Ramachari: ಸಾಕ್ಷಿ ಕೇಳಿದ ವೈಶಾಖ: ಚಾರುಗೆ ಎಂಗೇಜ್ಮೆಂಟ್ ಮಾಡಿಕೋ ಎಂದ ರಾಮಾಚಾರಿ!

By ಶೃತಿ ಹರೀಶ್ ಗೌಡ

ರಾಮಾಚಾರಿ ಶೃತಿ ಹೇಳಿದ್ದರ ಬಗ್ಗೆ ಯೋಚನೆ ಮಾಡುತ್ತಿದ್ದಾನೆ. ಹೇಗಾದರೂ ಮಾಡಿ ಚಾರು ಸಂಬಂಧವನ್ನು ಕಡೆದುಕೊಂಡು ನೀನು ದೀಪಾಳನ್ನು ಮದುವೆಯಾಗು ಎಂದು ಶ್ರುತಿ ಹೇಳಿದಳು. ಇದಕ್ಕೆ ಬೇಕಾದ ಸಹಾಯವನ್ನು ನಾನು ಮಾಡುತ್ತೇನೆ ಎಂದು ಶ್ರುತಿ ರಾಮಾಚಾರಿಗೆ ಮಾತನ್ನು ಕೊಟ್ಟಿದ್ದಳು.‌ ಅದರ ಬಗ್ಗೆ ರಾಮಾಚಾರಿ ಯೋಚನೆ ಮಾಡುತ್ತಿದ್ದಾನೆ.

ಮಾನ್ಯತಾ ಜೈ ಶಂಕರ್ ಬಳಿ ಬಂದು ಚಾರು ಬಗ್ಗೆ ಚಾಡಿ ಹೇಳುತ್ತಿದ್ದಾಳೆ. ಇತ್ತೀಚಿಗೆ ಚಾರು ಯಾವ ರೀತಿ ಆಡುತ್ತಿದ್ದಾಳೆ.ನೀನು ಇನ್ನೂ ಅದನ್ನು ಗಮನಿಸಿಲ್ವ ಎಂದು ಕೇಳಿದ್ದಾಳೆ ಇದಕ್ಕೆ ಜೈ ಶಂಕರ್ ನೀನು ಈ ರೀತಿ ಆಡುತ್ತಿದ್ದರೆ ಅವಳು ಸಹ ಅದಕ್ಕೆ ತಕ್ಕಂತೆ ಆಡುತ್ತಿದ್ದಾಳೆ ಅದ್ರಲ್ಲಿ ವ್ಯತ್ಯಾಸವೇನು ಇಲ್ಲ. ಇನ್ನೇನು ಎಂಗೇಜ್ಮೆಂಟ್ ಮಾಡುತ್ತಿದ್ದೇವೆ ಅದರ ಬಗ್ಗೆ ಗಮನ ಕೊಡು ಇಲ್ಲಿ ಮ್ಯಾಟರ್ ಗಳ ಬಗ್ಗೆ ಗಮನ ಕೊಡಬೇಡ ಎಂದು ಮಾನ್ಯತಾಗೆ ಬೈದಿದ್ದಾನೆ.

Colors Kannada Ramachari serial Written Update on June 2nd episode

ಮಾನ್ಯತ ಗೆ ಮಾತ್ರ ತನ್ನ ಮಗಳು ಯಾಕೆ ಈ ರೀತಿ ಆಡುತ್ತಿದ್ದಾಳೆ ಎಂಬುದು ಮಾತ್ರ ತಿಳಿಯುತ್ತಿಲ್ಲ ಅದು ಅಲ್ಲದೆ ಅವಳು ವಿಕಾಸ್ ಜೊತೆ ಜಗಳವೇನಾದರೂ ಮಾಡಿಕೊಂಡು ಬಂದಿದ್ದಾಳ ಎಂದೆಲ್ಲ ಯೋಚನೆ ಮಾಡುತ್ತಿದ್ದಾಳೆ. ಅಷ್ಟರಲ್ಲಿ ಜೈ ಶಂಕರ್ ಎಂಗೇಜ್ಮೆಂಟ್ ಮಾಡಿಕೊಡಲು ರಾಮಾಚಾರಿಯೇ ಬರುತ್ತಿದ್ದಾನೆ ಎಂದು ಹೇಳಿದ್ದಾನೆ. ಅದಲ್ಲದೆ ರಾಮಾಚಾರಿಯ ಕುಟುಂಬದವರು ಸಹ ಎಂಗೇಜ್ಮೆಂಟಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಜಯಶಂಕರ್ ಮಾನ್ಯತಾಗೆ ಹೇಳಿದ್ದಾನೆ.

ರಾಮಾಚಾರಿ ಹಲವಾರು ಯೋಜನೆಗಳನ್ನ ಮಾಡುವ ವೇಳೆ ಅವನ ಮನಸಾಕ್ಷಿ ಅವನ ಕಣ್ಣ ಮುಂದೆ ಪ್ರತ್ಯಕ್ಷವಾಗಿದೆ. ಇದೇ ವೇಳೆ ರಾಮಾಚಾರಿ ಯನ್ನ ನೂರಾರು ಪ್ರಶ್ನೆಯನ್ನ ಮಾಡಿದೆ ಈ ವೇಳೆ ರಾಮಾಚಾರಿ ನಾನು ನನ್ನ ತಂದೆಗೆ ಕೊಟ್ಟ ಮಾತು ಹಾಗೂ ದೀಪಾಗೆ ಕೊಟ್ಟ ಮಾತನ್ನ ಉಳಿಸಿಕೊಳ್ಳಲು ನಾನು ಪ್ರಚಾರ ಹಿಂಸೆ ಕೊಟ್ಟೆ ಎಂದು ಹೇಳಿದ್ದಾನೆ. ಚಾರು ವಿಷ ಕುಡಿದಾಗಲೇ ಗೊತ್ತಾಗಿದ್ದು ತಾಳಿಯ ಗಂಟು ಏನೆಂದು ಎಂದು ರಾಮಾಚಾರಿ ತನ್ನ ಮನಸಾಕ್ಷಿಗೆ ಹೇಳಿದ್ದಾನೆ.

ನಾನು ಪ್ರಕೃತಿ ಸಾಕ್ಷಿಯಾಗಿ ಚಾರು ಕುತ್ತಿಗೆಗೆ ತಾಳಿಯನ್ನ ಕಟ್ಟಿದ್ದೇನೆ. ಯಾವುದೇ ಕಾರಣಕ್ಕೂ ನಾನು ಚಾರುವನ್ನು ದೂರ ಮಾಡಿಕೊಳ್ಳುವುದಿಲ್ಲ ನನ್ನ ಮನೆಯವರಿಗೂ ಸಹ ಒಪ್ಪಿಸಿ ನಾನು ಇದೇ ಮನೆಗೆ ಕರೆದುಕೊಂಡು ಬಂದು ಹೆಂಡತಿಯ ಸ್ಥಾನವನ್ನ ನೀಡುತ್ತೇನೆ ಎಂದು ತನ್ನ ಮನಸಾಕ್ಷಿಗೆ ರಾಮಾಚಾರಿ ಹೇಳಿದ್ದಾನೆ. ರಾಮಾಚಾರಿ ಮಾತನಾಡಿದ ಮನಸಾಕ್ಷಿ ಈಗ ನೋಡು ನಿನಗೆ ಏಳು ಜನ್ಮಗಳ ಫಲ ಸಿಕ್ಕಿದೆ ಎಂದು ನಗುತ್ತಾ ಮಾಯವಾಗಿದೆ.

ವೈಶಾಖಗೆ ರಾಮಾಚಾರಿ ಮರ್ಯಾದೆಯನ್ನ ಬೀದಿಯಲ್ಲಿ ಕಳೆಯಬೇಕು ಎಂಬ ಹಂಬಲ ಮತ್ತಷ್ಟು ಹೆಚ್ಚಾಗಿದೆ. ಯಾಕೆಂದರೆ ನನ್ನ ಗಂಡ ಮದುವೆ ಮಾಡಿಕೊಂಡು ಬಂದ ಎಂದು ಜನರ ಬಳಿ ಹೇಳಿದ್ದಾರೆ. ಅದೇ ನಾಲ್ಕು ಜನರ ಮುಂದೆ ರಾಮಾಚಾರಿಯ ಮರ್ಯಾದೆ ಹೋಗಬೇಕು. ಇದಕ್ಕೆ ಚಾರು ಹಾಗೂ ರಾಮಾಚಾರಿ ಇಬ್ಬರು ಮದುವೆಯಾಗಿದ್ದಾರೆ ಎಂಬ ಸಾಕ್ಷಿ ಬೇಕು ಎಂದು ವೈಶಾಖ ಖುಷಿಯ ಬಳಿ ಹೇಳಿದ್ದಾಳೆ.

ಖುಷಿ ಅಕ್ಕನ ಮನಸ್ಸಿನ ಭಾವನೆಯನ್ನ ವ್ಯರ್ಥ ಮಾಡಿಕೊಂಡು ಮತ್ತೆ ಜೋಗತಿಯ ಕೈಯಲ್ಲಿ ಇದೇ ಸಾಕ್ಷಿಯನ್ನ ರೀ ಕ್ರಿಯೇಟ್ ಮಾಡಿಸುತ್ತೇನೆ ಯಾಕೆಂದರೆ ಚಾರು ಜೋಗತಿಯ ಮಾತನ್ನು ತುಂಬಾ ನಂಬಿದ್ದಾಳೆ ಎಂದುಕೊಂಡುದ್ದಾಳೆ. ಉಷಾ ಕೇಳುತ್ತಿದ್ದರು ಸಹ ನಾನು ಅದನ್ನ ಮಾಡಿ ತೋರಿಸಿದ ಮೇಲೆ ಆ ಪ್ಲಾನ್ ಏನು ಎಂದು ನಿನ್ನ ಬಳಿ ಹೇಳುತ್ತೇನೆ ಎಂದು ಮನೆಯಿಂದ ಹೊರಟಿದ್ದಾಳೆ.

ಚಾರುವನ್ನು ಕರೆದಿರುವಂತಹ ರಾಮಾಚಾರಿ ನೀನು ವಿಕಾಸ್ ಬಾನೇರಿಯಾ ಜೊತೆ ಎಂಗೇಜ್ಮೆಂಟ್ ಮಾಡಿಕೋ ನಾನು ನಿನ್ನ ಬೆರಳಿಗೆ ಅಂದು ಉಂಗುರವನ್ನು ತೊಡೆಸಿದರೆ ಅದು ತಪ್ಪಾಗಿ ಕಾಣಿಸುತ್ತದೆ ಎಂದು ಹೇಳಿದ್ದಾನೆ. ರಾಮಾಚಾರಿಯ ಮಾತನ್ನ ಕೇಳಿದ ಚಾರುಗೆ ತುಂಬಾ ಶಾಕ್ ಆಗಿದೆ ನಂತರ ರಾಮಾಚಾರಿ ನಾನು ಯಾಕೆ ಈ ರೀತಿ ಹೇಳುತ್ತಿದ್ದೇನೆ ಎಂಬುದನ್ನು ಚಾರು ಮುಂದೆ ವಿವರಣೆ ನೀಡಿದ್ದಾನೆ.

More from Filmibeat

English summary
Colors Kannada serial Ramachari here details about Ramachari meet charu discussing about engagement, but charu shocking
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X