Ramachari: ರಾಮಾಚಾರಿ- ಚಾರು ಮದುವೆ ವಿಡಿಯೋ ರಿವೀಲ್: ವೈಶಾಖಾಗೆ ಖುಷಿ

By ಶೃತಿ ಹರೀಶ್ ಗೌಡ

ವೈಶಾಖ ಅಂದುಕೊಂಡಂತೆ ಎಲ್ಲವೂ ಸಹ ನಡೆದಿದೆ. ರಾಮಾಚಾರಿ ಹಾಗೂ ಚಾರು ಮದುವೆಯ ವಿಡಿಯೋವನ್ನು ತುಂಬಿದ ಸಭೆಯಲ್ಲಿ ವೈಶಾಖ ರಿವೀಲ್ ಮಾಡಿದ್ದಾಳೆ. ನಾರಾಯಣ ಆಚಾರ್ಯರು ವೈಶಾಖ ಬಳಿ ನಿನ್ನ ಬಳಿ ಏನಾದರೂ ಸಾಕ್ಷಿ ಇದ್ದರೆ ತೋರಿಸು ಅದು ಬಿಟ್ಟು ಸುಮ್ಮನೆ ಮಾತನಾಡಬೇಡ ಎಂದು ಹೇಳಿದ್ದರು. ಇದೇ ಸರಿಯಾದ ಸಮಯ ಎಂದು ತಿಳಿದ ವೈಶಾಖ ಖುಷಿಯ ಕಡೆ ಪೆನ್ ಡ್ರೈವ್ ನ ಎಸೆದು ಎಲ್ಲರಿಗೂ ಸಹ ಸಾಕ್ಷಿ ಬೇಕಂತೆ ರಾಮಾಚಾರಿ ಮಾಡಿರುವ ಘನಂದಾರಿ ಕಾರ್ಯವನ್ನು ತೋರಿಸು ಎಂದು ಖುಷಿ ಬಳಿ ಎಸೆದಿದ್ದಾಳೆ.

ರಾಮಾಚಾರಿ ಮುಖದಲ್ಲಿ ಅತ್ತಿಗೆ ಯಾವ ವಿಡಿಯೋ ಮಾಡಿಕೊಂಡಿದ್ದಾರೆ ಎಂಬ ನೋವಿನ ಗೆರೆ ಕಾಣಿಸುತ್ತಿದೆ ಅಷ್ಟೇ ಅಲ್ಲದೆ ಚಾರು ಸಹ ಗಾಬರಿ ಯಾಗಿದ್ದಾಳೆ. ದೊಡ್ಡ ಎಲ್ಇಡಿ ಪರದೆಯ ಮೇಲೆ ರಾಮಾಚಾರಿ ಹಾಗೂ ಚಾರು ಇಬ್ಬರು ಗುಟ್ಟಾಗಿ ಶಾಸ್ತ್ರವನ್ನ ಮಾಡಿಕೊಂಡಿದ್ದು ರೀವಿಲ್ ಆಗಿದೆ. ಚಾರು ರಾಮಾಚಾರಿಯ ಕಾಲನ್ನ ತೊಳೆದು, ಅಗ್ನಿಕುಂಡವನ್ನು ಸುತ್ತಿ, ತಾಳಿಗೆ ಅರಿಶಿಣ ಕುಂಕುಮವನ್ನು ಇಟ್ಟಿಸಿಕೊಂಡ ವಿಡಿಯೋ ನೋಡಿದ ನಾರಾಯಣ ಆಚಾರ್ಯರು, ಮಾನ್ಯತಾ, ಜೈ ಶಂಕರ್ ಗೆ ಒಮ್ಮೆ ಆಘಾತವಾಗಿದೆ.

 Colors Kannada Ramachari serial Written Update on june 19th episode

ರಾಮಾಚಾರಿ ಚಾರುವ ನ ಎತ್ತುಕೊಂಡು ದೇವಸ್ಥಾನಕ್ಕೆ ಹೋಗುವುದನ್ನ ನೋಡುತ್ತಿರುವ ನಾರಾಯಣ ಆಚಾರ್ಯರ ಹೃದಯವೇ ಬಾಯಿಗೆ ಬಂದಂತಾಗಿದೆ. ಎಲ್ಲರೂ ಸಹ ವಿಡಿಯೋ ನೋಡಿ ಗಾಬರಿ ಮಾಡಿಕೊಂಡಿದ್ದರೆ ವೈಶಾಖ ಮಾತ್ರ ತುಂಬಾ ಖುಷಿಯಲ್ಲಿ ಮುಂದೆ ಏನನ್ನ ಬಯಬೇಕು ಎಂಬುದನ್ನು ಮನಸ್ಸಿನಲ್ಲಿ ರೆಡಿ ಮಾಡಿ ಇಟ್ಟುಕೊಂಡಿದ್ದಾಳೆ. ಎಲ್ಲರನ್ನ ಚುಚ್ಚುವ ಕೆಲಸವನ್ನ ಮಾಡಿದ್ದಾಳೆ.

ವಿಡಿಯೋ ನೋಡಿದ ನಾರಾಯಣ ಆಚಾರ್ಯರಿಗೆ ತುಂಬಾ ಶಾಕ್ ಆಗಿದೆ ಮಾತೆ ಬಾರದಂತ ಪರಿಸ್ಥಿತಿ ಉಂಟಾಗಿದೆ. ಇನ್ನೂ ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡ ವೈಶಾಖ ಯಾಕೆ ಮಾವ ನನ್ನ ಬಾಯಿಗೆ ಹುಳು ಬಿತ್ತಾ ಎಂದು ಕೇಳುತ್ತಿದ್ದೀರಿ. ಈಗ ನಿಮ್ಮ ಬಾಯಿ ನಿಮ್ಮ ಮಗ ಮಾಡಿದ ಕೆಲಸವನ್ನು ನೋಡಿ ಬಿದ್ದು ಹೋಗಿದಿಯಾ.

ಎಲುಬಿಲ್ಲದ ನಾಲಿಗೆ ಎಂದೆಲ್ಲ ಮಾತನಾಡುತ್ತಿದ್ದೀರಿ ಈಗ ಅದೇ ಎಲುಬಿಲ್ಲದ ನಾಲಿಗೆಯಲ್ಲಿ ಸುಳ್ಳನ್ನ ಹೇಳಿ ನಿಮ್ಮ ಮಗ ಎಂತಹ ಕಾರ್ಯ ಮಾಡಿದ್ದಾನೆ ನೋಡಿ ಎಂದು ವೈಶಾಖ ಬೈದಿದ್ದಾಳೆ. ವೈಶಾಖ ಏನೇ ಮಾತನಾಡುತ್ತಿದ್ದರು ಸಹ ನಾರಾಯಣ ಆಚಾರ್ಯರಾಗಲಿ, ಜಾನಕಿಯಾಗಲಿ ಏನನ್ನು ಮಾತನಾಡದೆ ಸುಮ್ಮನೆ ಅವಳು ಬಯ್ಯುವುದನ್ನ ಕೇಳಿಸಿಕೊಂಡು ನಿಂತಿದ್ದಾರೆ. ಎಲ್ಲಾ ಸೇಡನ್ನು ವೈಶಾಖ ಒಮ್ಮೆಲೆ ತುಂಬಿದ ಸಭೆಯಲ್ಲಿ ನಾರಾಯಣ ಆಚಾರ್ಯರ ಮುಂದೆ ಹೊರಹಾಕಿದ್ದಾಳೆ.

ಈ ರೀತಿ ಜಾರು ಮಾಡಿರುವುದಕ್ಕೆ ಮಾನ್ಯತಾ ಮದುವೆಯನ್ನ ಮಾಡಿಸಲು ಹೊರಟಳು ಎಂದುಕೊಂಡ ಪ್ರಕಾಶ್ ನೀವು ನಿಮ್ಮ ಮಗಳ ಹುಳುಕನ್ನ ಇಟ್ಟುಕೊಂಡು ಈಗಲೇ ಮದುವೆ ಮಾಡಿಸೋಣ ಎಂದು ನನ್ನ ಕೈಯಲ್ಲಿ ತಾಳಿಯನ್ನ ಕೊಟ್ಟಿರಿ ಹೇಗೋ ಸತ್ಯ ರಿವಿಲ್ ಆಗಿ ನನ್ನ ಮಗ ಬಚಾವಾದ ನಿಮ್ಮನ್ನು ನಾನು ಸುಮ್ಮನೆ ಬಿಡೋದಿಲ್ಲ ಎಂದು ಮಾನ್ಯತಾ ಗೆ ಹಾಗೂ ಜೈ ಶಂಕರ್ ಗೆ ಪ್ರಕಾಶ್ ಬಾನೇರಿ ಬೈದಿದ್ದಾನೆ. ಈ ರೀತಿಯಾಗಿ ಮಾಡುತ್ತೀರಾ ಎಂದು ನಾನು ಅಂದುಕೊಂಡಿರಲಿಲ್ಲ ನಿಮ್ಮನ್ನೆಲ್ಲ ಬೀದಿಗೆ ತರುತ್ತೇನೆ ಎಂದು ತನ್ನ ಮಗನನ್ನ ಅಲ್ಲಿಂದ ಕರೆದುಕೊಂಡು ಹೊರಟಿದ್ದಾನೆ.

ವೈಶಾಖ ರಾಮಾಚಾರಿ ಯ ಜೀವನವನ್ನ ದುರಂತ ಮಾಡಬೇಕು ಎಂದುಕೊಂಡಿದ್ದಳು.‌ ಅದರಂತೆ ಚಾರು ಮದುವೆ ಯಾಗಿರುವ ವಿಡಿಯೋವನ್ನು ಮಾಡಿಕೊಂಡು ನಾರಾಯಣ ಆಚಾರ್ಯರ ಮರ್ಯಾದೆಯ ಜೊತೆ ರಾಮಾಚಾರಿಯ ಮರ್ಯಾದೆಯನ್ನ ಕಳೆದು ತನ್ನ ತೀರಿಸಿಕೊಂಡಿದ್ದಾಳೆ. ತನ್ನ ಗಂಡನ ಬಗ್ಗೆ ತುಂಬಿದ ಸಭೆಯಲ್ಲಿ ಹೊಗಳಿ ಅಟ್ಟಕ್ಕೇರಿಸಿದ್ದಾಳೆ ನನ್ನ ಗಂಡನೆ ನಿಮಗೆ ಆಗುವುದು. ನಿಮ್ಮ ಮಗನಲ್ಲ ಎಂದು ಹೇಳುವ ಮೂಲಕ ರಾಮಾಚಾರಿಯ ಮೇಲೆ ಆಚಾರ್ಯರಿಗೆ ಮತ್ತಷ್ಟು ದ್ವೇಷ ಉಂಟಾಗುವಂತೆ ಮಾಡಿದ್ದಾಳೆ. ಇದರೊಂದಿಗೆ ರಾಮಾಚಾರ್ಯನ ಮನೆಯಿಂದ ಹೊರ ಹಾಕುವ ಕೆಲಸವನ್ನು ಮಾಡಿದ್ದಾಳೆ.

More from Filmibeat

English summary
Colors Kannada serial Ramachari here details about Ramachari and charu marriage video reveal, everyone shock seeing marriage video, vaishaka rocks, prakash baneri insulting manyatha and jaishankar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X