Ramachari: ಚಾರುಲತಾಗೆ ಶಾಪ ಹಾಕಿದ ದೀಪ; ನಾರಾಯಣ ಆಚಾರ್ಯರ ಮನೆಗೆ ಬಂದ ಚಾರು

By ಶೃತಿ ಹರೀಶ್ ಗೌಡ

ನಾರಾಯಣ ಆಚಾರ್ಯರ ಮನೆಗೆ ದೀಪ ಹಾಗೂ ಪದ್ಮನಾಭ, ಪದ್ಮನಾಭನ ಹೆಂಡತಿ ಎಲ್ಲರೂ ಬಂದಿದ್ದರು. ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಪದ್ಮನಾಭನ ಹೆಂಡತಿ ನಾರಾಯಣ ಆಚಾರ್ಯರ ಮನೆಗೆ ಮತ್ತಷ್ಟು ಶಾಪವನ್ನು ಹಾಕಿದ್ದಾಳೆ. ತನ್ನ ತವರು ಮನೆ ಎಂಬುದನ್ನು ನೋಡದೆ ಸಹ ಶಾಪವನ್ನು ಹಾಕಿದ್ದಾಳೆ. ಇದರಿಂದಾಗಿ ಜಾನಕಿ ಮತ್ತಷ್ಟು ನೊಂದು ಹೋಗಿದ್ದಾಳೆ ತವರು ಮನೆಗೆ ಈ ರೀತಿ ಶಾಪ ಹಾಕಿದರೆ ತರುವುದಿಲ್ಲ ಎಂದು ನೊಂದಿದ್ದಾಳೆ.

ನಾರಾಯಣ ಆಚಾರ್ಯರು ಇಂತಹ ಆಪ್ರಯೋಜಕ ಮಗನನ್ನ ಹೆತ್ತ ಮೇಲೆ ಎಲ್ಲರೂ ಏನಾದರೂ ಅಂದರು ಸಹ ನಾನು ಅನ್ನಿಸಿಕೊಳ್ಳಲೇಬೇಕು. ನನ್ನ ಪಾಲಿಗೆ ನನ್ನ ಮಗ ಯಾವತ್ತೋ ಸತ್ತು ಹೋಗಿದ್ದಾನೆ ಅವನನ್ನ ನಾನು ಮನೆಗೆ ಸೇರಿಸುವುದಿಲ್ಲ ಎಂದಿದ್ದಾರೆ.‌ ಅಷ್ಟರಲ್ಲಿ ಮಧ್ಯ ಪ್ರವೇಶ ಮಾಡಿದ ನಾರಾಯಣ ಆಚಾರ್ಯರ ತಂಗಿ ಗಂಡ ಹೆಂಡತಿ ಇಬ್ಬರೂ ಈ ರೀತಿ ಅಂದು ನಂತರ ಮನೆಯಗೆ ಸೇರಿಸಿಕೊಳ್ಳುತ್ತೀರ ಎಂದು ಹೇಳಿದ್ದಾಳೆ.

 Colors Kannada Ramachari serial Written Update on June 26th episode

ಕುಟುಂಬದವರು ಆ ರೀತಿ ಅಂದಿದ್ದೆ ತಡ ಕೋದಂಡನಿಗೆ ಇವನನ್ನು ಮನೆಯಿಂದ ಹೊರಗೆ ಕಳುಹಿಸು ಎಂದಿದ್ದಾರೆ. ಆದರೂ ಸಹ ರಾಮಾಚಾರಿಗೆ ಎಲ್ಲರು ಚುಚ್ಚಿ ಚುಚ್ಚಿ ಮಾತನಾಡುತ್ತಿದ್ದಾರೆ. ಅದರಲ್ಲೂ ವೈಶಾಖ ಬಹಳ ಖುಷಿಯಿಂದ ಇದ್ದಾಳೆ ನನ್ನ ವಿಡಿಯೋ ಬಹಳಷ್ಟು ಮಾಡಿದೆ ನಾನು ಗೆಲುವನ್ನ ಸಾಧಿಸಿದೆ ಎಂದುಕೊಂಡಿದ್ದಾಳೆ. ದೀಪಾ ಸಹ ತನ್ನ ಮಾವನ ಕೈಯನ್ನ ಹಿಡಿದುಕೊಂಡು ಪರಿಪರಿಯಾಗಿ ಬೇಡಿಕೊಂಡಿದ್ದಾಳೆ.

ಮಾನ್ಯತಾ ಚಾರು ಎಲ್ಲಿ ನಾರಾಯಣ ಆಚಾರ್ಯರ ಮನೆಗೆ ಹೋಗಿಬಿಡುತ್ತಾಳೋ ಎಂಬ ಸಂಕಟದಲ್ಲಿ ಪೆಟ್ರೋಲನ್ನು ಮೈಮೇಲೆ ಸುರಿದುಕೊಂಡು ನಾನು ಸತ್ತು ಹೋಗುತ್ತೇನೆ ಎಂದಿದ್ದಳು. ಇದೆ ವೇಳೆ ಜೈ ಶಂಕರ್ ಮಾನ್ಯತಾ ಕೈಯಲ್ಲಿದ್ದ ಬೆಂಕಿ ಪಟ್ಟಣವನ್ನ ಕಿತ್ತುಕೊಂಡಿದ್ದಾರೆ. ನೀನೇನು ಸಾಯುವುದು ಬೇಡ ನಾನೇ ನಿನಗೆ ಬೆಂಕಿಯನ್ನು ಅಚ್ಚುತ್ತೇನೆ ನೀನು ಸತ್ತು ಹೋಗು ಎಂದು ಬೆಂಕಿಯನ್ನು ಹಚ್ಚಲು ಹೋಗಿದ್ದಾರೆ.

ಇನ್ನು ಜೈ ಶಂಕರ್ ಬೆಂಕಿಕಡ್ಡಿಯನ್ನು ತೆಗೆದುಕೊಂಡಾಗ ಅವರ ತಂದೆ ತಾಯಿ ಹಾಗೂ ಚಿಂಟು ಎಲ್ಲರೂ ಬೇಡ ಬೇಡ ಎಂದಿದ್ದಾರೆ. ನಂತರ ಮಾನ್ಯತಾ ಸ್ಥಳದಿಂದ ಓಡಿ ಹೋಗಿದ್ದಾಳೆ. ಜೈ ಶಂಕರ್ ಅವರ ತಂದೆ ತಾಯಿಗೆ ಮರ್ಯಾದೆಯನ್ನ ಕೊಡದೆ ನೀವು ನಾಳೆಯೇ ಎಲ್ಲಿಂದ ಹೊರಟುಬಿಡಿ ಎಂದು ಹೇಳಿದ್ದಾಳೆ. ನಾವೇನು ಮಾಡಿದ್ವಿ ಎಂದು ಕೇಳಿದ್ದಕ್ಕೆ ಮಾನ್ಯತಾ ನಿಮ್ಮಿಂದಲೇ ನಿಮ್ಮ ಮಗ ನನ್ನ ಹೊಡೆಯಲು ಬಂದಿದ್ದು ಇಲ್ಲಿಯವರೆಗೂ ಅವರು ಏನನ್ನು ಮಾಡಿರಲಿಲ್ಲ ಎಂದು ತಿಳಿಸಿದ್ದಾಳೆ.

ಆಚಾರ್ಯರ ಮನೆಗೆ ಚಾರು ಬಂದಿದ್ದಾಳೆ ಇದೆ ವೇಳೆ ಕಾರಣ ಇಳಿದ ಕೂಡಲೇ ದೀಪ ಚಾರುಗೆ ಶಾಪವನ್ನು ಹಾಕಲು ಶುರು ಮಾಡಿದ್ದಾಳೆ. ನನ್ನ ಮಾಂಗಲ್ಯ ಭಾಗ್ಯವನ್ನು ನೀನು ಕಿತ್ತುಕೊಂಡಿದ್ದೀಯ ನನ್ನ ಮಾವನ ಮನಸ್ಸಿಗೆ ನೀನು ಹೇಗೆ ಬಂದೆ ಈಗ ತಾಳಿ ಕಟ್ಟಿಸಿಕೊಂಡು ಮೆರೆಯುತ್ತಿದ್ದೀಯ ಎಂದು ದೀಪ ಚಾರುಗೆ ಅಂದಿದ್ದಾಳೆ. ನಿಮ್ಮಿಬ್ಬರ ಸಂಸಾರ ಇನ್ನು ಆರು ತಿಂಗಳಲ್ಲೇ ಕಿತ್ತು ಹೋಗುತ್ತದೆ ಅದನ್ನ ನಾನು ಕಣ್ಣಾರೆ ನೋಡುತ್ತೇನೆ ಎಂದು ಶಾಪ ಹಾಕಿದ್ದಾಳೆ.

ಚಾರು ದೀಪಾಗೆ ದಯವಿಟ್ಟು ನೀನು ಈ ರೀತಿ ಎಲ್ಲಾ ಶಾಪ ಹಾಕಬೇಡ ಎಂದು ಎಂದಿದ್ದಾಳೆ. ಆದರೂ ನಾನು ಹಾಕುತ್ತೇನೆ ನನಗೆ ಎಷ್ಟು ಹೊಟ್ಟೆ ಉರಿ ಇದೆ ನಾನು ಮಾವನನ್ನ ಮದುವೆ ಮಾಡಿಕೊಂಡು ಸಂಸಾರ ಮಾಡಬೇಕು ಅಂದುಕೊಂಡಿದ್ದೆ. ಆದರೆ ನೀನು ಬಂದು ಮದುವೆಯಾದೆ. ನನ್ನ ಮಾವನ ಸಂಸಾರ ಚೆನ್ನಾಗಿ ಇರಬಾರದು ಅದು ಇರುವುದಿಲ್ಲ, ನನ್ನ ಕಣ್ಣೀರಿನ ಶಾಪ ನಿಮಗೆ ತಟ್ಟುತ್ತದೆ ಎಂದು ರಾಮಾಚಾರಿ ಮುಂದೆ ಶಾಪವನ್ನು ದೀಪಾ ಹಾಕಿದ್ದಾಳೆ.

ಜೈ ಶಂಕರ್ ಅವರ ತಂದೆ ತಾಯಿಗೆ ಮಾನ್ಯತಾ ಅವಮಾನವನ್ನ ಮಾಡಿದ್ದಾಳೆ. ನಿಮ್ಮ ಮಗ ನನ್ನ ಮಾತನ್ನ ದಿಕ್ಕರಿಸಿ ಹೋಗಿದ್ದಾನೆ. ನನಗೆ ಅವನು ಗಂಡನೇ ಅಲ್ಲ ನೀವು ನನ್ನ ಪಾಲಿಗೆ ಅತ್ತೆ ಮಾವ ಅಲ್ಲ ನಾನ್ಯಾಕೆ ನಿಮ್ಮ ಸೇವೆಯನ್ನ ಮಾಡಬೇಕು ನೀವಿಬ್ಬರೂ ಎಲ್ಲಿಂದ ಹೊರಟು ಹೋಗಿ ಎಂದು ಕೂಗಾಡಿದ್ದಾಳೆ.

More from Filmibeat

English summary
Colors Kannada serial Ramachari here details about charu came to narayanaachar home, vaishaka threats to Ramachari get out from the home,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X