Ramachari: ಕರಗದ ನಾರಾಯಣ ಆಚಾರ್ಯರ ಮನಸ್ಸು: ಮನೆಯ ಹೊರಗೆ ಉಳಿದ ಚಾರು-ಚಾರಿ

By ಶೃತಿ ಹರೀಶ್ ಗೌಡ

ದೀಪಾ ಇನ್ನೇನು ಮನೆಯಿಂದ ಹೊರಡಬೇಕು ಎನ್ನುವಷ್ಟರಲ್ಲಿ, ಜೈ ಶಂಕರ್ ತಮ್ಮ ಮಗಳನ್ನ ಕರೆದುಕೊಂಡು ನಾರಾಯಣ ಆಚಾರ್ಯರ ಮನೆಗೆ ಬಂದಿದ್ದರು. ಚಾರುಗೆ ದೀಪ ಶಾಪವನ್ನು ಹಾಕಿದ್ದಾಳೆ ನಿಮ್ಮಿಬ್ಬರ ಸಂಬಂಧ ಆರು ತಿಂಗಳಲ್ಲೇ ಮುರಿದು ಬೀಳಲಿ. ನನ್ನ ಶಾಪ ನಿನಗೆ ತಟ್ಟಲಿ ಎಂದು ಧೂಳನ್ನು ಹಾಕುವ ಮೂಲಕ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾಳೆ.

ದೀಪಾ ಹೋದ ಮೇಲೆ ಚಾರು ಮಾವ ದಯವಿಟ್ಟು ನನ್ನನ್ನ ಮನೆ ತುಂಬಿಸಿಕೊಳ್ಳಿ ಎಂದು ಕೇಳಿಕೊಂಡಿದ್ದಾಳೆ. ನಾರಾಯಣ ಆಚಾರ್ಯರು ಏನನ್ನು ಮಾತನಾಡಲಿಲ್ಲ. ನಅಲ್ಲೇ ಇದ್ದ ವೈಶಾಖ ತಮ್ಮ ಮಗನನ್ನೇ ಸತ್ತು ಹೋದ ಎಂದು ನೆನ್ನೆ ತಲೆಗೆ ಸ್ನಾನ ಮಾಡಿಕೊಂಡಿದ್ದಾರೆಮ ಇನ್ನೂ ನೀನು ಇಲ್ಲಿ ಇರಲು ಸಾಧ್ಯವಿಲ್ಲ ಎಂದಿದ್ದಾಳೆ. ಇದೆ ವೇಳೆ ಮುಂದುವರೆದು ಮಾತನಾಡಿದ ಚಾರು. ನನಗೂ ಹಾಗೂ ರಾಮಾಚಾರಿಗೂ ಹಾಗೆ ಬರುತ್ತಿರಲಿಲ್ಲ. ಕೊನೆಗೆ ಅವನ ಮೇಲೆ ನನಗೆ ಪ್ರೀತಿ ಆಯಿತು ಎಂದು ಹೇಳಿದ್ದಾಳೆ.

ramachari-written-update

ಎಲ್ಲಾ ತಿಳಿದ ನೀವು ಈ ರೀತಿ ಮಾಡಿದರೆ ಹೇಗೆ ದೈವ ಸಂಕಲ್ಪ ಇಲ್ಲದೆ ಒಂದು ಹುಲ್ಲು ಕಡ್ಡಿಯು ಅಲ್ಲಾಡೋದಿಲ್ಲ ಎಂದು ಹೇಳುತ್ತಾರೆ. ನಮ್ಮಿಬ್ಬರ ಮದುವೆಯೂ ಸಹ ದೈವ ಸಂಕಲ್ಪ ವಾಗಿರಬಹುದು ಎಂದು ನಾರಾಯಣ ಆಚಾರ್ಯರಿಗೆ ಚಾರು ಹೇಳಿದ್ದಾಳೆ. ಇದೇ ವೇಳೆ ವೈಶಾಖ ಕಡೆ ತಿರುಗಿ ನೋಡಿ ನೀವು ಈ ಮನೆಯ ಹಿರಿ ಸೊಸೆ. ಸಂಪ್ರದಾಯ ಬದ್ಧವಾಗಿ ನಮ್ಮನ್ನ ಮನೆ ತುಂಬಿಸಿಕೊಳ್ಳುವ ಕೆಲಸವನ್ನು ಮಾಡಿ ಕೊಂಕು ಆಡಬೇಡಿ ಎಂದು ಚಾರು ಹೇಳಿದ್ದಾನೆ.

ನಾರಾಯಣ ಆಚಾರ್ಯರಿಗೆ ಚಾರು ವೇದಾಂತದ ಪಾಠವನ್ನು ಹೇಳಲು ಹೋಗಿದ್ದಾಳೆ. ಮಾವ ನೀವೇ ಹೇಳುತ್ತೀರಿ ಋಣಾನುಬಂಧ ರೂಪೇಣ ಪಶು ಪತ್ನಿಸುತಾಲಯ ಎಂದು ಈಗ ಮದುವೆ ಆಗಿರುವುದು ಹಾಗೆಯೇ ತಾನೆ ಎಂದು ಹೇಳಿದ್ದಾಳೆ. ಇದಕ್ಕೆ ನಾರಾಯಣ ಆಚಾರ್ಯರು ನೀನು ನನಗೆ ವೇದಾ ಹೇಳಲು ಬರಬೇಡ ಎಂದಿದ್ದಾರೆ. ನೀನು ಏನೇ ಹೇಳಿದರೂ ಸಹ ನಾನು ಇದನ್ನೆಲ್ಲಾ ಕೇಳಿಕೊಂಡು ಇರುವುದಿಲ್ಲ ಈ ಪಾಪಿ ಮಗನನ್ನೇ ಮನೆಯಿಂದ ದೂರ ಹಾಕಿದ್ದೇನೆ ಎಲ್ಲಿ ಬೇಕಾದರೂ ಹೋಗಬಹುದು ಎಂದು ನಾರಾಯಣ ಆಚಾರ್ಯರು ಅಂದಿದ್ದಾರೆ.

ಇದೇ ವೇಳೆ ಮಧ್ಯ ಪ್ರವೇಶ ಮಾಡಿದ ವೈಶಾಖ, ಈ ಕೊಳಕು ರಾಮಾಚಾರಿಯಿಂದ ನಮಗೆಲ್ಲರಿಗೂ ಸಹ ಕೆಟ್ಟ ಹೆಸರು. ಮನೆಯಲ್ಲಿ ಇವನು ಇರುವುದು ಬೇಡ ಎಂದು ಹೇಳಿದ್ದಾಳೆ. ನನ್ನ ಮಗನಿಗೆ ನಾನು ಉತ್ತಮ ಸಂಸ್ಕಾರಗಳನ್ನ ಕಲಿಸಿದ್ದೆ, ಅದೆಲ್ಲವನ್ನು ಸಹ ಮಣ್ಣು ಪಾಲು ಮಾಡಿ ಈಗ ಕಳಂಕ ಹೊತ್ತು ನಿಂತಿದ್ದಾನೆ. ಅವನು ಇದ್ದರೆಷ್ಟು ಹೋದರೆಷ್ಟು ಎಂದು ನಾರಾಯಣ ಆಚಾರ್ಯರು ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಮನಸ್ಸನ್ನು ಕಲ್ಲು ಮಾಡಿಕೊಂಡಿದ್ದೇನೆ ಎಂದು ಆಚಾರ್ಯರು ಹೇಳಿದ್ದಾರೆ.

ನಾರಾಯಣ ಆಚಾರ್ಯರು ತಮ್ಮ ಮನಸ್ಸನ್ನ ಕಲ್ಲು ಮಾಡಿಕೊಂಡಿರುವುದಕ್ಕೆ ಜಯಶಂಕರ್ ಕಾಲನ್ನ ಹಿಡಿದು ಬೇಡಿಕೊಂಡಿದ್ದಾರೆ. ದಯವಿಟ್ಟು ನನ್ನ ಮಗಳನ್ನು ನಿಮ್ಮ ಮನೆಯ ಸೊಸೆಯನ್ನಾಗಿ ಸ್ವೀಕರಿಸಿ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ನಾರಾಯಣ ಆಚಾರ್ಯರು ಅವರಿಬ್ಬರೇ ಭವಿಷ್ಯವನ್ನ ರೂಪಿಸಿಕೊಳ್ಳುತ್ತಾರೆ ಎಂದು ಮುಖಕ್ಕೆ ಒಡೆದ ರೀತಿಯಲ್ಲಿ ಮಾತನಾಡಿದ್ದಾರೆ.

ನಿಮ್ಮ ಮಗ ಅವರು ಹೇಗೆ ಸಂಬಂಧವನ್ನ ಕಳೆದುಕೊಳ್ಳುತ್ತೀರಿ ಎಂದು ಜೈಶಂಕರ್ ಕೇಳಿದ್ದಾರೆ. ನನ್ನ ಮಗನ ಸತ್ತು ಹೋದ ಎಂದು ನಾರಾಯಣ ಆಚಾರ್ಯರು ಹೇಳಿದ್ದಾರೆ. ಅವನಿಗೆ ಈ ಮನೆಯಲ್ಲಿ ಸ್ಥಾನ ಇಲ್ಲದೆ ಇರುವಾಗ ನಿಮ್ಮ ಮಗಳಿಗೆ ನಾನು ಸ್ಥಾನವನ್ನ ಕೊಡುವುದಿಲ್ಲ. ಅವರವರೆ ಅವರ ಭವಿಷ್ಯವನ್ನು ರೂಪಿಸಿಕೊಳ್ಳಲಿ ಎಂದು ಕಠೋರವಾಗಿ ನುಡಿದು ಮನೆಯ ಬಾಗಿಲನ್ನು ಹಾಕಿಕೊಂಡಿದ್ದಾರೆ.

ಚಾರುವನ್ನು ಹುಡುಕಿಕೊಂಡು ಮನೆಗೆ ಹೋದಂತಹ ಸಾನ್ವಿಗೆ ಮಾನ್ಯತಾ ಕಾಪಾಳಕ್ಕೆ ಹೊಡೆದಿದ್ದಾಳೆ. ನಾನು ನಿನ್ನನ್ನ ಎಷ್ಟು ನಂಬಿಕೊಂಡಿದ್ದೆ ನೀನು ನನ್ನ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಮಾಡಿಬಿಟ್ಟೆ .ನನಗೆ ಅನುಮಾನ ಬಂದಾಗ ಪ್ರತಿಸಲ ನಾನು ಫೋನು ಮಾಡುತಿದ್ದೆ. ಆದರೆ ನೀನು ವಿಕಾಸ್ ಮೇಲೆ ಚಾರುಗೆ ಪ್ರೀತಿ ಇದೆ ಎಂದು ಸುಳ್ಳು ಎಂದು ಮಾನ್ಯತಾ ಸಾನ್ವಿ ಮೇಲೆ ಕೋಪ ಮಾಡಿಕೊಂಡಿದ್ದಾಳೆ. ಇದೇ ವೇಳೆ ಸಾನ್ವಿ ಚಾರುನೇ ಹೇಳಬೇಡ ಎಂದು ಹೇಳುತ್ತಿದ್ದಳು ಎಂದು ಹೇಳಿದ್ದಾಳೆ.

More from Filmibeat

English summary
Colors Kannada serial Ramachari here details about deepa crying, Narayana achar can't accept charu , jaishankar begging narayana achar please accept her daughter has a sister in law
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X