Ramachari: ಖುಷಿಗೆ ಗೊತ್ತಾಯ್ತು ರಾಮಾಚಾರಿ ವಿಷಯ: ದೀಪಾ-ಚಾರಿ ಎಂಗೇಜ್ಮೆಂಟ್ ಕ್ಯಾನ್ಸಲ್

By ಶೃತಿ ಹರೀಶ್ ಗೌಡ

ತನ್ನ ಅಕ್ಕ ಹೇಳಿದ ಕೆಲಸವನ್ನು ಖುಷಿ ಅಚ್ಚು ಕಟ್ಟಾಗಿ ಮಾಡುತ್ತಿದ್ದಾಳೆ ಚಾರು ಹಾಗೂ ರಾಮಾಚಾರಿ ನಡುವಿನ ಸಂಬಂಧ ಏನು ಎಂದು ತಿಳಿದುಕೊಳ್ಳಲು ಖುಷಿ ಮಾಸ್ಟರ್ ಪ್ಲಾನ್ ಅನ್ನ ಮಾಡಿದ್ದಾಳೆ. ಚಾರು ಹಾಗೂ ಇಬ್ಬರು ಪಾರ್ಕಿನಿಂದ ಹೊರಡುವ ವೇಳೆ ಜೋಗತಿಯನ್ನು ಕರೆಯಿಸಿ ನಾನು ಹೇಳಿದಂತೆ ನೀನು ಮಾಡಬೇಕು ಎಂದು ಹೇಳಿದ್ದಾಳೆ.

ಇದಕ್ಕೆ ಜೋಗತಿ ಚಾರು ಹಾಗೂ ಸಾನ್ವಿ ಹೋಗುತ್ತಿರುವ ಕಡೆ ಕುಳಿತುಕೊಂಡು ಕಣಿ ಹೇಳ್ತೀನಿ ಇದು ದೇವರು ನುಡಿಸುವ ಕಣಿಯಾಗಿದೆ. ನಿಮ್ಮ ಜೀವನದಲ್ಲಿ ಏನು ಆಗುತ್ತದೆ ಎಂಬುದನ್ನು ನಾನು ಹೇಳುತ್ತೇನೆ ಎಂದು ಹೇಳಿದ್ದಾರೆ. ಆದರೆ ಚಾರುಗೆ ಕಲಿಕೇಳುವುದು ಸ್ವಲ್ಪವೂ ಸಹ ಇಷ್ಟವಿಲ್ಲ ಇದಕ್ಕಾಗಿ ಸಾನ್ವಿ ಬಳಿ ನನಗೆ ಅದರ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದ್ದಾಳೆ. ಸ್ವಲ್ಪ ಮುಂದೆ ಬಂದಮೇಲೆ ನಿಮ್ಮ ಜೀವನದಲ್ಲಿ ಮದುವೆಯ ರಹಸ್ಯ ಅಡಗಿದೆ ಎಂದು ಜೋಗತಿ ಖುಷಿ ಹೇಳಿಕೊಟ್ಟ ರೀತಿ ಹೇಳಿದ್ದಾಳೆ.

Colors Kannada Ramachari serial Written Update on june 1st episode

ಇದನ್ನೆಲ್ಲಾ ಕೇಳಿಸಿಕೊಂಡ ಚಾರು ಇವರು ಸತ್ಯವನ್ನೇ ಹೇಳುತ್ತಿದ್ದಾರೆ ಮುಂದೆ ಜೀವನ ಹೇಗೆ ಇರುತ್ತದೆ ಎಂದು ಹೇಳೋಣ ಎಂದುಕೊಂಡು ಜೋಗತಿಯ ಬಳಿ ಬಂದು ಕುಳಿತುಕೊಂಡಿದ್ದಾಳೆ. ಜೋಗತಿ ನಿಮ್ಮ ಗಂಡನ ಹೆಸರನ್ನು ನೆನಪಿಸಿಕೊಳ್ಳಿ ಎಂದಾಗ ಚಾರು ರಾಮಾಚಾರಿ ಎಂದು ಹೇಳಿದ್ದಾಳೆ ಇದು ಖುಷಿಗೆ ಮತ್ತಷ್ಟು ಖುಷಿಯನ್ನೇ ತಂದುಕೊಟ್ಟಿದೆ ಯಾಕೆಂದರೆ ಖುಷಿ ಬಯಸಿದ್ದು ಇದನ್ನೇ ಆದಷ್ಟು ಬೇಗ ಈ ವಿಷಯವನ್ನ ನನ್ನ ಅಕ್ಕನ ಬಳಿ ಹೇಳಬೇಕು ಎಂದುಕೊಂಡು ಅಲ್ಲಿಂದ ಹೊರಟಿದ್ದಾಳೆ.

ಯಾರು ಹೇಳಿದ ವಿಷಯವೇನೆಲ್ಲ ಕೇಳಿಸಿಕೊಂಡ ಖುಷಿ ತನ್ನ ಅಕ್ಕನ ಬಳಿ ಓಡೋಡಿ ಬಂದಿದ್ದಾಳೆ ರೂಮಿಗೆ ಹೋದಂತಹ ಖುಷಿ ವೈಶಾಖ ಬಳಿ ನಿನ್ನ ಅನುಮಾನ ಸತ್ಯವಾಗಿದೆ ಸಾರು ಹಾಗೂ ರಾಮಾಚಾರಿ ಇಬ್ಬರೂ ಸಹ ಗುಟ್ಟಾಗಿ ಮದುವೆಯನ್ನು ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾಳೆ. ಈಗಲೇ ಹೋಗಿ ನೀನು ಮನೆಯವರ ಮುಂದೆ ಈ ವಿಷಯವನ್ನು ಪ್ರಸ್ತಾಪ ಮಾಡು ಜೋರಾಗಿ ಜಗಳವನ್ನ ಆಡು ಭಾವನನ್ನು ಉತ್ತಮ ಸ್ಥಾನದಲ್ಲಿ ಕೂರಿಸು ಎಂದು ಖುಷಿಯ ವೈಶಾಖಗೆ ಹೇಳಿಕೊಡುತ್ತಿದ್ದಾಳೆ.

ಇನ್ನೇನು ಮನೆಯವರ ಬಳಿ ಜಗಳ ತಗಿಯಬೇಕು ಎಂದು ಹೋಗುವಾಗ ವೈಶಾಖ ರೂಮಿನಲ್ಲಿ ನಿಂತುಕೊಂಡಿದ್ದಾಳೆ ಇದಕ್ಕೆ ಖುಷಿ ಏನಾಯಿತು ಅಕ್ಕ ಎಂದು ಹೇಳಿದ್ದಾಳೆ ನಿನ್ನ ಬಳಿ ಚಾರು ಮಾತನಾಡಿದ್ದಕ್ಕೆ ವಿಡಿಯೋ ಪ್ರೂಫ್ ಇದೆಯಾ ಎಂದು ಕೇಳಿದ್ದಾಳೆ. ಅದಕ್ಕೆ ಖುಷಿ ಇಲ್ಲ ಎಂದು ಹೇಳಿದ್ದಾಳೆ ವೈಶಾಖಗೆ ಬೇಸರವಾಗಿದೆ. ಈ ಮನೆಯಲ್ಲಿ ಎಲ್ಲದಕ್ಕೂ ಸಹ ಸಾಕ್ಷಿಯನ್ನು ಕೇಳುತ್ತಾರೆ. ಈಗ ನೀನು ಮಾಡಿರುವ ಎಲ್ಲಾ ಕೆಲಸ ವ್ಯರ್ಥವಾಗಿ ಹೋಗಿದೆ ಎಂದು ವೈಶಾಖ ಹೇಳಿದ್ದಾಳೆ.

ಪದ್ಮನಾಭ ಕುಟುಂಬದವರು ಬಂದು ದೀಪ ಹಾಗೂ ರಾಮಾಚಾರಿಯ ಎಂಗೇಜ್ಮೆಂಟನ್ನು ಮುಂದಕ್ಕೆ ಹಾಕಿಸಿದ್ದಾರೆ. ಭಾನುವಾರ ಎಲ್ಲರಿಗೂ ರಜಾ ಇರುವುದರಿಂದ ಅಂದೆ ಎಂಗೇಜ್ಮೆಂಟ್ ಮಾಡಿಕೊಳ್ಳಾನ ಎಂದಿದ್ದಾರೆ ಇದಕ್ಕೆ ನಾರಾಯಣ ಆಚಾರ್ಯರು ಸಹ ಒಪ್ಪಿಕೊಂಡಿದ್ದಾರೆ.‌

ದೀಪಾ ನಿರಾಳಾಗಿದ್ದಾಳೆ ಯಾಕೆಂದರೆ ನಾನು ರಾಮಾಚಾರಿ ಮಾಮನ ಜೊತೆ ಚೆನ್ನಾಗಿ ಸಂಸಾರವನ್ನ ಮಾಡಬಹುದು ಎಂದು ಅಂದುಕೊಂಡಿದ್ದಾಳೆ ಆದರೆ ರಾಮಾಚಾರಿ ಮದುವೆಯಾಗಿದ್ದಾನೆ ಎಂಬ ವಿಚಾರ ಗೊತ್ತಾದರೆ ಮಾತ್ರ ಯಾವ ರೀತಿ ಮಾಡುತ್ತಾಳೋ ಗೊತ್ತಿಲ್ಲ. ಎಂಗೇಜ್ಮೆಂಟ್ ಕ್ಯಾನ್ಸಲ್ ಆಗಿದ್ದಕ್ಕೆ ಚಾರು ಮಾತ್ರ ತುಂಬಾ ಖುಷಿಯಾಗಿ ಇದ್ದಾಳೆ ಈ ವಿಷಯವನ್ನ ಸಾನ್ವಿ ಜೊತೆಗೆ ಹೇಳಿಕೊಂಡು ಖುಷಿಪಡುತ್ತಿದ್ದಾಳೆ.

ರಾಮಾಚಾರಿ ಶ್ರುತಿಯ ಬಳಿ ಬಂದು ಸತ್ಯವನ್ನು ಹೇಳಿಕೊಂಡಿದ್ದಾನೆ ಯಾಕೆಂದರೆ ಶ್ರುತಿ ರಾಮಾಚಾರಿ ಬಂದ ದೀಪ ಎಂಗೇಜ್ಮೆಂಟ್ ಕ್ಯಾನ್ಸಲ್ ಮಾಡಿಸಿದೆ ನಿನಗೆ ಖುಷಿಯಾಯಿತು ಅಲ್ವಾ ಅಣ್ಣ ಎಂದು ಕೇಳಿದ್ದಕ್ಕೆ ನಡೆದ ಎಲ್ಲಾ ಸತ್ಯವನ್ನು ರಾಮಾಚಾರಿ ಶ್ರುತಿ ಬಳಿ ಹೇಳಿದ್ದಾನೆ. ಇದಕ್ಕೆ ತಾನು ಯಾವ ಪರಿಸ್ಥಿತಿಯಲ್ಲಿ ಚಾರು ಕುತ್ತಿಗೆಗೆ ತಾಳಿಯನ್ನ ಕಟ್ಟಿದೆ ಎಂಬುದನ್ನು ರಾಮಾಚಾರಿ ಶ್ರುತಿಯ ಬಳಿ ಹೇಳಿದ್ದಾನೆ. ಇದೆ ವೇಳೆ ಶ್ರುತಿ ಅಣ್ಣನ ಬಳಿ ಸಾರಿ ಕೇಳಿದ್ದಾಳೆ ನಿನ್ನ ಜೊತೆ ನಾನು ಇರುತ್ತೇನೆ ಎಂದು ಅಣ್ಣನಿಗೆ ಭರವಸೆಯನ್ನ ನೀಡಿ ಚಾರು ಕಳಿಸಿದ ವಿಡಿಯೋವನ್ನು ಡಿಲೀಟ್ ಮಾಡಿದ್ದಾಳೆ.‌

More from Filmibeat

English summary
Colors Kannada serial Ramachari here details about vaishaka sister kushi planning, charu telling the truth about Ramachari and her marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X