Ramachari: ಬೀದಿಯಲ್ಲಿರುವ ಚಾರಿ - ಚಾರು: ಮನೆಯವರ ಮನಸಿನಲ್ಲಿ ಮತ್ತಷ್ಟು ವಿಷ ಬಿತ್ತಿದ ವೈಶಾಖ
ರಾಮಾಚಾರಿ ಹಾಗೂ ಚಾರು ಇಬ್ಬರು ಈಗ ಮನೆಯಿಂದ ಹೊರಗಡೆ ಇದ್ದಾರೆ. ಮಗಳ ಈ ಪರಿಸ್ಥಿತಿಯನ್ನು ನೋಡಲಾಗದ ಜೈ ಶಂಕರ್ ಅವರು ಮಗಳನ್ನು ನನ್ನ ಜೊತೆ ಬಾ ಎಂದು ಕರೆದಿದ್ದಾರೆ. ಆದರೆ ಚಾರು ಅಪ್ಪನ ಆಫರ್ ಅನ್ನ ನಿರಾಕರಣೆ ಮಾಡಿದ್ದಾಳೆ. ನನ್ನ ಗಂಡ ಎಲ್ಲಿ ಇರುತ್ತಾನೋ ನಾನು ಸಹ ಅಲ್ಲೇ ಇರುತ್ತೇನೆ ಎಂದು ಹೇಳಿದ್ದಾಳೆ. ಇದೇ ವೇಳೆ ಜೈ ಶಂಕರ್ ಮತ್ತೊಮ್ಮೆ ನಾರಾಯಣ ಆಚಾರ್ಯರ ಬಳಿ ಮತನಾಡಲು ಹೋಗಿದ್ದಾರೆ.ಮನೆಯ ಒಳಗೆ ಹೋದಂತಹ ಜೈ ಶಂಕರ್, ಆಚಾರ್ಯರ ಬಳಿ ದಯವಿಟ್ಟು ನನ್ನ ಮಗಳ ಬಗ್ಗೆ ಸ್ವಲ್ಪ ಯೋಚನೆ ಮಾಡಿ ಎಂದು ಕೇಳಿದ್ದಾರೆ.
ಇದಕ್ಕೆ ಇದು ನಾರಾಯಣ ಆಚಾರ್ಯರು ಪಾಪಿಷ್ಟ ಮಗನನ್ನೇ ನಾನು ಮನೆಯಿಂದ ಹೊರಗೆ ಇಟ್ಟಿದ್ದೇನೆ. ಇನ್ನು ನಿಮ್ಮ ಮಗಳು ನನಗೆ ಯಾವ ಲೆಕ್ಕ ಎಂದು ಹೇಳಿದ್ದಾರೆ. ನಾನು ನಿಮಗಿಂತ ದೊಡ್ಡವನಲ್ಲ ನಿಮಗೆ ಯಾವುದು ಸರಿ ಎನಿಸುತ್ತದೆ ಅದನ್ನೇ ಮಾಡಿ. ನಿಮಗೆ ಸೇರಬೇಕಾದ ವಸ್ತುವನ್ನು ನಿಮ್ಮ ಮನೆಯ ಮುಂದೆಯೇ ಬಿಟ್ಟು ತೆರಳುತ್ತಿದ್ದೇನೆ. ಹಾಲಿಗಾದರೂ ಹಾಕಿ, ನೀರಿಗಾದರೂ ಹಾಕಿ ಎಂದು ಜಯಶಂಕರ್ ಅಲ್ಲಿಂದ ಹೊರಟಿದ್ದಾರೆ.

ಚಾರು ಹಾಗೂ ರಾಮಾಚಾರಿಗೆ ಶುಭ ಹಾರೈಸಿರುವ ಜೈ ಶಂಕರ್ ನನ್ನ ಮಗಳನ್ನು ನಿಮ್ಮ ಕೈಯಲ್ಲಿ ಇಟ್ಟಿದ್ದೇನೆ ಎಂದು ರಾಮಾಚಾರಿಗೆ ಹೇಳಿದ್ದಾರೆ. ಇದೇ ವೇಳೆ ಚಾರುಗೆ ಧೈರ್ಯವನ್ನ ಹೇಳಿದ್ದಾರೆ ನಿನ್ನ ತಂದೆ ಯಾವಾಗಲೂ ನಿನ್ನ ಪಾಲಿಗೆ ಇರುತ್ತಾರೆ .ನೀನೇನು ಭಯಪಡಬೇಡ ಒಂದೇ ಒಂದು ಫೋನ್ ಕಾಲ್ ಮಾಡು ಸಾಕು ಎಂದು ಹೇಳಿದ್ದಾರೆ.ರಾಮಾಚಾರಿ ಹಾಗೂ ಚಾರು ಬದುಕು ಅಕ್ಷರ ಸಹ ಬೀದಿಗೆ ಬಿದ್ದಿದೆ. ನಾರಾಯಣ ಆಚಾರ್ಯರು ಯಾವುದೇ ಮಾತುಗಳಿಗೆ ಕನಿಕರವನ್ನ ತೋರುತ್ತಿಲ್ಲ.
ನಾರಾಯಣ ಆಚಾರ್ಯರು ನನ್ನ ಪಾಲಿಗೆ ಆ ಇಬ್ಬರು ಅನಿಷ್ಟಗಳು ಸತ್ತು ಹೋಗಿದ್ದಾರೆ. ಮನೆಯ ಬಾಗಿಲನ್ನ ಹಾಕಿ ಅವರಿಗೆ ಅನ್ನ ನೀರು ಏನನ್ನು ಕೊಡ ಕೂಡದು ಎಂದು ಅಜ್ಞೆಯನ್ನು ಮಾಡಿದ್ದಾರೆ. ವೈಶಾಖ ಬಂದವಳೇ ರಾಮಾಚಾರಿಯನ್ನ ನೋಡಿ ವ್ಯಂಗ್ಯವಾಗಿ ನಗುತ್ತಾ ಮನೆಯ ಬಾಗಿಲನ್ನ ಹಾಕಿಕೊಂಡಿದ್ದಾಳೆ.ಇದೇ ವೇಳೆ ಚಾರು ನನಗೆ ಹೊಟ್ಟೆ ಹಸಿಯುತ್ತಿದೆ ಎಂದು ರಾಮಾಚಾರಿ ಬಳಿ ಹೇಳಿದ್ದಾಳೆ. ರಾಮಾಚಾರಿ ಈಗ ನನಗೆ ಒಂಟಿಯಾಗಿ ಇರಬೇಕು ಎನಿಸುತ್ತಿದೆ ದಯವಿಟ್ಟು ಬಿಟ್ಟು ಬಿಡಿ ಎಂದು ಕೇಳಿಕೊಂಡಿದ್ದಾನೆ.
ಇದೇ ವೇಳೆ ಚಾರು ನನ್ನ ತಂದೆ ನಮ್ಮಿಬ್ಬರನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ನಾವಿಬ್ಬರೂ ಹೋಗಿ ಸೆಟಲ್ ಆಗೋಣ ಎಂದಿದ್ದಾಳೆ. ಆ ಆಸ್ತಿಗೆ ನೀನೆ ಒಡೆಯ ಎಂದು ಹೇಳುತ್ತಾಳೆ ಆದರೂ ಸಹ ರಾಮಾಚಾರಿ ಇದಕ್ಕೆ ಒಪ್ಪದೇ ಚಾರುಗೆ ಬುದ್ದಿಯನ್ನು ಹೇಳಿದ್ದಾನೆ.ವೈಶಾಖ ಖುಷಿ ಜೊತೆಯಲ್ಲಿ ಮಾತನಾಡಿಕೊಂಡು ಬಂದ ಮೇಲೆ ಆಚಾರ್ಯರ ಮನಸ್ಸಿನಲ್ಲಿ ವಿಷದ ಬೀಜವನ್ನ ಬಿತ್ತಿದ್ದಾಳೆ.
ನ್ನ ಹೆಂಡತಿಗೆ ಇನ್ನೊಬ್ಬರ ಜೊತೆ ಮದುವೆ ಮಾಡಿಸಲು ಹೊರಟಿದ್ದು ಇಂತಹ ಪಾಪಿ ಗಂಡ ಒಬ್ಬನೇ ಇರುವುದು ಎಂದು ನನಗೆ ಅನ್ನಿಸುತ್ತದೆ ಎಂದು ಹೇಳಿದ್ದಾಳೆ. ಮಾವ ದಯವಿಟ್ಟು ನನ್ನನ್ನ ಕ್ಷಮಿಸಿ ಆ ವಿಡಿಯೋವನ್ನು ನೋಡಿದ ಮೇಲೆ ನನಗೆ ಸುಮ್ಮನೆ ಇರಲು ಆಗಲಿಲ್ಲ. ಅದಕ್ಕಾಗಿ ಎಲ್ಲರ ಮುಂದೆ ಬಹಿರಂಗ ಮಾಡಿದೆ ಎಂದು ವೈಶಾಖ ಹೇಳಿದ್ದಾಳೆ. ಮನೆಯಲ್ಲಿರುವವರೆಲ್ಲರೂ ಆ ವಿಡಿಯೋ ಹೇಗೆ ಸಿಕ್ಕಿತು ಎಂದು ಪ್ರಶ್ನೆ ಮಾಡಿದಾಗ ಯಾರು ಒಬ್ಬರು ಅದನ್ನು ಕಳುಹಿಸಿದ್ದರು ಎಂದು ಸುಳ್ಳು ೇಳಿದ್ದಾಳೆ.
ನಾರಾಯಣ ಆಚಾರ್ಯರು ಮನೆಯ ಜವಾಬ್ದಾರಿಯನ್ನು ನೀನು ಮತ್ತು ಕೋದಂಡ ತೆಗೆದುಕೊಳ್ಳಿ ಎಂದು ಕೇಳಿಕೊಂಡಿದ್ದಾರೆ. ನಾರಾಯಣ ಆಚಾರ್ಯರು ಹೀಗೆ ಅಂದಿದ್ದೆ ತಡ ಜಾನಕಿಯ ಬಳಿ ಹೋದಂತಹ ವೈಶಾಖ ಅತ್ತೆ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಕೇಳಿದ್ದಾಳೆ. ಅಜ್ಜಿ ಆ ಬಳಿಯೂ ಕ್ಷಮಾಪಣೆಯನ್ನ ಕೇಳಿ ನಾವೆಲ್ಲರೂ ಒಗ್ಗಟ್ಟಾಗಿ ಇರೋಣ ಎಂದು ಕೇಳಿಕೊಂಡಿದ್ದಾಳೆ. ಜಾನಕಿ ವೈಶಾಖ ಮಾತಿಗೆ ಒಟ್ಟಾಗಿ ಇರೋಣ ಎಂದು ಹೇಳಿದ್ದಾರೆ. ಮನೆಯವರ ಮನಸ್ಸು ತುಂಬಾ ವಿಶಾಲ ಎಂದು ವೈಾಖ ಹೇಳಿದ್ದಾಳೆ.


Click it and Unblock the Notifications











