Ramachari: ಅಪ್ಪನಿಂದ ದೂರವಾದ ರಾಮಾಚಾರಿ: ಕೊನೆಗೂ ಸೇಡು ತೀರಿಸಿಕೊಂಡು ನಕ್ಕ ವೈಶಾಖ!

By ಶೃತಿ ಹರೀಶ್ ಗೌಡ

ಚಾರು ಸುಳ್ಳಿನಿಂದ ಮದುವೆ ಮಾಡಿಕೊಂಡಿದ್ದಕ್ಕೆ ಈಗ ರಾಮಾಚಾರಿ ಪಶ್ಚಾತಾಪವನ್ನ ಅನುಭವಿಸುವಂತೆ ಆಗಿದೆ. ಚಾರುವನ್ನು ಯಾರು ಸಹ ಮಾತನಾಡಲು ಬಿಡುತ್ತಿಲ್ಲ. ರಾಮಾಚಾರಿ ಏನು ಮಾತನಾಡಿದರು ಯಾರು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ಇದರಿಂದಾಗಿ ರಾಮಾಚಾರಿ ಏನು ಮಾತನಾಡದ ಪರಿಸ್ಥಿತಿಯಲ್ಲಿ ಇದ್ದಾನೆ ಚಾರು ಸಹ ಸುಮ್ಮನೇ ನಿಂತುಕೊಂಡಿದ್ದಾಳೆ.

ಜೈ ಶಂಕರ್ ರಾಮಾಚಾರಿಯ ಕಪಾಳಕ್ಕೆ ಹೊಡೆದಿದ್ದಾನೆ ನನ್ನನ್ನ ಯಾವಾಗಲೂ ರೋಲ್ ಮಾಡೆಲ್ ಎನ್ನುತ್ತಿದ್ದೆ ಆದರೆ ನೀನು ನನಗೆ ಮೋಸ ಮಾಡಿಬಿಟ್ಟೆ ಎಂದು ಕಪಾಳಕ್ಕೆ ಹೊಡೆದಿದ್ದಾನೆ. ಇದೇ ವೇಳೆ ಚಾರು ರಾಮಾಚಾರಿಯ ಕಪಾಳಕ್ಕೆ ಹೊಡೆದಿದ್ದನ್ನ ನೋಡಿ ಕಣ್ಣೀರನ್ನು ಹಾಕಿದ್ದಾಳೆ. ಈ ಕಡೆ ಮಾನ್ಯತಾ ನಾರಾಯಣ ಆಚಾರ್ಯರಿಗೆ ಬಾಯಿಗೆ ಬಂದಂತೆ ಮಾತನಾಡಿದ್ದಾಳೆ ನಿಮ್ಮ ಮಗ ನಿಮಗೆ ಶಾಪವಾಗಿ ಹುಟ್ಟಿದ್ದಾನೆ ಅಂತಹ ಮಗನಿಂದ ನಿಮ್ಮ ಮರ್ಯಾದೆಯ ಜೊತೆಗೆ ನಮ್ಮ ಮರ್ಯಾದೆ ಸಹ ಹೋಗಿದೆ ಎಂದು ಅಂದಿದ್ದಾಳೆ.

Colors Kannada Ramachari serial Written Update on june 20th episode

ನನ್ನ ತಂದೆಗೆ ಏನು ಮಾತನಾಡಬೇಡಿ ಎಂದು ವೈಶಾಖ ಬಳಿ ರಾಮಾಚಾರಿ ಅಂದಿದ್ದಕ್ಕೆ ನಾರಾಯಣ ಆಚಾರ್ಯರು ರಾಮಾಚಾರಿಗೆ ಬೈದಿದ್ದಾರೆ. ನಿನ್ನ ಈ ಪಾಪಿಷ್ಟ ಬಾಯಿಯಲ್ಲಿ ನನ್ನನ್ನು ಅಪ್ಪ ಎಂದು ಕರೆಯಬೇಡ ನನಗೆ ಅದು ಇಷ್ಟವಾಗುವುದಿಲ್ಲ ನನಗೆ ಇರುವುದು ಒಬ್ಬನೇ ಮಗ ಅದು ಕೋದಂಡ ಮಾತ್ರ ಎಂದಿದ್ದಾರೆ. ನಾರಾಯಣ ಆಚಾರ್ಯರು ಮಾತನಾಡುತ್ತಿರುವ ಮಾತನ್ನೆಲ್ಲ ಕೇಳುತ್ತಿರುವ ವೈಶಾಖಗೆ ಮಾತ್ರ ಡಬ್ಬಲ್ ಖುಷಿಯಾಗಿದೆ.

ರಾಮಾಚಾರಿ ಇನ್ಮುಂದೆ ನನ್ನ ಮಗನಲ್ಲ ಅವನು ನನ್ನ ನಂಬಿಕೆಯನ್ನು ಕಳೆದುಕೊಂಡಿದ್ದಾನೆ. ನನ್ನ ಪಾಲಿಗೆ ಅವನು ಸತ್ತು ಹೋಗಿದ್ದಾನೆ ಎಂದು ನಾರಾಯಣ ಆಚಾರ್ಯರು ಹೇಳಿದ್ದಾರೆ. ಮನೆಗೆ ಹೋಗಿ ನಾನು ಅವನ ಹೆಸರಿನಲ್ಲಿ ಎಳ್ಳು ಮತ್ತು ತರ್ಪಣವನ್ನ ಬಿಟ್ಟು ಕೈ ತೊಳೆದುಕೊಳ್ಳುತ್ತೇನೆ ಅವನು ಇನ್ಮುಂದೆ ನನ್ನ ಮುಖವನ್ನು ನೋಡುವಂತಿಲ್ಲ ಎಂದು ರಾಮಾಚಾರಿ ಯ ಮೇಲೆ ಕೆಂಡದಂತ ಕೋಪವನ್ನು ನಾರಾಯಣ ಆಚಾರ್ಯರು ತೋರಿದ್ದಾರೆ.

ಜಾನಕಿ ಅಳುತ್ತಿದ್ದಿದ್ದಕ್ಕೆ ಇಂತಹ ಪಾಪಿ ಮಗನಿಗೆ ಜನ್ಮ ಕೊಟ್ಟೆ ಎಂದು ನೀನು ಅಳಬೇಡ ನಿನ್ನ ಮಗ ನಿನ್ನ ಪಾಲಿಗೆ ಸತ್ತು ಹೋಗಿದ್ದಾನೆ ಎಂದು ಹೇಳಿದ್ದಾರೆ ಆದರೆ ತಾಯಿ ಕರುಳು ರಾಮಾಚಾರಿಯನ್ನ ದೂರ ಮಾಡಿಕೊಳ್ಳಲು ಇಷ್ಟಪಡುತ್ತಿಲ್ಲ. ಈ ಕಡೆ ರಾಮಾಚಾರಿ ತಂದೆಯ ಕೈಹಿಡಿದು ಕೊಂಡಿದ್ದಕ್ಕೆ ನಾರಾಯಣ ಆಚಾರ್ಯರು ಕೋದಂಡನನ್ನು ಕರೆದು ಇವನೊಬ್ಬನೆ ನನ್ನ ಮಗ ದಯವಿಟ್ಟು ಈ ಪಾಪಿಷ್ಟನ ಕೈಯನ್ನ ಬಿಡಿಸು ಎಂದು ಹೇಳಿದ್ದಾರೆ ಈ ವೇಳೆ ಕೋದಂಡ ರಾಮಾಚಾರಿಯ ಕೈಯನ್ನ ಬಿಡಿಸಿ ದೂರ ತಳ್ಳಿದ್ದಾನೆ.

ಚಾರು ಕರೆದುಕೊಂಡು ಮಾನ್ಯತಾ ಮದುವೆ ಮಂಟಪದಿಂದ ಬಂದಿದ್ದಾಳೆ ನಾರಾಯಣ ಆಚಾರ್ಯರೇ ಮಗನನ್ನು ಬಿಟ್ಟು ಹೋದ ಮೇಲೆ ನೀನೇಕೆ ಅಲ್ಲಿ ಇರುತ್ತೀಯಾ ಎಂದು‌ ಎಳೆದುಕೊಂಡು ಮಾನ್ಯತಾ ಮನೆಗೆ ಹೋಗಿದ್ದಾಳೆ. ಇದೆ ವೇಳೆ ಚಾರುವನ್ನು ಕರೆದುಕೊಂಡು ಬಂದಿದ್ದಕ್ಕೆ ಜೈ ಶಂಕರ್ ಮಾನ್ಯತಾ ಮೇಲೆ ಕೋಪ ತೋರಿಸಿದ್ದಾನೆ. ನೀನು ಏಕೆ ಇವಳನ್ನ ಮನೆಗೆ ಕರೆದುಕೊಂಡು ಬಂದೆ ನನಗೆ ಇದ್ದಂತಹ ಮರ್ಯಾದೆ ಗೌರವವನ್ನೆಲ್ಲ ಇವಳು ಹಾಳು ಮಾಡಿದ್ದಾಳೆ. ಇವಳನ್ನು ಹೊರಗೆ ಕಳುಹಿಸು ಎಂದು ಮಾನ್ಯತಾ ಮೇಲೆ ಕೋಪ ಮಾಡಿಕೊಂಡಿದ್ದಾನೆ.

ಆದರೆ ಮಾನ್ಯತಾ ರಾಮಾಚಾರಿ ಮೇಲೆ ಕೋಪ ತೋರಿದ್ದಾಳೆ ನಾನು ಇವಳನ್ನ ಎಲ್ಲಿಗೆ ಕಳುಹಿಸಲಿ ಎಂದು ಹೇಳಿದ್ದಾಳೆ ರಾಮಾಚಾರಿ ಮಾಡಿದ ತಪ್ಪಿಗೆ ನನ್ನ ಮಗಳಿಗೆ ಕೆ ಶಿಕ್ಷೆ ನಾನು ಅವರ ಮನೆಯವರನ್ನೆಲ್ಲಾ ಸುಟ್ಟು ಬರುತ್ತೇನೆ ಎಂದಿದ್ದಾಳೆ ಆದರೆ ಇದನ್ನೆಲ್ಲಾ ನೋಡುತ್ತಿದ್ದ ಚಾರು ಜೋರಾಗಿ ಕೂಗಿಕೊಂಡು ಮೊದಲು ನನ್ನನ್ನೇ ಸುಟ್ಟುಬಿಡಿ ಎಂದು ಹೇಳಿದ್ದಾಳೆ. ಚಾರು ಮಾತನ್ನು ಕೇಳಿದ ಮಾನ್ಯತಾ ಗೆ ಒಂದು ಕ್ಷಣ ಗಾಬರಿಯೇ ಆಗಿದೆ.

More from Filmibeat

English summary
Colors Kannada serial Ramachari here details about Ramachari and charu Last her family Faith, narayana achar going to home without Ramachari
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X