Ramachari: ಏನು ನಡೆಯದೇ ಇದ್ದರೂ ಎಲ್ಲಾ ನಡೆಯಿತು ಎಂದ ಚಾರು; ರಾಮಾಚಾರಿಗೆ ಕೋಪ!
ಚಾರು ಯಾವುದೇ ರೀತಿಯಲ್ಲಿ ಪ್ರಯತ್ನ ಮಾಡಿದರು ಸಹ ರಾಮಾಚಾರಿ ಚಾರು ಪ್ರೀತಿಗೆ ಶರಣಾಗಲೇ ಇಲ್ಲ. ಕೊನೆಗೆ ಚಾರು ಕಾಟ ತಡೆಯದೆ ಹೊರಗಡೆ ಬಂದು ಮಲಗಿದ್ದಾನೆ. ಈ ವೇಳೆ ಜಾನಕಿ ಅಲ್ಲಿಗೆ ಬಂದಿದ್ದು ಮಗನನ್ನು ನೋಡಿ ಮರುಗಿದ್ದಾರೆ. ಇನ್ನು ರೂಮಿನ ಒಳಗೂ ಹೋಗಿ ನೋಡಿದ ಜಾನಕಿ ಚಾರು ಒಬ್ಬಳೇ ಮಲಗಿರುವುದರನ್ನ ಕಂಡು ಕಣ್ತುಂಬಿಕೊಂಡಿದ್ದಾರೆ.
ಇನ್ನು ವೈಶಾಖ ಯಾರದೋ ಬಳಿ ಮಾತನಾಡುತ್ತಾ ರಾಮಾಚಾರಿ ಹಾಗೂ ಚಾರು ನಡುವೆ ಏನು ನಡೆದೆ ಇಲ್ಲ ಎಂದು ನನಗೆ ತಿಳಿದಿದೆ ಎಂದು ಹೇಳುತ್ತಾ ಇದ್ದಾಳೆ. ಇದನ್ನೆಲ್ಲ ಚಾರು ವೈಶಾಖಗೆ ತಿಳಿಯದಂತೆ ಕೇಳಿಸಿಕೊಳ್ಳುತ್ತಾ ಇದ್ದಾಳೆ. ಸರಿಯಾದ ರೀತಿಯಲ್ಲಿ ಎಡವಟ್ಟು ಆಗಿದೆ. ರೂಮಿಗೆ ವೈಶಾಖ ಬಂದರೆ ನನ್ನ ಹಾಗೂ ರಾಮಾಚಾರಿ ನಡುವೆ ಎನು ನಡೆದೆ ಇಲ್ಲ ಎಂಬುದು ತಿಳಿಯುತ್ತದೆ ಎಂದು ಕೊಂಡು ರೂಮಿಗೆ ಹೋಗಿದ್ದಾಳೆ.

ರೂಮಿಗೆ ಹೋದವಳೇ ಆಚಿಕೆಯ ಮೇಲೆ ಇದ್ದಂತಹ ಹೂಗಳನ್ನೆಲ್ಲಾ ಮೊದಲು ಚೆನ್ನಾಗಿ ಮಾಡಿದ್ದಾಳೆ ನಂತರ ತನ್ನ ಹಣೆಯಲ್ಲಿ ಇಟ್ಟಿದ್ದ ಬಿಂದಿಯನ್ನ ಬೇರೆ ಕಡೆ ಹಾಕಿಕೊಂಡಿದ್ದಾಳೆ ಇನ್ನೂ ತಲೆಗೆ ಮುಡಿದಿದ್ದ ಹೂವನ್ನು ಕೈಯಾರೆ ಕಿತ್ತು ಹಾಕಿ ನಮ್ಮಿಬ್ಬರ ಫಸ್ಟ್ ನೈಟ್ ಆಗಿದೆ ಎಂಬ ರೀತಿ ಬಿಂಬಿಸಲು ಹೊರಟಿದ್ದಾಳೆ.
ವೈಶಾಖ ಮಾತನಾಡಿಕೊಳ್ಳುತ್ತಿದ್ದುದ್ದನ್ನು ಕೇಳಿಸಿಕೊಂಡ ಜಾರು ಅವಳು ಹೇಳಿದಂತೆಯೇ ಮಾಡಿದ್ದಾಳೆ. ಇನ್ನೂ ಎದುರು ಸಿಕ್ಕಿದ ವೈಶಾಖಾಗೆ ಯಾಕೆ ಅಕ್ಕ ಪೊರಕೆ ತಗೆದುಕೊಂಡು ಬಂದಿಲ್ಲ ಎಂದಿದ್ದಾಳೆ. ನನ್ನ ಮತ್ತು ರಾಮಾಚಾರಿ ನಡುವೆ ಎಷ್ಟು ಚಂದ ಪ್ರೀತಿ ಮೂಡಿತ್ತು ಎಂಬ ಬಗ್ಗೆ ಹೇಳಿದ್ದಾಳೆ. ರಾಮಾಚಾರಿ ನಿಂತುಕೊಂಡು ಚಾರು ಹೇಳುತ್ತಿರುವುದನ್ನು ಕೇಳಿಸಿಕೊಳ್ಳುತ್ತಾ ಇದ್ದಾನೆ.
ಅತಿಯಾಗಿ ಮಾತನಾಡಲು ಹೋದ ತಕ್ಷಣವೇ ಚಾರು ಹೆಸರನ್ನ ಹಿಡಿದು ರಾಮಾಚಾರಿ ಕರೆದಿದ್ದಾನೆ. ಅಷ್ಟರಲ್ಲಿ ಚಾರು ಟಾಫಿಕ್ ಅನ್ನು ಚೇಂಜ್ ಮಾಡಿ ಅಯ್ಯೋ ರಿ ನೀವು ಸ್ನಾನ ಮಾಡಿಕೊಂಡು ಬಂದೇ ಬಿಟ್ಟಿರಾ ಎಂದು ಹೇಳಿದ್ದಾಳೆ. ನನ್ನ ಗಂಡನಿಗೆ ನಾನು ಕಾಫಿಯನ್ನು ಕೊಡಬೇಕು ಮತ್ತೆ ನಿಮಗೆ ಸಿಗುತ್ತೇನೆ ಅಕ್ಕ ಬಾಯ್ ಎಂದು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಲು ಪ್ರಯತ್ನಿಸಿದ್ದಾಳೆ.
ಹೇಗಿದ್ದರೂ ಚಾರುಗೆ ರಾಮಾಚಾರಿ ನನಗೆ ಬೈಯುತ್ತಾನೆ ಎಂಬುವುದು ಕನ್ಫರ್ಮ್ ಆದಮೇಲೆ ಮನೆಯಿಂದ ಹೊರಗಡೆ ಓಡಿ ಬಂದಿದ್ದಾಳೆ ರಾಮಾಚಾರಿ ಸಹಚಾರಿ ಹಿಂದೆ ಓಡೋಡಿ ಬಂದಿದ್ದಾನೆ. ಇನ್ನು ವೈಶಾಖ ಇವರಿಬ್ಬರೂ ಏನು ಮಾತನಾಡಿಕೊಳ್ಳುತ್ತಾರೆ ಎಂದು ಕೇಳಿಸಿಕೊಳ್ಳಬೇಕು ಎಂದುಕೊಂಡು ಹೆಚ್ಚಿನ ಬಾಗಿಲ ಕಡೆ ವೈಶಾಖ ಸಹ ಬಂದಿದ್ದಾಳೆ. ನಮ್ಮಿಬ್ಬರ ನಡುವೆ ಏನು ನಡೆಯಿತು ಏನು ನಡೆಯದೇ ಇದ್ದರೂ ಸಹ ಯಾಕೆ ಸುಳ್ಳನ್ನ ಹೇಳುತ್ತಿದ್ದೀರಿ ಎಂದು ರಾಮಾಚಾರಿ ಚಾರುಗೆ ಪ್ರಶ್ನೆ ಮಾಡಿದ್ದಾನೆ.
ಸಂಸಾರದ ಗುಟ್ಟು ವ್ಯಾದಿ ರಟ್ಟು ಎನ್ನುತ್ತಾರೆ ಅದನ್ನು ಆ ರೀತಿಯಲ್ಲ ರಟ್ಟು ಮಾಡಲು ಆಗುವುದಿಲ್ಲ ಎಂದು ಹೇಳುತ್ತಾಳೆ. ಇದಕ್ಕೆ ಪ್ರತ್ಯುತ್ತರವಾಗಿ ರಾಮಾಚಾರಿ ಬಬ್ಲು ಸಾರ್ ಕೈಯಲ್ಲಿ ಮಾಡಿಸಿದ್ದು ಏನು ಎಂದು ಮರು ಪ್ರಶ್ನೆಯನ್ನು ಹಾಕಿದ್ದಾನೆ. ಇದಕ್ಕೆ ಚಾರು ಜೋರಾಗಿ ಅಳಲು ಶುರು ಮಾಡಿದ್ದಾಳೆ. ರಾಮಾಚಾರಿಯಲು ನೋಡಿದ ಚಾರಿಗೆ ಸಹಿಸಿಕೊಳ್ಳಲು ಆಗದೆ ಮೊದಲು ಅಳು ನಿಲ್ಲಿಸಿ ಎಂದು ಹೇಳಿ ಮನೆಯ ಒಳಗೆ ಹೋಗಿದ್ದಾನೆ. ಹೇಗೋ ಗಂಡನನ್ನ ಬ್ಲ್ಯಾಕ್ಮೇಲ್ ಮಾಡಲು ಅಳುವ ಅಸ್ತ್ರ ಸಿಕ್ಕಿದೆ, ಇದನ್ನೇ ನಾನು ಉಪಯೋಗಿಸಿಕೊಳ್ಳಬೇಕು ಎಂದು ಚಾರು ಅಂದುಕೊಂಡಿದ್ದಾಳೆ.
ಮಾನ್ಯತಾಗೆ ಯಾರೋ ಫೋನ್ ಮಾಡಿ ನಿನ್ನ ಮಗಳ ಮೊದಲ ಶಾಸ್ತ್ರ ರಾಮಾಚಾರಿ ಜೊತೆಯಲ್ಲಿ ನಡೆಯುತ್ತಿದೆ .ಅವರಿಬ್ಬರು ಹೊಸದಾಗಿ ಸಂಸಾರವನ್ನು ಮಾಡಲು ಶುರು ಮಾಡಿದ್ದಾರೆ ಎಂದು ಹೇಳಿದ್ದಾಳೆ. ಇದಕ್ಕೆ ಜೋರಾಗಿ ಮಾನ್ಯತಾ ಕಿರುಚಿದ್ದಾಳೆ. ಇದು ಜೈ ಶಂಕರ್ ಕಿವಿಗೂ ಬಿದ್ದಿದ್ದು ಯಾಕೆ ಕಿರುಚುತ್ತಿದ್ದೀಯಾ ಎಂದು ಕೇಳಿದ್ದಾನೆ. ನನ್ನ ಮಗಳನ್ನ ನಾನು ಈ ಮನೆಗೆ ವಾಪಸ್ ಕರೆದುಕೊಂಡು ಬರಬೇಕು ಆಗ ನೆಮ್ಮದಿ ಎಂದು ಮಾನ್ಯತಾ ಹೇಳಿಕೊಂಡಿದ್ದಾಳೆ.
ರಾಮಾಚಾರಿ ಹಾಗೂ ಚಾರು ಜಗಳವಾಡುತ್ತಿದ್ದುದ್ದನ್ನು ನೋಡಿದ ವೈಶಾಖಾಗೆ ತುಂಬಾ ಖುಷಿಯಾಗಿದೆ . ಈ ವೇಳೆ ಚಾರು ಬಳಿ ಬಂದು ಯಾಕೆ ಜಗಳವಾಡುತ್ತಿದ್ದೀರ ಎಂದು ಕೇಳಿದ್ದಾಳೆ. ನಾವೆಲ್ಲಿ ಜಗಳವಾಡುತ್ತಾ ಇದ್ದೆವು ಹೀಗೆ ಸುಮ್ಮನೆ ಬಂದು ನಿಂತುಕೊಂಡಿದ್ದೆವು ಎಂದು ಚಾರು ವೈಶಾಖ ಬಳಿಯಲ್ಲಿ ಹೇಳಿದ್ದಾಳೆ. ಇವಳು ನನ್ನನ್ನ ಉರಿಸುವುದರಲ್ಲಿ ನಂಬರ್ ಒನ್ ಆಗಿದ್ದಾಳೆ ಎಂದು ವೈಶಾಖ ಸುಮ್ಮನೆ ಯಾಗಿದ್ದಾಳೆ.


Click it and Unblock the Notifications











