಾಳೆ ತಟ್ಟಿದ್ದಾರೆ.

Colors Kannada Ramachari serial Written Update on July 10th episode

ಇನ್ನು ಚಾರು ವೈಶಾಖಳನ್ನು ಅಕ್ಕ ಎಂದು ಕರೆಯುತ್ತಿದ್ದರೆ ನೋಡಪ್ಪ ಅಕ್ಕನ ಮೇಲೆ ಎಷ್ಟು ಮಾರ್ಯದೆ ಗೌರವವಿದೆ ಎಂದು ಚಾರುಲತಾಳನ್ನು ಹೊಗಳಿದ್ದಾರೆ. ಜಾನಕಿಯವರಿಗೆ ರಾಮಾಚಾರಿ ಮನೆ ಒಳಗೆ ಬಂದಿರುವುದೇ ದೊಡ್ಡ ಖುಷಿಯಾಗಿದೆ. ವೈಶಾಖ ಮಾತ್ರ ಇನ್ಮುಂದೆ ಚಾರು ಮುಖವನ್ನು ನೋಡಬೇಕಲ್ಲ ಎಂದು ಕೈಕೈ ಹಿಸುಕಿಕೊಳ್ಳುತ್ತಿದ್ದಾಳೆ . ಹಾಳಾದವಳು ಹೇಳಿದಂತೆ ಮನೆ ಒಳಗೆ ಬಂದು ಬಿಟ್ಟಳು ಎಂದು ಬೈಯ್ಯುತ್ತಿದ್ದಾಳೆ.

ಚಾರು 24 ಗಂಟೆ ಒಳಗೆ ಮನೆಗೆ ಬರುತ್ತೇನೆ ಎಂಬ ವಿಚಾರವನ್ನ ವೈಶಾಖ ನೆನಪಿಸಿಕೊಳ್ಳುತ್ತಾ ಇದ್ದಾಳೆ. ಈ ಚಾರು ಏನನ್ನ ಹೇಳುತ್ತಾಳೆ ಅದನ್ನೇ ಮಾಡುವುದು ಎಂದು ಚಾರು ವೈಶಾಖ ಬಳಿ ಹೇಳಿದ್ದಳು. ಅದರಂತೆ ಈಗ ವೈಶಾಖ ಕೈಯಲ್ಲೇ ಆರತಿಯನ್ನು ಮಾಡಿಸಿಕೊಂಡು ಮನೆಗೆ ಚಾರು ಸೇರಿಕೊಂಡಿದ್ದಾಳೆ. ಸೇರನ್ನು ಫುಟ್ಬಾಲ್ ರೀತಿ ಹೊದ್ದು ಬೆಲ್ಲ ಹೋಗಿ ವೈಶಾಖ ಹಣೆಗೆ ಬಡಿಯುವ ರೀತಿ ಮಾಡಿದ್ದಾಳೆ‌.

ಚಾರು ಸೇರನ್ನು ಹೊದ್ದ ಸ್ಪೀಡ್ ನೋಡಿ ವೈಶಾಖ ಹಣೆ ಉಜ್ಜಿಕೊಳ್ಳುತ್ತಿದ್ದಾರೆ ಜಾನಕಿ ಹಾಗೂ ಶ್ರುತಿ ಇಬ್ಬರು ನಕ್ಕಿದ್ದಾರೆ. ಚಾರು ಹಾಗೂ ರಾಮಾಚಾರಿಗೆ ಜಾನಕಿ ಆಶೀರ್ವಾದವನ್ನು ಮಾಡಿದ್ದಾರೆ ಈ ವೇಳೆ ರಾಮಾಚಾರಿಗೆ ಖುಷಿಯಾಗಿದೆ. ನಂತರ ನಾರಾಯಣ ಆಚಾರ್ಯರ ಬಳಿ ಆಶೀರ್ವಾದ ತೆಗೆದುಕೊಳ್ಳಲು ಬಂದಾಗ ಆಚಾರ್ಯರು ಮನೆಯ ಒಳಗೆ ಹೋಗಿದ್ದಾರೆ.

ಚಾರು ಮನೆಯ ಒಳಗೆ ಬಂದಾಗ ಹಲವಾರು ಫೋನ್ ಕಾಲ್ ಗಳು ಬಂದಿವೆ. ಇದಕ್ಕೆ ನಾನು ಹೊರಗಡೆ ಹೋಗಿ ಮಾತನಾಡುತ್ತೇನೆ ಎಂದು ಹೇಳಿ ಚಾರು ಹೊರಗಡೆ ಹೋಗುವಾಗ ರಾಮಾಚಾರಿ ತಂದೆಯ ಬಳಿ ಮಾತನಾಡಿದ್ದಾನೆ. ಅಪ್ಪ ನನ್ನ ತಪ್ಪನ್ನು ಇಷ್ಟು ಬೇಗ ಕ್ಷಮಿಸುತ್ತೀರಾ ಎಂದುಕೊಂಡಿರಲಿಲ್ಲ. ನಿಮ್ಮ ಹೊಟ್ಟೆಯಲ್ಲಿ ಹುಟ್ಟುವುದಕ್ಕೆ ನಾನು ಪುಣ್ಯ ಮಾಡಿದ್ದೆ ಎಂದಾಗ . ತಪ್ಪನ್ನು ನಾನೇನು ಕ್ಷಮಿಸಲಿಲ್ಲ ಎಂದು ರಾಮಾಚಾರಿಗೆ ಆಚಾರ್ಯರು ಬೈದಿದ್ದಾರೆ. ಕಟ್ಟಿಕೊಂಡು ಬಂದು ನನ್ನ ಗೌರವವನ್ನು ಹಾಳು ಮಾಡಿದ್ದೀಯಾ ಎಂದೆಲ್ಲ ರಾಮಾಚಾರಿಗೆ ಬೈದಿದ್ದಾರೆ.

ಇನ್ನೂ ರೂಮಿನಲ್ಲಿ ಒಬ್ಬಳೇ ವೈಶಾಖ ಮಾತನಾಡಿಕೊಳ್ಳುತ್ತಾ ನಿಂತಿದ್ದಾಳೆ‌. ಅಷ್ಟರಲ್ಲಿ ಅಲ್ಲಿಗೆ ಬಂದ ಕೋದಂಡ ಏನಾಯಿತು ಎಂದು ಕೇಳಿದ್ದಾನೆ. ಇನ್ಮುಂದೆ ಆ ಚಾರು ಮುಖವನ್ನ ನೋಡಿಕೊಂಡು ನಾನು ಕೆಲಸ ಮಾಡಬೇಕು ಎಂದು ವೈಶಾಖ ಕೋದಂಡನ ಬಳಿ ಹೇಳಿದ್ದಾಳೆ. ಇದಕ್ಕೆ ಕೋದಂಡ ನೀನೇ ತಾನೇ ವಿಡಿಯೋವನ್ನು ಎಲ್ಲರಿಗೂ ತೋರಿಸಿದ್ದು ಅವಳು ಯಾರನ್ನಾದರೂ ಮದುವೆ ಮಾಡಿಕೊಂಡು ಅಲ್ಲೆಲ್ಲೋ ಇರುತ್ತಿದ್ದಳು. ಈಗ ನೀನೆ ಮಾಡಿದ್ದು ಎಂದು ಹೇಳಿದ್ದಕ್ಕೆ ವೈಶಾಖ ಕೋಪ ಮಾಡಿಕೊಂಡಿದ್ದು, ಬೇರೆಯ ಪ್ಲ್ಯಾನ್ ಮಾಡುತ್ತಾ ಇದ್ದಾಳೆ.

More from Filmibeat

English summary
Colors Kannada serial Ramachari here details about Ramachari and charu into narayana achar home, vaishaka plan do something, Ramachari was happy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X