Ramachari: ಮನೆಯಿಂದ ಹೊರಗಿರುವ ಚಾರು: ಸಿಕ್ಕಿದೆ ಚಾರುಗೆ ಕೊನೆಯ ಅವಕಾಶ
ಚಾರು ಹೇಗಾದರೂ ಮಾಡಿ ನಾರಾಯಣ ಆಚಾರ್ಯರ ಮನೆಗೆ ಸೇರಬೇಕು ಎಂದುಕೊಂಡು ನಾನಾ ಪ್ರಯತ್ನ ಮಾಡುತ್ತಿದ್ದಾಳೆ ಆ ಪ್ರಯತ್ನವೆಲ್ಲವೂ ಸಹ ವಿಫಲವಾಗುತ್ತಿವೆ. ಕೊನೆಯದಾಗಿ ಒಂದು ಪ್ರಯತ್ನವನ್ನ ಮಾಡಿದ್ದಳು. ಅಕ್ಕಪಕ್ಕದ ಮನೆಯವರಿಂದ ಏನಾದರೂ ತೆಗೆದುಕೊಂಡು ಬಂದರೆ . ನಮ್ಮನ್ನ ಮನೆಗೆ ಸೇರಿಸಿಕೊಳ್ಳುತ್ತಾರೆ ಎಂದುಕೊಂಡಿದ್ದಳು ಅದು ಕೂಡ ಫ್ಲಾಪ್ ಆಗಿದೆ.
ನಾರಾಯಣ ಆಚಾರ್ಯರ ಕೈಯಲ್ಲಿ ಚಾರು ಬೈಸಿಕೊಂಡಿದ್ದಾಳೆ. ಸ್ವಾಭಿಮಾನವಿದ್ದರೆ ಇಲ್ಲಿಂದ ಮೊದಲು ಹೋಗಿ ಎಂದೆಲ್ಲಾ ಆಚಾರ್ಯರು ಬೈದಿದ್ದಾರೆ. ಇನ್ನು ಜಾನಕಿಯು ಸಹ ದಯವಿಟ್ಟು ಎಲ್ಲಾದರೂ ದೂರ ಹೋಗಿ ಬದುಕು ಕಟ್ಟಿಕೊಳ್ಳಿ. ಇಲ್ಲವಾದರೆ ನಿನ್ನ ತಂದೆಯ ಮನೆಗೆ ಹೋಗು ಎಂದೆಲ್ಲ ಹೇಳಿದ್ದಾಳೆ. ಚಾರು ಮುಂದಿರುವ ಗುರಿ ಮಾತ್ರ ಹೇಗಾದರೂ ಮಾಡಿ ಮನೆಯ ಒಳಗೆ ಹೋಗುವುದಾಗಿದೆ.

ಸದ್ಯಕ್ಕೆ ಚಾರು ಮುಂದೆ ಹೊಸದಾಗಿ ಉತ್ತಮವಾದ ಒಂದು ಅವಕಾಶ ಸಿಕ್ಕಿದೆ. ಅದು ಏನೆಂದರೆ ನಾರಾಯಣ ಆಚಾರ್ಯರೇ ಈಗ ಮನೆಯ ಒಳಗೆ ಕರೆದುಕೊಂಡು ವಂತೆ ಮಾಡುವುದು ಆಗಿದೆ. ಇದು ಏನಾದರೂ ಪ್ಲಾನ್ ಫ್ಲಾಪ್ ಆದರೆ, ಪರ್ಮನೆಂಟಾಗಿ ಚಾರು ಮನೆಯಿಂದ ಹೊರಗೆ ಉಳಿಯಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಅಷ್ಟೇ ಅಲ್ಲದೆ ವೈಶಾಖಗೆ ಹಾಕಿರುವ ಚಾಲೆಂಜ್ ನಲ್ಲೂ ಸೋಲು ಕಟ್ಟಿಟ್ಟ ಬುತ್ತಿಯಾಗಿದೆ.
ಚಾರು ಮಾವನ ಮನೆಗೆ ಹೋಗಿ ನಾನು ವೈಶಾಖಗೆ ಹಾಕಿದ ಚಾಲೆಂಜ್ ನಲ್ಲಿ ಗೆಲ್ಲಲೇ ಬೇಕು ಎಂದುಕೊಂಡು. ಅಕ್ಕ-ಪಕ್ಕದ ಮನೆಯವರಿಂದ ಕಾಫಿ ಪುಡಿ , ಹಾಲು, ಸಕ್ಕರೆ ಎಲ್ಲವನ್ನ ತಂದಿದ್ದಳು. ಆದರೆ ಆ ಪ್ಲಾನ್ ಕೂಡ ಫ್ಲಾಪ್ ಆಗಿ ನಾರಾಯಣ ಆಚಾರ್ಯರ ಕೈಯಲ್ಲಿ ಚಾರು ಉಗಿಸಿಕೊಂಡಳು. ನಾವು ಸ್ವಾಭಿಮಾನದಿಂದ ಬದುಕನ್ನ ಕಟ್ಟಿಕೊಂಡವರು. ಯಾರ ಮುಂದೆಯೂ ಕೈಚಾಚಿ ಬದುಕು ಕಟ್ಟಿಕೊಂಡವರಲ್ಲ ಎಂದಲ್ಲ ನಾರಾಯಣ ಆಚಾರ್ಯರು ಚಾರುಗೆ ಬೈದಿದ್ದಾರೆ.
ನಾರಾಯಣ ಆಚಾರ್ಯರು ಬೈದಿದ್ದಕ್ಕೇನು ಚಾರು ಬೇಸರ ಮಾಡಿಕೊಂಡಿಲ್ಲ. ಈ ಕಡೆ ರಾಮಾಚಾರಿ ತನ್ನ ಹೆಂಡತಿಯ ಬಗ್ಗೆ ಯೋಚನೆ ಮಾಡುತ್ತಿದ್ದಾನೆ. ನಾನು ಅವರನ್ನ ಮದುವೆಯಾಗಿ ಬಂದಿದ್ದೇನೆ ಈಗ ಅವರು ನನ್ನ ಸುಪರ್ದಿಯಲ್ಲಿ ಇದ್ದಾರೆ. ನಾನು ಅವರನ್ನು ಹೊರಗೆ ಕರೆದುಕೊಂಡು ಹೋಗಿ ನೋಡಿಕೊಳ್ಳಬೇಕು ಎಂದಿಲ್ಲ ಮುರಾರಿ ಬಳಿ ರಾಮಾಚಾರಿ ಹೇಳಿದ್ದಾನೆ. ನನ್ನ ಮನೆಯವರಿಗೆ ಈ ಸಾಸಿವೆ ಎಷ್ಟು ಸಹ ಬೇಸರವಾಗಬಾರದು. ಇದಕ್ಕಾದರೂ ನಾನು ಮನೆಯವರಿಂದ ದೂರ ಉಳಿಯಬೇಕು ಎಂದೆಲ್ಲಾ ಯೋಚನೆಯನ್ನು ರಾಮಾಚಾರಿ ಮಾಡುತ್ತಿದ್ದಾನೆ.
ಮಾನ್ಯತಾ ಮನೆಗೆ ಬಂದಿರುವ ಮಹಿಳಾ ಕ್ಲಬ್ ನ ಮಹಿಳಾ ಮಣಿಗಳು ಅವಮಾನವನ್ನು ಮಾಡಿದ್ದಾರೆ. ಯಾವಾಗಲೂ ಸ್ಟೇಟಸ್ ಬಗ್ಗೆ ಮಾತನಾಡುತ್ತಿದ್ದ ನಿಮ್ಮ ಮಗಳು ಈಗ ಬೇರೆ ಯಾರನ್ನೋ ಮದುವೆಯಾದಳಂತೆ ಎಂದೆಲ್ಲಾ ಅವಮಾನ ಮಾಡಿದ್ದಾರೆ. ಇದರಿಂದಾಗಿ ಮಾನ್ಯತಾಗೆ ಮತ್ತಷ್ಟು ದ್ವೇಷ ಹುಟ್ಟಿಕೊಂಡಿದೆ. ನನ್ನ ಎದುರೇ ಈ ಮಹಿಳೆಯರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಕೋಪವನ್ನು ಮಾನ್ಯತಾ ಮಾಡಿಕೊಂಡಿದ್ದಾಳೆ.
ಈ ಕಡೆ ನಾರಾಯಣ ಆಚಾರ್ಯರನ್ನ ನೋಡಲು ಬಂದಂತಹ ಕಮಲಮ್ಮನ ಕುಟುಂಬದವರ ಮುಂದೆ ನಾರಾಯಣ ಆಚಾರ್ಯರ ಫ್ಯಾಮಿಲಿಯನ್ನು ಚಾರು ಹೊಗಳಿ ಅಟ್ಟಕ್ಕೇರಿಸಿದ್ದಾಳೆ. ನಾರಾಯಣ ಆಚಾರ್ಯರ ಆಶೀರ್ವಾದ ತೆಗೆದುಕೊಂಡು ಹೋಗಲು ಬಂದ ಕುಟುಂಬಸ್ಥರು ಪೂರ್ವಾಪರದ ಬಗ್ಗೆ ಆಚಾರ್ಯರ ಬಳಿ ಹೇಳಿಕೊಂಡಿದ್ದಾರೆ. ನಾನು ನನ್ನ ಸೊಸೆ ಮಗನನ್ನ ದೂರ ಮಾಡಿಕೊಳ್ಳುತ್ತಿದ್ದೆ. ಆ ಸಮಯಕ್ಕೆ ನೀವು ಬಂದು ನನ್ನ ಕುಟುಂಬವನ್ನು ಉಳಿಸಿ ಕೊಟ್ಟಿರಿ ಎಂದೆಲ್ಲ ಕಮಲಮ್ಮ ಹೇಳಿದ್ದಾರೆ. ಇದನ್ನೆಲ್ಲಾ ಕೇಳಿಸಿಕೊಂಡ ಚಾರು ನನಗೆ ಮನೆಯ ಒಳಗೆ ಹೋಗಲು ಒಂದು ಚಾನ್ಸ್ ಸಿಕ್ಕಿದೆ ಎಂದೆಲ್ಲಾ ಅಂದುಕೊಂಡಿದ್ದಾಳೆ.


Click it and Unblock the Notifications











