Ramachari: ಪದೇಪದೇ ಅವಮಾನ ಮಾಡುತ್ತಿರುವ ಆಚಾರ್ಯರು: ಧೃತಿಗೆಡದ ಚಾರುವಿನಿಂದ ಮತ್ತಷ್ಟು ಪ್ರಯತ್ನ
ಚಾರು ಮನೆಯ ಒಳಗೆ ಹೋಗಬೇಕು ಎಂದು ಮಾಡುತ್ತಿರುವ ಎಲ್ಲಾ ಪ್ಲಾನ್‌ಗಳಿಗೂ ಸಹ ನಾರಾಯಣ ಆಚಾರ್ಯರು ಅವಮಾನವನ್ನ ಮಾಡುತ್ತಿದ್ದಾರೆ. ಆದರೂ 24 ಗಂಟೆಯೊಳಗೆ ಮನೆಯೊಳಗೆ ಹೋಗಲೇಬೇಕು ಎಂದು ಚಾರುಲತಾ ಪಣವನ್ನ ತೊಟ್ಟಿದ್ದಾಳೆ. ವೈಶಾಖ ಮಾತ್ರ ಉರಿಯುವ ತುಪ್ಪಕ್ಕೆ ಬೆಂಕಿ ಸುರಿದಂತೆ ಚಾರು ಬಗ್ಗೆ ಇಲ್ಲ ಸಲ್ಲದ ಚಾಡಿಯನ್ನು ನಾರಾಯಣ ಆಚಾರ್ಯರ ಬಳಿ ಹೇಳಿದ್ದಾಳೆ. ವೈಶಾಖ ತನ್ನ ಬಳಿ ಚಾಡಿ ಹೇಳಿದ್ದಾಳೆ ಎಂಬ ವಿಷಯ ಚಾರುಗೆ ಗೊತ್ತಿದೆ ಆದರೂ ಸಹ ಮಾವನ ಮುಂದೆ ಯಾವುದನ್ನು ಮಾತನಾಡುವ ಆಗಿಲ್ಲ.
ನಾರಾಯಣ ಆಚಾರ್ಯರು ಇಬ್ಬರು ಸೊಸೆಯರು ಜಗಳವಾಡುವುದನ್ನು ನೋಡಿದ್ದಾರೆ. ಇದೇ ಸಂದರ್ಭದಲ್ಲಿ ವೈಶಾಖಾಗೆ ಚಾರು ಹಲವಾರು ಪ್ರಶ್ನೆಗಳನ್ನ ಕೇಳಿದ್ದಾಳೆ. ನನ್ನದು ಏನಿದ್ದರೂ ನೇರ ದಿಟ್ಟ ನಿರಂತರ ಮಾತು. ನಿನ್ನ ರೀತಿ ನಾನು ಒಳಗೊಂದು ಹೊರಗೊಂದು ಮಾಡುವುದಿಲ್ಲ ಎಂದು ಚಾರು ವೈಶಾಖಗೆ ಹೇಳಿದ್ದಾಳೆ. ನಾನು ಸತ್ಯವನ್ನೇ ಹೇಳೋದು ಎಂದಾಗ ನಾರಾಯಣ ಆಚಾರ್ಯರು ಮಧ್ಯ ಪ್ರವೇಶಿಸಿ. ನೀವೆಷ್ಟು ಸತ್ಯವಂತರು ಎಂಬುವುದು ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ.

ಇಬ್ಬರು ಜಗಳವಾಡುವಾಗ ಸಾಕು ಇಲ್ಲಿಗೆ ನಿಲ್ಲಿಸಿ ನಿಮಗೆ ಮಾನ ಮರ್ಯಾದೆ ಇದ್ದರೆ. ಈ ಟೆಂಟ್ ಕಿತ್ತುಕೊಂಡು ಬೇರೆ ಕಡೆ ಹೋಗಿ ವಾಸ ಮಾಡಿ ಎಂದು ಚಾರುಗೆ ಹೇಳಿದ್ದಾರೆ. ಈ ಮನೆಗೆ ಬರುವವರು ಹೋಗುವವರು ಹೆಚ್ಚಿದ್ದಾರೆ ಎಂದು ಚಾರುಗೆ ವಾರ್ನಿಂಗ್ ಮಾಡಿದ್ದಾರೆ. ಕೊನೆಗೆ ರಾಮಾಚಾರಿ ಬಂದಾಗ ಅವನಿಗೂ ಸಹ ನಾರಾಯಣ ಆಚಾರ್ಯರು ಅವಮಾನ ಮಾಡಿದ್ದಾರೆ. ಈ ವೇಳೆ ಚಾರು ನಾನು ಬಟ್ಟೆಯ ಬದಲಿಸಬೇಕಿತ್ತು. ಅದಕ್ಕಾಗಿ ಈ ರೀತಿ ಮಾಡಿದೆ ಎಂದಾಗ ರಾಮಾಚಾರಿ ಸಹ ಸುಮ್ಮನೆ ಆಗಿದ್ದಾನೆ
ರಾಮಾಚಾರಿ ಆಫೀಸ್ ಗೆ ಹೊರಟು ನಿಂತಿದ್ದಾನೆ. ಇದೇ ವೇಳೆ ಚಾರುವನ್ನು ಸಹ ಆಫೀಸಿಗೆ ಬರುವಂತೆ ಕರೆದಿದ್ದಾನೆ. ಆದರೆ ಚಾರುಗೆ ತನ್ನ ಗಂಡ ಆಫೀಸ್ ನಿಂದ ಬರುವಷ್ಟರಲ್ಲಿ ಮನೆಯೊಳಗೆ ಹೋಗಿರಬೇಕು ಎಂಬ ತವಕ ಹೆಚ್ಚಾಗಿದೆ. ಇದಕ್ಕಾಗಿ ಚಾರು ಏನೇನು ಸರ್ಕಸ್ ಅನ್ನು ಮಾಡಿದ್ದಾಳೆ. ಅಕ್ಕ-ಪಕ್ಕದ ಮನೆಯವರಿಂದ ಹಾಲು, ಕಾಫಿ ಪೌಡರ್, ಸಕ್ಕರೆ ಎಲ್ಲವನ್ನು ತೆಗೆದುಕೊಂಡು ಬಂದಿದ್ದಾಳೆ.
ರಾಮಾಚಾರಿ ಚಾರುಗೆ ಬುದ್ಧಿಯನ್ನ ಹೇಳಿ ಆಫೀಸ್‌ಗೆ ಹೊರಟಿದ್ದಾನೆ. ದಯವಿಟ್ಟು ನೀವು ಏನೇನೋ ಮಾಡಲು ಹೋಗಬೇಡಿ. ನಾನು ಬರುವಷ್ಟರಲ್ಲಿ ಈ ಟೆಂಟ್ ತೆಗೆದಿಟ್ಟು ಬಿಡಿ.ಅಪ್ಪನಿಗೆ ಬೇಸರ ತರಿಸಬೇಡಿ ಎಂದು ಚಾರು ಬಳಿ ರಾಮಾಚಾರಿ ಹೇಳಿ ಆಫೀಸ್‌ಗೆ ಹೋಗಿದ್ದಾನೆ. ಆಫೀಸ್‌ಗೆ ಹೋದ ರಾಮಾಚಾರಿಗೆ ಗ್ರಾಂಡ್ ವೆಲ್ಕಮ್ ಅನ್ನು ಕೋರಲಾಗಿದೆ. ಬಬ್ಲು ಸಾರ್ ಸಿಕ್ಕಾಪಟ್ಟೆ ಖುಷಿಯಲ್ಲಿ ಇದ್ದು, ರಾಮಾಚಾರಿಯನ್ನು ಸ್ವಾಗತಿಸಿದ್ದಾರೆ
ಚಾರು ಅಕ್ಕಪಕ್ಕದ ಮನೆಯವರ ಬಳಿ ಕಾಫಿ ಪುಡಿ, ಸಕ್ಕರೆ ಹಾಲು ಇವೆಲ್ಲವನ್ನ ತೆಗೆದುಕೊಂಡು ಬಂದಿದ್ದಾಳೆ. ಅಕ್ಕ-ಪಕ್ಕದ ಮನೆಯವರು ನಾರಾಯಣ ಆಚಾರ್ಯರ ಮನೆಗೆ ಬಂದು. ನಿಮ್ಮ ಸೊಸೆ ಇದೆಲ್ಲವನ್ನ ನಮ್ಮಿಂದ ತೆಗೆದುಕೊಂಡು ಬಂದಿದ್ದಾಳೆ ವಾಪಸ್ ಕೊಟ್ಟಿಲ್ಲ ಎಂದು ಕೇಳಿದ್ದಾರೆ. ನಾರಾಯಣ ಆಚಾರ್ಯರು ವೈಶಾಖ ಬಳಿ ಯಾಕಮ್ಮ ಇದನ್ನೆಲ್ಲಾ ತೆಗೆದುಕೊಂಡು ಬಂದೆ. ಮನೆಯಲ್ಲಿ ರೇಷನ್ ಖಾಲಿಯಾಗಿದೆಯಾ ಎಂದು ಕೇಳಿದ್ದಾರೆ. ಈ ವೇಳೆ ಅಕ್ಕಪಕ್ಕದವರು ವೈಶಾಖ ತೆಗೆದುಕೊಂಡು ಬಂದಿಲ್ಲ ನಿಮ್ಮ ಕಿರಿ ಸೊಸೆ ತೆಗೆದುಕೊಂಡು ಬಂದಿದ್ದಾರೆ ಎಂದು ಹೇಳಿದ್ದಾರೆ.
ಅದಕ್ಕೂ ನಮಗೂ ಸಂಬಂಧವಿಲ್ಲ ಎಂದಾಗ ನೆರೆಹೊರೆಯವರು ಚಾರು ಬಗ್ಗೆ ಕನಿಕರದ ಮಾತನ್ನು ಆಡಿದ್ದಾರೆ. ಆಚಾರ್ಯರು ಅವರ ಮೇಲೆ ರೇಗಿದಾಗ ಎಲ್ಲರಿಗೂ ಸಹ ಕನಿಕರ ತೋರುವ ನೀವು ಏಕೆ ಕಠೋರವಾದ್ರಿ ಎಂದಿದ್ದಾರೆ. ಅವಳಿಗೆ ಬೀದಿಯಲ್ಲಿಯೇ ಸಂಸಾರವನ್ನ ಮಾಡಬೇಕಾ ನೀವು ಸಹ ಒಂದು ಹೆಣ್ಣನ್ನ ಎತ್ತಿದ್ದೀರ ಸ್ವಲ್ಪ ಯೋಚನೆ ಮಾಡಬಾರದು ಎಂದೆಲ್ಲ ಹೇಳಿದ್ದಾರೆ. ಇನ್ನು ಚಾರು ಅವರ ಬಳಿ ಇದನ್ನೆಲ್ಲಾ ತೆಗೆದುಕೊಂಡು ಬಂದಿದ್ದಾಳೆ ಎಂದು ತಿಳಿದಿದ್ದಕ್ಕೆ ನಾರಾಯಣ ಆಚಾರ್ಯರಿಗೆ ತುಂಬಾ ಕೋಪ ಬಂದಿದೆ
ನಾರಾಯಣ ಆಚಾರ್ಯರು ಚಾರುಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ನೀನು ಅವರ ಮನೆಯಿಂದ ಇದನ್ನೆಲ್ಲಾ ಭಿಕ್ಷೆ ಬೇಡಿ ತೆಗೆದುಕೊಂಡು ಬರಬೇಕಾ. ಮಾನ ಮರ್ಯಾದೆ ಇಲ್ವಾ ಎಂದೆಲ್ಲಾ ಅಂದಿದ್ದಾರೆ. ಈ ಮಾತನ್ನೆಲ್ಲ ಕೇಳಿಸಿಕೊಳ್ಳುತ್ತಿರುವ ವೈಶಾಖಾಗೆ ತುಂಬಾ ಖುಷಿಯಾಗಿದೆ. ಸಂಸ್ಕಾರವಂತರ ಮನೆಯಾಗಿದ್ದು, ಇಲ್ಲಿ ಸಂಸ್ಕಾರಕ್ಕೆ ಮಾತ್ರ ಬೆಲೆ. ನಾನು ನಿಮ್ಮನ್ನ ಎಂದಿಗೂ ಕೂಡ ಮನೆಯೊಳಗೆ ಸೇರಿಸುವುದಿಲ್ಲ ಎಂದು ಆಚಾರ್ಯರು ಹೇಳಿದ್ದಾರೆ.


Click it and Unblock the Notifications











