Ramachari: ಚಾರು ಎಂಗೇಜ್ಮೆಂಟ್ ಮಾಡಿಸಬೇಕಿದೆ ಚಾರಿ: ವಿಡಿಯೋ ಮಾಡಲು ವೈಶಾಖ ಪ್ಲ್ಯಾನ್

ವೈಶಾಖ ಹಾಗೂ ಖುಷಿ ಇಬ್ಬರು ರಾಮಾಚಾರಿಯನ್ನು ಸಿಕ್ಕಿಸಲು ಒಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಅದು ಏನೆಂದರೆ ಚಾರು ಬಾಯಲ್ಲೇ ತಾನು ಹಾಗೂ ರಾಮಾಚಾರಿ ಇಬ್ಬರು ಮದುವೆಯಾಗಿದ್ದೇವೆ ಎಂದು ಹೇಳಿಸುವ ಜೊತೆಗೆ ಒಂದು ಬಲವಾದ ಸಾಕ್ಷಿಗಾಗಿ ಪ್ಲಾನ್ ಮಾಡಿದ್ದಾರೆ. ಕೊರವಂಜಿಗೆ ಹೇಳಿ ಚಾರು ಬಾಯಿ ಬಿಡಿಸಬೇಕು ಅದನ್ನು ವಿಡಿಯೋ ಮಾಡಿಕೊಳ್ಳಬೇಕು ಎಂದು ಲೆಕ್ಕಾಚಾರ ಹಾಕಿದ್ದಾರೆ.

ವೈಶಾಖಾಗೆ ಈ ಪ್ಲಾನ್ ವರ್ಕ್ ಔಟ್ ಆಗುತ್ತಾ ಎಂಬುದರ ಬಗ್ಗೆ ಚಿಂತೆಯಾಗಿದೆ. ಹೇಗಾದರೂ ಮಾಡಿ ರಾಮಾಚಾರಿ ಮಾನ ಕಳೆಯಬೇಕು ನನ್ನ ಗಂಡ ಎಲ್ಲರ ಕಣ್ಮುಂದೆ ದೊಡ್ಡವನ ರೀತಿ ಕಾಣಬೇಕು ಅನ್ನೋದು ವೈಶಾಖಳ ಪ್ಲಾನ್ ಆಗಿದೆ. ರಾಮಾಚಾರಿಯನ್ನ ಮನೆಯಿಂದ ಹೊರಗೆ ಹಾಕಿ ನಾನು ಮತ್ತು ನನ್ನ ಗಂಡ ರಾಜ- ರಾಣಿಯಂತೆ ಆ ಮನೆಯಲ್ಲಿ ಬದುಕಬೇಕು ಎಂಬುದೇ ಆಕೆಯ ಆಸೆಯಾಗಿದೆ.

Colors Kannada Ramachari serial Written Update on june 5th episode

ಚಾರು ಯಾಕೆ ವಿಕಾಸ್ ಕೈಯಲ್ಲಿ ಉಂಗುರ ತೊಡಿಸಿಕೊಳ್ಳಬೇಕು ಎಂಬುದರ ಬಗ್ಗೆ ರಾಮಾಚಾರಿ ತಿಳುವಳಿಕೆ ಹೇಳಿದ್ದಾನೆ. ರಾಮಾಚಾರಿಗೋಸ್ಕರ ಚಾರು ನಾನು ವಿಕಾಸ್ ಜೊತೆ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾಳೆ. ತಾಳಿಗಿಂತಲೂ ಅವನು ತೊಡಿಸುವ ಉಂಗುರ ಏನು ಅಷ್ಟು ಶ್ರೇಷ್ಠವಾದದ್ದಲ್ಲ, ನಮ್ಮಿಬ್ಬರ ತಾಳಿ ಬಂದವೇ ಶ್ರೇಷ್ಠವಾದದ್ದು ಎಂದು ರಾಮಾಚಾರಿಯ ಬಳಿ ಚಾರು ಹೇಳಿದ್ದಾಳೆ. ನಾನು ನಿನಗೆ ಯಾವುದೇ ಟೆನ್ಶನ್ ಕೊಡುವುದಿಲ್ಲ ನಾನು ಎಂಗೇಜ್ಮೆಂಟ್ ಮಾಡಿಕೊಳ್ಳುತ್ತೇನೆ ಎಂದು ರಾಮಾಚಾರಿಗೆ ಹೇಳಿದ್ದಾಳೆ.

ಚಾರಿಯೇ ಮಾಡಿಸಬೇಕಿದೆ ಎಂಗೇಜ್ಮೆಂಟ್

ರಾಮಾಚಾರಿ ಎಂಗೇಜ್ಮೆಂಟನ್ನ ಮಾಡಿಸಬೇಕಾದ ಅನಿವಾರ್ಯತೆ ಈಗ ಎದುರಾಗಿದೆ. ನಾರಾಯಣ ಆಚಾರ್ಯರಿಗೆ ಫೋನ್ ಮಾಡಿರುವ ಜೈ ಶಂಕರ್ ಅವರು ಈ ಕಾರ್ಯಕ್ರಮ ಮುಂದೆ ನಿಂತು ನೀವೇ ನಡೆಸಿ ಕೊಡಬೇಕು ಎಂದು ಕೇಳಿಕೊಂಡಿದ್ದಾರೆ. ಇದಕ್ಕಾಗಿ ನಾರಾಯಣ ಆಚಾರ್ಯರು ಮನೆಗೆ ಬಂದವರೇ ರಾಮಾಚಾರಿ ಎಂಗೇಜ್ಮೆಂಟನ್ನು ನಡೆಸಿ ಕೊಡಲಿದ್ದಾನೆ ಎಂದು ಮನೆಯಲ್ಲಿ ತಿಳಿಸಿದ್ದಾರೆ. ಅಜ್ಜಿ ಜಾನಕಿ ಎಷ್ಟೇ ಹೇಳಿದರೂ ಸಹ ಅವರ ಮಾತನ್ನು ಕೇಳದೇ ನಾವೆಲ್ಲರೂ ಸಹ ಅವರ ಮನೆಯ ಎಂಗೇಜ್ಮೆಂಟ್‌ಗೆ ಹೋಗುತ್ತಿದ್ದೇವೆ ಎಂದು ನಾರಾಯಣ ಆಚಾರ್ಯರು ಹೇಳಿದ್ದಾರೆ.

ನಾರಾಯಣ ಆಚಾರ್ಯರ ಮಾತು ಕೇಳಿಸಿಕೊಳ್ಳುತ್ತಿರುವ ವೈಶಾಖಾಗೆ ತುಂಬಾ ಖುಷಿಯಾಗಿದೆ. ಹೇಗಿದ್ದರೂ ಅಲ್ಲೇ ಮಾನ ಮರ್ಯಾದೆ ಕಳೆದರೆ ಆಯಿತು, ಮಾವನ ಮಾನ ನಾಲ್ಕಾರು ಜನರ ಮುಂದೆ ಹೋಗುತ್ತದೆ. ನಮಗೂ ಸಹ ಅದೇ ಬೇಕಿತ್ತು ಎಂದು ನಗುತ್ತಿದ್ದಾಳೆ. ರಾಮಾಚಾರಿ ಹಾಗೂ ಶೃತಿಗೆ ತುಂಬಾ ಟೆನ್ಶನ್ ಆಗಿದೆ. ಜಾನಕಿ ಸಹ ಅವರು ನಮಗೆ ಶತ್ರುಗಳು ಇದ್ದ ಹಾಗೆ ಅವರ ಫ್ಯಾಮಿಲಿ ನಮ್ಮ ಫ್ಯಾಮಿಲಿ ಮುಖಮುಖಿಯಾದರೆ ಏನಾದರೂ ಅನಾಹುತ ತಪ್ಪಿದ್ದಲ್ಲ ಎಂದು ಹೇಳಿದರು, ಸಹ ಆಚಾರ್ಯರು ಕೇಳುತ್ತಿಲ್ಲ.

Colors Kannada Ramachari serial Written Update on june 5th episode

ಚಾರುಳನ್ನು ಬಕ್ರಾ ಮಾಡಿದ ಕೊರವಂಜಿ

ಚಾರು ಹಾಗೂ ಸಾನ್ವಿ ಇಬ್ಬರು ಪಾರ್ಕ್ ಬರುತ್ತಿದ್ದಾಗ ಕೊರವಂಜಿ ಅವರಿಬ್ಬರನ್ನು ನೋಡಿ ಏನನ್ನೋ ಹೇಳಿದ್ದಾಳೆ. ಇದಕ್ಕೆ ಸಾನ್ವಿ ಹಾಗೂ ಚಾರು ಇಬ್ಬರು ಕೊರವಂಜಿ ಮಾತನ್ನ ನಂಬಿದ್ದಾರೆ. ಇದೇ ವೇಳೆ ಚಾರು ಬಳಿ ಕೊರವಂಜಿ ನೀವಿಬ್ಬರೂ ಮದುವೆಯಾಗಿದ್ದಕ್ಕೆ ಅಗ್ನಿ ಸಾಕ್ಷಿ ಇದೆಯಾ ಎಂದು ಕೇಳಿದ್ದಾಳೆ. ಇದಕ್ಕೆ ನಾವಿಬ್ಬರು ಬೆಟ್ಟದ ಮೇಲೆ ಮದುವೆಯಾದ್ವು ನಾವು ಸಪ್ತಪದಿ ತುಳಿದಿಲ್ಲ ಎಂದು ಚಾರು ಹೇಳಿದ್ದಾಳೆ.

ರಾಮಾಚಾರಿನ ಕರೆದುಕೊಂಡು ದೇವಸ್ಥಾನಕ್ಕೆ ಹೋಗಿ ಸಪ್ತಪದಿ ನಿರ್ಮಾಣ ಮಾಡಿ ಇಬ್ಬರು ಏಳು ಹೆಜ್ಜೆ ಹಾಕಿದರೆ ನಿಮ್ಮ ಮದುವೆಗೆ ಹಿಡಿದಿರುವ ಕಂಟಕ ಬಿಡುತ್ತದೆ. ನಂತರ ನೀನು ರಾಮಾಚಾರಿ ಪಾದ ಪೂಜೆ ಮಾಡಿ ಮಾಂಗಲ್ಯಕ್ಕೆ ಅರಿಶಿಣ ಕುಂಕುಮ ಅಚ್ಚಿಸಿಕೋ. ನಂತರ ಕಿವಿಯಲ್ಲಿ ಮೂರು ಬಾರಿ ಸರ್ವ ಕಾರ್ಯ ಸಿದ್ದಿ ರಸ್ತು ಎಂಬ ಮಂತ್ರವನ್ನು ಹೇಳು ಎಂದು ಹೇಳಿಕೊಟ್ಟಿದ್ದಾಳೆ. ನಾನು ಇದೇ ರೀತಿ ಮಾಡುತ್ತೇನೆ ಎಂದು ಚಾರು ಒಪ್ಪಿಕೊಂಡಿದ್ದಾಳೆ.

More from Filmibeat

English summary
Colors Kannada Ramachari serial Written Update on june 5th episode. here is details about kushi and vaikasha master plan to collect Ramachari and charu marriage evidence. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X