Ramachari: ರಾಮಾಚಾರಿ ಮೇಲೆ ಚಾರುಗೆ ಹೆಚ್ಚಾಯ್ತು ಪ್ರೀತಿ: ಚಾರು ಓಡಿಸಲು ಜೊತೆಯಾದ ಮಾನ್ಯತಾ - ವೈಶಾಖ!
ರಾಮಾಚಾರಿ ಧಾರಾವಾಹಿ ಪ್ರತಿದಿನವೂ ಒಂದೊಂದು ಟ್ವಿಸ್ಟ್ ತೆಗೆದುಕೊಂಡು ಮುಂದೆ ಹೋಗುತ್ತಿದೆ. ಮಾನ್ಯತಾ ರಾಮಾಚಾರಿ ಮನೆಗೆ ಬಂದಿದ್ದು ನಾರಾಯಣ ಆಚಾರ್ಯರ ಮೇಲೆ ಕೂಗಾಡಿದ್ದಾಳೆ. ನನ್ನ ಮಗಳನ್ನ ಯಾವ ರೀತಿ ನೀವು ನಡೆಸಿಕೊಂಡಿರಿ ಎಂದೆಲ್ಲ ಕೇಳಿದ್ದಾಳೆ. ಇದಕ್ಕೆ ನಾರಾಯಣ ಆಚಾರ್ಯರು ನಿಮ್ಮ ಮಗಳನ್ನು ನೀವು ಕರೆದುಕೊಂಡು ಹೋಗಬಹುದು ಎಂದೆಲ್ಲಾ ಹೇಳಿದ್ದಾರೆ.
ಚಾರು ಮಾನ್ಯತಾಗೆ ಬೈದಿದ್ದಾಳೆ ನನ್ನ ಸಂಬಂಧವನ್ನು ಹೊಡೆಯಲು ಇಲ್ಲಿಗೆ ನಿನ್ನನ್ನ ಕರೆಸಿದವರು ಯಾರು ಅಮ್ಮ ನೀನು ದಯವಿಟ್ಟು ಇಲ್ಲಿಂದ ಹೋಗು ಎಂದಿದ್ದಾಳೆ. ಇನ್ನೂ ತನ್ನ ಮಗಳೇ ಅವಮಾನ ಮಾಡಿದ್ದಕ್ಕೆ ಮಾನ್ಯತಾಗೆ ತುಂಬಾ ಸಿಟ್ಟು ಬಂದಿದೆ. ರಾಮಾಚಾರಿ ಮೇಲೆ ಹೇಗಾದರೂ ಸೇಡನ್ನು ತೀರಿಸಿಕೊಂಡು ನನ್ನ ಮಗಳನ್ನ ನಾನು ವಾಪಾಸ್ ಮನೆಗೆ ಕರೆದುಕೊಂಡು ಹೋಗಬೇಕು ಎಂದುಕೊಂಡಿದ್ದಾಳೆ.

ಚಾರುಗೆ ಈಗ ರಾಮಾಚಾರಿ ಹಾಗೂ ಅವರ ಕುಟುಂಬವನ್ನು ಉಳಿಸಿಕೊಳ್ಳಬೇಕು ಎಂಬ ಉದ್ದೇಶ ಕಣ್ಣ ಮುಂದೆ ಇದೆ. ಯಾಕೆಂದರೆ ರಾಮಾಚಾರಿಯ ಮೇಲೆ ನಾರಾಯಣ ಆಚಾರ್ಯರು ಮುನಿಸಿಕೊಂಡಿದ್ದಾರೆ. ಅಪ್ಪ-ಮಗನನ್ನ ಒಂದು ಮಾಡಬೇಕು ಎಂದುಕೊಂಡು ಚಾರು ಪ್ರಯತ್ನವನ್ನ ಪಡುತ್ತಿದ್ದಾಳೆ. ಆದರೆ ಚಾರು ಪ್ರಯತ್ನವನ್ನುಬವೈಶಾಖ ವಿಫಲವಾಗುವಂತೆ ಮಾಡುತ್ತಿದ್ದಾಳೆ . ನೀನು ಹೇಗೆ ನಮ್ಮ ಮಾವನ ಮನಸ್ಸನ್ನು ಗೆಲ್ಲುತ್ತೀಯಾ ನೋಡುತ್ತೇನೆ ಎಂದುಕೊಂಡು ಎಲ್ಲವನ್ನ ಒಳಗೊಳಗೆ ಮಾಡುತ್ತಿದ್ದಾಳೆ.
ಚಾರುವನ್ನು ಮಾನ್ಯತಾ ಹೇಗಾದರೂ ಮಾಡಿ ಕರೆದುಕೊಂಡು ಹೋಗುತ್ತಾಳೆ ಎಂದುಕೊಂಡು ವೈಶಾಖ ಇದ್ದಳು. ಆದರೆ ಮಗಳೇ ಅವಮಾನ ಕಳಿಸಿದ್ದಾನೆ ಇದನ್ನು ನೋಡಿದ ಮೇಲೆ ಚಾರು ಮೇಲೆ ವೈಶಾಖಗೆ ಮತ್ತಷ್ಟು ಕೋಪ ಹೆಚ್ಚಾಗಿದೆ. ಇದಕ್ಕಾಗಿ ಮಾನ್ಯತಾಗಿ ಕಾಲ್ ಮಾಡಿದ್ದ ವೈಶಾಖ ಏನು ನಿಮ್ಮ ಮಗಳೇ ನಿಮಗೆ ಅವಮಾನ ಮಾಡಿಬಿಟ್ಟಳಲ್ಲ. ಇನ್ಮುಂದೆ ನಿಮ್ಮ ಮಗಳಿಗೆ ನಾನು ಸರಿಯಾಗಿ ಕಾಟವನ್ನು ಕೊಟ್ಟು ಈ ಮನೆಯ ಸಹವಾಸ ಸಾಕಪ್ಪ ಸಾಕು ಎಂದು ಓಡಿಸುತ್ತೇನೆ ಎಂದಿದ್ದಾಳೆ.
ಮಾನ್ಯತಾಗೆ ಕಾಲ್ ಮಾಡಿದ್ದ ವೈಶಾಖ ನಿನ್ನ ಮಗಳನ್ನು ಬೇರೆಯವರಿಗೆ ಮದುವೆ ಮಾಡುತ್ತೀರಿ ಎಂದು ಕೊಂಡರೆ. ನೀನು ನಿಮ್ಮ ಗಂಡನ ಮಾತನ್ನು ಕೇಳಿಕೊಂಡು ಇಲ್ಲಿಗೆ ಕಳುಹಿಸಿದ್ರಿ ಅದೇ ನೀವು ಮಾಡಿದ ತಪ್ಪು ಎಂದಿದ್ದಾಳೆ. ಏನು ಮಾಡಲಿ ನನ್ನ ಗಂಡ ನನ್ನ ಮಾತನ್ನು ಕೇಳಲಿಲ್ಲ ಅದಕ್ಕಾಗಿ ನಾನು ಕಳುಹಿಸಿದೆ ಎಂದು ಹೇಳಿದ್ದಾಳೆ ನೀನು ಹೇಗಾದರೂ ಮಾಡಿ ಆ ಮನೆ ಬಿಟ್ಟು ಓಡುವಂತೆ ಮಾಡು ಅಷ್ಟೇ ನನಗೆ ಸಾಕು ಎಂದು ಮಾನ್ಯತಾ ವೈಶಾಖಗೆ ಹೇಳಿದ್ದಾಳೆ.
ರಾಮಾಚಾರಿ ಮೇಲೆ ಚಾರುಗೆ ಪ್ರೀತಿ ಹೆಚ್ಚಾಗಿದೆ ಇದಕ್ಕಾಗಿ ಆಫೀಸಿಗೆ ಊಟವನ್ನು ತೆಗೆದುಕೊಂಡು ಹೋಗಿದ್ದಾಳೆ. ತಾನೇ ಸ್ವತಃ ತನ್ನ ಕೈಯಾರೆ ಬಾಳೆ ಎಲೆಯನ್ನ ಹರಡಿ ಊಟವನ್ನ ಬಡಿಸುತ್ತಿದ್ದಾಳೆ ಒಂದೊಂದು ಖಾದ್ಯಕ್ಕೂ ಸಹ ತನ್ನ ಗಂಡನ ಗುಣಲಕ್ಷಣಗಳನ್ನು ಹೋಲಿಕೆ ಮಾಡಿ ಹೊಗಳುತ್ತಿದ್ದಾಳೆ. ರಾಮಾಚಾರಿ ಗೆ ಚಾರು ತೋರಿಸುತ್ತಿರುವ ಪ್ರೀತಿ ಇರಿಸು ಮುರಿಸಾಗಿದೆ ಯಾಕೆಂದರೆ ಆಫೀಸಿನಲ್ಲಿ ಈ ರೀತಿ ನಡೆದುಕೊಂಡರೆ ಯಾರು ಏನು ಅಂದುಕೊಳ್ಳುತ್ತಾರೆ ಎಂದುಕೊಂಡಿದ್ದಾನೆ.
ಮಾನ್ಯತಾ ಬಬ್ಲುಗೆ ಕರೆ ಮಾಡಿ ನೀನು ರಾಮಾಚಾರಿಯನ್ನು ಕೆಲಸದಿಂದ ತೆಗೆದುಹಾಕು ಸಂಬಳವಿಲ್ಲದೆ ನನ್ನ ಮಗಳು ಒದ್ದಾಡಬೇಕು ಆ ರೀತಿ ಮಾಡು ಎಂದಿದ್ದಾಳೆ. ಸಂಬಳ ಇಲ್ಲದೆ ಇದ್ದರೆ ಅವರಿಬ್ಬರ ಜೀವನ ನಡೆಯೋದಿಲ್ಲ ಪ್ರೀತಿ ಹೊಟ್ಟೆ ತುಂಬಿಸುವುದಿಲ್ಲ ಎಂಬ ಪಾಠ ನನ್ನ ಮಗಳಿಗೆ ಅರ್ಥವಾಗಬೇಕು. ಇದಕ್ಕೆ ರಾಮಾಚಾರಿಯನ್ನ ಕೆಲಸದಿಂದ ತೆಗೆಯುವಂತೆ ಬಬ್ಲುಗೆ ಮಾನ್ಯತಾ ಹೇಳಿದ್ದಾಳೆ . ಇದಕ್ಕೆ ಬಬ್ಲು ನಾನು ಯಾವುದೇ ಕಾರಣಕ್ಕೂ ಕೆಲಸದಿಂದ ತೆಗೆಯುವುದಿಲ್ಲ ಎಂದು ಹೇಳಿದ್ದಾನೆ.
ರಾಮಾಚಾರಿಗಾಗಿ ಚಾರು ಊಟ ತಂದಿರುವುದಕ್ಕಾಗಿ ಬಬ್ಲು ಸಾರ್‌ಗೆ ತುಂಬಾನೇ ಖುಷಿಯಾಗಿದೆ. ಅವರಿಬ್ಬರನ್ನು ರಾಗಿ ಹೊಲದಾಗಿ ತಾನೆ ಗುಡಿಸಲು ಎಂಬ ಹಾಡಿನೊಂದಿಗೆ ಸಿಂಕ್ ಮಾಡಿ ಕನಸನ್ನ ಕಂಡಿದ್ದಾನೆ. ಅಷ್ಟರಲ್ಲಿ ರಾಮಾಚಾರಿಯನ್ನ ಚಾರು ಕರೆದು ನನಗೆ ಮುತ್ತು ಕೊಡು ಎಂದು ಕೇಳಿದ್ದಾಳೆ. ರಾಮಾಚಾರಿ ಇದು ಆಫೀಸ್ ಸುಮ್ಮನೆ ಇಲ್ಲಿ ನಿಂತುಕೊಂಡು ಕೋಪ ಬರಿಸಬೇಡಿ ದಯವಿಟ್ಟು ಇಲ್ಲಿಂದ ಹೊರಡಿ.
ಇಲ್ಲದಿದ್ದರೆ ನಾನೇ ಈ ಕೈಯನ್ನ ಹಿಡಿದುಕೊಂಡು ಹೋಗಿ ಹೊರಗೆ ಬಿಟ್ಟು ಬರುತ್ತೇನೆ ಎಂದು ಹೇಳಿದ್ದಾನೆ. ರಾಮಾಚಾರಿ ಕೋಪ ಮಾಡಿಕೊಂಡಾಗ ಆಫೀಸ್ ನಿಂದ ಚಾರು ಓಡಿ ಹೋಗಿದ್ದಾಳೆ..


Click it and Unblock the Notifications











