Ramachari: ನಾರಾಯಣ ಆಚಾರ್ಯರ ಮುಂದೆ ಸೊಸೆಯಂದಿರ ಫೈಟ್: ಚಾರುವಿನದ್ದೇ ಮೇಲುಗೈ!
ಈಗ ಚಾರು ಮುಂದೆ ಇರುವ ಗುರಿ ಏನೆಂದರೆ ಮನೆಯೊಳಗೆ ಹೋಗುವುದಾಗಿದೆ. ತನ್ನ ಗಂಡ ನಾರಾಯಣ ಆಚಾರ್ಯರಿಂದ ದೂರ ಉಳಿದಿರುವುದಕ್ಕೆ ಬೇಸರ ಮಾಡಿಕೊಂಡಿದ್ದಾನೆ ಎಂದು ಚಾರು ತಿಳಿದುಕೊಂಡಿದ್ದಾಳೆ. ರಾಮಾಚಾರಿಗಾಗಿ ಮನೆಯೊಳಗೆ ಬಂದೇ ಬರುತ್ತೇವೆ ಎಂದು ವೈಶಾಖ ಬಳಿ ಚಾಲೆಂಜ್ ಹಾಕಿದ್ದಾಳೆ. ರಾಮಾಚಾರಿಯ ತಾಯಿ ಜಾನಕಿ ಮಗ ಚಳಿಯಲ್ಲಿ ಮಲಗಿದ್ದಾನೆ ಎಂದು ಬೆಡ್ ಶೀಟನ್ನ ತಂದು ಮಗಮ ಮೇಲೆ ಹಾಕಿದ್ದಾರೆ.
ಈ ವೇಳೆ ಜಾನಕಿ ಹೋಗುವಾಗ ರಾಮಾಚಾರಿ ಕೂಗಿ ಮಾತನಾಡಿಸಿದ್ದಾನೆ. ಆದರೆ ಜಾನಕಿ ನೀನು ನನ್ನ ಕಣ್ಣ ಮುಂದೆ ಇರಬೇಡ ದಯವಿಟ್ಟು ಎಲ್ಲಾದರೂ ದೂರ ಹೋಗಿ ಬದುಕು ಎಂದು ಕಣ್ಣೀರನ್ನು ಹಾಕಿದ್ದಾಳೆ. ನನ್ನ ಗಂಡನಿಗೂ ಸಹ ನೀನು ನೋವು ಕೊಡಬೇಡ. ದಯವಿಟ್ಟು ಎಲ್ಲಾದರೂ ಹೋಗಿ ಬದುಕಿಕೋ ಎಂದು ಹೇಳಿದ್ದಾಳೆ. ಈ ಮಾತನ್ನು ಅಜ್ಜಿ ಸಹ ಕೇಳಿಸಿಕೊಂಡಿದ್ದು ಏನು ಮಗನ ಸೇವೆ ಜೋರಾಗಿ ಇದೆ. ಮಗನನ್ನು ಹೋಗಿ ಬದುಕಿಕೋ ಎಂದು ಹೇಳುತ್ತಿದ್ದೀಯ ಎಂದು ಕೇಳಿದ್ದಾರೆ.

ಇದಕ್ಕೆ ಜಾನಕಿ ಚಳಿಯಲ್ಲಿ ನಡುಗುತ್ತಾ ಮಲಗಿದ್ದನು ಅದಕ್ಕಾಗಿ ನಾನು ಬೆಡ್ ಶೀಟನ್ನು ಮುಚ್ಚಿದೆ. ಮಾನವೀಯತೆ ಇರುವವರು ಯಾರಾದರೂ ಸರಿ ಈ ಕೆಲಸವನ್ನ ಮಾಡುತ್ತಾರೆ ಎಂದು ಕರುಳಿನ ಬಗ್ಗೆ ಹೇಳಿದ್ದಾರೆ. ಇನ್ನು ರಾಮಾಚಾರಿ ಅಮ್ಮ ಹೋದ ಮೇಲೆ ಅಮ್ಮನ ಬಗ್ಗೆ ಯೋಚನೆ ಮಾಡುತ್ತಾ ಬೇಸರ ಮಾಡಿಕೊಂಡಿದ್ದಾನೆ. ಚಾರು ಮಾತ್ರ ಹೇಗಾದರೂ ಮಾಡಿ ಮನೆಯ ಒಳಗೆ ಹೋಗಬೇಕು ಎಂದುಕೊಂಡಿದ್ದಾಳೆ.
ಚಾರು ಹೇಗಾದರೂ ಮನೆಯ ಒಳಗೆ ಹೋಗಬೇಕು ಎಂದುಕೊಂಡು ವೈಶಾಖಳ ಸೀರೆಗಳನ್ನೆಲ್ಲ ತಂದು ಟೆಂಟ್ ಹಾಕಿಕೊಂಡಿದ್ದಾಳೆ. ಈ ವೇಳೆ ಟೆಂಟ್ ಹಾಕಿರುವ ಸ್ಥಳಕ್ಕೆ ಬಂದ ವೈಶಾಖ ನನ್ನ ಸೀರೆ ಕದ್ದುಕೊಂಡು ಬಂದಿದ್ದೀಯಾ ಕಳ್ಳಿ ಎಂದಿದ್ದಾಳೆ. ಅಕ್ಕ ತಂಗಿಯ ಸೀರೆಯನ್ನು ಪ್ರೀತಿಯಿಂದ ತೆಗೆದುಕೊಂಡು ಬಂದಿದ್ದಾಳೆ.
ಈ ವೇಳೆ ಚಾರು ನೈಸಾಗಿ ಮಾತನಾಡಿದ್ದಾಳೆ ಆದರೆ,ವೈಶಾಖ ಜೋರು ಮಾಡಿದಾಗ ನೀನು ಹೇಳಿದಂತೆ ನಾನೇನು ಟೆಂಟನ್ನು ಖಾಲಿ ಮಾಡುವುದಿಲ್ಲ ಎಂದಿದ್ದಾಳೆ. ಇರು ನಿನಗೆ ಮಾಡ್ತೇನೆ ಎಂದಾಗ ನೀನೇನು ನನ್ನ ಮಾವ ಅತ್ತೆ ನಾ ಹೋಗಲೇ ಎಂದು ವೈಶಾಖಗೆ ಚಾರು ಹೇಳಿದ್ದಾಳೆ.
ವೈಶಾಖ ಮನೆಯ ಒಳಗೆ ಹೋಗಿ ಆಚಾರ್ಯರ ಬಳಿ ಚಾರು ಮೇಲೆ ಚಾಡಿಯನ್ನು ಹೇಳಿದ್ದಾಳೆ. ಅತ್ತೆ,ಮಾವ, ಅಜ್ಜಿ ನಮ್ಮ ಮನೆಯ ಮಾನ ಮರ್ಯಾದೆ ಎಲ್ಲಾ ಹರಾಜು ಆಗುತ್ತಿದೆ. ನಾನು ಕೇಳಲು ಹೋದರೆ ನೀನ್ಯಾವಳೇ ಕೇಳಲು ಎಂದಳು ಎಂದೆಲ್ಲ ಹೇಳಿದ್ದಾಳೆ. ಬನ್ನಿ ಮಾವ ನೀವೇ ಕೇಳಿ ಎಂದಿದ್ದಾಳೆ.
ಇನ್ನೂ ನಮ್ಮ ಮನೆಯಲ್ಲಿದ್ದ ಬೆಡ್‌ಶೀಟ್ ಸಹ ಚಾರು ಎತ್ತುಕೊಂಡಿದ್ದಾಳೆ ಎಂದು ಹೇಳಿದ್ದಾಳೆ. ಇದಕ್ಕೆ ಜಾನಕಿ ನಾನು ಸರಿಯಾದ ರೀತಿ ಒಣಗಿಲ್ಲ ಎಂದು ಹಿತ್ತಲಿನಲ್ಲಿ ಒಣಗಿ ಹಾಕಿದ್ದೆ ಅದನ್ನ ಚಾರು ಎತ್ತುಕೊಂಡಿರಬೇಕು ಎಂದಿದ್ದಾರೆ. ವೈಶಾಖ ಚಾರು ಮೇಲೆ ಕೋಪ ಬರುವಂತೆ ನಾರಾಯಣ ಆಚಾರ್ಯರ ಬಳಿ ಹೇಳಿದ್ದಾರೆ. ನಾರಾಯಣ ಆಚಾರ್ಯರು ಚಾರುವನ್ನು ನಾನು ಎಲ್ಲವನ್ನ ಕೇಳುತ್ತೇನೆ ಬಾ ಎಂದು ವೈಶಾಖಳನ್ನು ಕರೆದುಕೊಂಡು ಬಂದಿದ್ದಾರೆ.
ನೋಡಿ ಮಾವ ನಮ್ಮ ಮನೆಗೆ ಹಲವಾರು ಜನ ಬಂದು ಹೋಗುತ್ತಾರೆ. ಅವರೆಲ್ಲರೂ ಸಹ ನಮ್ಮನ್ನ ನೋಡಿ ಆಡಿಕೊಳ್ಳಲಿ ಎಂದು ಚಾರು, ಟೆಂಟ್ ಅನ್ನು ಹಾಕಿಕೊಂಡಿದ್ದಾಳೆ ಎಂದು ವೈಶಾಖ ಆಚಾರ್ಯರ ಬಳಿ ಹೇಳಿದ್ದಾಳೆ. ಇದಕ್ಕೆ ಚಾರು ನಾನು ಬಟ್ಟೆಯನ್ನು ಬದಲಿಸಬೇಕಿತ್ತು , ಗಂಡಸರು ಹೇಗೋ ಬಟ್ಟೆ ಬದಲಿಸುತ್ತಾರೆ ನಾನು ಹೆಣ್ಣು ಎನು ಮಾಡಲಿ ಎಂದು ಪ್ರಶ್ನೆಯನ್ನು ಹಾಕಿದ್ದಾಳೆ.
ಈ ವೇಳೆ ವೈಶಾಖ ಇವಳು ಈ ರೀತಿ ಹೇಳಿಕೊಂಡು ಮನೆಯ ಒಳಗೆ ಬರಲು ಪ್ಲಾನ್ ಮಾಡಿದ್ದಾಳೆ ನಂಬಬೇಡಿ ಮಾವ ಎಂದು ಹೇಳಿದ್ದಾಳೆ. ಚಾರು ವೈಶಾಖ ಜೊತೆಗೆ ಜಗಳಕ್ಕೆ ನಿಂತಿದ್ದಾಳೆ. ನಾನು ಏನು ಒಳಗೆ ಬರುವುದಿಲ್ಲ ನೀನು ಸಹ ಬಾಯಿಗೆ ಬಂದಂತೆ ಮಾತನಾಡಬೇಡ ಎಂದು ಚಾರು ಕೆನ್ನೆಗೆ ವೈಶಾಖ ಒಡೆಯಲು ಹೋದಾಗ ಬಿಗಿಯಾಗಿ ವೈಶಾಖಳ ಕೈಯನ್ನ ಚಾರು ಹಿಡಿದುಕೊಂಡಿದ್ದಾಳೆ. ನಾರಾಯಣ ಆಚಾರ್ಯರ ಮುಂದೆ ಇಬ್ಬರೂ ಸೊಸೆಯರು ಕಿತ್ತಾಡಿದ್ದಾರೆ.


Click it and Unblock the Notifications











