Ramachari: ರಾಮಾಚಾರಿ - ಚಾರುವನ್ನು ಒಂದುಮಾಡ್ತಾಳಾ ವೈಶಾಖ? ಸತ್ಯ ತಿಳಿದುಹೋದರೆ ಗತಿಯೇನು?

By ಶೃತಿ ಹರೀಶ್ ಗೌಡ

ರಾಮಾಚಾರಿ ಒಲ್ಲದ ಮನಸ್ಸಿನಿಂದ ಚಾರು ಹಾಗೂ ವಿಕಾಸ್ ಬಾನ ಏರಿಯ ಮದುವೆಯನ್ನು ಮಾಡಿಸಲು ತಯಾರಿಯನ್ನ ಮಾಡಿಕೊಂಡಿದ್ದಾನೆ ಈ ಕಡೆ ಚಾರು ಮನಸ್ಸಿನಲ್ಲಿಯೇ ನನ್ನ ಮದುವೆ ಹೇಗಾದರೂ ಮಾಡಿ ನಿಂತು ಹೋಗಲಿ ದೇವರೇ ಎಂದು ಬೇಡಿಕೊಳ್ಳುತ್ತಾ ಇದ್ದಾಳೆ. ಚಾರುವಿನ ಅಜ್ಜಿ ತಾತಾ ಇಬ್ಬರೂ ತುಂಬಾ ಖುಷಿಯಿಂದ ಮೊಮ್ಮಗಳ ಮದುವೆ ನಡೆಯುತ್ತಿದೆ ಎಂದು ನೋಡುತ್ತಿದ್ದಾರೆ.

ಚಾರು- ಚಾರಿಗೆ ಮಾತ್ರ ಧರ್ಮ ಸಂಕಟ ಶುರುವಾಗಿದೆ ರಾಮಾಚಾರಿಯ ಬಳಿ ಏನಾದರೂ ಮಾಡಿ ಮದುವೆಯನ್ನ ತಡೆ ದಯವಿಟ್ಟು ಸತ್ಯವನ್ನು ಎಲ್ಲರ ಮುಂದೆ ಒಪ್ಪಿಕೊಳ್ಳೋಣ ಎಂದು ಚಾರು ರಾಮಾಚಾರಿ ಹಿಂಸೆಯನ್ನ ಕೊಡುತ್ತಿದ್ದಾಳೆ. ಇದಕ್ಕೆ ರಾಮಾಚಾರಿ ನಾನು ಈಗ ಸತ್ಯವನ್ನ ಒಪ್ಪಿಕೊಂಡರೆ ಇಲ್ಲಿ ನೆರೆದಿರುವ ಸಭಿಕರ ಮುಂದೆ ನನ್ನ ತಂದೆಯ ಮರ್ಯಾದೆ ಹೋಗುತ್ತದೆ ಅವರು ಏನಾದರೂ ಮಾಡಿಕೊಂಡು ಸತ್ತು ಹೋಗುತ್ತಾರೆ ಎಂದು ಚಾರು ಬಳಿ ಹೇಳಿದ್ದಾನೆ.

Colors Kannada Ramachari serial Written Update on june 15th episode

ನೀನೇನಾದರೂ ನನ್ನನ್ನ ಮದುವೆಯಾಗುವುದಿಲ್ಲ ಎಂದರೆ ನಾನು ಜೀವಂತ ಇರೋದಿಲ್ಲ ಎಂದು ಚಾರು ಮೊದಲೇ ರಾಮಾಚಾರಿಗೆ ಹೇಳಿದಳು. ಈಗಲೂ ಸಹ ಅದನ್ನೇ ಮಾಡಲು ಸಾನ್ವಿ ಬಳಿ ನನಗೆ ವಿಷದ ಬಾಟಲ್ ತಂದು ಕೊಡು ನಾನು ಕುಡಿದು ಪ್ರಾಣವನ್ನ ಬಿಡುತ್ತೇನೆ ಎಂದು ಬೇಡಿಕೊಳ್ಳುತ್ತಿದ್ದಾಳೆ. ಆದರೆ ಸಾನ್ವಿ ಈ ಕೆಲಸ ನನ್ನ ಕೈಯಲ್ಲಿ ಆಗೋದಿಲ್ಲ ಒಂದು ಪ್ರಾಣವನ್ನು ತೆಗೆಯುವ ಕೆಲಸವನ್ನು ನಾನು ಮಾಡಲ್ಲ ಎಂದು ಚಾರುಗೆ ಹೇಳಿದ್ದಾಳೆ.

ಚಾರು ಮದುವೆಯನ್ನ ಏಕಾಏಕಿ ಮಾಡಲು ಸಾಧ್ಯವಿಲ್ಲ ಎಂದಾಗ ನಾರಾಯಣ ಆಚಾರ್ಯರು ಜಯಶಂಕರ್ ಬಳಿ ಒಳ್ಳೆಯ ಕೆಲಸಕ್ಕೆ ಈಗಿರುವ ಮುಹೂರ್ತವೇ ಸಾಕು ಮದುವೆ ಮಾಡಿ ಎಂದು ಹೇಳಿದ್ದಾರೆ ಆದರೆ ಜಾರು ಮಾತ್ರ ಮಾವಯ್ಯ ನನ್ನ ಹಣೆಯ ಬರಹ ನಿಮ್ಮ ಕೈಯ್ಯಲ್ಲಿ ಇದೆ ದಯವಿಟ್ಟು ಈ ಮುಹೂರ್ತ ಆಗಿ ಬರೋದಿಲ್ಲ ಎಂದು ಹೇಳಿಬಿಡಿ ಎಂದು ಮನಸ್ಸಿನಲ್ಲಿಯೇ ಬೇಡಿಕೊಂಡಿದ್ದಾಳೆ. ನಾರಾಯಣ ಆಚಾರ್ಯರು ಮದುವೆ ಚೆನ್ನಾಗಿ ನಡೆಯಲಿ ಎಂದು ಶುಭ ಹಾರೈಸಿದ್ದಾರೆ.

ಈ ಕಡೆ ನಾರಾಯಣ ಆಚಾರ್ಯರು ನನ್ನ ಮಗನೇ ಮುಂದೆ ನಿಂತು ಮದುವೆಯ ಶಾಸ್ತ್ರಗಳನ್ನ ನಡೆಸಿಕೊಡುತ್ತಾನೆ ಎಂದು ಹೇಳಿದ್ದಾರೆ ನಾರಾಯಣ ಆಚಾರ್ಯರ ಮಾತನ್ನ ಕೇಳಿದ ಮಾನ್ಯತಾ ಗೆ ತುಂಬಾ ಖುಷಿಯಾಗಿದೆ. ನಾನು ನನ್ನ ಮನೆಯಲ್ಲಿ ಬಾಣ ಬಿಡಲು ಬತ್ತಳಿಕೆ ಹುಡುಕುತ್ತಿದ್ದೆ ನಿನ್ನ ಮನೆಯಲ್ಲಿಯೇ ಬತ್ತಳಿಕೆ ಇದೆ ಎಂಬುದು ನನಗೆ ಈಗ ಗೊತ್ತಾಯಿತು ರಾಮಾಚಾರಿ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದಾಳೆ.

ತಾನೇ ಕೈಯಾರ ತಾಳಿ ಕಟ್ಟಿದ ಹೆಂಡತಿಗೆ ಈಗ ಮತ್ತೆ ಯಾರೋ ತಾಳಿ ಕಟ್ಟುತ್ತಿದ್ದಾರೆ ಎಂಬುದನ್ನು ನೆನೆಸಿಕೊಂಡಿರುವ ರಾಮಾಚಾರಿಗೆ ತುಂಬಾ ಟದುಃಖವಾಗುತ್ತಿದೆ. ಮೊದಲಾದರು ಹೇಗಾದರೂ ಮಾಡಿ ಏನನ್ನಾದರೂ ತಪ್ಪಿಸಲಾಗುತ್ತಿತ್ತು ಆದರೆ ಈಗ ನನ್ನ ಕುಟುಂಬದವರ ಮುಂದೆ ನಾನು ಅಸಹಾಯಕನಾಗಿ ನಿಂತಿದ್ದೇನೆ ಎಂದು ರಾಮಾಚಾರಿ ತನ್ನನ್ನೇ ಶಪಿಸಿಕೊಳ್ಳುತ್ತಿದ್ದಾನೆ. ಆದರೆ ಶ್ರುತಿ ಮಾತ್ರ ಚಾರು ಮದುವೆಯಾದರೆ ಸಾಕು ನಾವೆಲ್ಲರೂ ನಿರಾಳವಾಗಿ ಇರಬಹುದು ಎಂದು ಕೊಂಡಿದ್ದಾಳೆ.

ಒಬ್ಬರನ್ನು ಒಬ್ಬರು ನೋಡಿಕೊಂಡು ರಾಮಾಚಾರಿ ಹಾಗೂ ಚಾರು ಇಬ್ಬರು ಸಹ ಕಣ್ಣೀರನ್ನು ಹಾಕುತ್ತಿದ್ದಾರೆ. ಇದೇ ವೇಳೆ ಮಾನ್ಯತಾ ನನ್ನ ಮಗಳಿಗೆ ಕಣ್ತುಂಬಿ ಬಂದಿದೆ ನಮ್ಮನ್ನೆಲ್ಲ ಬಿಟ್ಟು ಹೋಗಬೇಕು ಎಂದು ಕಣ್ಣೀರನ್ನು ಹಾಕುತ್ತಿದ್ದಾಳೆ ಈ ಹೆಣ್ಣು ಮಕ್ಕಳೇ ಇಷ್ಟು ಎಂದು ಹೇಳಿದ್ದಾಳೆ. ಚಾರು ಮಾತ್ರ ನನಗೆ ಈ ಮದುವೆ ಬೇಡ ಸತ್ಯಕ್ಕೆ ನನಗೆ ಮದುವೆಯಾಗುವ ಇಂಟ್ರೆಸ್ಟ್ ಇಲ್ಲ ಎಂದು ಹೇಳಿದರು ಸಹ ಇನ್ನೂ ಸ್ವಲ್ಪ ಹೊತ್ತಿನಲ್ಲೇ ನಿನ್ನ ಕುತ್ತಿಗೆಗೆ ವಿಕಾಸ್ ತಾಳಿಯನ್ನ ಕಟ್ಟುತ್ತಾನೆ ಎಂದು ಮಾನ್ಯತಾ ಚಾರು ಬಳಿ ಹೇಳಿದ್ದಾಳೆ.

ವೈಶಾಖ ತನ್ನ ಗಂಡನನ್ನ ಮನೆಯವರ ಮುಂದೆ ದೊಡ್ಡವರನ್ನಾಗಿ ಮಾಡಬೇಕು ಎಂದುಕೊಂಡಿದ್ದು ಈಗ ಮದುವೆ ಮನೆಗೆ ಓಡೋಡಿ ಬರುತ್ತಿದ್ದಾಳೆ ಏನಿದ್ದರೂ ಈಗ ವೈಶಾಖಳೆ ಚಾರು ಪಾಲಿಗೆ ದೇವತೆಯಂತೆ ಕಾಣುವವಳಿದ್ದಾಳೆ ಯಾಕೆಂದರೆ ರಾಮಾಚಾರಿ ಹಾಗೂ ಚಾರು ಮದುವೆಯಾಗಿರುವ ವಿಚಾರವನ್ನು ಅವಳೇ ವೈರಲ್ ಮಾಡಬೇಕಿದೆ.

More from Filmibeat

English summary
Colors Kannada serial Ramachari here details about charu marriage , narayana achar green signal to Ramachari marriage, vaishaka reached fiction hall
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X