Ramachari: ಎಲ್ಲರ ಮುಂದೆ ರಿವೀಲ್ ಆಯ್ತು ರಾಮಾಚಾರಿ ಮದುವೆ ಸತ್ಯ; ಒಪ್ಪದ ಆಚಾರ್ಯರು
ಇನ್ನೇನು ವಿಕಾಸ್ ಚಾರು ಕೊರಳಿಗೆ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮದುವೆ ಮನೆಗೆ ಮಿಂಚಿನಂತೆ ಬಂದ ವೈಶಾಖ ಮದುವೆಯನ್ನು ನಿಲ್ಲಿಸಿ ಎಂದು ಜೋರಾಗಿ ಕೂಗಿದ್ದಾಳೆ. ಇದಕ್ಕೆ ಮಾನ್ಯತಾ ನೀನು ಯಾರು ಮದುವೆ ನಿಲ್ಲಿಸಿ ಎಂದು ಹೇಳೋದಕ್ಕೆ ಎಂದು ಜಗಳವನ್ನು ತೆಗೆದಿದ್ದಾಳೆ. ನಾನು ನಾರಾಯಣ ಆಚಾರ್ಯರ ಸೊಸೆ ಕೋದಂಡನ ಹೆಂಡತಿ ಎಂದು ವೈಶಾಖ ಎಲ್ಲರ ಮುಂದೆ ಹೇಳಿದ್ದಾಳೆ.
ಈಗಾಗಲೇ ಮದುವೆಯಾಗಿರುವ ಚಾರುಗೆ ಮತ್ತೊಂದು ಮದುವೆಯನ್ನು ಮಾಡಿಸಲು ಹೊರಟಿದ್ದೀರಲ್ಲ ಎಂದು ಮಾನ್ಯತಾಗೆ ಪ್ರಶ್ನೆಯನ್ನ ಕೇಳಿದ್ದಾಳೆ. ಇದಕ್ಕೆ ಮಾನ್ಯತಾ ನಾರಾಯಣ ಆಚಾರ್ಯರ ಕಡೆ ತಿರುಗಿ ನಿಮ್ಮ ಸೊಸೆಗೆ ಕಳಿಸಿರುವ ಸಂಸ್ಕಾರ ಇದೇನಾ ಎಂದು ಕೇಳಿದ್ದಾಳೆ. ನಾರಾಯಣ ಆಚಾರ್ಯರು ಏನಮ್ಮ ಮಾತನಾಡುತ್ತಿದ್ದೀಯ ಎಂದು ಕೇಳಿದ್ದಕ್ಕೆ ನಾನು ನಿಜವನ್ನೇ ಹೇಳುತ್ತಿದ್ದೇನೆ ಚಾರುಗೆ ಈಗಾಗಲೇ ಮದುವೆಯಾಗಿದೆ ಎಂದಿದ್ದಾಳೆ ವೈಶಾಖ.

ವೈಶಾಖ ಮಾತನ್ನ ಕೇಳುತ್ತಿರುವ ಮಾನ್ಯತಾಗೆ ಕೋಪವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಇದೇ ವೇಳೆ ಮಧ್ಯ ಪ್ರವೇಶ ಮಾಡಿದಂತಹ ಜೈ ಶಂಕರ್ ಅವರು ನನ್ನ ತಾಳ್ಮೆಗೂ ಒಂದು ಮಿತಿ ಇದೆ ಏನೇನು ಮಾತನಾಡಬೇಡಿ ಎಂದೆಲ್ಲ ಹೇಳಿದ್ದಾನೆ. ಆದರೂ ಸಹ ವೈಶಾಖ ಮುಂದುವರೆದು ನಿಮ್ಮ ಮಗಳು ಮದುವೆಯಾಗಿರುವ ಹುಡುಗ ಯಾರು ಎಂದು ನನಗೆ ಗೊತ್ತು ಎಂದು ಹೇಳಿದ್ದಾಳೆ. ನಾರಾಯಣ ಆಚಾರ್ಯರ ಸೊಸೆಯಾಗಿ ಸುಳ್ಳು ಹೇಳಲು ನಿನಗೆ ನಾಚಿಕೆ ಆಗೋದಿಲ್ಲ ಎಂದು ಮಾನ್ಯತಾ ಕೇಳಿದ್ದಾಳೆ.
ಮಾನ್ಯತಾ ನಿನಗೆ ಕಲಿಸಿರುವ ಸಂಸ್ಕಾರ ಇದೇನಾ ಏನೆಂದು ನಿನ್ನ ಗಂಡ ನಿನ್ನನ್ನ ಮದುವೆ ಮಾಡಿಕೊಂಡು ಬಂದ ಎಂದು ಹೇಳಿದ್ದೆ ತಡ ವೈಶಾಖಗೆ ಕೋಪ ಬಂದಿದೆ. ನನ್ನ ಗಂಡನ ಬಗ್ಗೆ ಮಾತನಾಡಬೇಡಿ ನಿಮ್ಮ ಮಗಳ ಗಂಡ ಯಾರು ಎಂದು ಮೊದಲು ತಿಳಿದುಕೊಳ್ಳಿ ನಿಮ್ಮ ಹಲ್ಲನ್ನು ನಾನೇ ಉದುರಿಸುತ್ತೇನೆ ಎಂದು ಹೇಳಿದ್ದಾಳೆ. ದಿ ಗ್ರೇಟ್ ನಾರಾಯಣ ಆಚಾರ್ಯರ ಮಗ ರಾಮಾಚಾರಿಯೇ ಚಾರು ಗಂಡ ಎಂದು ಸಭೆಯಲ್ಲಿ ವೈಶಾಖ ಹೇಳಿದ್ದಾಳೆ.
ಸತ್ಯವನ್ನು ನಂಬಲು ನಾರಾಯಣ ಆಚಾರ್ಯರು ಸಿದ್ದರಿಲ್ಲ ನನ್ನ ಮಗನ ಮೇಲೆ ಇಲ್ಲಸಲ್ಲದ ಅಪವಾದವನ್ನ ಹೊರಿಸಬೇಡ ನಾನು ಇದನ್ನೆಲ್ಲಾ ನಂಬೋದಿಲ್ಲ ಎಂದು ವೈಶಾಖಗೆ ಹೇಳಿದ್ದಾರೆ. ಕೋದಂಡನಿಗೂ ಸಹ ಬೈದಿದ್ದಾರೆ ಇದಕ್ಕೆ ಗುಣ ನೋಡಿ ಹೆಣ್ಣು ತರಬೇಕು ಎಂದಿರುವುದು ನಮ್ಮ ಮರ್ಯಾದೆಯನ್ನ ಕಳೆಯುವ ಕೆಲಸ ಮಾಡುವವರನ್ನು ನೀನು ಮದುವೆಯಾಗಿ ಬಂದಿದ್ದೀಯ ರಾಮಾಚಾರಿ ಇಂಥ ಕೆಲಸ ಮಾಡುತ್ತಾನೆ ಎಂದರೆ ನೀನು ನಂಬುತ್ತೀಯ ಎಂದು ಕೋದಂಡನಿಗೆ ಮರು ಪ್ರಶ್ನೆಯನ್ನ ಹಾಕಿದ್ದಾರೆ.
ರಾಮಾಚಾರಿ ಹಾಗೂ ಚಾರು ಇಬ್ಬರು ಸಹ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ವೈಶಾಖ ಹೇಳಿದೆ ತಡ ರಾಮಾಚಾರಿ ಹಾಗೂ ಚಾರು ಇಬ್ಬರು ಸಹ ಶಾಕ್ ಆಗಿದ್ದಾರೆ ಅದು ಸಭೆಯಲ್ಲಿ ಎಲ್ಲರ ಮುಂದೆ ನಾವು ಮದುವೆಯಾಗಿರುವ ಸತ್ಯ ತಿಳಿದು ಹೋಗಿದೆಯಲ್ಲ ಎಂದು ಚಡಪಡಿಸುತ್ತಿದ್ದಾರೆ. ವೈಶಾಖ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದು ಈಗ ಸಕ್ಸಸ್ ಅನ್ನ ಕಂಡಿದೆ.
ಈ ಕಡೆ ಶ್ರುತಿ ಹಾಗೂ ಮುರಾರಿ ಇಬ್ಬರು ಸಹ ಟೆನ್ಶನ್ನಲ್ಲಿ ಇದ್ದಾರೆ. ಜಾನಕಿ ಸಹ ವೈಶಾಖ ಮಾತನ್ನು ಕೇಳಿ ಕುಗ್ಗಿ ಹೋಗಿದ್ದಾಳೆ. ನಾರಾಯಣ ಆಚಾರ್ಯರು ಮಧ್ಯ ಪ್ರವೇಶ ಮಾಡಿ ನನ್ನ ಮಗನ ಮೇಲೆ ನನಗೆ ನಂಬಿಕೆ ಇದೆ ಅವನು ಯಾವತ್ತೂ ಆಚಾರ ವಿಚಾರವನ್ನು ಬಿಟ್ಟು ಕೊಡೋನಲ್ಲ. ನನ್ನ ಮಾತಿನ್ನು ಸಹ ಪಾಲಿಸದೆ ಇರೋದಿಲ್ಲ ಪಿತೃ ವಾಕ್ಯ ಪರಿಪಾಲಕ ಎಂದು ನಾರಾಯಣ ಆಚಾರ್ಯರು ರಾಮಾಚಾರಿಯನ್ನ ಸಮರ್ಥನೆ ಮಾಡಿಕೊಂಡಿದ್ದಾರೆ.
ಈ ಕಡೆ ದೀಪಾ ರಾಮಾಚಾರಿಯನ್ನ ಮದುವೆಯಾಗುವ ಕನಸನ್ನ ಕಾಣುತ್ತಿದ್ದಾಳೆ ಭಾನುವಾರ ನಮ್ಮಿಬ್ಬರ ಎಂಗೇಜ್ಮೆಂಟ್ ಬದಲು ಮದುವೆಯಾಗಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಮಾವ ಎಂದು ಹೇಳುತ್ತಿದ್ದಾಳೆ. ಆದರೆ ಅಲ್ಲಿ ರಾಮಾಚಾರಿ ಹಾಗೂ ಚಾರು ನಡುವೆ ನಡೆದಿರುವ ಗುಪ್ತವಾದ ಮದುವೆ ಹೊರಗೆ ಬಂದಿದೆ ನಾರಾಯಣ ಆಚಾರ್ಯರ ಮರ್ಯಾದೆ ಹೋಗುತ್ತಿದೆ.


Click it and Unblock the Notifications











