Ramachari: ಅಪ್ಪನ ಕ್ಷಮೆಗಾಗಿ ರಾಮಾಚಾರಿ ಉಪವಾಸ: ಚಾಡಿ ಹೇಳಿದ ವೈಶಾಖಗೆ ಚಾರು ಕ್ಲಾಸ್!
ರಾಮಾಚಾರಿ ನಾರಾಯಣ ಆಚಾರ್ಯರ ಕ್ಷಮೆಗಾಗಿ ಕಾಯುತ್ತಾ ಇದ್ದಾನೆ. ಆದರೆ ನಾರಾಯಣ ಆಚಾರ್ಯರು ನನ್ನ ಮಗ ನನ್ನ ಗೌರವವನ್ನು ಹಾಳು ಮಾಡಿ ಬಿಟ್ಟಿದ್ದಾನೆ ಎಂದುಕೊಂಡು ಅವನಿಗೆ ಕ್ಷಮೆಯನ್ನು ನೀಡುತ್ತಿಲ್ಲ. ಅದಕ್ಕೂ ಮಿಗಿಲಾಗಿ ನನ್ನ ತಂಗಿ ನನ್ನ ಮನೆಗೆ ಶಾಪವನ್ನು ಹಾಕಿಬಿಟ್ಟಳಲ್ಲ ಎಂಬ ನೋವು ನಾರಾಯಣ ಆಚಾರ್ಯರಿಗೆ ಕಾಡುತ್ತಿದೆ.ವೈಶಾಖಗೂ ಸಹ ನಾರಾಯಣ ಆಚಾರ್ಯರು ರಾಮಾಚಾರಿ ಹಾಗೂ ಚಾರುವನ್ನು ಮನೆಗೆ ಸೇರಿಸಿಕೊಂಡಿದ್ದು ಸ್ವಲ್ಪವೂ ಸಹ ಇಷ್ಟವಿಲ್ಲ.
ನನ್ನ ಗಂಡನೇ ಈ ಮನೆಗೆ ರಾಜ ಆಗಬೇಕಾಗಿತ್ತು, ಅದೆಲ್ಲವನ್ನು ಸಹ ಈ ಚಾರು ತಪ್ಪಿಸಿ ಬಿಟ್ಟಳು ಎಂದುಕೊಂಡು ಕೊರಗುತ್ತಿದ್ದಾಳೆ ಇದಕ್ಕೆ ಏನಾದರೂ ಒಂದು ಪ್ಲಾನ್ ಮಾಡಬೇಕು ಎಂದುಕೊಂಡು ಯೋಚನೆಯನ್ನ ಮಾಡಿದ್ದಾಳೆ. ಚಾರು ಮಾತ್ರ ನನ್ನಿಂದಲೇ ರಾಮಾಚಾರಿ ಈ ರೀತಿ ವನವಾಸ ಪಡುವಂತೆ ಆಗಿದೆ ಅದಕ್ಕಾಗಿ ಏನಾದರೂ ಮಾಡಿ ಅಪ್ಪ-ಮಗನನ್ನ ಒಂದು ಮಾಡಬೇಕು ಎಂದುಕೊಂಡಿದ್ದಾಳೆ.

ನಾರಾಯಣ ಆಚಾರ್ಯರು ಮನೆಯಲ್ಲಿರುವವರಿಗೆ ಎಲ್ಲರಿಗೂ ಸಹ ರಾಮಾಚಾರಿಯ ಜೊತೆ ಮಾತನಾಡಬಾರದು ಎಂದು ಹೇಳಿದ್ದಾರೆ. ಇನ್ನು ಮೊದಲಿನಿಂದಲೂ ಚಾರು ಕಂಡರೆ ಆಗದ ಮನೆಯವರು ರಾಮಾಚಾರಿಯಿಂದಲೂ ಸಹ ಅಂತರವನ್ನ ಕಾಯ್ದುಕೊಂಡಿದ್ದಾರೆ. ಚಾರು ಮನೆಯಲ್ಲಿ ಮಾತನಾಡಲು ಹೋದರೆ ಅಲ್ಲಿಂದ ಎಲ್ಲರೂ ಸಹ ಕಾಲು ಕೀಳುತ್ತಿದ್ದಾರೆ. ವೈಶಾಖ ಮಾತ್ರ ಚಾರುವಿನಿಂದ ಅಂತರವನ್ನ ಕಾಯ್ದುಕೊಳ್ಳುತ್ತಿದ್ದಾಳೆ.
ಮನೆಯಲ್ಲಿರುವವರೆಲ್ಲರನ್ನು ಜಾನಕಿ ಊಟಕ್ಕೆ ಕರೆದಿದ್ದಾರೆ ಈ ವೇಳೆ ರಾಮಾಚಾರಿ ಮತ್ತು ಚಾರುವನ್ನು ಮಾತ್ರ ಕರೆದಿಲ್ಲ. ಚಾರು ಆಗಿದ್ದರೂ ಸಹ ಬಾ ನಾವಿಬ್ಬರು ಊಟಕ್ಕೆ ಹೋಗೋಣ ನಾವು ಮನೆಯವರೇ ಅಲ್ಲವೇ. ಕರೆಯದಿದ್ದರೂ ನಾವು ಊಟಕ್ಕೆ ಹೋಗಬಹುದು ಎಂದಿದ್ದಾಳೆ. ಹೀಗೆ ಆದರೆ ಎದುರು ಬದಿರು ಕುಳಿತುಕೊಂಡಾಗ ಮನಸ್ತಾಪ ದೂರವಾಗುತ್ತದೆ ಎಂದು ಅಂದಿದ್ದಾಳೆ.
ರಾಮಾಚಾರಿ ಹಾಗೂ ಚಾರು ಇಬ್ಬರು ಊಟಕ್ಕೆ ಕುಳಿತಾಗ ನಾರಾಯಣ ಆಚಾರ್ಯರು ಊಟದಿಂದ ಅರ್ಧಕ್ಕೆ ಮೇಲೆ ಎದ್ದಿದ್ದಾರೆ. ಈ ವೇಳೆ ರಾಮಾಚಾರಿ ತಾನೇ ಮೇಲೆದ್ದು ಅಪ್ಪ ನೀವು ಊಟ ಮಾಡಿ ಊಟ ಬಿಡುವಂತಹ ತಪ್ಪನ್ನು ನಾನು ಮಾಡಿದ್ದೇನೆ ಎಂದಿದ್ದಾನೆ. ಮಾತು ಕೊಟ್ಟು ಉಳಿಸಿಕೊಳ್ಳದವರ ಮುಂದೆ ಊಟ ಮಾಡಿದರೆ ಅದು ವಿಷವಾಗುತ್ತದೆ ಎಂದು ರಾಮಾಚಾರಿಗೆ ನಾರಾಯಣ ಆಚಾರ್ಯರು ಬೈದಿದ್ದಾರೆ. ನಾರಾಯಣ ಆಚಾರ್ಯರ ಮಾತುಗಳನ್ನ ಕೇಳಿಸಿಕೊಂಡ ವೈಶಾಖಗೆ ಮಾತ್ರ ತುಂಬಾ ಖುಷಿಯಾಗಿದೆ.
ಅಪ್ಪನ ಕ್ಷಮೆಗಾಗಿ ರಾಮಾಚಾರಿ ಊಟವನ್ನು ಮಾಡುತ್ತಿಲ್ಲ ಉಪವಾಸದಿಂದಲೇ ಮಲಗಿದ್ದಾನೆ. ಇನ್ನು ಚಾರು ತೆಗೆದುಕೋ ಅತ್ತೆ ನಮಗೆ ಊಟವನ್ನು ಕೊಟ್ಟಿದ್ದಾರೆ ಎಂದಾಗಲು ಸಹ ಈ ಮನೆಯಲ್ಲಿ ಅಪ್ಪ ನನ್ನನ್ನ ಕ್ಷಮಿಸದೆ ಹೋದಲ್ಲಿ ನಾನು ಊಟವನ್ನು ಮಾಡುವುದಿಲ್ಲ ಲ. ಅಪ್ಪ ಕ್ಷಮಿಸಿದಾಗಲೇ ನಾನು ಊಟ ಮಾಡುತ್ತೇನೆ ಎಂದು ಚಾರು ಅಷ್ಟು ಕರೆದರೂ ಊಟ ಮಾಡದೆ ಮಲಗಿದ್ದಾನೆ. ಇನ್ನು ಗಂಡ ಊಟ ಮಾಡಲಿಲ್ಲ ಎಂದು ಚಾರು ಸಹ ಉಪವಾಸದಿಂದಲೇ ಮಲಗಿದ್ದಾಳೆ.
ನಾರಾಯಣ ಆಚಾರ್ಯರ ಮುಂದೆ ವೈಶಾಖ ಜಾನಕಿ ಮೇಲೆ ಚಾಡಿಯನ್ನು ಹೇಳುತ್ತಿದ್ದಾಳೆ. ಮಗನ ಮೇಲೆ ಮಮಕಾರವನ್ನು ಹೊಂದಿರುವ ಅತ್ತೆ ಊಟವನ್ನು ಕೊಟ್ಟಿದ್ದಾರೆ ಎಂದು ವೈಶಾಖ ನಾರಾಯಣ್ ಆಚಾರ್ಯರ ಮುಂದೆ ಹೇಳಿದ್ದಾಳೆ. ಅಷ್ಟರಲ್ಲಿ ಎಲ್ಲರೂ ಇರುವ ಜಾಗಕ್ಕೆ ಪಾತ್ರೆಗಳನ್ನು ತೆಗೆದುಕೊಂಡು ಬಂದ ಚಾರು. ನನ್ನ ಗಂಡ ಏನು ಊಟ ಮಾಡಿಲ್ಲ ಅತ್ತೆಯ ಮೇಲೆ ಯಾಕೆ ಚಾಡಿ ಹೇಳಿ ಮಾವನವರಿಂದ ಬೈಯಸುತ್ತೀಯಾ ಅಕ್ಕ ಎಂದಿದ್ದಾಳೆ.
ನನ್ನ ಗಂಡ ಅಪ್ಪನ ಕ್ಷಮೆಗಾಗಿ ಉಪವಾಸವನ್ನು ಮಾಡಿದ್ದಾರೆ ಹೋಟೆಲ್‌ನಲ್ಲೂ ಸಹ ತಿನ್ನುವುದಿಲ್ಲ ಎಂದಿದ್ದಾರೆ. ನಾನು ನಾರಾಯಣ ಆಚಾರ್ಯರ ಸೊಸೆ ನನ್ನ ಗಂಡ ಊಟ ಮಾಡದ ಹೊರೆತು ನಾನು ಸಹ ಮಾಡುವುದಿಲ್ಲ ಎಂದು ನಾರಾಯಣ ಆಚಾರ್ಯರ ಮುಂದೆ ಚಾರು ಹೇಳಿದ್ದಾಳೆ. ಈ ವೇಳೆ ರಾಮಾಚಾರಿ ಆಫೀಸ್ ಗೆ ಹೊರಡುವ ವೇಳೆ ತಾಯಿಯ ಆಶೀರ್ವಾದ ಹಾಗೂ ಅಜ್ಜಿಯ ಆಶೀರ್ವಾದವನ್ನು ಪಡೆದಿದ್ದಾನೆ .ನಾರಾಯಣ ಆಚಾರ್ಯರ ಬಳಿ ಹೋದಾಗ ಆಚಾರ್ಯರು ಆಶೀರ್ವಾದವನ್ನು ಮಾಡದೆ ಮನೆಯೊಳಗೆ ಹೋಗಿದ್ದಾರೆ. ಚಾರುಗೆ ಯಾರ ಜೊತೆಯೂ ಜಗಳ ಮಾಡಿಕೊಳ್ಳದಂತೆ ರಾಮಾಚಾರಿ ಹೇಳಿದ್ದಾನೆ.


Click it and Unblock the Notifications











