Ramachari: ಚಾರು ಮದುವೆಗೆ ಮಾನ್ಯತಾ ನಿರ್ಧಾರ: ವೈಶಾಖಗೆ ಸಿಕ್ತು ವಿಡಿಯೋ

By ಶೃತಿ ಹರೀಶ್ ಗೌಡ

'ರಾಮಾಚಾರಿ' ಧಾರಾವಾಹಿ ಕಥೆಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಯಾಕಂದ್ರೆ ಇಷ್ಟು ದಿನ ಮಗಳ ಮಾತಿಗೆ ಮರುಳಾಗಿದ್ದ ಮಾನ್ಯತಾ ಈಗ ಮಗಳು ಆಡಿದ ಬಣ್ಣದ ಮಾತುಗಳಿಗೆ ತಕ್ಕ ಉತ್ತರವನ್ನು ಕೊಡಲು ರೆಡಿಯಾಗಿದ್ದಾಳೆ. ರಾಮಾಚಾರಿ ಫ್ಯಾಮಿಲಿಯವರು ಸಹ ಈಗ ಚಾರು ನಿಶ್ಚಿತಾರ್ಥವಾಗುವ ಸ್ಥಳಕ್ಕೆ ಬಂದಿದ್ಧಾರೆ. ಮುಂದಿನ ಸಾಲಿನಲ್ಲೇ ಕುಳಿತುಕೊಂಡು ಮಗ ಮಾಡುತ್ತಿರುವ ಪೌರೋಹಿತ್ಯವನ್ನು ನೋಡುತ್ತಿದ್ದಾರೆ.

ನಾರಾಯಣ ಆಚಾರ್ಯರಿಗೆ ತಮ್ಮ ಮಗ ರಾಮಾಚಾರ್ಯನ ಕಂಡರೆ ಎಲ್ಲಿಲ್ಲದ ಹೆಮ್ಮೆ. ಇದಕ್ಕಾಗಿ ಮದುವೆ ಮಂಟಪದಲ್ಲಿ ತಮ್ಮ ಹಿರಿಯ ಮಗ ಕೋದಂಡನ ಮುಂದೆಯೇ ರಾಮಾಚಾರಿಯನ್ನ ಹೊಗಳಿದ್ದಾರೆ. ಇದು ಕೋದಂಡನಿಗೆ ಸ್ವಲ್ಪವೂ ಸಹ ಇಷ್ಟವಾಗುತ್ತಿಲ್ಲ. ಈ ಕಡೆ ವೈಶಾಖ, ರಾಮಾಚಾರಿ ಹಾಗೂ ಚಾರು ಮದುವೆ ಮಾಡಿಕೊಂಡ ವಿಡಿಯೋವನ್ನು ಪುನಃ ಮತ್ತೆ ಮರಳಿ ಪಡೆಯಲು ಹರಸಾಹಸ ಪಡುತ್ತಿದ್ದಾಳೆ.

Colors Kannada Ramachari serial Written Update on june 13th episode

ವೇದ ಮಂತ್ರಗಳೊಂದಿಗೆ ರಾಮಾಚಾರಿ, ಚಾರು ಹಾಗೂ ವಿಕಾಸ್ ಬಾನೇರಿಯಾಗಿ ಎಂಗೇಜ್‌ಮೆಂಟ್‌ ಮಾಡಿಸಲು ರೆಡಿಯಾಗುತ್ತಿದ್ದಾನೆ. ಈ ಕಡೆ ಚಾರು ನೋಡಿದ ಅಜ್ಜಿ ತುಂಬಾ ಸುಂದರವಾಗಿ ಕಾಣುತ್ತಿದ್ದಾಳೆ. ಒಳ್ಳೆ ದೇವತೆಯ ರೀತಿ ಚಾರು ಸೀರೆಯಲ್ಲಿ ಕಾಣುತ್ತಿದ್ದಾಳೆ ಎಂದು ಹೊಗಳಿದ್ದಾರೆ. ಆದರೆ ಚಾರುನ ಹೊಗಳಿದ್ದು ಶೃತಿಗೆ ಸ್ವಲ್ಪವೂ ಸಹ ಇಷ್ಟವಾಗಿಲ್ಲ. ಅಹಂಕಾರ ಇರುವವರು ಎಷ್ಟೇ ರೂಪವಾಗಿದ್ದರು ಅದು ವ್ಯರ್ಥ ಎಂದು ವ್ಯಂಗ್ಯವಾಡಿದ್ದಾಳೆ.

ಚಾರು ಮದುವೆಗೆ ಮಾನ್ಯತಾ ನಿರ್ಧಾರ

ರಾಮಾಚಾರಿ ಹಾಗೂ ಅವರ ಫ್ಯಾಮಿಲಿಯ ಮುಂದೆ ಮಾನ್ಯತಾ ನಾನು ನನ್ನ ಮಗಳ ಮದುವೆಯನ್ನು ಇಂದೇ ಮಾಡುತ್ತೇನೆ ಎಂದು ಹೇಳಿದ್ದಾಳೆ. ಇದನ್ನ ಕೇಳಿದ ರಾಮಾಚಾರಿ ಹಾಗೂ ಮುರಾರಿಗೆ ತುಂಬಾ ಶಾಕ್ ಆಗಿದೆ. ಯಾಕೆಂದರೆ ಇಂದು ಬರೀ ಚಾರು ಎಂಗೇಜ್ಮೆಂಟ್. ಮುಂದೆ ಹೇಗೋ ನನ್ನ ಮನೆಯವರನ್ನ ಮುಂದೆ ಒಪ್ಪಿಸಿ ಚಾರುವನ್ನ ನನ್ನ ಮನೆಗೆ ಕರೆದುಕೊಂಡು ಹೋಗಬಹುದು ಎಂದುಕೊಂಡಿದ್ದ ರಾಮಾಚಾರಿಗೆ ಈಗ ದಿಕ್ಕು ತೋಚದಂತಾಗಿದೆ.

Colors Kannada Ramachari serial Written Update on june 13th episode

ರಾಮಾಚಾರಿ ಒಲ್ಲದ ಮನಸ್ಸಿನಿಂದ ಚಾರು ಎಂಗೇಜ್ಮೆಂಟ್‌ ಮುಂದುವರಿಸಿದ್ದಾನೆ. ಮನಸ್ಸಿನಲ್ಲಿ ಮಾತ್ರ ಹೇಗಾದರೂ ಮಾಡಿ ಇದನ್ನು ತಪ್ಪಿಸಲು ಆಗೋದಿಲ್ವ, ನನ್ನ ಕಣ್ಣ ಮುಂದೆ ನನ್ನ ಹೆಂಡತಿಗೆ ಇನ್ನೊಬ್ಬರು ತಾಳಿ ಕಟ್ಟೋದನ್ನ ನಾನು ನೋಡಬೇಕಾಗಿದ್ಯಾ? ಎಂದು ರಾಮಾಚಾರಿ ಯೋಚನೆ ಮಾಡುತ್ತಿದ್ದಾನೆ.‌ ಮನಸ್ಸಿನಲ್ಲಿ ರಾಮಾಚಾರಿಗೆ ತಳಮಳ ಶುರುವಾಗಿದೆ.

ಚಾರುಗೆ ಚೆಲ್ಲಾಟ

ರಾಮಾಚಾರಿ ಜೊತೆ ಚಾರು ಸಣ್ಣಗೆ ಕೀಟಲೆ ಮಾಡಿ ಚೆಲ್ಲಾಟ ವಾಡುತ್ತಿದ್ದಾಳೆ. ನಗು ನನ್ನ ಗಂಡ ಎಂದೆಲ್ಲ ಹೇಳುತ್ತಿದ್ದರೆ, ರಾಮಾಚಾರಿ ಮಾತ್ರ ನಾನು ಹೇಗೆ ನಗಲಿ ಮೇಡಂ ಎಂದುಕೊಳ್ಳುತ್ತಿದ್ದಾನೆ. ನಿಮ್ಮ ಅಮ್ಮ ನಿಮಗೆ ಮದುವೆ ಮಾಡಿಸುತ್ತಿದ್ದಾರೆ ಎಂಬ ಸತ್ಯ ಗೊತ್ತಾದರೆ ನೀವು ಯಾವ ರೀತಿ ಆಡ್ತಿರೋ ಅನ್ನೋದು ಈಗ ಆಗಬೇಕು ಎಂದು ಯೋಚನೆ ಮಾಡುತ್ತಿದ್ದಾನೆ.

ಈ ಕಡೆ ರಾಮಾಚಾರಿ ನಾನು ನಾರಾಯಣ ಆಚಾರ್ಯರ ಮಗನಾಗಿ ಸತ್ಯದ ಪರವಾಗಿ ಇರಲೋ ಅಥವಾ ನನ್ನ ಕುಟುಂಬದ ಮರ್ಯಾದೆಯನ್ನು ಕಾಪಾಡಲೋ ಎಂದು ಯೋಚನೆ ಮಾಡುತ್ತಿದ್ದಾನೆ. ಈ ಕಡೆ ಮಾನ್ಯತಾ ನಿನ್ನ ಮಾತಿಗೆ ನಾನು ಮರುಳಾಗಿ ನೀನು ಹೇಳಿದಂತೆ ಕುಣಿದೆ, ಆದರೆ ನೀನು ರಾಮಾಚಾರಿಯ ಜೊತೆ ಸುತ್ತಾಡಿಕೊಂಡು ನನಗೆ ಮಣ್ಣೆರೆಚಿದೆ ಎಂದು ಮಗಳಿಗೆ ಬೈಯುತ್ತಿದ್ದಾಳೆ. ನೀನು ಊಹಿಸದಂತಹ ಘಟನೆ ನಡೆಯುತ್ತಿದೆ, ನೀನು ವಿಕಾಸ್ ಬಾನೇರಿಯಾ ಕೈಹಿಡಿದು ರಾಮಾಚಾರಿ ಎನ್ನುವ ಶನಿಯಿಂದ ದೂರವಾಗುತ್ತೀಯ ಎಂದು ಮಾನ್ಯತಾ ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದಾಳೆ.

ವೈಶಾಖ ಕೈ ಸೇರಿದ ಮದುವೆ ವಿಡಿಯೋ

ರಾಮಾಚಾರಿ ಹಾಗೂ ಚಾರು ಇಬ್ಬರು ಸಪ್ತಪದಿ ತುಳಿದಂತಹ ವಿಡಿಯೋ ವೈಶಾಖಾಳ ಕೈ ಜಾರಿ ಹೋಗಿತ್ತು. ಖುಷಿ ಮೊಬೈಲ್ ನೀರೊಳಗೆ ಬಿದ್ದು ಮೊಬೈಲ್ ಹಾಳಾಗಿತ್ತು. ಅದನ್ನು ಸರಿಪಡಿಸಿರುವ ವೈಶಾಖ ಈಗ ಪೆನ್‌ಡ್ರೈವ್‌ಗೆ ರಾಮಾಚಾರಿ ಹಾಗೂ ಚಾರು ಸಪ್ತಪದಿ ತುಳಿದ ವಿಡಿಯೋವನ್ನು ರಿಕವರ್ ಮಾಡಿಕೊಂಡಿದ್ದಾಳೆ.

ಸದ್ಯಕ್ಕೆ ಮತ್ತೊಮ್ಮೆ ವಿಡಿಯೋ ಪರಿಶೀಲಿಸಿ ಕೊಡು ಎಂದು ಕಂಪ್ಯೂಟರ್‌ಗೆ ಹಾಕಿಸಿದ್ದಾಳೆ. ರಾಮಾಚಾರಿ ಅತ್ತಿಗೆ ಏನಾದರೂ ಆ ವಿಡಿಯೋವನ್ನು ವೈರಲ್ ಮಾಡಿದರೆ ಚಾರು ಮದುವೆ ಮುರಿದು ಬೀಳಲಿದೆ.

More from Filmibeat

English summary
Colors Kannada Ramachari serial Written Update on june 13th episode. here is details about Narayana achar seeing Ramachari paurohitya, Ramachari intensed, Vaishaka gets Ramachari and Charu marriage video. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X