Ramachari: ಮನೆಯ ಒಳಗೆ ಹೋಗಲು ಚಾರು ಸರ್ಕಸ್: ಟೆಂಟ್ ಕಿತ್ತು ಹಾಕಿದ ವೈಶಾಖ-ಕೋದಂಡ
ಚಾರು ಮನೆಯ ಒಳಗೆ ಹೋಗಲು ನಾನಾ ರೀತಿಯ ಸರ್ಕಸ್ ನಡೆಸುತ್ತಿದ್ದಾಳೆ. ಮನೆಗೆ ಕಮಲಮ್ಮ ಹಾಗೂ ಆಕೆಯ ಸೊಸೆ ಮಗ ಬಂದಿದ್ದಾರೆ. ಅವರು ಏನು ಮಾತನಾಡುತ್ತಾರೆ ಎಂದು ಕೇಳಿಸಿಕೊಳ್ಳಲು ಮನೆಯ ಕಿಟಕಿಯ ಬಳಿ ಚಾರು ನಿಂತುಕೊಂಡಿದ್ದಾಳೆ. ಇದೇ ವೇಳೆ ಚಾರು ಬಗ್ಗೆ ಕಮಲಮ್ಮ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ನಾರಾಯಣ ಆಚಾರ್ಯರೇ ನೀವು ರಾಮಾಚಾರಿ ಹಾಗೂ ಆತನ ಹೆಂಡತಿಯನ್ನು ಮನೆಗೆ ಕರೆದುಕೊಂಡಿದ್ದು ತುಂಬಾ ಸಂತಸವಾಗಿದೆ ಎಂದು ಹೇಳಿದ್ದಾರೆ. ನಮ್ಮ ಮನೆಯನ್ನೇ ನೀವು ನಂದಾದೀಪವಾಗುವಂತೆ ಮಾಡಿದವರು. ನಾನು ಮಗ ಸೊಸೆಯನ್ನು ದೂರ ಮಾಡುವಾಗ ಬಂದು. ಬುದ್ಧಿ ಹೇಳಿ ಸೊಸೆಯಂತ ಮಗಳನ್ನು ನನಗೆ ಕೊಟ್ಟಿದ್ದೀರ ಎಂದಿಲ್ಲ ಹಾಡಿ ಹೊಗಳಿದ್ದಾಳೆ.

ಎಷ್ಟೆಲ್ಲಾ ಪುಣ್ಯದ ಕೆಲಸ ಮಾಡಿದ್ದರಿಂದಲೇ ನಿಮಗೆ ಒಳ್ಳೆಯ ಸೊಸೆ ಸಿಕ್ಕಿದ್ದಾಳೆ ಎಂದೆಲ್ಲಾ ಕಮಲಮ್ಮ ಹೇಳಿದ್ದಾರೆ. ಮಾವನ ಬಗ್ಗೆ ಅದೇನು ಗೌರವ ನೀವು ಅಪಾರ ಪಾಂಡಿತ್ಯ ಉಳ್ಳವರು ಎಂದು ಹೇಳಿದಳು. ಜಾನಕಿ ಅವರನ್ನ ಸಾಕ್ಷಾತ್ ಅನ್ನಪೂರ್ಣೇಶ್ವರಿ ಎಂದೆಲ್ಲಾ ಹೇಳಿ ಬಹಳ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾಳೆ ಎಂದು ಆಚಾರ್ಯರ ಮುಂದೆ ಕಮಲಮ್ಮ ಹೇಳಿದ್ದಾಳೆ. ಇದೇ ವೇಳೆ ಕಮಲಮ್ಮನವರು ಸೀಮಂತಕ್ಕೆ ಕರೆದು ಮನೆಯಿಂದ ಹೊರಗೆ ಬಂದಿದ್ದಾರೆ.
ಕಮಲಮ್ಮನ ಮನೆಗೆ ಬಂದಿರುವ ಚಾರು ನಮ್ಮ ಮಾವ ನಮ್ಮನ್ನ ಮನೆಯೊಳಗೆ ಸೇರಿಸಿಲ್ಲ, ಮನೆಯಿಂದ ಹೊರಗೆ ಹಾಕಿದ್ದಾರೆ. ಅಲ್ಲಿ ಹೇಳಿದ್ದೆಲ್ಲ ಸುಳ್ಳು ಎಂದು ಕಮಲಮ್ಮನ ಬಳಿ ಹೇಳಿದ್ದಾಳೆ. ಚಾರು ಹೇಳಿದ ಮಾತನ್ನೆಲ್ಲ ಕೇಳಿಸಿಕೊಂಡ ಕಮಲಮ್ಮ ಕರಗಿ ನೀರಾಗಿದ್ದಾರೆ. ನಾನು ಊರಿನ ಹಿರಿಯ ಮುಖಂಡರನ್ನೆಲ್ಲಾ ಕರೆದುಕೊಂಡು ನಿಮ್ಮ ಮನೆಗೆ ಬಂದು ನಿನ್ನನ್ನು ಒಳಗೆ ಸೇರಿಸುತ್ತೇನೆ ಎಂದೆಲ್ಲ ಹೇಳಿದ್ದಾರೆ. ಚಾರು ಕಮಲಮ್ಮಗೆ ದಯವಿಟ್ಟು ಅಷ್ಟು ಮಾಡಿ ಪುಣ್ಯವನ್ನ ಕಟ್ಟಿಕೊಳ್ಳಿ ಎಂದು ಹೇಳಿದ್ದಾಳೆ.
ನಾರಾಯಣ ಆಚಾರ್ಯರು ಚಾರುವನ್ನು ಮನೆಯ ಒಳಗೆ ಕೂಡಿಸಿಕೊಂಡಿಲ್ಲ ಎಂಬ ವಿಷಯ ತಿಳಿದುಕೊಂಡ ಮಾನ್ಯತಾ ಬಹಳ ಸಿಟ್ಟನ್ನ ಮಾಡಿಕೊಂಡಿದ್ದಾಳೆ. ನನ್ನ ಮಗಳನ್ನೇ ಹೊರಗೆ ಹಾಕಿದ್ದಾರೆ ಅವರಿಗೆ ಎಷ್ಟು ಧೈರ್ಯವಿರಬೇಕು. ನಾನು ಈಗಲೇ ಹೋಗಿ ಅವರನ್ನ ಪ್ರಶ್ನೆ ಮಾಡುತ್ತೇನೆ ಎಂದು ಅಲ್ಲಿಂದ ಹೊರಡಲು ಸಿದ್ದರಾಗಿದ್ದಾಳೆ. ಇದೇ ವೇಳೆ ಜೈ ಶಂಕರ್ ಮಾನ್ಯತಾಳನ್ನ ತಡೆದು ನಿಲ್ಲಿಸಿದ್ದಾರೆ. ನೀನೇನು ಅವರ ಮನೆಗೆ ಹೋಗುವ ಅವಶ್ಯಕತೆ ಇಲ್ಲ. ಅವರನ್ನು ಪ್ರಶ್ನೆ ಮಾಡುವ ಅಧಿಕಾರ ನಿನಗಿಲ್ಲ ಎಂದು ಮಾನ್ಯತಾಳನ್ನ ತಡೆದಿದ್ದಾರೆ.
ವೈಶಾಖಗೆ ಚಾರು ಕಾನ್ಫಿಡೆನ್ಸ್ ನೋಡುತ್ತಿದ್ದರೆ ಎಲ್ಲಿ ಮನೆಗೆ ಬಂದುಬಿಡುತ್ತಾಳೋ ಎಂದು ಎನಿಸುತ್ತಿದೆ. ಇವಳು ಬಂದರೆ ನಮ್ಮ ಕಥೆ ಗೋವಿಂದ ಎಂದೆಲ್ಲ ಎಂದುಕೊಂಡು ಚಾರು ಕಟ್ಟಿಕೊಂಡಿರುವ ಟೆಂಟನ್ನು ಕೋದಂಡನ ಸಹಾಯದಿಂದ ಕಿತ್ತು ಹಾಕಿದ್ದಾಳೆ. ಅಷ್ಟರಲ್ಲಿ ಚಾರು ಟೆಂಟ್ ಇರುವ ಜಾಗಕ್ಕೆ ಬಂದು ಏನಕ್ಕ, ನಾನು ಮನೆ ಒಳಗೆ ಬರುತ್ತೇನೆ ಎಂದುಕೊಂಡು ಟೆಂಟ್ ಕಿತ್ತು ಹಾಕುತ್ತಿದ್ದೀರಾ. ನನಗೆ ಬಹಳ ಸಹಾಯವನ್ನ ಮಾಡಿದ್ದೀರಾ ಎಂದು ಹೇಳಿದ್ದಾಳೆ.
ಈ ಕಡೆ ಕೋದಂಡನನ್ನು ಭಾವ ಎಂದು ಕರೆದಿದ್ದಕ್ಕೆ ಬೈಸಿಕೊಂಡಿದ್ದಾಳೆ.ನಾನೇನು ನಿನ್ನ ಭಾವನಲ್ಲ ಎಂದು ಹೇಳಿದ್ದಾನೆ. ಇದಕ್ಕೆ ಚಾರು ಇನ್ನೇನು ಕೋದಂಡ ಎಂದು ಹೆಸರಿಡಿದು ಕರೆಯಲು ಆಗುತ್ತಾ? ಎಂದು ಮರು ಪ್ರಶ್ನೆ ಹಾಕಿದ್ದಾಳೆ. ಇಷ್ಟಕ್ಕೆ ಉರಿದುಕೊಂಡ ವೈಶಾಖ ನೀನು ಆ ಮನೆಯ ಒಳಗೆ 74 ಗಂಟೆಯಾದರೂ ಬರಲು ಸಾಧ್ಯವಿಲ್ಲ ನನ್ನ ಮಾವ ನಿನ್ನನ್ನ ಮನೆ ಒಳಗೆ ಸೇರಿಸುವುದಿಲ್ಲ ಎಂದು ಹೇಳಿದ್ದಾಳೆ. ಕೋದಂಡ ಸಹ ಅದೇ ಮಾತನ್ನ ಹೇಳಿದ್ದಾನೆ ಅಪ್ಪ ಏನು ಇವರಿಬ್ಬರನ್ನ ಮನೆಯ ಒಳಗೆ ಕರೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾನೆ.


Click it and Unblock the Notifications











