Ramachari: ರಾಮಾಚಾರಿ ಮೇಲೆ ಆಚಾರ್ಯರಿಗೆ ಕೆಂಡದಂತ ಕೋಪ ಬಂದಿದ್ಯಾಕೆ?

By ಶೃತಿ ಹರೀಶ್ ಗೌಡ

ನಾರಾಯಣ ಆಚಾರ್ಯರು ರಾಮಾಚಾರಿಯ ಮೇಲೆ ಕೂಗಾಡಿದ್ದಾರೆ. ನೀನು ಜನರನ್ನೆಲ್ಲ ಗುಂಪು ಕಟ್ಟಿಕೊಂಡು ಬಂದು ನನ್ನ ಮಾನ ಮರ್ಯಾದೆಯನ್ನು ತೆಗೆದಿದ್ದೀಯಾ ಎಂದು ಅಂದಿದ್ದಾರೆ. ಜಾನಕಿ ನೋಡು ನಿನ್ನ ಮಗ ಹೊರಗಡೆ ಮಾನವನ್ನು ತೆಗೆದಿದ್ದಾನೆ. ಅದಕ್ಕಾಗಿ ಹೊರಗಡೆ ಮಾನ ಹೋಗಬಾರದು ಎಂದು ಒಳಗಡೆ ಕರೆದುಕೊಂಡು ಬಂದು ಗೌರವ ಉಳಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ರಾಮಾಚಾರಿ ಮಾತನಾಡಲು ಹೋದರೆ ನಿನ್ನ ಬಾಯಲ್ಲಿ ಬರುವುದೆಲ್ಲಾ ಸುಳ್ಳು ಎಂದು ಕೋಪ ಮಾಡಿಕೊಂಡಿದ್ದಾರೆ.

ನಾರಾಯಣ ಆಚಾರ್ಯರು ಯಾಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂಬುದು ಈಗ ರಾಮಾಚಾರಿಗೆ ಗೊತ್ತಾಗಿದೆ. ಚಾರು ಮಾಡಿರುವ ಕಿತಾಪತಿಯಿಂದಾಗಿ ನನ್ನ ಅಪ್ಪನಿಗೆ ಇನ್ನಷ್ಟು ಕೋಪ ಬಂದಿದೆ ಎಂದು ಕೊಂಡಿದ್ದಾನೆ. ಇದೇ ವೇಳೆ ಚಾರು ಬಳಿ ಹೋದಂತಹ ರಾಮಾಚಾರಿ ನೋಡಿ ಮೇಡಂ ಎಂತಹ ಕೆಲಸ ಮಾಡಿ ಬಿಟ್ಟಿರಿ. ನೀವು ಮಾಡಿದ ಕಿತಾಪತಿಯಿಂದಾಗಿ ನನ್ನ ತಂದೆ ನನ್ನ ಮೇಲೆ ಮತ್ತಷ್ಟು ಕೋಪವನ್ನು ಮಾಡಿಕೊಂಡಿದ್ದಾರೆ ಎಂದು ಅಂದಿದ್ದಾನೆ.

Colors Kannada Ramachari

ಅಯ್ಯೋ ರಾಮಾಚಾರಿ ನಾನೇನು ಮಾಡಿದೆ ಮನೆಯ ಒಳಗೆ ಬಂದಿದ್ದೇವೆ ಇದರಲ್ಲಿ ಒಳ್ಳೆಯದೇ ಆಗಿದೆ ತಪ್ಪೇನಿದೆ ಎಂದು ಹೇಳಿದ್ದಾಳೆ. ನಾವು ನ್ಯಾಯ ಪಂಚಾಯಿತಿಯನ್ನ ಮಾಡಿಸಿ ಮನೆಯೊಳಗೆ ಬಂದಿದ್ದೇವೆ. ಅವರ ಪ್ರೀತಿ ವಿಶ್ವಾಸವನ್ನ ಗಳಿಸಿ ಅಲ್ಲ ಎಂದು ರಾಮಾಚಾರಿ ಆಚಾರಿ ಚಾರು ಬಳಿ ಹೇಳಿದ್ದಾನೆ. ಇದಕ್ಕೆ ನಾನು ನೀವಿಬ್ಬರೂ ಒಂದಾಗುವಂತೆ ಬೇರೆ ಏನಾದರೂ ಮಾಡುತ್ತೇನೆ ಎಂದು ಚಾರು ಹೇಳಿದ್ದಾಳೆ. ಕೈಮುಗಿಯುತ್ತೇನೆ ಮೇಡಂ ಇಷ್ಟೆ ಸಾಕು ಇನ್ಮುಂದೆ ನೀವು ಏನನ್ನು ಮಾಡುವುದು ಬೇಡ ಎಂದು ರಾಮಾಚಾರಿ ಚಾರುಗೆ ಬೈದಿದ್ದಾನೆ.

ಚಾರು ವೈಶಾಖಳ ಕಾಲು ಎಳೆದಿದ್ದಾಳೆ ಅಕ್ಕ ತುಂಬಾ ಥ್ಯಾಂಕ್ಸ್ ಪಾರ್ಟಿ ಕೊಡಿಸಲ್ವಾ ಎಂದೆಲ್ಲಾ ಕೇಳಿದ್ದಾಳೆ. ನಾನು ಯಾಕೆ ಪಾರ್ಟಿಯನ್ನು ಕೊಡಿಸಬೇಕು ಎಂದು ವೈಶಾಖ ಕೇಳಿದ್ದಾಳೆ. ನಾನು ನೀನು ಮಾಡಿದ ಚಾಲೆಂಜ್ ನಲ್ಲಿ ಗೆದ್ದಿದ್ದೇನೆ ಇದಕ್ಕೆ ಪಾರ್ಟಿ ಯಾವಾಗ ಕೊಡಿಸುತ್ತೀಯಾ ಎಂದು ಕೇಳಿದ್ದಾಳೆ. ನಿನ್ನ ಆಶೀರ್ವಾದ ಸದಾಕಾಲವೂ ನನ್ನ ಮೇಲೆ‌ ಇರಲಿ ಹೀಗೆ ನಾನು ಹೀಗೆ ಗೆಲ್ಲುವಂತೆ ಆಶೀರ್ವಾದ ಮಾಡು ಎಂದು ಕೇಳಿದ್ದಾಳೆ.

ಇದೇ ವೇಳೆ ವೈಶಾಖಗೆ ಹಣೆ ಮೇಲೆ ಆಗಿರುವ ಗಾಯದ ಬಗ್ಗೆಯೂ ಸಹ ಕೇಳಿದ್ದಾಳೆ. ಇದನ್ನು ನೀನೇ ಮಾಡಿದ್ದು ಜೋರಾಗಿ ಸೇರನ್ನು ಒದೆಯುವಾಗ ತಲೆಗೆ ಬೆಲ್ಲ ತಾಕಿ ಗಾಯವಾಗಿದೆ ಎಂದು ಹೇಳಿದ್ದಾಳೆ. ಇದಕ್ಕೆ ಚಾರುಗೆ ತುಂಬಾ ‌ನಗು ಬಂದಿದೆ ವೈಶಾಖ ಮಾತ್ರ ಹಾಳಾದವಳು ಎಂದು ಬೈದುಕೊಂಡಿದ್ದಾಳೆ.

ಶರ್ಮೀಳಾ ಮಗಳು ಮನೆಗೆ ಬಂದಿದ್ದು ಚಾರು ಮದುವೆ ಮುರಿದು ಹೋದ ಬಗ್ಗೆ ಶರ್ಮೀಳಾ ಬಳಿಯಲ್ಲಿ ಹೇಳಿದ್ದಾಳೆ. ಇದನೆಲ್ಲ ಕೇಳಿಸಿಕೊಂಡ ಮಾನ್ಯತಾ ಚನ್ನಾಗಿ ಬೈದಿದ್ದಾಳೆ. ನಿನಗೆ ಹಾಗೂ ನಿಮ್ಮ ಅಮ್ಮನಿಗೆ ತುಂಬಾ ಖುಷಿಯಾಗಿರಬೇಕು ಅಲ್ವ ಎಂದಿದ್ದಾಳೆ. ನನ್ನ ಮಗಳ ಮದುವೆ ಮುರಿಯಲು ಯಾವ ದೇವರ ಬಳಿ ಹರಕೆಯನ್ನು ಕಟ್ಟಿಕೊಂಡಿದ್ರಿ ಎಂದು ಅಂಗಿಸಿದ್ದಾಳೆ.

ದೊಡ್ಡಮ್ಮ ನಮಗೂ ಅಕ್ಕನ ಮದುವೆ ಮುರಿದು ಬಿದ್ದ ಬಗ್ಗೆ ಬಹಳ ಬೇಸರವಿದೆ ಎಂದಿದ್ದಾಳೆ. ನನ್ನ ಅಳಿಯ ವಿಹಾನ್‌ನನ್ನು ಬುಟ್ಟಿಗೆ ಹಾಕಿಕೊಂಡು ಮದುವೆಯಾಗಲು ನೋಡುತ್ತಿರುವ ನಿನ್ನ ಮದುವೆ ಯಾವುದೇ ಕಾರಣಕ್ಕೂ ನಡೆಯಲು ನಾನು ಬಿಡೋದಿಲ್ಲ ಎಂದು ಮಾನ್ಯತಾ ಶರ್ಮೀಳಾ ಮಗಳ ಬಳಿ‌ ಹೇಳಿದ್ದಾಳೆ.

ಬಬ್ಲು ಸಾರ್ ಚಾರು ಹಾಗೂ ರಾಮಾಚಾರಿ ಮನೆಯಿಂದ ಹೊರಗೆ ಇದ್ದಾರೆ ಎಂದು ತಿಳಿದು ಚಾರುಗೆ ಫೋನ್ ಮಾಡಿದ್ದಾರೆ. ಈ ವೇಳೆ ಚಾರು ಬಬ್ಲು ಸಾರ್‌ಗೆ ಬೈದಿದ್ದಾಳೆ. ನನ್ನ ಮಾವ ದೇವರಂತಹ ಮನುಷ್ಯ ನಾನು ಸೇರು ಒದ್ದು ಒಳಗೆ ಹೋಗಿದ್ದಾನೆ ಎಂದು ಚಾರು‌ ಬಬ್ಲು ಸಾರ್‌ಗೆ ಬೈದಿದ್ದಾಳೆ.

More from Filmibeat

English summary
Colors Kannada serial Ramachari here details about charu plan successful but narayana achar again misunderstood about Ramachari
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X