Ramachari: ಚಾರು ಕಾಳಜಿಯ ಬಗ್ಗೆ ರಾಮಾಚಾರಿಗೆ ಭಯ:ದ್ವಂದ್ವ ಪರಿಸ್ಥಿತಿಗೆ ಸಿಲುಕಿದೆ ರಾಮಾಚಾರಿ ಮನಸ್ಸು
ಚಾರುಗೆ ಜಾನಕಿಯಿಂದ ಅಮ್ಮನ ಪ್ರೀತಿ ಸಿಗುತ್ತಿದೆ ರಾಮಾಚಾರಿ ಬೈದಿದ್ದಾನೆ ಎಂದು ಚಾರು ತಿಂಡಿ ತಿನ್ನದೆ ಬಟ್ಟೆಯನ್ನು ಒಗೆಯಲು ಬಂದಿದ್ದಳು. ಇದನ್ನ ಕಂಡಂತಹ ಜಾನಕಿ ಚಾರುಗೆ ಪ್ರೀತಿಯನ್ನು ತೋರಿಸಿ ಊಟವನ್ನು ಮಾಡಿಸಿದ್ದಾಳೆ. ಜಾನಕಿಯ ಪ್ರೀತಿಗೆ ಜಾರು ಕರಗಿ ಹೋಗಿದ್ದಾಳೆ. ಚಾರು ತನ್ನ ಮನಸ್ಸಿನಲ್ಲಿರುವ ಮಾತನ್ನು ಜಾನಕಿಯ ಬಳಿ ಹೇಳಿಕೊಂಡಿದ್ದಾಳೆ.
ನಾನು ಏನಾದರೂ ಒಂದು ಒಳ್ಳೆಯದು ಮಾಡಲು ಹೋದರೆ ಅಲ್ಲಿ ಏನಾದರೂ ಒಂದು ಎಡವಟ್ಟು ಆಗುತ್ತದೆ ಎಂದು ಹೇಳುತ್ತಿದ್ದಾಳೆ. ಇದಕ್ಕೆ ಜಾನಕಿ ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದು ಹೇಳಿದ್ದಾಳೆ. ಜಾನಕಿ ಚಾರು ಸೀರೆಯನ್ನ ಒಗೆಯುವಾಗ ವೈಶಾಖ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇದಕ್ಕೆ ವೈಶಾಖ ನೂರಾರು ಪ್ರಶ್ನೆಯನ್ನ ಕೇಳುತ್ತಿದ್ದಾಳೆ.

ಯಾಕೋ ನಮ್ಮ ಅತ್ತೆ ಸುಳ್ಳು ಹೇಳುತ್ತಿದ್ದಾರೆ ಇದು ಚಾರು ಸೀರೆಯಾಗಿದೆ ಆದರೂ ಸಹ ಯಾಕೆ ಸುಳ್ಳು ಹೇಳುತ್ತಿದ್ದಾರೆ ಎಂದುಕೊಂಡಿದ್ದಾಳೆ. ನಂತರ ಅಂಡೆಯಲ್ಲಿ ಚಾರು ಬಟ್ಟೆ ಇದೆ ಎಂದು ಹೇಳಿದಾಗ ಜಾನಕಿ ಹೋಗಿ ಅಡುಗೆ ಮನೆಯಲ್ಲಿ ಒಗ್ಗರಣೆಯನ್ನು ಹಾಕಿ ಬಿಡಮ್ಮ ಎಂದು ಹೇಳಿದ್ದಾರೆ. ಬರು ಬರುತ್ತಾ ಅತ್ತೆ ಸೊಸೆ ಬಾಂಡಿಂಗ್ ಚೆನ್ನಾಗಿ ಇದೆ ಇದನ್ನ ನಾನು ಹಾಳು ಮಾಡುತ್ತೇನೆ ಎಂದು ವೈಶಾಖ ಸ್ಕೀಮ್ ಹಾಕಿಕೊಂಡಿದ್ದಾಳೆ.
ಚಾರು ಅಜ್ಜಿಗೆ ಡ್ಯಾನ್ಸ್ ಆಡಲು ಸ್ಟೆಪ್ ಹೇಳಿಕೊಡುವಾಗ ವೈಶಾಖ ಅದನ್ನ ನೋಡಿದ್ದಾಳೆ. ಅಲ್ಲಿ ನೋಡಿದರೆ ಅತ್ತೆಯನ್ನು ಬುಟ್ಟಿಗೆ ಹಾಕಿಕೊಂಡಿದ್ದಾಳೆ. ಈಗ ಅಜ್ಜಿಯನ್ನ ಬುಟ್ಟಿಗೆ ಹಾಕಿಕೊಳ್ಳಲು ಚಾರು ನೋಡುತ್ತಿದ್ದಾಳೆ.ಇದಕ್ಕೆ ಎನಾದ್ರು ಮಾಡಬೇಕು ಎಂದುಕೊಂಡು ಅಜ್ಜಿಯ ಬಳಿ ಬಂದು ಚಾರು ಬಳಿ ಮಾತನಾಡದಂತೆ ಮಾವ ಹೇಳಿದ್ದಾರೆ ನೀವು ಯಾಕೆ ಮಾತನಾಡುತ್ತಿದ್ದೀರಾ ಡ್ಯಾನ್ಸ್ ಸ್ಟೆಪ್ ಅನ್ನ ನಾನೇ ಹೇಳಿಕೊಡುತ್ತೇನೆ ಎಂದು ಹೇಳಿ ರೀಲ್ಸ್‌ಗೆ ಡ್ಯಾನ್ಸ್ ಮಾಡುತ್ತಾ ಇರುತ್ತಾರೆ.
ರೀಲ್ಸ್ ಮಾಡುವಾಗ ಅದನ್ನು ನಾರಾಯಣ ಆಚಾರ್ಯರು ನೋಡಿದ್ದಾರೆ ಜೋರಾಗಿ ವೈಶಾಖ ಎಂದು ಹೋಗಿದ್ದಾರೆ. ಮಾವ ಕೂಗಿದ ರಭಸಕ್ಕೆ ವೈಶಾಖ ಡ್ಯಾನ್ಸ್ ಆಡುವುದನ್ನು ನಿಲ್ಲಿಸಿದ್ದಾಳೆ ನಂತರ ಅಜ್ಜಿಗೆ ಆಚಾರ್ಯರು ಬೈದಿದ್ದಾರೆ. ಏನಮ್ಮ ನಾನು ಎಷ್ಟು ಬಾರಿ ಹೇಳಿಲ್ಲ ಮನೆಯಲ್ಲಿ ಈ ರೀತಿಯಲ್ಲ ಮಾಡಬಾರದು ಎಂದು, ಆದರೂ ಸಹ ನೀನು ಇದನ್ನೇ ಮಾಡುತ್ತಿದ್ದೀಯ ಎಂದು ಅಮ್ಮನಿಗೆ ನಾರಾಯಣ ಆಚಾರ್ಯರು ಬೈದಿದ್ದಾರೆ .
ಆಫೀಸ್ ನಲ್ಲಿ ರಾಮಾಚಾರಿ ಕೆಲಸವನ್ನ ಮಾಡುವಾಗ ಬಬ್ಲು ಸರ್ ರಾಮಾಚಾರಿಯ ಬಳಿ ಬಂದು ಮಾತನಾಡಿದ್ದಾರೆ. ನೀನು ಯಾವುದೋ ಯೋಚನೆಯಲ್ಲಿ ಮುಳುಗಿ ಹೋಗಿದ್ದೀಯಾ, ಅದನ್ನು ನನ್ನ ಬಳಿ ಹೇಳಿಕೊಂಡು ಮನಸ್ಸನ್ನು ಹಗುರ ಮಾಡಿಕೋ ಎಂದು ಹೇಳಿದ್ದಾರೆ. ನಿನ್ನ ಮನಸ್ಸಿನಲ್ಲಿ ನೋವಿನ ಪರ್ವತವಿದೆ ಅದನ್ನು ಮನಸ್ಸು ಬಿಚ್ಚಿ ನನ್ನ ಬಳಿ ಹೇಳು ನಗುವ ನಾಟಕವನ್ನು ಆಡಬೇಡ ಎಂದು ಹೇಳಿದ್ದಾರೆ. ನಾನು ಇದಕ್ಕೂ ಮೊದಲು ಒಳ್ಳೆಯ ಮಗನಾಗಿ ಇದ್ದೆ, ಮನೆಗೆ ಒಳ್ಳೆಯವನಾಗಿ ಇದ್ದೆ, ಆದರೆ ಈಗ ಪರಿಸ್ಥಿತಿ ನನ್ನ ಕೈಯಲ್ಲಿ ಏನೇನು ಮಾಡಿಸಿದೆ ಎಂದೆಲ್ಲ ರಾಮಾಚಾರಿ ಹೇಳಿದ್ದಾನೆ.
ಚಾರು ಮೇಡಂ, ಏನಾದರೂ ಒಂದು ಮಾಡಲು ಹೋಗಿ ಅದು ಎಡವಟ್ಟು ಆಗುತ್ತಿದೆ ಆದರೂ ಸಹ ಅವರು ನಮ್ಮ ಮನೆಗೆ ಹೊಂದಿಕೊಳ್ಳಲು ಕಷ್ಟವನ್ನ ಪಡುತ್ತಿದ್ದಾರೆ ಎಂದು ಚಾರು ಬಗೆಯು ಸಹ ಹೇಳಿದ್ದಾನೆ. ಭಗವಂತ ತಾಕತ್ತಿರುವ ಕಲ್ಲನ್ನೇ ಆಯ್ಕೆ ಮಾಡಿಕೊಂಡು ಪೆಟ್ಟನ್ನು ಕೊಡುತ್ತಾನೆ ಇದೆಲ್ಲವೂ ತಾತ್ಕಾಲಿಕ ಮುಂದೆ ಒಳ್ಳೆಯದೇ ಆಗುತ್ತದೆ ಎಂದು ಬಬ್ಲು ಸರ್ ರಾಮಾಚಾರಿಗೆ ಹೇಆಡಿದ್ದಾನೆ.ಚಾರು ಮೇಡಂ ಸಹ ಮನೆಯವರಿಗೆ ಹೊಂದಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೆಂಡತಿ ಬಗ್ಗೆ ರಾಮಾಚಾರಿ ಒಳ್ಳೆಯ ಮಾತುಗಳನ್ನು ಆಡಿದ್ದಾನೆ.


Click it and Unblock the Notifications











