Ramachari: ರಾಮಾಚಾರಿಗೆ ದುಡ್ಡಿನ ಆಸೆ ತೋರಿಸಿದ ಮಾನ್ಯತಾ; ರಾಮಾಚಾರಿ ಮಾಡಿದ್ದಾದರೂ ಏನು?

By ಶೃತಿ ಹರೀಶ್ ಗೌಡ

ರಾಮಾಚಾರಿಯನ್ನ ಪ್ರೀತಿಗೆ ಬೆಳಿಸಿಕೊಳ್ಳಬೇಕು ಎಂಬುದು ಚಾರು ಉದ್ದೇಶವಾಗಿದೆ. ಯಾಕೆಂದರೆ ಮನೆಯಲ್ಲಿ ಮೊದಲಿನಿಂದಲೂ ಸಹ ಚಾರುವನ್ನು ಕಂಡರೆ ಆಗುತ್ತಿರಲಿಲ್ಲ . ಈಗ ಚಾರು ನಾರಾಯಣ ಆಚಾರ್ಯರ ಸೊಸೆಯಾಗಿ ಬಂದಿದ್ದಾಳೆ. ನಾರಾಯಣ ಆಚಾರ್ಯರು ಸಹ ಚಾರುವನ್ನು ರಾಮಾಚಾರಿ ಮದುವೆಯಾದ ರೀತಿಯಲ್ಲಿ ಕನಸನ್ನ ಕಂಡಿದ್ದರು. ಆಚಾರ್ಯರಿಗೆ ಬೀಳುವ ಕನಸು ಯಾವುದು ಸಹ ಇದುವರೆಗೂ ಸುಳ್ಳಾಗಿರಲಿಲ್ಲ. ಅದೇ ರೀತಿ ಈಗ ರಾಮಾಚಾರಿ ಹಾಗೂ ಚಾರು ಇಬ್ಬರು ಯಾವುದೋ ಸಂದರ್ಭದಲ್ಲಿ ಮದುವೆಯಾಗಿದ್ದಾರೆ.

ನಾರಾಯಣ ಆಚಾರ್ಯರು ತಂಗಿಗೆ ಕೊಟ್ಟಿದ್ದ ಮಾತನ್ನು ಮುರಿದು ಕೊಂಡಿದ್ದಾರೆ ಇದಕ್ಕಾಗಿ ಅವರಿಗೆ ಪಶ್ಚಾತಾಪವಿದೆ. ಮಗ ಸಹ ಈ ರೀತಿ ಮಾಡಿದ ಎಂಬುವುದು ಅವರನ್ನ ಕಾಡುತ್ತಿದೆ. ಈಗ ರಾಮಾಚಾರಿಯನ್ನು ನನ್ನ ಮಗನಲ್ಲ ಎಂದು ದೂರವಿಟ್ಟಿದ್ದಾರೆ. ಚಾರು ಮಾತ್ರ ತನ್ನ ಪ್ರಯತ್ನವನ್ನ ಬಿಡದೆ ರಾಮಾಚಾರಿ ಹಾಗೂ ನಾರಾಯಣ ಆಚಾರ್ಯರನ್ನು ಒಂದು ಮಾಡಲೇಬೇಕು ಎಂದುಕೊಂಡಿದ್ದಾಳೆ. ಈ ಮನೆಯಲ್ಲಿ ಎಲ್ಲರೂ ಸಹ ಒಗ್ಗಟ್ಟಾಗಿ ಇದ್ದುಕೊಂಡು ಮಾವನವರ ಗೌರವವನ್ನು ಕಾಪಾಡಬೇಕು ಎಂಬುದು ಚಾರುವಿನ ಕನಸಾಗಿದೆ.

Colors Kannada Ramachari serial

ವೈಶಾಖಗೆ ರಾಮಾಚಾರಿ ಹಾಗೂ ಚಾರು ಇಬ್ಬರನ್ನು ಸಹ ಮನೆಯಿಂದ ಹೊರಗೆ ಹಾಕಿ. ಮನೆಯಲ್ಲಿರುವ ಎಲ್ಲರನ್ನು ತನ್ನ ನಿಯಂತ್ರಣಕ್ಕೆ ಇಟ್ಟುಕೊಳ್ಳಬೇಕು ಎಂಬುದೇ ಆಗಿದೆ. ಆದರೆ ಇದ್ಯಾವುದನ್ನು ಸಹ ಮಾಡಲು ಚಾರು ಬಿಡುವುದಿಲ್ಲ ಅದಕ್ಕಾಗಿ ಮಾನ್ಯತಾ ಸಹಾಯವನ್ನು ಈಗ ವೈಶಾಖ ಪಡೆದುಕೊಳ್ಳುತ್ತಿದ್ದಾಳೆ. ಆದಷ್ಟು ಬೇಗ ಚಾರುವನ್ನು ಈ ಮನೆಯಿಂದ ಹೊರಗಡೆ ಹಾಕೇ ಹಾಕುತ್ತೇನೆ ಎಂದು ವೈಶಾಖ ಮಾನ್ಯತಾ ಬಳಿಯಲ್ಲಿ ಹೇಳಿದ್ದಾಳೆ. ಯಾರು ಮನೆಯಿಂದ ಹೊರಗಡೆ ಹೋಗಿದ್ದಾಗ ವೈಶಾಖ ಯಾವುದೋ ಯೋಚನೆಯನ್ನ ಮಾಡುತ್ತಾ ನಿಂತಿದ್ದಾಳೆ.

ಚಾರು ರಾಮಾಚಾರಿ ಗೆ ಊಟವನ್ನ ತೆಗೆದುಕೊಂಡು ಹೋಗಿ ಬಡಿಸಿ ವಾಪಸ್ ಮನೆಗೆ ಬಂದಿದ್ದಾಳೆ. ವೈಶಾಖ ಮನೆಯ ಹೊರಗಡೆ ಯೋಚನೆ ಮಾಡುತ್ತಾ ನಿಂತಿದ್ದಾಗ ಅಲ್ಲಿಗೆ ಬಂದಂತಹ ಚಾರು ಅಕ್ಕ ಎಂದು ಜೋರಾಗಿ ಕರೆದಿದ್ದಾಳೆ. ಚಾರು ಕರೆದಿದ್ದನ್ನ ತಿರುಗಿ ನೋಡಿದ ವೈಶಾಖಗೆ ಕೋಪ ಬಂದಿದೆ. ಇದ್ಯಾಕೆ ಅಕ್ಕ ಊಟ ಮಾಡಲಿಲ್ಲ ಮುಖವನ್ನೆಲ್ಲ ಈ ರೀತಿ ಮಾಡಿಕೊಂಡು ಇದ್ದೀಯ ಎಂದು ಚಾರು ರೇಗಿಸಿದ್ದಾಳೆ. ನೀನು ನನ್ನನ್ನು ಮಾತನಾಡಿಸಲು ಬರುವುದು ನನ್ನ ಉರಿಸುವುದಕ್ಕೆ ಎಂದು ಗೊತ್ತಿದೆ ಎಂದು ಚಾರುಗೆ ವೈಶಾಖ ಹೇಳಿದ್ದಾಳೆ.

ಅಯ್ಯೋ ಅಕ್ಕ ಉರಿದುಕೊಳ್ಳಬೇಡ ಇಂದು ನಾನು ನನ್ನ ಗಂಡನಿಗೆ ಊಟವನ್ನು ತೆಗೆದುಕೊಂಡು ಹೋಗಿ ಬಯಸಿ ಸ್ವರ್ಗವನ್ನು ತೋರಿಸಿ ಬಂದಿದ್ದೇನೆ ನೀನು ನಿನ್ನ ಗಂಡನಿಗೆ ಇದೇ ರೀತಿ ಊಟವನ್ನು ತೆಗೆದುಕೊಂಡು ಹೋಗಲು ನಿನ್ನಿಂದ ಸಾಧ್ಯವಾಗುತ್ತಾ ಎಂದಿಲ್ಲ ಹೇಳುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಚಾರು ಮಾಡಿದ್ದಾಳೆ. ನಿನ್ನನ್ನ ಈ ಮನೆಯಿಂದ ನಾನು ಓಡಿಸುತ್ತೇನೆ ಎಂದು ಚಾರು ಬಳಿಯಲ್ಲಿ ಹೇಳಿದ್ದಾಳೆ. ಇದು ನಾರಾಯಣ ಆಚಾರ್ಯರ ಕುಟುಂಬ ಈ ಮನೆಯನ್ನ ಹೊಡೆಯಲು ನಾನು ಬಿಡುವುದಿಲ್ಲ ಎಂದು ವೈಶಾಖಾಗೆ ವಾಪಸ್ ಚಾರು ಹೇಳಿದ್ದಾಳೆ. ಇನ್ಮುಂದೆ ನಿನಗೆ ಬೆಂಕಿಯಲ್ಲಿ ಕೂತ ಅನುಭವವನ್ನು ನಾನು ಮಾಡಿಸುತ್ತೇನೆ ಎಂದು ಚಾರು ವೈಶಾಖಾಗೆ ತಿಳಿಸಿದ್ದಾಳೆ.

ರಾಮಾಚಾರಿ ಆಫೀಸ್ ನಿಂದ ಬರುವ ವೇಳೆ ದಾರಿಯಲ್ಲಿ ಮಾನ್ಯತಾ ರಾಮಾಚಾರಿಯ ದಾರಿಯನ್ನ ಕಾಯುತ್ತಾ ನಿಂತಿದ್ದಾಳೆ. ಮಾನ್ಯತಾಳನ್ನ ನೋಡಿದ ರಾಮಾಚಾರಿ ಗಾಡಿಯನ್ನು ನಿಲ್ಲಿಸಿ ಏನು ಮೇಡಂ ನೀವೇಕೆ ಇಲ್ಲಿ ನಿಂತಿದ್ದೀರಿ ಎಂದು ಕೇಳಿದ್ದಾನೆ. ನನ್ನ ಮಗಳು ನಿಮ್ಮ ಮನೆಯಲ್ಲಿ ಇದ್ದಾಳೆ, ಅವಳನ್ನ ನನ್ನ ಜೊತೆ ಕಳುಹಿಸಿ ಬಿಡು ಎಂದು ಮಾನ್ಯತಾ ಕೇಳಿದ್ದಾಳೆ. ಇದಕ್ಕೆ ರಾಮಾಚಾರಿ ಕೋಪಗೊಂಡು ಅವರು ಈಗ ನನ್ನ ಹೆಂಡತಿ ಅವರು ಎಲ್ಲಿಯೂ ಬರುವುದಿಲ್ಲ ನಮ್ಮ ಮನೆಯಲ್ಲಿಯೇ ಇರುತ್ತಾರೆ ಎಂದು ಹೇಳಿದ್ದಾನೆ.

ಹಣದ ಸೂಟ್ಕೇಸ್ ಅನ್ನು ತೋರಿಸಿದ ಮಾನ್ಯತಾ ನೀನು ಹಣಕ್ಕಾಗಿ ನನ್ನ ಮಗಳನ್ನು ಮದುವೆಯಾಗಿದ್ದೀಯಾ ಅದು ನನಗೆ ಚೆನ್ನಾಗಿ ಗೊತ್ತಿದೆ. ತೆಗೆದುಕೋ ಈ ಹಣವನ್ನು ಇಟ್ಟುಕೊಂಡು ನನ್ನ ಮಗಳನ್ನು ವಾಪಸ್ ನನ್ನ ಮನೆಗೆ ಕಳುಹಿಸಿಬಿಡು ಎಂದಿದ್ದಾಳೆ. ನೀನು ಜೀವನದಲ್ಲಿ ಇಷ್ಟು ಹಣವನ್ನ ನೋಡೇ ಇರುವುದಿಲ್ಲ ಅದನ್ನು ನಾನು ಕೊಡುತ್ತಿದ್ದೇನೆ.‌ ನನ್ನ ಮಗಳನ್ನ ಬಿಟ್ಟುಬಿಡು ಎಂದು ಮಾನ್ಯತಾ ಹೇಳಿದ್ದಾಳೆ ಇದಕ್ಕೆ ರಾಮಾಚಾರಿ ಈಗ ನಮ್ಮಿಬ್ಬರ ಮದುವೆಯಾಗಿ ಹೋಗಿದೆ.

ಯಾವುದೇ ಕಾರಣಕ್ಕೂ ನಾನು ಚಾರುವನ್ನು ಬಿಟ್ಟು ಕೊಡುವ ಮಾತು ಇಲ್ಲ ಎಂದು ಮುಖಕ್ಕೆ ಹೊಡೆದಾ ರೀತಿ ಹೇಳಿ ಅಲ್ಲಿಂದ ಹೋಗಿದ್ದಾನೆ.

More from Filmibeat

English summary
Colors Kannada serial Ramachari here details about manyatha demands to Ramachari for her daughter, Ramachari told to manyatha she is my wife
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X