Ramachari: ಚಾರುಗೆ ಜೀವನದ ಪಾಠ ಮಾಡಿದ ರಾಮಾಚಾರಿ: ಅಮ್ಮನ ಪ್ರೀತಿ ತೋರಿದ ಜಾನಕಿ!

By ಶೃತಿ ಹರೀಶ್ ಗೌಡ

ರಾಮಾಚಾರಿ ಆಫೀಸ್ ಗೆ ಹೋದವನೇ ಬಬ್ಲು ಸರ್ ಗೆ ಕ್ಲಾಸ್ ತೆಗೆದುಕೊಂಡಿದ್ದಾನೆ. ದಯವಿಟ್ಟು ಇನ್ಮುಂದೆ ನಮ್ಮ ಮನೆಯವರಿಗೆ ನೋವಾಗುವ ರೀತಿಯಲ್ಲಿ ಯಾವುದೇ ಕೆಲಸವನ್ನು ಮಾಡಬೇಡಿ ಎಂದು ಹೇಳಿದ್ದಾನೆ. ಬಬ್ಲು ಸರ್ ಸಹ ಏನು ಮಾತನಾಡದೆ ರಾಮಾಚಾರಿ ಬೈದಿದ್ದನ್ನೆಲ್ಲ ಕೇಳಿಸಿಕೊಂಡು ಸುಮ್ಮನೆ ಯಾಗಿದ್ದಾರೆ. ಇನ್ನು ಎಲ್ಲಾ ಸಿಬ್ಬಂದಿ ಸಹ ಬಬ್ಲು ಸರ್ ನೋಡುತ್ತಾ ಇದ್ದಾಗ ನೀವೆಲ್ಲರೂ ಸುಮ್ಮನೆ ಕೆಲಸ ಮಾಡಿ ಎಂದು ಹೇಳಿದ್ದಾರೆ.

ಮನೆಯಲ್ಲಿ ಚಾರು ಏನೋ ಅಧಿಕ ಪ್ರಸಂಗಿತನ ಮಾಡಿದ್ದಾಳೆ. ಇದೆ ವೇಳೆ ನಾರಾಯಣ ಆಚಾರ್ಯರು ಸಹ ಚಾರು ಮಾತನ್ನ ಕೇಳಿಸಿಕೊಂಡಿದ್ದಾರೆ. ನನ್ನ ಗಂಡ ರಾತ್ರಿ ಎಲ್ಲಾ ನಿದ್ದೆ ಮಾಡಲು ಬಿಡಲಿಲ್ಲ ಎಂದು ಹೇಳಿದಾಗ ನಾರಾಯಣ ಆಚಾರ್ಯರಿಗೆ ಚಾರು ಮಾತನ್ನ ಕೇಳಿ ಇರಿಸು ಮುರಿಸಾಗಿದೆ. ಇದೆ ವೇಳೆ ನಾರಾಯಣ ಆಚಾರ್ಯರು ಈ ಮನೆಯಲ್ಲಿ ಮೊದಲು ಮಂತ್ರ ವಾಕ್ಯಗಳು ಕೇಳುತ್ತಿದ್ದವು. ಆದರೆ ಈಗ ಬೇರೆ ಮಾತುಗಳು ಕೇಳುತ್ತಿವೆ ಎಂದು ಬೇಸರವನ್ನ ಮಾಡಿಕೊಂಡಿದ್ದಾರೆ.

colors-kannada-ramachari-serial

ಮನೆಯಲ್ಲಿ ಎಲ್ಲರೂ ಸಹ ರಾಮಾಚಾರಿಗೆ ಬೈದಿದ್ದಾರೆ ಯಾಕೆಂದರೆ ಬಬ್ಲು ಸರ್ ಮಾಡಿದ ಕಿತಾಪತಿ ಹಾಗೂ ಚಾರು ಎಡವಟ್ಟಿನಿಂದ ಈಗ ರಾಮಾಚಾರಿ ಮನೆಯವರೆಲ್ಲರ ಮುಂದೆ ಸಣ್ಣವನಾಗಿದ್ದಾನೆ. ಏನಾದರೂ ಬೈದರೆ ಬೇಸರವಾಗುತ್ತದೆ ಎಂದು ಚಾರು ಮಾಡಿದ ಕಿತಾಪತಿಯೆಲ್ಲವನ್ನು ಸಹ ತನ್ನ ಮೈ ಮೇಲೆ ರಾಮಾಚಾರಿ ಎಳೆದುಕೊಂಡಿದ್ದಾನೆ. ಅಜ್ಜಿ ಬಳಿ ಚಾರು ಸತ್ಯ ಹೇಳಲು ಹೊರಟಾಗಲು ಸಹ ರಾಮಾಚಾರಿ ಅದನ್ನು ತನ್ನ ಮೇಲೆ ಬರುವಂತೆ ಮಾಡಿಕೊಂಡಿದ್ದಾನೆ.

ಚಾರು ಮನೆಗೆ ಬಂದ ದಿನದಿಂದಲೂ ಸಹ ಒಂದಲ್ಲ ಒಂದು ಎಡವಟ್ಟು ಮಾಡಿ ರಾಮಾಚಾರಿಯನ್ನು ಕೋಪಕ್ಕೆ ಗುರಿಯಾಗುವಂತೆ ಮಾಡುತ್ತಿದ್ದಾಳೆ. ಇನ್ನೂ ನಾರಾಯಣ ಆಚಾರ್ಯರಿಗೆ ರಾಮಾಚಾರಿಯ ಮೇಲೆ ಮತ್ತಷ್ಟು ಸಿಟ್ಟು ಇದ್ದು ಚಾರು ಮಾಡುತ್ತಿರುವ ಎಡವಟ್ಟುಗಳಿಂದ ಇನ್ನಷ್ಟು ದ್ವೇಷ ಬರುವಂತೆ ಆಗಿದೆ. ಇಂದು ಸಹ ಅದೇ ರೀತಿ ಆಗಿದೆ ಚಾರು ಮಾಡಿದ ಎಡವಟ್ಟು ರಾಮಾಚಾರಿಗೆ ಉರುಳಾಗಿ ಪರಿಣಮಿಸಿತ್ತು.

ಎಲ್ಲರೂ ಸಹ ರಾಮಾಚಾರಿಗೆ ಬೆಟ್ಟು ಮಾಡಿ ತೋರಿಸಿ ಬೈದರು ಸಹ ರಾಮಾಚಾರಿ ಅಲ್ಲೂ ಸಹ ಚಾರುವನ್ನ ಕಾಪಾಡಿದ. ಇದೇ ವೇಳೆ ರಾಮಾಚಾರಿ ಬಳಿ‌ ಬಂದ ಚಾರು ನನ್ನಿಂದ ಆದ ತಪ್ಪಿಗೆ ನೀನೇಕೆ ಬಯಸಿಕೊಂಡೆ ಎಂದು ಕೇಳಿದ್ದಾಳೆ. ಇದಕ್ಕೆ ಚಾರುಗೆ ರಾಮಾಚಾರಿ ಜೀವನದ ಪಾಠವನ್ನು ಹೇಳಿದ್ದಾನೆ. ಇನ್ನು ಮುಂದೆಯಾದರೂ ನೀವು ಸುಮ್ಮನೆ ಇರಿ ಇಲ್ಲಸಲ್ಲದ ಮಾತುಗಳನ್ನ ಆಡಿ ಮುಜುಗರವನ್ನ ತರಬೇಡಿ ಎಂದು ಹೇಳಿದ್ದಾನೆ. ನೀವು ಸತ್ಯ ಹೇಳಲು ಹೋದರೆ ಅಲ್ಲಿ ಯಾರು ನಂಬುತ್ತಲು ಇರಲಿಲ್ಲ ದಯವಿಟ್ಟು ಇನ್ಮುಂದೆ ಇಂತಹ ಕೆಲಸವನ್ನು ಮಾಡಬೇಡಿ ಎಂದು ಚಾರುಗೆ ರಾಮಾಚಾರಿ ಹೇಳಿದ್ದಾನೆ.

ರಾಮಾಚಾರಿ ಯಾವುದೇ ತಪ್ಪನ್ನು ಮಾಡಿಲ್ಲ ಎಂದು ಜಾನಕಿ ಆಚಾರ್ಯರ ಬಳಿ ಸತ್ಯವನ್ನ ಹೇಳುತ್ತಿದ್ದಾಳೆ. ಆದರೆ ಆಚಾರ್ಯರಿಗೆ ರಾಮಾಚಾರಿ ಯ ಬಗ್ಗೆ ಕೇಳಲು ಸ್ವಲ್ಪವೂ ಸಹ ಇಷ್ಟವಿಲ್ಲ. ಆದರೂ ತಾಯಿಯ ಕರಳು ಪಟ್ಟು ಬಿಡದೆ ರಾಮಾಚಾರಿ ಏನನ್ನು ಮಾಡಿಲ್ಲ ಎಂದು ಹೇಳಿದ್ದಾಳೆ. ಇನ್ನು ರಾಮಾಚಾರಿ ಹಾಗೂ ಚಾರು ನಡುವೆ ಯಾವುದೇ ರೀತಿಯಲ್ಲಿ ಶಾಸ್ತ್ರ ನೀಡಲಿಲ್ಲ ಎಂದು ಜಾನಕಿ ಹೇಳಿದ್ದಾಳೆ. ರಾಮಾಚಾರಿ ಚಾರುವನ್ನ ಬಿಟ್ಟು ಬಂದು ಹೊರಗಡೆ ಮಲಗಿದ್ದ ನಾನೇ ಅದನ್ನ ಕಣ್ಣಾರೆ ನೋಡಿರುವುದಾಗಿ ಜಾನಕಿ ಆಚಾರ್ಯರ ಬಳಿಯಲ್ಲಿ ಹೇಳಿದ್ದಾಳೆ.

ಚಾರು ಬಟ್ಟೆ ಒಗೆಯಲು ಬಂದಾಗ ಜಾನಕಿ ಅಲ್ಲಿಗೆ ಬಂದಿದ್ದಾರೆ ಇದೇ ವೇಳೆ ಅವಳಿಗೆ ತಿಂಡಿಯನ್ನು ತಂದಿದ್ದಾರೆ.‌ ಮೊದಲು ಬಂದು ನೀನು ತಿಂಡಿಯನ್ನ ತಿನ್ನು ನೀನು ತಿಂಡಿ ತಿಂದಿಲ್ಲ ಎಂದು ನನಗೆ ತಿಳಿದಿದೆ. ನಿನ್ನ ಗಂಡನ ಜೊತೆ ಜಗಳ ಮಾಡಿಕೊಂಡು ಮುನಿಸಿಕೊಂಡಿದ್ದಿಯಾ ಎಂದು ಪ್ರೀತಿಯ ಮಾತುಗಳನ್ನ ಹಾಡಿ ಕಾಳಜಿ ತೋರಿದ್ದಾರೆ. ಇದೇ ವೇಳೆ ಜಾನಕಿಯ ಪ್ರೀತಿಯನ್ನ ಕಂಡ ಚಾರು ಕಣ್ಣೀರನ್ನ ಹಾಕಿ ಅತ್ತೆಯನ್ನು ತಬ್ಬಿಕೊಂಡಿದ್ದಾಳೆ.

More from Filmibeat

English summary
Colors Kannada serial Ramachari here details about charu in angry, Ramachari teach to charu for life lesson, janaki telling truth about Ramachari
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X