Ramachari: ವೈಶಾಖಗೆ ಹೆಚ್ಚಾಯ್ತು ಚಾರು ಮೇಲೆ ದ್ವೇಷ: ರಾಮಾಚಾರಿ ಮೇಲೆ ಆಚಾರ್ಯರ ಮುನಿಸು

By ಶೃತಿ ಹರೀಶ್ ಗೌಡ

ಚಾರು ಕೊನೆಗೂ ಆಚಾರ್ಯರ ಮನಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾಳೆ. ಚಾರು ಮತ್ತು ರಾಮಾಚಾರಿಯನ್ನ ವೈಶಾಖ ನಿಮಗೆ ಈ ಮನೆಯಲ್ಲಿ ಊಟ ಮಾಡುವ ಯೋಗವಿಲ್ಲ ನಿಮಗೆ ಉಪವಾಸವೇ ಗತಿ ಎಂದು ಹಂಗಿಸಿ ಹೋಗಿದ್ದಳು. ವೈಶಾಖ ಊಟಕ್ಕೆ ಹೋದ ಸಂದರ್ಭದಲ್ಲಿ ನಾರಾಯಣ ಆಚಾರ್ಯರು ಅವರಿಬ್ಬರನ್ನು ಊಟಕ್ಕೆ ಕರೆಯಿರಿ ಎಂದು ಹೇಳಿದ್ದಾರೆ. ಯಾರನ್ನು ಎಂದು ವೈಶಾಖ ಕೇಳಿದ್ದಾಳೆ, ಈ ವೇಳೆ ರಾಮಾಚಾರಿ ಹಾಗೂ ಆಕೆಯ ಹೆಂಡತಿ ಚಾರುವನ್ನ ಊಟಕ್ಕೆ ಕರೆಯಿರಿ ಎಂದಿದ್ದಾರೆ.

ಚಾರು ಹಾಗೂ ನಾರಾಯಣ ಆಚಾರ್ಯರ ಬಳಿ‌ ಬಂದ ವೈಶಾಖ ಮಾವ ನಿಮ್ಮಿಬ್ಬರನ್ನು ಊಟಕ್ಕೆ ಬರ ಹೇಳಿದ್ದಾರೆ ಬನ್ನಿ ಎಂದು ಕರೆದಿದ್ದಾಳೆ. ವೈಶಾಖ ಹೇಳಿದ ಮಾತನ್ನು ಕೇಳಿದ ರಾಮಾಚಾರಿಗೆ ಒಮ್ಮೆ ನಂಬಲೇ ಆಗಲಿಲ್ಲ.‌ ರಾಮಾಚಾರಿಯ ಕೈ ಹಿಡಿದುಕೊಂಡು ಚಾರು ಮನೆಯ ಒಳಗೆ ಬಂದಿದ್ದಾಳೆ. ವೈಶಾಖಗೆ ಮಾತ್ರ ಒಳಗೆ ಉರಿ ಶುರುವಾಗಿದೆ ಎಂತಹ ಘಾಟಿ ಇರಬೇಕು ಇವಳು ನಮ್ಮ ಮಾವನನ್ನೇ ತನ್ನ ಮಾತಿನಿಂದ ಸೆಳೆದುಕೊಂಡು ಬಿಟ್ಟಳು ಎಂದು ಕೊಂಡಿದ್ದಾಳೆ.

Colors Kannada Ramachari serial

ಇನ್ನು ನಾರಾಯಣ ಆಚಾರ್ಯರು ಊಟಕ್ಕೆ ಕರೆದಿದ್ದು ಮಾತ್ರ ಕೋದಂಡನಿಗೂ ಸಹಿಸಲು ಆಗುತ್ತಿಲ್ಲ. ಜಾನಕಿ, ಶ್ರುತಿ ಹಾಗೂ ಅಜ್ಜಿ ಮಾತ್ರ ತುಂಬಾ ಖುಷಿಪಟ್ಟಿದ್ದಾರೆ. ನಾರಾಯಣ ಆಚಾರ್ಯರು ಚಾರು ಹಾಗೂ ರಾಮಾಚಾರಿಯನ್ನು ಊಟಕ್ಕೆ ಕರೆದಾಗ ಜಾನಕಿ ಮಾತ್ರ ತುಂಬಾ ಖುಷಿಪಟ್ಟಿದ್ದಾಳೆ. ನನ್ನ ಕಂದ ಉಪವಾಸವನ್ನು ಬಿಟ್ಟನಲ್ಲ ಎಂದು ಸಂತಸ ಪಟ್ಟಿದ್ದಾಳೆ. ಕೃತಿ ಕೂಡ ನನ್ನ ಅಣ್ಣ ಉಪವಾಸ ಬಿಟ್ಟು ಅಪ್ಪನ ಸಮ್ಮುಖದಲ್ಲೇ ಊಟ ಮಾಡುವಂತೆ ಆಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾಳೆ.

ಚಾರು ಹಾಗೂ ರಾಮಾಚಾರಿಗೆ ಜಾನಕಿ ಚಾಪೆಯನ್ನು ಹಾಸಿ ರಾಮಾಚಾರಿಯ ಕೈಹಿಡಿದು ಊಟಕ್ಕೆ ಕುಳಿಸಿದ್ದಾರೆ. ಇನ್ನು ಇದೆ ವೇಳೆ ಊಟ ಮಾಡುತ್ತಿದ್ದಾಗ ಚಾರು ಅತ್ತೆಯ ಕೈ ರುಚಿಯ ಬಗ್ಗೆ ಹೊಗಳಿದ್ದಾಳೆ. ಅತ್ತೆ ನೀವು ಮಾಡಿರುವ ಸಾಂಬರ್ ತುಂಬಾನೇ ಚನ್ನಾಗಿದೆ ಆಹಾ ಸ್ವರ್ಗ ಎಂದು ಅತ್ತೆಯ ಕೈ ರುಚಿಯನ್ನು ಹೊಗಳಿದ್ದಾಳೆ.

ಇದೇ ವೇಳೆ ರಾಮಾಚಾರಿ ಊಟ ಮಾಡುವಾಗ ಮಾತಾಡಿಕೊಂಡು ಮಾತನಾಡಬಾರದು ಎಂದು ಹೇಳಿದ್ದಾನೆ.‌ಇದಕ್ಕೆ ಚಾರು ಮಾತಾಡಿಕೊಂಡು ಊಟ ಮಾಡಬೇಕು ಎಂದಾಗ ಚಾರು ಸುಮ್ಮನೆ ಊಟ ಮಾಡಿದ್ದಾಳೆ. ಚಾರು ಮಾತನಾಡುತ್ತಿದ್ದರೆ ವೈಶಾಖಗೆ ಕೆಂಡ ಸುರಿದ ರೀತಿ ಆಗುತ್ತಿದೆ. ಅಬ್ಬಾ ನಾನೇ ಘಾಟಿ ಎಂದರೆ ಇವಳು ನನಗಿಂತ ಘಾಟಿ ಎಂದು ಬೈದುಕೊಂಡು ಊಟ ಮಾಡಿದ್ದಾಳೆ.

ರಾಮಾಚಾರಿ ಊಟ ಮಾಡಿದ ತಕ್ಷಣ ಅಪ್ಪನ ಹಿಂದೆಯೇ ಬಂದಿದ್ದಾನೆ. ಅಪ್ಪ ತುಂಬಾ ಥ್ಯಾಂಕ್ಯೂ ಎಂದು ಅಂದಿದ್ದಾಳೆ. ಈ ವೇಳೆ ರಾಮಾಚಾರಿಗೆ ಆಚಾರ್ಯರು ಬೈದಿದ್ದಾರೆ. ನನ್ನ ನಅಂದಿದ್ದಾನೆ. ಬರೀ ಊಟದ ಪಂಕ್ತಿಗೆ ಸೀಮಿತ ಮಾತ್ರ ಎಂದಿದ್ದಾರೆ. ಅಪ್ಪ ಎಂದು ಸಂಬಂಧವನ್ನು ಬೆಳೆಸಲು ಹೋಗಬೇಡ ನಾನು ಅದಕ್ಕೆ ಎಳ್ಳುನೀರು ಬಿಟ್ಟಿದ್ದೇನೆ ಎಂದಿದ್ದಾರೆ.

ರಾಮಾಚಾರಿ ಚಾರು ಮದುವೆಯಾದ ಮೇಲೆ ಪ್ರೇಮಾಚಾರಿಯಾಗಿದ್ದಾನೆ. ಚಾರು ಎಲ್ಲರ ಮುಂದೆ ನನಗೆ ಮುತ್ತು ಬೇಕು ಎಂದು ಕೇಳಿದ್ದಾಳೆ. ಈ ವೇಳೆ ರಾಮಾಚಾರಿ ಕೆಳಗೆ ಬಿದ್ದಿದ್ದ ಮುತ್ತು ತಗೆದುಕೊಟ್ಟು ತಗೆದುಕೊಳ್ಳಿ ಮೇಡಂ ನೀವು ಹುಡುಕುತ್ತಿದ್ದ ಮುತ್ತು ಸಿಕ್ಕಿಬಿಟ್ಟಿತು ಎಂದು ಕೊಟ್ಟಿದ್ದಾನೆ. ಇಷ್ಟರಲ್ಲಿ ಅಜ್ಜಿ ಚಾರುವಿಗೆ ಬೈದಿದ್ದಾರೆ ಇವಳ ಶಾರ್ಟ್ ಕಟ್ ಮಾತು ಕೇಳಿದರೆ ಹಾರ್ಟ್ ಅಟ್ಯಾಕ್ ಆಗೋದು ಗ್ಯಾರಂಟಿ ಎಂದಿದ್ದಾರೆ.

ಆಫೀಸ್‌ಗೆ ಬಂದ ರಾಮಾಚಾರಿಗೆ ಬಬ್ಲು ಸಾರ್ ತಲೆ ತಿನ್ನುತ್ತಿದ್ದಾರೆ. ಮನೆಯಲ್ಲಿ ರೋಮ್ಯಾನ್ಸ್ ಜೋರಾ ಎಂದು ಕೇಳಿದ್ದಾರೆ. ಇದಕ್ಕೆ ರಾಮಾಚಾರಿ ಸಾರ್ ನೀವು ಎನು ಈ ಆಫೀಸ್‌ಗೆ ಬಾಸ್ ನಾನು ಇಲ್ಲಿ‌ ಕೆಲಸ ಮಾಡುವ ಕೆಲಸಗಾರ ಎಂದು ಹೇಳಿದ್ದಾನೆ. ನನಗೆ ಮೊದಲೇ ತಲೆನೋವಿದೆ ದಯವಿಟ್ಟು ನೀವು ಇಲ್ಲಿಂದ ಹೊರಡಿ ಎಂದು ಅಂದಿದ್ದಾನೆ. ಬಬ್ಲು ಸಾರ್ ನಾನು ತಮಾಷೆಗೆ ಹೇಳಿದೆ ಎಂದು ಹೇಳಿದ್ದಾರೆ.

More from Filmibeat

English summary
Colors Kannada serial Ramachari here details about charu and Ramachari happy with narayana achar decision
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X