Ramachari: ಚಾರುವನ್ನು ಉಳಿಸಿಕೊಳ್ಳುತ್ತಾನಾ ರಾಮಾಚಾರಿ? ಚಾರು ಮದುವೆ ಕ್ಯಾನ್ಸಲ್ ಆಗುತ್ತಾ?
ರಾಮಾಚಾರಿ ಧಾರಾವಾಹಿಯಲ್ಲಿ ಈಗ ಹೊಸದೊಂದು ಮಹತ್ವದ ತಿರುವು ಕಾಣಿಸಿಕೊಂಡಿದೆ. ಮಾನ್ಯತಾ ಚಾರು ಮೊಬೈಲ್ ನನ್ನು ಕಿವಿಗೆ ಹಿಡಿದುಕೊಂಡು ರಾಮಾಚಾರಿ ಏಳುತ್ತಿದ್ದ ಮಾತುಗಳನ್ನು ಕೇಳಿಸಿಕೊಂಡಳು ಅಂದೇ ಸಣ್ಣದೊಂದು ಅನುಮಾನ ಚಾರು ಮೇಲೆ ಮಾನ್ಯತಾಗೆ ಹುಟ್ಟಿಕೊಂಡಿತ್ತು. ಆದರೆ ಚಾರುಗೆ ಮಾತ್ರ ತನ್ನ ಅಮ್ಮನಿಗೆ ಯಾವುದೇ ಅನುಮಾನ ಬಂದಿಲ್ಲ ಎಂದುಕೊಂಡಿದ್ದಳು. ಇದ್ಯಾವುದರ ಸುಳಿ ಬಂದ ನೀಡದೆ ಮಾನ್ಯತಾ ತನ್ನ ಕೆಲಸವನ್ನ ಅಚ್ಚುಕಟ್ಟಾಗಿ ಮುಗಿಸಿದ್ದಾಳೆ.
ಚಾರು ಮಾತ್ರ ರಾಮಾಚಾರಿ ಜೊತೆಗಿದ್ದರೆ ಸಾಕು ಎಂದು ಖುಷಿಯನ್ನ ಪಡುತ್ತಿದ್ದಾಳೆ. ರಾಮಾಚಾರಿ ಒಬ್ಬ ನನ್ನ ಜೊತೆಗಿದ್ದರೆ ನನಗೆ ನೂರಾನೆಯ ಬಲ ಎಂದುಕೊಂಡು ಮನಸ್ಸಿನಲ್ಲಿ ತೃಪ್ತಿಯನ್ನ ಪಟ್ಟುಕೊಂಡಿದ್ದಾಳೆ. ಆದರೆ ಚಾರುಗೆ ತನ್ನ ಬದುಕಿನಲ್ಲಿ ತಾನು ಊಯಿಸಿರದಂತಹ ಘಟನೆಯೊಂದು ನಡೆಯುತ್ತಿದೆ ಎಂಬುದರ ಅರಿವೆಯು ಸಹ ಇಲ್ಲ. ಸುಮ್ಮನೆ ವಿಕಾಸ್ ಜೊತೆ ಕುಳಿತುಕೊಂಡು ಎಂಗೇಜ್ಮೆಂಟ್ ಮಾಡಿಕೊಳ್ಳುವ ಶಾಸ್ತ್ರವನ್ನ ಮಾಡಿಕೊಳ್ಳುತ್ತಿದ್ದಾಳೆ.

ರಾಮಾಚಾರಿ ಗೆ ಮಾತ್ರ ಈಗ ಚಾರುವನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ರಾಮಾಚಾರಿಗೆ ಮಾತ್ರ ಸತ್ಯ ತಿಳಿಸಿದಿದ್ದು, ಈಗ ಚಾರು ಅನ್ನು ತನ್ನ ಹೆಂಡತಿಯನ್ನಾಗಿ ಅನೌನ್ಸ್ ಮಾಡುವ ಅನಿವಾರ್ಯತೆ ರಾಮಾಚಾರಿಗೂ ಸಹ ಎದುರಾಗಿದೆ. ರಾಮಾಚಾರಿ ಏನಾದರೂ ಮಾನ ಮರ್ಯಾದೆ ಗೌರವ ಎಂದು ಕೊಂಡು ಹೋದರೆ ಚಾರುವನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಲಿದೆ.
ಎಂಗೇಜ್ಮೆಂಟ್ ನಡೆಯುವ ಸ್ಥಳಕ್ಕೆ ಬಂದಂತಹ ಪ್ರಕಾಶ್ ಬಾನೇರಿ ನಾನು ನನ್ನ ಮಗನ ಆರತಕ್ಷತೆಯನ್ನು ತುಂಬಾ ಅದ್ದೂರಿಯಾಗಿ ಮಾಡಬೇಕು ಎಂದುಕೊಂಡಿದ್ದೆ. ಅದೇ ರೀತಿ ಮಾಡುತ್ತೇನೆ ಎಂದು ನೆರೆದಿದ್ದವರ ಮುಂದೆ ಹೇಳಿದ್ದಾನೆ. ಈ ವೇಳೆ ಪ್ರಕಾಶ್ ಇಂದಿನ ದಿನವೇ ಚಾರು ಹಾಗೂ ನನ್ನ ಮಗನಿಗೂ ಮದುವೆಯಾಗಲಿದೆ ಎಂದು ತಾಳಿಯನ್ನ ತೆಗೆದು ಎಲ್ಲರಿಗೂ ಸಹ ತೋರಿಸಿ ಅದನ್ನ ಒಂದು ತಟ್ಟೆಯಲ್ಲಿ ಇಟ್ಟಿದ್ದಾನೆ. ಪ್ರಕಾಶ್ ಮಾತನ್ನ ಕೇಳಿದಂತಹ ಚಾರುಗೆ ಬೆಟ್ಟವೇ ತಲೆಯ ಮೇಲೆ ಬಿದ್ದಂತೆ ಆಗಿದೆ.
ಈ ಕಡೆ ಪ್ರಕಾಶ್ ಹೆಂಡತಿ ಇವರ ಹಣದಾಹಕ್ಕೆ ಓರ್ವ ಹೆಣ್ಣು ಮಗಳ ಜೀವನ ಬಲಿಯಾಗುತ್ತಿದೆ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದಾಳೆ. ಈ ಮದುವೆ ಯಾವ ರೀತಿಯಲ್ಲಾದರೂ ನಿಂತು ಹೋದರೆ ಸಾಕು ಎಂದು ದೇವರ ಬಳಿ ಮೊರೆಯನ್ನು ಇಟ್ಟಿದ್ದಾರೆ. ಪ್ರಕಾಶ್ ಮಾತನ್ನು ಕೇಳುತ್ತಿರುವ ಎಲ್ಲರೂ ಸಹ ಬೆರಗು ಗಣ್ಣಿನಿಂದ ನೋಡುತ್ತಿದ್ದಾರೆ. ಯಾಕೆಂದರೆ ಜೈ ಶಂಕರ್ ಗೂ ಸಹ ಇಂದು ಮದುವೆ ನಡೆಯುತ್ತಿದೆ ಎಂಬ ಗುಟ್ಟು ಗೊತ್ತಿರಲಿಲ್ಲ ಪ್ರಕಾಶ್ ಒಮ್ಮೆಲೇ ಈ ರೀತಿ ಅನೌನ್ಸ್ ಮಾಡಿದ್ದಕ್ಕೆ ಜೈ ಶಂಕರ್ ಕೂಡ ಶಾಕ್‌ಗೆ ಒಳಗಾಗಿದ್ದಾರೆ.
ರಾಮಾಚಾರಿ ಮದುವೆಯಾಗಿರುವ ವಿಡಿಯೋವನ್ನು ವೈರಲ್ ಮಾಡಿ ಅಲ್ಲಿ ಆಗುತ್ತಿರುವ ಎಂಗೇಜ್ಮೆಂಟ್ ಕ್ಯಾನ್ಸಲ್ ಮಾಡಿಸುವ ಮೂಲಕ ತನ್ನ ಗಂಡನನ್ನ ಬಹಳ ಒಳ್ಳೆಯವನು ಎಂದು ತೋರಿಸಬೇಕು ಎನ್ನುತ್ತಿರುವ ವೈಶಾಖ ಲಕ್ ಯಾಕೋ ಸರಿಯಾಗಿಲ್ಲ. ತೆಗೆದುಕೊಂಡು ಚಾರು ಎಂಗೇಜ್ಮೆಂಟ್ ನಡೆಯುವ ಸ್ಥಳಕ್ಕೆ ಬರುವಾಗ ಮಧ್ಯದಲ್ಲಿ ಆಟೋ ಕೆಟ್ಟು ನಿಂತು ಕೈಕೊಟ್ಟಿದೆ. ವಿಡಿಯೋವನ್ನು ಎಲ್ಲರಿಗೂ ತೋರಿಸಿ ನಾನು ನನ್ನ ಗಂಡನನ್ನ ಒಳ್ಳೆಯವನನ್ನಾಗಿ ಮಾಡಿ ರಾಮಾಚಾರಿಯನ್ನ ಮನೆಯಿಂದ ಓಡಿಸಬೇಕು ಎಂದುಕೊಂಡಿದ್ದಳು.
ನಾರಾಯಣ ಆಚಾರ್ಯರು ಎದೆ ಹೊಡೆದುಕೊಂಡು ಸತ್ತು ಹೋದರು ಪರವಾಗಿಲ್ಲ ಎಂದು ಅಂದುಕೊಂಡಿದ್ದ ವೈಶಾಖಗೆ ಮಾತ್ರ ಆಟೋ ಸರಿಯಾಗಿ ಕೈ ಕೊಟ್ಟಿದ್ದು ಎಂಗೇಜ್ಮೆಂಟ್ ನಡೆಯುವ ಸ್ಥಳಕ್ಕೆ ಇನ್ನೂ ತಲುಪಲು ಸಾಧ್ಯವಾಗಿಲ್ಲ. ವೈಶಾಖ ಏನಾದರು ಆದಷ್ಟು ಬೇಗ ತಲುಪಿ ರಾಮಾಚಾರಿ ಹಾಗೂ ಚಾರು ಸಪ್ತಪದಿ ತುಳಿದಿರುವ ವಿಡಿಯೋವನ್ನು ತೋರಿಸಿದರೆ ಚಾರು ಮದುವೆ ಮುರಿದು ಬೀಳೋದು ಗ್ಯಾರಂಟಿಯಾಗಿ ವೈಶಾಖಳೆ ರಾಮಾಚಾರಿ ಗೆ ಸಹಾಯ ಮಾಡಿದಂತೆ ಆಗುತ್ತದೆ.


Click it and Unblock the Notifications











