Ramachari: ಚಾರುಗೆ ಕೇಡು ಬಯಸಿದ ವೈಶಾಖಗೆ ತಿರುಮಂತ್ರ; ಉಪ್ಪಿನ ಕಾಫಿ ಕುಡಿದ ಕೋದಂಡ

By ಶೃತಿ ಹರೀಶ್ ಗೌಡ

ರಾಮಾಚಾರಿ ಧಾರಾವಾಹಿಯಲ್ಲಿ ಪ್ರತಿದಿನವೂ ಒಂದಲ್ಲ ಒಂದು ಟ್ವಿಸ್ಟ್ ಇದೆ. ಅದು ಅಲ್ಲದೆ ವೈಶಾಖ ಚಾರುವನ್ನು ಮನೆ ಬಿಟ್ಟು ಓಡಿಸಬೇಕು ಎಂದು ಸ್ಕೀಮ್ ಹಾಕಿಕೊಂಡಿದ್ದಾಳೆ. ಇದಕ್ಕಾಗಿ ಪದೇ ಪದೇ ರಾಮಾಚಾರಿಯ ಕೈನಲ್ಲಿ ಬೈಸಬೇಕು ಎಂದುಕೊಂಡಿದ್ದಾಳೆ. ಇನ್ನೂ ಚಾರು ಹೊಟ್ಟೆ ಹುರಿದುಕೊಂಡು ತನ್ನ ಗಂಡನಿಗೂ ಇದೇ ರೀತಿ ಮಾಡಬೇಕು ಎಂದುಕೊಂಡು ಗಂಡನ ಕೈಕಾಲನ್ನ ಒತ್ತಲು ವೈಶಾಖ ಶುರು ಮಾಡಿದ್ದಾಳೆ. ಆದರೆ ಚಾರು ಬೇರೆಯದೇ ಪ್ರಯತ್ನವನ್ನ ಮಾಡಿ ವೈಶಾಖಗಳನ್ನು ಹುರಿಸಿದ್ದಾಳೆ.

ಚಾರು ರಾಮಾಚಾರಿಗೆ ಕಾಫಿ ಬೇಕಾ ಎಂದು ಕೇಳಿದ್ದಾಳೆ ಇದಕ್ಕೆ ರಾಮಾಚಾರಿ ಹೂ ಮೇಡಂ ಮಾಡಿಕೊಂಡು ಬನ್ನಿ ಎಂದಿದ್ದಾನೆ. ರಾಮಾಚಾರಿಯನ್ನ ಫ್ರೆಶ್ ಅಪ್ ಆಗಿ ಬಾ ಎಂದು ಹೇಳಿದ ಚಾರು ಅಡುಗೆ ಮನೆಗೆ ಕಾಫಿ ಮಾಡಲು ಬಂದಿದ್ದಾಳೆ. ಆದರೆ ಚಾರುಗೆ ಕಾಫಿಯನ್ನು ಮಾಡಲು ಬರುವುದೇ ಇಲ್ಲ ಹೇಗಿದ್ದರೂ ವೈಶಾಖ ಕೋಪ ಮಾಡಿಕೊಂಡು ಅಡುಗೆ ಮನೆಗೆ ಬಂದೇ ಬರುತ್ತಾಳೆ ಎಂದುಕೊಂಡ ಚಾರು ಸುಮ್ಮನೆ ಅಡುಗೆ ಮನೆಯ ಸುತ್ತ ಕಣ್ಣಾಡಿಸುತ್ತಾ ನಿಂತಿದ್ದಾಳೆ.

Colors Kannada Ramachari serial Written Update on july 31th episode

ಅಡುಗೆ ಮನೆಗೆ ಬಂದ ವೈಶಾಖ ಮೊದಲು ನಾನು ನನ್ನ ಗಂಡನಿಗೆ ಕಾಫಿಯನ್ನು ಮಾಡಿಕೊಂಡು ಹೋಗಿ ಕೊಡಬೇಕು ನಂತರ ನೀನು ಬೇಕಾದರೆ ಮಾಡಿಕೊಂಡು ಹೋಗು ಎಂದಿದ್ದಾಳೆ. ಈ ವೇಳೆ ಚಾರು ನನಗೆ ಕಾಫಿಯನ್ನೇ ಮಾಡಲು ಬರುವುದಿಲ್ಲ. ನಾನು ಈ ರೀತಿ ಹೇಳಿದರೆ ನೀನು ಅಡುಗೆ ಮನೆಗೆ ಬರುತ್ತೀಯಾ. ಅದಕ್ಕಾಗಿ ನಾನು ಆ ರೀತಿ ಹೇಳಿದೆ ಹೇಗಿದ್ದರೂ ಭಾವನಿಗೆ ಕಾಫಿ ಮಾಡುತ್ತೀಯಾ. ನನ್ನ ಗಂಡನಿಗೂ ಒಂದು ಲೋಟ ಕಾಫಿಯನ್ನ ಮಾಡಿಕೊಡು ಎಂದು ವೈಶಾಖ ಬಳಿಯಲ್ಲಿ ಚಾರು ಕೇಳಿಕೊಂಡಿದ್ದಾಳೆ.

ಮಾಡಿದ್ದುಣ್ಣೋ ಮಹಾರಾಯ ಎನ್ನುವಂತೆ ವೈಶಾಖ ಪರಿಸ್ಥಿತಿ ಇದೆ, ಯಾಕೆಂದರೆ ರಾಮಾಚಾರಿಗೆ ಉಪ್ಪಿನ ಕಾಫಿಯನ್ನ ವೈಶಾಖ ಮಾಡಿಕೊಟ್ಟಿದ್ದಳು. ಅದು ಚಾರು ಬೈಸಿಕೊಳ್ಳಬೇಕು ಎಂದು ಮಾಡಿಕೊಟ್ಟ ಕಾಫಿ ಆಗಿತ್ತು. ತನ್ನ ಗಂಡನಿಗೆ ಗಟ್ಟಿ ಹಾಲಿನ ಸಕ್ಕರೆಯ ಕಾಫಿಯನ್ನು ಮಾಡಿ ಕೊಟ್ಟಿದ್ದಳು. ಆದರೆ ಕೋದಂಡನೇ ಉಪ್ಪು ಇರುವ ಕಾಫಿಯನ್ನು ಕುಡಿಯುವ ರೀತಿ ಆಗಿದೆ. ಉಪ್ಪು ಇರುವ ಕಾಫಿಯನ್ನು ಕುಡಿದ ಕೋದಂಡ ವೈಶಾಖಗೆ ಬೈದಿದ್ದಾನೆ.

ರಾಮಾಚಾರಿ ಅವರ ಅಣ್ಣ ಕೋದಂಡ ಕಾಫಿನ ಇಟ್ಟು ಒಳಗೆ ಹೋದಾಗ ಚಾರು ಬಳಿ ಅಣ್ಣನಿಗೆ ಯಾಕೆ ಅಷ್ಟು ಕಾಫಿ ಕೊಟ್ಟಿದ್ದೀಯಾ. ನನಗೆ ಯಾಕೆ ಒಂದು ಲೋಟದ ತುಂಬಾ ಕೊಟ್ಟಿದ್ದೀಯಾ ಎಂದು ಚಾರುವನ್ನ ಪ್ರಶ್ನೆ ಮಾಡಿದ್ದಾನೆ .ಚಾರು ಎನನ್ನು ಹೇಳದೆ ಹೋದಾಗ ಸ್ವಲ್ಪ ಇರುವ ಕಾಫಿಯನ್ನು ತಾನು ತೆಗೆದುಕೊಂಡು. ಹೆಚ್ಚಾಗಿದ್ದ ಕಾಫಿಯ ಲೋಟವನ್ನು ತನ್ನ ಅಣ್ಣ ಇಟ್ಟು ಹೋಗಿದ್ದ ಜಾಗದಲ್ಲಿ ಇಟ್ಟಿದ್ದಾನೆ. ಆ ಕಾಫಿಯನ್ನು ಕೋದಂಡ ಎತ್ತಿಕೊಂಡು ಕುಡಿದಿದ್ದು ಅದರಲ್ಲಿ ಉಪ್ಪು ಇರುವುದು ತಿಳಿದು ವೈಶಾಖಗೆ ಮಂಗಳಾರತಿ ಮಾಡಿದ್ದಾನೆ. ತಾನು ಮಾಡಿದ ಪ್ಲಾನ್ ಉಲ್ಟಾ ಆಗಿದ್ದಕ್ಕೆ ವೈಶಾಖಾಗೆ ತುಂಬಾ ಬೇಸರವಾಗಿದೆ.

ಮಾನ್ಯತಾ ತನ್ನ ಮಗಳ ಸಂಸಾರವನ್ನೇ ಹಾಳು ಮಾಡಬೇಕು ಎಂದುಕೊಂಡಿದ್ದಾಳೆ ಇದಕ್ಕಾಗಿ ಬೇರೆಯವರಿಗೆ ಸುಪಾರಿ ಕೊಡಲು ಹೊರಟಿರುವ ಸತ್ಯವನ್ನು ತಿಳಿದ ಜೈ ಶಂಕರ್ ತನ್ನ ಹೆಂಡತಿ ಮಾನ್ಯತಾಳನ್ನು ಒಂದು ರೂಮ್‌ನಲ್ಲಿ ಕೂಡಿ ಹಾಕಿದ್ದಾನೆ. ಮಾನ್ಯತಾ ಎಷ್ಟೇ ಹೇಳಿದರು ಸಹ ಬಾಗಿಲನ್ನ ತೆಗೆಯುತ್ತಿಲ್ಲ ಜೊತೆಗೆ ಮನೆಯಲ್ಲಿರುವವರು ಯಾರು ಸಹ ಬಾಗಿಲನ್ನು ತೆಗೆಯಬಾರದು ಎಂದು ಆರ್ಡರ್ ಮಾಡಿದ್ದಾನೆ.

ಕೊನೆಗೆ ಮಾನ್ಯತಾ ರೂಮ್ ನಿಂದ ಹೊರಗೆ ಬಂದು ಜೈ ಶಂಕರ್ ಕಾಲಿಗೆ ಬಿದ್ದು ನಾನು ತಪ್ಪನ್ನ ಮಾಡಿದೆ ಇನ್ಮುಂದೆ ಈ ರೀತಿ ಮಾಡೋದಿಲ್ಲ ದಯವಿಟ್ಟು ಕ್ಷಮಿಸು ಎಂದು ಬೇಡಿಕೊಂಡಿದ್ದಾಳೆ.‌ ಜೈ ಶಂಕರ್ ಮುಂದೆ ನಾಟಕವನ್ನು ಆಡುತ್ತಿದ್ದೇನೆ ಆದರೆ ನಾನು, ನನ್ನ ಮಗಳ ಸಂಸಾರವನ್ನ ಹಾಳು ಮಾಡೇ ಮಾಡುತ್ತೇನೆ ಎಂದು ಮನಸ್ಸಿನಲ್ಲಿ ಹೇಳಿಕೊಂಡಿದ್ದಾಳೆ. ಮಾನ್ಯತಾಗೆ ಇರುವುದು ಒಂದೇ ಆಸೆ ನನ್ನ ಮಗಳು ನಾನು ಹೇಳಿದ ಹುಡುಗನನ್ನ ಮದುವೆಯಾಗಬೇಕು ಆ ರಾಮಾಚಾರಿಯನ್ನ ಬಿಟ್ಟು ಬರಬೇಕು ಎಂಬುದೇ ಆಗಿದೆ.

More from Filmibeat

English summary
Colors Kannada serial Ramachari here details about vaishaka plan ulta, manyatha new plan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X