Ramachari: ರಾಮಾಚಾರಿ ಹಸಿವಿಗೆ ಮುಕ್ತಿ..?! ಮಗ ಸೊಸೆಯನ್ನು ಊಟಕ್ಕೆ ಕರೆದ ಆಚಾರ್ಯರು

By ಶೃತಿ ಹರೀಶ್ ಗೌಡ

ನಮ್ಮ ಮಾವನವರ ಮನಸ್ಸು ಯಾವುದೇ ಕಾರಣಕ್ಕೂ ಪರಿವರ್ತನೆ ಆಗುವುದಿಲ್ಲ ಎಂದು ವೈಶಾಖ ಅಂದು ಕೊಂಡಿದ್ದಾಳೆ. ಈ ಜನ್ಮದಲ್ಲಿ ಇವರಿಗೆ ಊಟ ತಿನ್ನುವ ಯೋಗ ಈ ಮನೆಯಲ್ಲಿ ಸಿಗೋದಿಲ್ಲ ಎಂದು ಮನಸಿನಲ್ಲಿ ಎಂದು ಯೋಚಿಸುತ್ತಿದ್ದಳು. ಆಫೀಸಿನಲ್ಲಿ ಬಬ್ಲು ಸರ್ ರಾಮಾಚಾರಿಯನ್ನು ಊಟಕ್ಕೆ ಕರೆದಿದ್ದಾರೆ. ಈ ವೇಳೆ ರಾಮಾಚಾರಿ ಸರ್ ನಾನು ಊಟ ತಂದಿಲ್ಲ ಎಂದಿದ್ದಾನೆ.

ಬಬ್ಲು ಏನು ಹೆಂಡತಿ ಊಟವನ್ನು ತರುತ್ತಾಳಾ ಎಂದೆಲ್ಲ ರೇಗಿಸಿದ್ದಾರೆ. ಆ ರೀತಿ ಏನು ಇಲ್ಲ ಸರ್ ನಮ್ಮ ನಡುವೆ ನೀವು ಅಂದುಕೊಂಡಿರುವ ರೀತಿ ಏನು ಇಲ್ಲ ಎಂದು ರಾಮಾಚಾರಿ ಬಬ್ಲು ಸರ್ ಮೇಲೆ ರೇಗಾಡಿದ್ದಾನೆ. ಇದಕ್ಕೆ ಬಹುಶಃ ಹೋಗಲಿ ನೀನು ನನ್ನ ಜೊತೆ ಊಟಕ್ಕೆ ಬಾ ನಾನೇ ತಂದಿದ್ದೇನೆ ಎಂದು ಕರೆದರೂ ಸಹ ಊಟಕ್ಕೆ ಹೋಗಿಲ್ಲ.

 Colors Kannada Ramachari serial Written Update on july 14th episode

ಚಾರು ಮಾತ್ರ ಹಸಿವಿನಿಂದ ಕಂಗಾಲಾಗಿ ಹೋಗಿದ್ದಾಳೆ. ಯಾಕೆಂದರೆ ಶ್ರೀಮಂತರ ಮನೆಯ ಹುಡುಗಿ, ತನಗೆ ಬೇಕಾದ ರೀತಿಯಲ್ಲಿ ಇದ್ದಳು. ಈಗ ರಾಮಾಚಾರಿ ಊಟ ಮಾಡದೇ ತಾನು ಮಾಡೋದಿಲ್ಲ ಎಂದು ಶಪಥ ಮಾಡಿದ್ದಾಳೆ. ಈ ನಡುವೆ ಚಾರುಗೆ ಹಸಿವು ಹೆಚ್ಚಾಗಿದ್ದು ರಾಮಾಚಾರಿಗೆ ಫೋನ್ ಮಾಡಿದ್ದಾಳೆ.

ಊಟ ತೆಗೆದುಕೊಂಡು ಬಂದ ರಾಮಾಚಾರಿ

ಈ ಮೊದಲೇ ರಾಮಾಚಾರಿ ಚಾರುಗೆ ಹೇಳಿದ್ದ ಎಷ್ಟೇ ಕಷ್ಟ ಬಂದರೂ ಸಹ ತಾಳಿ ಕಟ್ಟಿದ್ದೇನೆ, ನಿಮ್ಮ ಜೊತೆಗೆ ನಾನು ಇದ್ದೇ ಇರುತ್ತೇನೆ ಎಂದು. ಹಾಗೆಯೇ ನಡೆದುಕೊಂಡಿದ್ದಾನೆ. ಚಾರು ನನಗೆ ಬಹಳ ಹಸಿವಾಗುತ್ತಿದೆ ದಯವಿಟ್ಟು ಬೇಗ ಏನಾದರೂ ತೆಗೆದುಕೊಂಡು ಬಾ ಎಂದಿದ್ದಾಳೆ.‌ ಈ ವೇಳೆ ಹೋಟೆಲ್‌ನಿಂದ ಊಟ ತಂದಿರುವ ರಾಮಾಚಾರಿ ಮನೆಯ ಜಗುಲಿಯಲ್ಲಿ ಇಟ್ಟು ಬಂದಿದ್ದಾನೆ.

 Colors Kannada Ramachari serial Written Update on july 14th episode

ಸೀದಾ ರೂಮಿಗೆ ಬಂದವನೇ ಚಾರುವನ್ನು ಎಬ್ಬಿಸಿ ಕೊಂಡು ಊಟ ತಂದಿದ್ದೇನೆ ಬನ್ನಿ‌ ಎಂದಿದ್ದಾನೆ. ಚಾರು ಇಲ್ಲೇ ಕೊಡು ಎಂದಾಗ ನಾವ್ಯಾರು ಹೊರಗೆ ತಂದ ಊಟವನ್ನು ಮನೆಯ ಒಳಗೆ ತಂದು ತಿನ್ನುವುದಿಲ್ಲ ಎಂದು ಹೇಳಿದ್ದಾನೆ. ಮನೆಯ ಹೊರಗಡೆ ಕರೆದುಕೊಂಡು ಬಂದ ರಾಮಾಚಾರಿತ ಚಾರು ನೀನು ತಿನ್ನು ರಾಮಾಚಾರಿ ಎಂದಿದ್ದಾಳೆ.‌ ಇದಕ್ಕೆ ನಾನು ತಿನ್ನೋದಿಲ್ಲ ನನಗೆ ಉಪವಾಸವಿದ್ದು ಅಭ್ಯಾಸವಿದೆ.‌ ನಿಮಗೆ ಉಪವಾಸ ಇದ್ದು ಅಭ್ಯಾಸವಿಲ್ಲ ಎಂದಾಗಲೂ ಸಹ ಚಾರು ನನಗೂ ಊಟ ಬೇಡ ಎಂದು ನಿರಾಕರಿಸಿದ್ದಾಳೆ.

ರಾಮಾಚಾರಿ ಮೇಲೆ ವೈಶಾಖ ಕೊಂಕು

ಇನ್ನು ರಾಮಾಚಾರಿ, ಚಾರು ಹಸಿವಿನಿಂದ ಮಲಗಿರುವುದನ್ನು ನೋಡಿ ಓಡಿ ಹೋದಾಗ ಅಲ್ಲೇ ಇದ್ದ ವೈಶಾಖ ಈ ರಾಮಾಚಾರಿಗೆ ನಾವು ಯಾರು ಕಾಣೋದಿಲ್ಲ ಎಂದಿದ್ದಾಳೆ. ಅಲ್ಲೇ ಇದ್ದ ಅಜ್ಜಿ ನಿನ್ನ ಗಂಡ ಏನು ಮಾಡಿದ್ದು ಎಂದು ಕೇಳಿದ್ದಾರೆ. ಇದಕ್ಕೆ ವೈಶಾಖ ನನ್ನ ಬುಡಕ್ಕೆ ಬರ್ತೀರಾ ಎಂದು ಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದ್ದಾಳೆ.

ಕಾಲ ಕೆಟ್ಟು ಹೋಯಿತು

ರಾಮಾಚಾರಿ, ಚಾರು ಹೆಗಲ ಮೇಲೆ ಕೈಹಾಕಿಕೊಂಡು ಹೊರಗೆ ಕರೆದುಕೊಂಡು ಹೋಗುವಾಗ ಕಾಲ ಕೆಟ್ಟು ಹೋಯ್ತು ಮನೆಯಲ್ಲಿ ಹಿರಿಯರು ಇದ್ದಾರೆ ಎಂಬ ಜ್ಞಾನ ಸಹ ಇಲ್ಲ ಎಂದು ಅಜ್ಜಿ ಬೈದುಕೊಂಡಿದ್ದಾರೆ. ಇನ್ನೂ ಏನೇನು ಈ‌ ಕಣ್ಣಲ್ಲಿ ನೋಡಬೇಕೋ ಕಾಣೆ ಎಂದು ಹೇಳಿದ್ದಾರೆ. ಇದ್ಯಾವುದನ್ನು ತಲೆಗೆ ಹಾಕಿಕೊಳ್ಳದ ರಾಮಾಚಾರಿ, ಚಾರುವನ್ನು ಕರೆದುಕೊಂಡು ಹೊರಗೆ ಹೋಗಿದ್ದಾನೆ.

ತಂದೆ ಧರ್ಮ ಪಾಲಿಸಿದ ಆಚಾರ್ಯರು

ರಾಮಾಚಾರಿ, ಚಾರುವಿನ ಮೇಲೆ‌ ಕಾಳಜಿ ತೋರುವ ಮೂಲಕ ಸತಿಧರ್ಮ ಪಾಲಿಸಿದ್ದಾನೆ.‌ ಹಾವು ಮುಂಗುಸಿ ತರ ಆಡುತ್ತಿದ್ದವರು ಗಂಡ ಹೆಂಡತಿಯಾಗಿ‌ ಸಂಸಾರ ಮಾಡುತ್ತಿದ್ದಾರೆ. ಚಾರು ಮೇಲೆ ಯಾವುದೇ ಭಾವನೆ ಇಲ್ಲದೇ ಇದ್ದರು ಸಹ‌ ರಾಮಾಚಾರಿ‌ ತನ್ನ ಧರ್ಮವನ್ನು ಪಾಲಿಸಿದ್ದಾನೆ. ನಾರಾಯಣ ಆಚಾರ್ಯರು ಮಗ ಹಾಗೂ ಸೊಸೆ ಊಟಕ್ಕೆ ಕರೆದು ಮನಸನ್ನು ಬದಲಾಯಿಸಿಕೊಂಡಿದ್ದಾರೆ. ಈ ಬದಲಾವಣೆ ನೋಡಿದ ವೈಶಾಖ ಬಹಳ ಕೋಪಗೊಂಡಿದ್ದಾಳೆ.

More from Filmibeat

English summary
Colors Kannada Ramachari serial Written Update on july 14th episode. here is details about Charulatha Changing Narayana Achar thinking. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X