Ramachari: ಇನ್ನೂ ಕಡಿಮೆಯಾಗದ ಆಚಾರ್ಯರ ಸಿಟ್ಟು: ಬೀದಿಯಲ್ಲಿ ಮಲಗಿಕೊಂಡ ಚಾರು-ಚಾರಿ
ರಾಮಾಚಾರಿ ಚಾರುಗೆ ದಯವಿಟ್ಟು ಜಗಳ ಮಾಡಿಕೊಂಡು ನೀವು ಮನೆಯೊಳಗೆ ಹೋಗಬೇಡಿ. ಏನಾದರೂ ಮಾಡುವ ಮುಂಚೆ ನನಗೆ ತಿಳಿಸಿ ಮಾಡಿ ಎಂದು ಕೇಳಿಕೊಂಡಿದ್ದಾನೆ. ಇದಕ್ಕೆ ಚಾರು ನಾನೇನು ಜಗಳವಾಡಿಲ್ಲ ಮನೆಯೊಳಗೆ ಹೋಗುತ್ತೇವೆ ಎಂದೆ ಅಷ್ಟೇ ಎಂದಿದ್ದಾಳೆ. ಇದೇ ವೇಳೆ ರಾಮಾಚಾರಿ ಊಟ ಮಾಡಲಿಲ್ಲ ಎಂದು ಚಾರು ಸಹ ಊಟವನ್ನು ಮಾಡದೆ ಹಾಗೆ ಇದ್ದಾಳೆ. ರಾಮಾಚಾರಿ ಊಟ ಮಾಡಲಿಲ್ಲ ಎಂದು ಎತ್ತ ಕರುಳು ಕೊರಗುತ್ತಿದೆ.
ಮಗನ ಪರಿಸ್ಥಿತಿಯನ್ನ ಕಂಡು ಜಾನಕಿ ಕಣ್ಣೀರನ್ನ ಹಾಕಿದ್ದಾಳೆ .ನಾನು ಹೆತ್ತ ಮಗ ಯಾವುದೋ ಒಂದು ತಪ್ಪನ್ನ ಮಾಡಿ ಮನೆಯಿಂದ ಹೊರಗೆ ಹೋಗಿದ್ದಾನೆ. ಮನೆಯವರ ಮೆಚ್ಚುಗೆಗೆ ಪಾತ್ರನಾಗಿದ್ದವನು, ಒಂದೇ ಕ್ಷಣದಲ್ಲಿ ಮನೆಯಿಂದ ಹೊರಗೆ ಹೋಗುವಂತೆ ಆಯಿತು ಎಂದು ಬೇಸರ ಮಾಡಿಕೊಳ್ಳುತ್ತಿದ್ದಾಳೆ. ಚಿಂಟುಗೆ ಚಾರು ಅಕ್ಕನನ್ನು ನೋಡಬೇಕು ಎನಿಸುತ್ತಿದೆ. ಆದರೆ ನೋಡಲು ಸಾಧ್ಯವಾಗುತ್ತಿಲ್ಲ, ಇದಕ್ಕಾಗಿ ಸರ್ವೇಶನ ಬಳಿ ಚಾರು ಅಕ್ಕನ ಮನೆಗೆ ಕರೆದುಕೊಂಡು ಹೋಗು ಎಂದು ಕೇಳಿದ್ದಾನೆ.

ಜಾನಕಿಗೆ ರಾಮಾಚಾರಿ ಊಟ ಮಾಡಿದೆ ಇರುವ ಬಗ್ಗೆ ಚಿಂತೆ ಹೆಚ್ಚಾಗಿದೆ. ನನ್ನ ಮಗ ಊಟ ಮಾಡಿ ಎರಡು ದಿನವಾಯಿತು ಎಂದು ಅಜ್ಜಿಗೆ ಜಾನಕಿ ಹೇಳಿದ್ದಾರೆ. ಈ ಕಡೆ ಚಾರು ರಾಮಾಚಾರಿ ಜೊತೆಯಲ್ಲಿ ಕುಳಿತುಕೊಂಡಿದ್ದಾಳೆ. ಸುಮ್ಮನೆ ಇರದೇ ಏನೇನೋ ಕೀಟಲೆಯನ್ನ ಮಾಡುತ್ತಾ ರಾಮಾಚಾರಿ ಕೈಯಲ್ಲಿ ಬೈಸಿಕೊಳ್ಳುತ್ತಿದ್ದಾಳೆ. ದಯವಿಟ್ಟು ಸುಮ್ಮನೆ ಇರಿ ಮೇಡಂ ನಾವು ಮನೆಯ ಒಳಗೆ ಹೋಗುತ್ತೇವೋ ಇಲ್ಲವೋ ಎಂಬ ಟೆನ್ಷನ್‌ನಲ್ಲಿ ಇದ್ದೇನೆ ಎಂದು ರಾಮಾಚಾರಿ ಹೇಳಿದ್ದಾನೆ.
ಜೈ ಶಂಕರ್ ತನ್ನ ತಂದೆ ತಾಯಿ ಹೋಗುತ್ತಿರುವುದನ್ನು ನೋಡಿದಾಗ ತಡೆದಿದ್ದಾನೆ. ದಯವಿಟ್ಟು ಒಳಗೆ ಬನ್ನಿ ಎಂದು ಕೇಳಿಕೊಂಡಿದ್ದಾನೆ. ಅವರ ತಂದೆ ತಾಯಿ ಒಳಗೆ ಬಂದಾಗ ಮಾನ್ಯತಾ ನಿಮ್ಮನ್ನ ಕಳುಹಿಸಿದ್ದೇ ತಾನೆ ಯಾಕೆ ವಾಪಾಸ್ ಬಂದ್ರಿ ಎಂದು ಕೇಳಿದ್ದಾಳೆ. ಅಷ್ಟರಲ್ಲಿ ಅಲ್ಲಿಗೆ ಬಂದ ಜೈ ಶಂಕರ್ ನನ್ನ ತಂದೆ ತಾಯಿಯನ್ನ ಕರೆಸಿದ್ದು ನಾನೇ. ನೀನು ಬೇಕಾದರೆ ಇಲ್ಲೇ ಇರು, ನಾನು ನನ್ನ ತಂದೆ ತಾಯಿಯನ್ನ ಕರೆದುಕೊಂಡು ವಾಪಸ್ ಎಲ್ಲಾದರೂ ಹೋಗುತ್ತೇನೆ ಎಂದು ಹೇಳಿದ್ದಾನೆ.
ಜೈ ಶಂಕರ್ ಈ ರೀತಿ ಹೇಳಿದ್ದೆ ತಡ ಮಾನ್ಯತಾ ಬಾಯಿ ಮುಚ್ಚಿಕೊಂಡು ಸುಮ್ಮನೆ ಆಗಿದ್ದಾಳೆ ಜೈಶಂಕರ್ ಬಿಟ್ಟು ಹೋದರೆ ನನ್ನ ಸ್ಟೇಟಸ್ ಏನಾಗಬೇಕು ಎಂದು ಸುಮ್ಮನಾಗಿದ್ದಾಳೆ. ಅಲ್ಲದೆ ಜೈ ಶಂಕರ್ ಬಳಿ ಮಾನ್ಯತಾ ಚಾಲೆಂಜ್ ಹಾಕಿದ್ದಾಳೆ. ಚಾರುಗೆ ನಾನು ಇನ್ನೊಂದು ಮದುವೆಯನ್ನ ಮಾಡುತ್ತೇನೆ. ರಾಮಾಚಾರಿಗೆ ಡೈವೋರ್ಸ್ ಕೊಡಿಸಿ ಅವಳನ್ನ ಸ್ಟೇಟಸ್ ಗೆ ತಕ್ಕಂತೆ ಮದುವೆ ಮಾಡಿ ಕಳುಹಿಸುತ್ತೇನೆ ಎಂದು ಮಾನ್ಯತಾ ಚಾಲೆಂಜ್ ಹಾಕಿದ್ದಾಳೆ.
ಜಾನಕಿಗೆ ತನ್ನ ಮಗ ರಾಮಾಚಾರಿ ತಪ್ಪು ಮಾಡಿಲ್ಲ ಎಂದು ಅನಿಸುತ್ತಿದೆ ಎಂದು ಅಜ್ಜಿಯ ಬಳಿ ಹೇಳಿದ್ದಾಳೆ ಇನ್ನೂ ರಾಮಾಚಾರಿ ಹಾಗೂ ಚಾರು ಇಬ್ಬರು ಊಟ ಮಾಡುತ್ತಿದ್ದು ಜಾನಕಿ ತುಂಬಾ ಖುಷಿಯಾಗಿದ್ದಾಳೆ. ಆದರೆ ನಾರಾಯಣ ಆಚಾರ್ಯರಿಗೆ ರಾಮಾಚಾರಿಯ ಮೇಲೆ ತುಂಬಾ ಕೋಪ ಬಂದಿದೆ ನನಗೆ ಅವನು ಮಗನಲ್ಲ ಎಂದೇ ಈಗಲೂ ಸಹ ಹೇಳುತ್ತಿದ್ದಾರೆ.
ನೀನು ಏನು ಅವನನ್ನ ನೋಡಬೇಡ ಅವನ ಬಗ್ಗೆ ಕನಿಕರ ಬೇಡ ಎಂದು ಜಾನಕಿಗೆ ಆಚಾರ್ಯರು ಬೈದಿದ್ದಾರೆ. ಆದರೆ ಜಾನಕಿಗೆ ರಾಮಾಚಾರಿಯನ್ನ ಬಿಟ್ಟು ಬದುಕುವ ಶಕ್ತಿ ಇಲ್ಲ. ನನ್ನ ಮಗ ನನ್ನ ಮಗ ಎಂದು ಹೇಳುತ್ತಿರುವಾಗ ನಾರಾಯಣ ಆಚಾರ್ಯರು ನನ್ನ ಮಗ ಸತ್ತು ಹೋದ ನಾನು ಭಾನುವಾರ ಸ್ನಾನವನ್ನು ಮಾಡಿಕೊಂಡುಬಿಟ್ಟೆ ಎಂದು ಹೇಳಿದ್ದಾರೆ. ಜಾನಕಿಗೆ ಗಂಡನ ಬಾಯಿಂದ ಇಂತಹ ಮಾತುಗಳನ್ನು ಕೇಳಲು ಯೋಗ್ಯವಲ್ಲ ಎಂದೆನಿಸಿದೆ.
ಜೈ ಶಂಕರ್ ತನ್ನ ತಂದೆ ತಾಯಿಯ ಬಳಿ ಮಾತನಾಡುತ್ತಿದ್ದಾಗ ಮಾನ್ಯತಾ ಅದನ್ನ ಕದ್ದು ಕೇಳಿಸಿಕೊಂಡಿದ್ದಾಳೆ. ನನ್ನ ಮಗಳು ಮಾನ್ಯತಾ ತರವಲ್ಲ ಅವಳು ಹಠವಮ್ನ ಮಾಡಿ ಹಠವನ್ನು ಒಳ್ಳೆಯದಕ್ಕೆ ಉಪಯೋಗಿಸಿ ಕೊಳ್ಳುತ್ತಾಳೆ. ಎಂಬುದನ್ನು ಜೈ ಶಂಕರ್ ತಿಳಿಸಿದ್ದಾರೆ. ಅವಳು ನಾರಾಯಣ ಆಚಾರ್ಯರ ಮನೆಗೆ ಸೊಸೆಯಾಗಿ ಹೋಗಿ ಅವರ ಕೈಯಿಂದಲೇ ಹೊಗಳಿಕೆಯನ್ನ ಪಡೆದುಕೊಳ್ಳುತ್ತಾಳೆ ಎಂದು ಜೈಶಕಂರ್ ತಿಳಿಸಿದ್ದಾರೆ. ಮಾನ್ಯತಾ ಇದೆಲ್ಲವನ್ನ ಕೇಳಿಸಿಕೊಂಡು ನೀನು ನಿನ್ನ ಪ್ಲಾನ್ ಅನ್ನ ಮಾಡು ನಾನು ನನ್ನ ಪ್ಲಾನ್ ಮಾಡುತ್ತೇನೆ ಎಂದು ಹೇಳಿದ್ದಾಳೆ
ರಾಮಾಚಾರಿ ಹಾಗೂ ಚಾರು ಇಬ್ಬರು ತುಂಬಾ ಪ್ರೀತಿಯಿಂದ ಊಟವನ್ನು ಮಾಡಿದ್ದಾರೆ. ಇದೆ ವೇಳೆ ಚಾರು ಕ್ಯಾಂಡಲ್ ನಲ್ಲಿ ಹೃದಯವನ್ನು ಬರೆದು ವಿಶೇಷವಾಗಿ ಊಟವನ್ನು ಇಬ್ಬರೂ ಮಾಡುವಂತೆ ಮಾಡಿದ್ದಾಳೆ. ಆದರೆ ರಾಮಾಚಾರಿಗೆ ಇದ್ಯಾವುದು ಇಷ್ಟವಿಲ್ಲ ಚಾರು ಒತ್ತಾಯಕ್ಕೆ ಮಣಿದು ತಿಂದ ಶಾಸ್ತ್ರವನ್ನ ಮುಗಿಸಿದ್ದಾನೆ. ಮಗ ಊಟ ಮಾಡಿದ್ದನ್ನು ನೋಡಿದ ಜಾನಕಿಗೆ ತುಂಬಾನೇ ಸಂತೋಷವಾಗಿದೆ. ಮಗ ಹಾಗೂ ಸೊಸೆ ಮಲಗಿರುವುದನ್ನು ನೋಡಿ . ಚಳಿಯಲ್ಲಿ ಮಲಗಿದ್ದಾರೆ ಎಂದುಕೊಂಡ ಜಾನಕಿ ಬೆಡ್ ಶೀಟನ್ನ ತಂದು ಹೊದ್ದಿಸಿದ್ದಾಳೆ.111:34 PM


Click it and Unblock the Notifications











