Ramachari: ಕೊನೆಗೂ ಚಾರು ಪ್ಲ್ಯಾನ್ ಫ್ಲಾಪ್; ಮೊದಲ ರಾತ್ರಿಗೆ ಒಪ್ಪದ ಚಾರಿ

By ಶೃತಿ ಹರೀಶ್ ಗೌಡ

ಬಬ್ಲು ಸರ್ ಹಾಗೂ ಅವರ ಗ್ಯಾಂಗ್ ಫಸ್ಟ್ ನೈಟ್ ಗೆ ಎಲ್ಲಾ ತಯಾರಿಯನ್ನ ಮಾಡಿದೆ. ಇನ್ನು ರಾಮಾಚಾರಿ ಹಾಗೂ ಚಾರು ನಾರಾಯಣ ಆಚಾರ್ಯರ ಆಶೀರ್ವಾದವನ್ನು ತೆಗೆದುಕೊಳ್ಳುವುದು ಬಾಕಿ ಇದೆ. ಬಬ್ಲು ಸರ್ ರಾಮಾಚಾರಿ ಹಾಗೂ ಚಾರುಗೆ ನಾರಾಯಣ ಆಚಾರ್ಯರ ಆಶೀರ್ವಾದವನ್ನು ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಇನ್ನು ಮನೆಯಲ್ಲಿ ಅಷ್ಟು ಜನರು ಇರುವಾಗ ನಾರಾಯಣ ಆಚಾರ್ಯರು ಯಾವ ರೀತಿ ಮಾತನಾಡಲು ಸಾಧ್ಯ ಇದಕ್ಕಾಗಿ ಮೌನವಾಗಿ ನಿಂತುಕೊಂಡಿದ್ದಾರೆ.

ರಾಮಾಚಾರಿ ತನ್ನ ತಂದೆಯ ಕಾಲನ್ನ ಮುಟ್ಟಲು ಭಯಪಡುತ್ತಿದ್ದಾನೆ. ಯಾಕೆಂದರೆ ಮದುವೆಯಾದಗಿನಿಂದಲೂ ಸಹ ನಾರಾಯಣ ಆಚಾರ್ಯರು ರಾಮಾಚಾರಿಗೆ ಆಶೀರ್ವಾದವನ್ನು ಮಾಡಿಲ್ಲ. ಈಗ ಎಲ್ಲರ ಎದುರು ಸಹ ಆಶೀರ್ವಾದವನ್ನ ಮಾಡದೆ ನಾರಾಯಣ ಆಚಾರ್ಯರು ನಿಂತಿದ್ದಾರೆ. ರಾಮಾಚಾರಿ ಹಾಗೂ ಚಾರು ಇಬ್ಬರು ಸಹ ನಾರಾಯಣ ಆಚಾರ್ಯರು ಹಾಗೂ ಜಾನಕಿಯವರ ಕಾಲಿಗೆ ಬಿದ್ದು ಆಶೀರ್ವಾದವನ್ನು ತೆಗೆದುಕೊಂಡಿದ್ದಾರೆ.

Colors Kannada Ramachari serial Written Update on july 24th episode

ಇನ್ನು ರಾಮಾಚಾರಿ ಇದೇ ಸಂದರ್ಭದಲ್ಲಿ ತಂದೆಯ ಕಾಲನ್ನು ಮುಟ್ಟಿ ನಮಸ್ಕಾರ ಮಾಡಿಕೊಂಡು ನಾನು ತಪ್ಪನ್ನ ಮಾಡಿದ್ದೇನೆ ದಯವಿಟ್ಟು ಅದನ್ನ ಮನ್ನಿಸಿ ಎಂದು ಕೇಳಿಕೊಂಡಿದ್ದಾನೆ. ನಾರಾಯಣ ಆಚಾರ್ಯರು ನನ್ನ ಮಗ ನನ್ನ ಮಾನ ಮರ್ಯಾದೆಯನ್ನ ತೆಗೆದು ಹಾಕಿಬಿಟ್ಟ. ನಾಲ್ಕು ಗೋಡೆಗಳ ಮಧ್ಯೆ ಇರಬೇಕಾದ ವಿಚಾರ ಆಫೀಸಿನವರೆಗೂ ಹೋಗಿ ಮುಟ್ಟಿದೆ ಎಂದು ಬೇಸರ ಮಾಡಿಕೊಂಡಿದ್ದಾರೆ. ಜಾನಕಿ ಸಹ ತನ್ನ ಗಂಡನಿಗೆ ಸಮಾಧಾನವನ್ನು ಮಾಡಲು ನೋಡುತ್ತಿದ್ದಾರೆ.

ಮುರಾರಿ ರಾಮಾಚಾರಿಯನ್ನು ಕರೆದುಕೊಂಡು ಹೋಗಿ ರೂಮಿಗೆ ಬಿಟ್ಟಿದ್ದಾನೆ. ನಂತರ ಬಬ್ಲು ಸರ್ ವೈಶಾಖಾಳಿಗೆ ದಯವಿಟ್ಟು ಚಾರುವನ್ನು ಕರೆದುಕೊಂಡು ಹೋಗಿ ರೂಮಿನ ತನಕ ಬಿಟ್ಟು ಬನ್ನಿ ಎಂದಿದ್ದಾನೆ. ವೈಶಾಖವಲ್ಲದ ಮನಸ್ಸಿನಿಂದಲೇ ಚಾರುವನ್ನು ಕರೆದುಕೊಂಡು ರೂಮಿನಾತನಕ ಬಿಟ್ಟು ಬಂದಿದ್ದಾಳೆ. ಇನ್ನು ಬಬ್ಲು ಸರ್ ಈ ರೀತಿಯಲ್ಲ ಮಾಡಿಸುತ್ತಿರುವುದಕ್ಕೆ ಒಳಗೊಳಗೆ ವೈಶಾಖ ಬೈದುಕೊಳ್ಳುತ್ತಿದ್ದಾಳೆ ನನಗೆ ಇದು ಯಾವ ಹಣೆಬರಹ ಇದನ್ನೆಲ್ಲಾ ಮಾಡಬೇಕು ಎಂದು ಅಂದುಕೊಂಡಿದ್ದಾಳೆ.

ರಾಮಾಚಾರಿ ಹಾಗೂ ಚಾರು ಇಬ್ಬರು ಸಹ ಫಸ್ಟ್ ನೈಟ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯನ್ನ ಮಾನ್ಯತಾಗೆ ಅವಳ ಫ್ರೆಂಡ್ ಹೇಳಿದ್ದಾಳೆ. ಇದಕ್ಕೆ ಮಾನ್ಯತಾಗೆ ಚಾರು ಮೇಲೆ ಕೋಪಗೊಂಡಿದ್ದಾಳೆ. ನನಗೆ ನನ್ನ ಮಗಳು ಮೋಸ ಮಾಡುತ್ತಿದ್ದಾಳೆ ಇದನ್ನು ಹೇಗಾದರೂ ಮಾಡಿ ತಡೆಯಬೇಕಾಗಿತ್ತು ಎಂದುಕೊಂಡಿದ್ದಾಳೆ. ರಾಮಾಚಾರಿ ಹಾಗೂ ಚಾರು ಬಗ್ಗೆ ನೆನಪಿಸಿಕೊಂಡು ಜೋರಾಗಿ ಕಿರುಚಿದ್ದಾಳೆ.

ರೂಮಿಗೆ ಬಂದಿರುವ ಚಾರುಗೆ ರಾಮಾಚಾರಿ ಬೈಯುತ್ತಿದ್ದಾನೆ. ನನ್ನನ್ನು ನೀವು ದೇವಸ್ಥಾನಕ್ಕೆ ಹೋಗಲು ರೆಡಿಯಾಗು ಅಂತ ಹೇಳಿದ್ದೀರಿ. ಆದರೆ ನಂತರ ಆಗಿದ್ದೇ ಬೇರೆ ನೀವು ಯಾಕೆ ಹೇಳಬೇಕಾಗಿತ್ತು ಆ ರೀತಿಯಲ್ಲ ಎಂದು ಕೇಳಿದ್ದಾನೆ. ನಿಮ್ಮ ತಂದೆ ತಾಯಿ ಬಳಿ ನಿನಗೆ ಹೇಳಲು ನಾಚಿಕೆಯಾಗಬಹುದು ಅದಕ್ಕೋಸ್ಕರ ನಾನು ಬಬ್ಲು ಸರ್ ಬಳಿ ಹೇಳಿದೆ.‌ಅವರು ಈ ರೀತಿಯೆಲ್ಲ ಬಂದು ಮಾಡುತ್ತಾರೆ ಎಂದು ಗೊತ್ತಿರಲಿಲ್ಲ ಎಂದು ಚಾರು ಹೇಳಿದ್ದಾಳೆ.

ಈಗ ನೋಡಿ ಬಬ್ಲು ಸರ್ ಮಾಡಿದ ಅವಾಂತರಕ್ಕೆ ನಾನು ನನ್ನ ತಂದೆಯ ಮುಂದೆ ತಲೆ ತಗ್ಗಿಸಬೇಕಾಯಿತು ಎಂದು ರಾಮಾಚಾರಿ ಚಾರುಗೆ ಹೇಳಿದ್ದಾನೆ. ನೀವು ಮೇಲೆ ಮಲಗಿಕೊಳ್ಳಿ ನಾನು ಕೆಳಗೆ ಮಲಗಿಕೊಳ್ಳುತ್ತೇನೆ ಎಂದು ಚಾಪೆಯನ್ನು ಹಾಕಿಕೊಂಡು ರಾಮಾಚಾರಿ ಕೆಳಗೆ ಮಲಗಿಕೊಂಡಿದ್ದಾನೆ. ಚಾರುಗೆ ಮಾತ್ರ ಬೇಸರವಾಗಿದೆ ನಾನು ಏನು ಮಾಡಲು ಹೋದರೆ ಇನ್ನೇನು ಆಯಿತು ಅಲ್ಲ ಹೇಗಾದರೂ ಮಾಡಿ ರಾಮಾಚಾರಿಯ ಮನಸ್ಸನ್ನ ಒಲಿಸಿಕೊಳ್ಳಲೇಬೇಕು ಎಂದು ಅಂದುಕೊಂಡಿದ್ದಾಳೆ.

ಚಾರು ರಾಮಾಚಾರಿಯ ಮನಸ್ಸನ್ನ ತನ್ನ ಕಡೆ ಒಲಿಸಿಕೊಳ್ಳಲು ನಾನಾ ರೀತಿಯ ಕಸರತ್ತು ಮಾಡುತ್ತಿದ್ದಾಳೆ. ಆದರೆ ರಾಮಾಚಾರಿ ಮಾತ್ರ ಚಾರು ಕಡೆಗೆ ತನ್ನ ಮನಸ್ಸನ್ನು ಕೊಡುತ್ತಿಲ್ಲ. ಇದರಿಂದಾಗಿ ಚಾರುಗೆ ತುಂಬಾ ನಿರಾಸೆಯಾಗಿದೆ ರಾಮಾಚಾರಿಗೆ ತನ್ನ ತಂದೆಯ ಬಗ್ಗೆ ಚಿಂತೆಯಾಗಿದೆ ಅವರು ನನ್ನ ಮೇಲೆ ಏನು ಅಂದುಕೊಂಡರೋ ಎಂದು ಯೋಚನೆಯನ್ನ ಮಾಡುತ್ತಾ ಮಲಗಿಕೊಂಡಿದ್ದಾನೆ ಚಾರು ನಾನಾ ತಂತ್ರಗಳನ್ನ ಉಪಯೋಗಿಸಿದರು ಸಹ ಎಲ್ಲವೂ ವ್ಯರ್ಥವಾಗಿದೆ.

More from Filmibeat

English summary
Colors Kannada serial Ramachari here details about Ramachari and charu first night, narayana achar thinking about Ramachari what he learning
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X