Ramachari: ಕೊನೆಗೂ ಆಚಾರ್ಯರ ಮನೆಗೆ ಎಂಟ್ರಿ ಕೊಟ್ಟ ಚಾರು; ಸಕ್ಸಸ್ ಆಯ್ತು ಚಾರು ಪ್ಲಾನ್!

By ಶೃತಿ ಹರೀಶ್ ಗೌಡ

ಚಾರು ಕಮಲಮ್ಮನ ಮನೆಗೆ ಹೋಗಿ ನಮ್ಮ ಮಾವ ನಮ್ಮನ್ನ ಮನೆಯಿಂದ ಹೊರಗೆ ಹಾಕಿದ್ದಾರೆ.‌ನಾವು ಟೆಂಟ್ ಕಟ್ಟಿಕೊಂಡು ಜೀವನ ಮಾಡುತ್ತಿದ್ದೆವು. ನನ್ನ ಗಂಡ ಒಂದೇ ಸಮನೆ ಮನೆಯ ಒಳಗೆ ಹೋಗಬೇಕು ಎಂದು ಅಳುತ್ತಿದ್ದಾರೆ ಎಂದು ಕಮಲಮ್ಮನ ಬಳಿ ಕಣ್ಣೀರನ್ನು ಹಾಕಿದ್ದಾಳೆ. ಚಾರು ಹಾಕಿದ ಕಣ್ಣೀರಿಗೆ ಕರಗಿದ ಕಮಲಮ್ಮ ನಾವು ನಿನ್ನನ್ನು ಮನೆಯ ಒಳಗೆ ಸೇರಿಸುತ್ತೇವೆ ಎಂದು ಹೇಳಿದ್ದಾರೆ.

ನಂತರ ತಮ್ಮ ಮಗನಿಗೆ ಹೇಳಿ ದೇವಸ್ಥಾನದ ಧರ್ಮದರ್ಶಿಗಳು ಹಾಗೂ ಆಡಳಿತ ಮಂಡಳಿಯವರನ್ನೆಲ್ಲ ಕರೆದುಕೊಂಡು ನೀನು ನಾರಾಯಣ ಆಚಾರ್ಯರ ಮನೆಗೆ ಬಾ ಎಂದು ಹೇಳಿದ್ದಾರೆ. ಚಾರು ವೈಶಾಖ ಇವತ್ತು ನಿನಗೆ ಇದೆ ನಾನು ಮನೆಯ ಒಳಗೆ ಎಂಟ್ರಿ ಕೊಟ್ಟೆ ಕೊಡುತ್ತೇನೆ ಎಂದುಕೊಂಡು ಆಚಾರ್ಯರ ಮನೆಯ ಬಳಿ ಚಾರು ಬಂದಿದ್ದಾಳೆ.

 Colors Kannada Ramachari serial

ಅಷ್ಟರಲ್ಲಿ ರಾಮಾಚಾರಿ ಸಹ ಆಫೀಸಿನಿಂದ ಮನೆಗೆ ಬರುತ್ತಿದ್ದಾನೆ ಇನ್ನು ರಾಮಾಚಾರಿ ಹಿಂದೆ ದೇವಸ್ಥಾನದ ಧರ್ಮದರ್ಶಿಗಳು ಆಡಳಿತ ಮಂಡಳಿಯವರೆಲ್ಲರೂ ಬಂದಿದ್ದಾರೆ. ರಾಮಾಚಾರಿಗೆ ಅವರು ಹಿಂದೆ ಬರುತ್ತಿರುವುದು ಗೊತ್ತಾಗಲೇ ಇಲ್ಲ.‌ಅವನು ಜೊತೆಯಲ್ಲಿ ನಾನು ಅಪ್ಪ-ಅಮ್ಮನಿಗೆ ನೋವು ಕೊಡಬಾರದು. ಅವರಿಂದ ನಾನು‌ ದೂರ ಹೋಗುತ್ತೇನೆ ಎಂದಿಲ್ಲ ಹೇಳಿಕೊಂಡು ಬರುತ್ತಿದ್ದಾನೆ. ಆದರೆ ಹಿಂದೆಯೇ ಊರಿನವರು ಬಂದಿದ್ದಾರೆ.

ರಾಮಾಚಾರಿ ಹಿಂದಿಯೆ ದೇವಸ್ಥಾನದ ಟ್ರಸ್ಟಿಗಳು ಹಾಗೂ ಧರ್ಮದರ್ಶಿಗಳು ಬರುವುದನ್ನು ನೋಡಿದ ವೈಶಾಖ. ನಾರಾಯಣ ಆಚಾರ್ಯರ ಬಳಿ ಬಂದು ರಾಮಾಚಾರಿ ಏನು ಸ್ಕೀಮ್ ಹಾಕಿಕೊಂಡು ಅವರನ್ನೆಲ್ಲ ಕರೆದುಕೊಂಡು ಬಂದಿದ್ದಾನೆ ಎಂದಿದ್ದಾಳೆ. ಅಷ್ಟರಲ್ಲಿ ಮನೆಯಿಂದ ಹೊರಗೆ ಬಂದ ಆಚಾರ್ಯರು ಜೋರಾಗಿ ಕಣ್ಣನ್ನ ಬಿಟ್ಟಿದ್ದಾರೆ. ರಾಮಾಚಾರಿ ಏನಾಯಿತು ಎಂದು ತಿರುಗಿ ನೋಡುವಷ್ಟರಲ್ಲಿ ಧರ್ಮದರ್ಶಿಗಳು ಹಾಗೂ ಟ್ರಸ್ಟಿಗಳು ನಾರಾಯಣ ಆಚಾರ್ಯರನ್ನ ಪ್ರಶ್ನೆ ಮಾಡಿದ್ದಾರೆ.

ಆಚಾರ್ಯರೇ ನೀವು ಮಾಡುತ್ತಿರುವುದು ಸರೀನಾ, ಇದೇ ತಾನೇ ಮದುವೆಯಾದವರನ್ನ ಮನೆಯಿಂದ ಹೊರಗೆ ಹಾಕಿದ್ದೀರಲ್ಲ ಎಂದು ಕೇಳಿದ್ದಾರೆ. ರಾಮಾಚಾರಿ ಮಧ್ಯ ಮಾತನಾಡಲು ಹೋದರೆ ಅವರು ಬಿಡಲೇ ಇಲ್ಲ. ಇದ್ದ ಕಮಲಮ್ಮ ಚಾರು ನೀನು ಮನೆಯೊಳಗೆ ಬರಲು ರೆಡಿಯಾಗು ನಾವು ನಾರಾಯಣ ಆಚಾರ್ಯರ ಬಳಿ ಒಳಗೆ ಹೋಗಿ ಮಾತನಾಡುತ್ತೇವೆ ಎಂದು ಎಲ್ಲರೂ ಸಹ ನಾರಾಯಣ ಆಚಾರ್ಯರ ಮನೆಯ ಒಳಗೆ ಹೋಗಿದ್ದಾರೆ.

ಇನ್ನು ರಾಮಾಚಾರಿ ನಾನು ಆಫೀಸಿಗೆ ಹೋದ ಮೇಲೆ ಏನು ನಡೆಯಿತು ಎಂದು ಚಾರು ಬಳಿ ಕೇಳಿದ್ದಾರೆ.ಇದಕ್ಕೆ ಚಾರು ನಿಮ್ಮ ತಂದೆ ಲವ್ ಮಾಡಿದ್ದ ಜೋಡಿಯನ್ನು ಹತ್ತಿರ ಮಾಡುತ್ತಾರೆ. ಅದೇ ಮನೆ ಮಕ್ಕಳನ್ನು ಬೀದಿಗೆ ಬಿಟ್ಟಿದ್ದಾರೆ ಎಂದು ಹೇಳಿದ್ದಾಳೆ. ಇದಕ್ಕೆ ನಾನು ಕಮಲಮ್ಮನ ಬಳಿ ಹೋಗಿ ನಾವು ಬೀದಿಯಲ್ಲಿ ಇದ್ದೇವೆ ಎಂದು ಹೇಳಿದೆ. ಅದಕ್ಕಾಗಿ ನ್ಯಾಯ ಕೇಳಲು ಬಂದಿದ್ದಾರೆ ಎಂದು ಚಾರು ಹೇಳಿದ್ದಾಳೆ. ಮಾತನ್ನ ಕೇಳಿದ ರಾಮಾಚಾರಿ ಕೋಪದಿಂದ ಬೈದಿದ್ದಾನೆ ಇದರ ಜೊತೆಗೆ ನಮಗೆ ಗೇಟ್ ಪಾಸ್ ಸಿಗುತ್ತದೆ ಎಂದಿದ್ದಾನೆ.

ನಾರಾಯಣ ಆಚಾರ್ಯರು ಎಲ್ಲರ ಮಾತುಗಳನ್ನು ಕೇಳಿಸಿಕೊಂಡ ನಂತರ ರಾಮಾಚಾರಿ ಹಾಗೂ ಚಾರು ವನ್ನು ಮನೆ ತುಂಬಿಸಿಕೊಳ್ಳಿ ಎಂದು ಜಾನಕಿಯ ಬಳಿ ಹೇಳಿದ್ದಾರೆ. ಇವರನ್ನು ಹೇಗೆ ಬಿಟ್ಟರೆ ಹಾದಿ ಬೀದಿಯಲ್ಲಿ ಹೋಗುವವರೆಲ್ಲ ನಮ್ಮ ಬಗ್ಗೆ ಮಾತನಾಡುತ್ತಾರೆ. ನಮ್ಮ ಗೌರವ ಇವರಿಂದ ಹಾಳಾಗುವುದು ಬೇಡ. ಅವರನ್ನು ಮನೆಗೆ ತುಂಬಿಸಿಕೊಳ್ಳಿ ಎಂದು ನಾರಾಯಣ ಆಚಾರ್ಯರು ಮನಸ್ಸನ್ನ ಬದಲಾಯಿಸಿದ್ದಾರೆ.

ನಾರಾಯಣ ಆಚಾರ್ಯರ ಮಾತನ್ನ ಕೇಳಿದ ಜಾನಕಿಗೆ ಕೊಂಚ ನೆಮ್ಮದಿ ಯಾಗಿದೆ. ಯಾಕೆಂದರೆ ಮಗ ಚಳಿಯಲ್ಲಿ ಮಲಗುವುದಿಲ್ಲ ಹೇಗೋ ಮನೆಯ ಒಳಗೆ ಬರುತ್ತಿದ್ದಾನೆ ಎಂದು ಮನಸಿನಲ್ಲೇ ಖುಷಿಪಟ್ಟಿದ್ದಾಳೆ. ಆದರೆ ವೈಶಾಖಾಗೆ ಮಾತ್ರ ಕಿರಿಕಿರಿ ಶುರುವಾಗಿದೆ. ನಮ್ಮ ಮಾವ ಅವರನ್ನ ಮನೆ ಒಳಗೆ ಬಿಟ್ಟುಕೊಳ್ಳೋದಿಲ್ಲ ಎಂದು ತಿಳಿದುಕೊಂಡರೆ. ಇವರೆಲ್ಲ ಬಂದು ಪ್ಲಾನ್ ಎಲ್ಲಾ ಹಾಳು ಮಾಡಿದರು ಎಂದು ಬೇಸರ ಮಾಡಿಕೊಂಡಿದ್ದಾಳೆ.

More from Filmibeat

English summary
Colors Kannada serial Ramachari here details about charu paln finally success, narayana char get a permission come to home
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X